ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, 10 ಕೆಜಿಯ ಅಕ್ಕಿಯ ಬದಲಾಗಿ, 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿಯ ಅಕ್ಕಿ ಬದಲಾಗಿ ಹಣವನ್ನು ನೀಡಲು ಸರ್ಕಾರವು ನಿರ್ಧಾರ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವ ಯೋಜನೆಗೆ ಈಗ ಬಹುದೊಡ್ಡ ಪೆಟ್ಟು ಬಿದ್ದಿದೆ. ಇದಕ್ಕೂ ಮೊದಲು 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಸಿಎಂ ಸಿದ್ದರಾಮಯ್ಯನವರು ಹೇಳಿದರು ಆದರೆ ಇತ್ತೀಚಿಗೆ ನಡೆದ ಕರ್ನಾಟಕದ ಸಚಿವ ಸಂಪುಟದಲ್ಲಿ, ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ತಿಂಗಳಿಗೆ 170 ರೂಪಾಯಿಗಳು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ ಜನರ ಖಾತೆಗೆ ನೇರವಾಗಿ ಜಮಾ ಆಗುತ್ತದೆ ಎಂದು ಮುನಿಯಪ್ಪನವರು ಹೇಳಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
5 ಕೆಜಿ ಅಕ್ಕಿ ಬದಲು ಹಣವನ್ನು ಕೊಡುವುದಾಗಿ ಸರ್ಕಾರ ನಿರ್ಧಾರ :
ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರವು ನಿರಾಕರಿಸಿರುವುದರ ಕಾರಣ, 5 ಕೆಜಿಯ ಅಕ್ಕಿಯ ಬದಲಾಗಿ 170 ರೂ ಗಳನ್ನು ನೇರವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ ಜನರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರವು ನಿರ್ಧಾರವನ್ನು ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ಸಾರಥ್ಯದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಉತ್ತರ ಕರ್ನಾಟಕ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಉತ್ತರ ಕರ್ನಾಟಕದ ಮಂದಿ, ಹೆಚ್ಚಿನದಾಗಿ ಚೋಳವನ್ನು ಉಪಯೋಗಿಸುವುದರ ಕಾರಣವಾಗಿ 10 ಕೆಜಿ ಅಕ್ಕಿಯ ಅವಶ್ಯಕತೆ ಇಲ್ಲ ಎಂದು ಗದಗ ಜಿಲ್ಲೆಯ ಗ್ರಾಮಸ್ಥರೊಬ್ಬರಾದ ಬಸನಗೌಡ ಪಾಟೀಲ್ ಈಗಾಗಲೇ ಹೇಳಿದ್ದರು.
ಅದೇನೆ ಆಗಲಿ, ಕರ್ನಾಟಕದ ಬಿಪಿಎಲ್ ಕಾರ್ಡನ್ನು ಹೊಂದಿರುವ ಎಲ್ಲಾ ಜನತೆಗೆ ಉಪಯೋಗವಾಗುವಂತೆ ಸರ್ಕಾರವು 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿ ಬದಲಾಗಿ 170 ರೂಗಳನ್ನು ನೆರವಾಗಿ ಖಾತೆಗೆ ಹಾಕುವ ನಿರ್ಧಾರವನ್ನು ಕೈಗೊಂಡಿದೆ.ಇದರಿಂದಾಗಿ. ಈ ಹಣದಿಂದಾಗಿ ಜನರು ತಮಗೆ ಬೇಕಾದ ಅಡುಗೆ ಸಾಮಾಗ್ರಿಗಳನ್ನು ಅಥವಾ ದವಸ ಧಾನ್ಯಗಳನ್ನು ಖರೀದಿ ಮಾಡಿಕೊಳ್ಳಲು ಉಪಯೋಗವಾಗುತ್ತದೆ.
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,AAY ಹಾಗೂ BPL ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಹಂತ 1: ಮೊದಲಿಗೆ ಅರ್ಜಿದಾರರು ಒಟ್ಟಾರೆ ಪೋರ್ಟಲ್‌ಗೆ ಹೋಗಬೇಕು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ಮುಖಪುಟವು ನಿಮ್ಮ ಮುಂದೆ ತೆರೆಯುತ್ತದೆ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಅಥವಾ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಸಹಿತ ನೀವು ಕ್ಲಿಕ್ ಮಾಡಬಹುದು
Anna bhagya-ಅನ್ನಭಾಗ್ಯ ಯೋಜನೆಯಡಿ ಸಿಗಲಿದೆ 10kg ಅಕ್ಕಿ-ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://mahitikanaja.karnataka.gov.in/FCS/MyAreaData?ServiceId=1043&Type=TABLE&DepartmentId=1010
ಹಂತ 2: ನಂತರ ನಿಮ್ಮ ಜಿಲ್ಲೆ, ತಾಲೂಕು,ಗ್ರಾಮಪಂಚಾಯತಿ,ಗ್ರಾಮ ಹಾಗೂ ಕಾರ್ಡ್ ಪ್ರಕಾರ(AAY/BPL) Select ಮಾಡಿ “ಸಲ್ಲಿಸಿ” ಮೇಲೆ ಕ್ಲಿಕ್ ಮಾಡಿ. ನಿಮ್ಮ ಕುಟುಂಬ ಮತ್ತು ನಿಮ್ಮ ಹೆಸರನ್ನು ನೀವು ನೋಡಬಹುದು.
ಪಡಿತರ ಚೀಟಿ ನವೀಕರಣ:
ಹೊಸ ಪಡಿತರ ಚೀಟಿಗಳಿಗಾಗಿ (ಪಡಿತರ ಕಾರ್ಡ್ ಅರ್ಜಿ) ಅರ್ಜಿಗಳನ್ನು ರಾಜ್ಯದ ಜಿಲ್ಲಾ ಸರಬರಾಜು ಕಚೇರಿ ಮತ್ತು ತಹಸಿಲ್ ಮಟ್ಟದ ಸರಬರಾಜು ಕಚೇರಿಗೆ ಸಲ್ಲಿಸಲಾಗುತ್ತದೆ. ಅದರ ನಂತರ, ತನಿಖೆಯ ಆಧಾರದ ಮೇಲೆ, ಅನರ್ಹರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಅವರ ಸ್ಥಾನದಲ್ಲಿ ಅರ್ಹರ ಪಡಿತರ ಚೀಟಿಗಳನ್ನು ಮಾಡಲಾಗುತ್ತದೆ.
ಹೊಸ ಪಡಿತರ ಚೀಟಿ :
ಹೊಸದಾಗಿ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತದೆ. ಅರ್ಹತೆಗಳ ಆಧಾರದಲ್ಲಿ ಜೂನ್ ಮೊದಲ ವಾರ ಹೊಸ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದು ನಾಗರಿಕ ಸರಬರಾಜು ಇಲಾಖೆ (Food, Civil Supplies and Consumer Affairs Department) ಅಧಿಕಾರಿ ಜ್ಞಾನೇಂದ್ರ ತಿಳಿಸಿದ್ದಾರೆ.
ಪಡಿತರ ಚೀಟಿ ರದ್ದು ಹೇಗೆ ಆಗುತ್ತೆ?
4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಪಡೆದರೆ ಕಾರ್ಡ್ ಕ್ಯಾನ್ಸಲ್ ಆಗಲಿದೆ. ಸರ್ಕಾರಿ ಉದ್ಯೋಗಿಗಳು ಕಾರ್ಡ್ ಪಡೆಯುವಂತಿಲ್ಲ. ಆದಾಯ ತೆರಿಗೆ ಕಟ್ಟುತ್ತಿದ್ದರೆ ಹಾಗೂ 3 ಹೆಕ್ಟೇರ್ ಜಮೀನಿದ್ದರೆ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗುತ್ತದೆ. 4 ಚಕ್ರದ ವಾಹನಕ್ಕೆ ಹಳದಿ ನಂಬರ್ ಪ್ಲೇಟ್ ಇದ್ದರೆ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮಹಿಳೆಯರಿಗೆ ಉಚಿತ ಬಸ್ ಪಾಸ್ | ರಾಜ್ಯದಲ್ಲಿ ಇವತ್ತಿನಿಂದಲೇ ಜಾರಿ.! ಟಿಕೆಟ್ ಕೊಳ್ಳಬೇಡಿ
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Sa