ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ ನಾನು ಹಳೆಯ ವೋಟರ್ ಐಡಿಗಳನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂಬುವುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡುತ್ತೇನೆ. ಹಳೆಯ ವೋಟರ್ ಐಡಿಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿರಲಿಲ್ಲ ಆದರೆ ಈಗ ಎಲ್ಲಾ ಹಳೆಯ ವೋಟರ್ ಐಡಿಗಳನ್ನು ಮೊಬೈಲ್ ನಲ್ಲಿ ಆಗಲಿ ಅಥವಾ ಲ್ಯಾಪ್ಟಾಪ್ ಗಳಲ್ಲಿಯೂ ಕೂಡ ನಾವು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಕೇವಲ ಐದು ನಿಮಿಷದ ಕೆಲಸವಾಗಿದೆ. 20 ವರ್ಷಗಳು ಅಥವಾ 30 ವರ್ಷಗಳ ಹಿಂದಿನ ವೋಟರ್ ಐಡಿಗಳನ್ನು ಕೂಡ ನಾವು ಈಗ ಡೌನ್ಲೋಡ್ ಮಾಡಬಹುದಾಗಿದೆ. ಮೊದಲು ನೀವು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಲು ಹೋದರೆ 2020ರ ನಂತರ ಇರುವ ವೋಟರ್ ಐಡಿಗಳನ್ನು ನೋಂದಾವಣೆ ಮಾಡಿ ಎಂಬ ಆಪ್ಷನ್ ದೊರೆಯುವುದು ಆದರೆ ಈಗ ಎಲ್ಲಾ ಹೊಸ ಅಥವಾ ಹಳೆಯ ವೋಟರ್ ಐಡಿಗಳನ್ನು ನಾವು ನೋಂದಾವಣೆ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೊದಲು ನಮ್ಮ ಹಳೆಯ ವೋಟರ್ ಐಡಿ ಗಳಿಗೆ ನಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಬೇಕು. ವೋಟರ್ ಐಡಿ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ನಮ್ಮ ಹತ್ತಿರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಾವು ಭೇಟಿಕೊಟ್ಟು ಅಲ್ಲಿ ಭೂತ್ ಆಫೀಸರ್ ಹತ್ತಿರ ನಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಕೊಟ್ಟರೆ ಅವರು ಲಿಂಕ್ ಮಾಡುತ್ತಾರೆ. ಇಲ್ಲವಾದಲ್ಲಿ ನಾವೇ NVSP ವೆಬ್ಸೈಟ್ ಮೂಲಕ ನಮ್ಮ ವೋಟರ್ ಐಡಿ ಗೆ ಆಧಾರ್ ಕಾರ್ಡನ್ನು ಸುಲಭವಾಗಿ ಲಿಂಕ್ ಮಾಡಬಹುದು
Voter Helpline ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಮೊದಲನೆಯದಾಗಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಗೂಗಲ್ ಕ್ರೋಮ್ ಅನ್ನು ಓಪನ್ ಮಾಡಿಕೊಳ್ಳಬೇಕು. ನಂತರ ಸರ್ಚ್ ಬಾರಿನಲ್ಲಿ NVSP.in ಇಂದು ಟೈಪ್ ಮಾಡಿ ನಂತರ ನಿಮಗೆ ಸಿಗುವ ಮೊದಲನೇ ಲಿಂಕಿನಲ್ಲಿ ಕ್ಲಿಕ್ ಮಾಡಿ. ನಂತರ ಆ ವೆಬ್ ಸೈಟಿ ನಿಮಗೆ ಓಪನ್ ಆಗುವುದು. ಪೇಜಿನ ಎಡ ಭಾಗದಲ್ಲಿ ನಿಮಗೆ ಲೋಗಿನ್ ರೆಸಿಸ್ಟೆರ್ ಮುಖ್ಯಾಂಶ ಕಾಣುವುದು. ಅದರ ಕೆಳಗೆ ಲಾಗಿನ್ ಅಥವಾ ರಿಜಿಸ್ಟರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಇದು ಒಂದು ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ಆಗಿದೆ. ನಂತರ ನೀವು ರಿಜಿಸ್ಟರ್ ಆಸ್ ಎ ನ್ಯೂ ಯೂಸರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಮುಂದುವರೆದು ನಿಮಗೆ ವೇರಿಫೈ ಮೊಬೈಲ್ ನಂಬರ್ ಎಂಬ ಮುಖ್ಯಾಂಶ ದೊರೆಯುತ್ತದೆ ಅದರಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರನ್ನು ಎಂಟರ್ ಮಾಡಬೇಕು ಕೆಳಗಡೆ ಕ್ಯಾಪ್ಚವನ್ನು ತಪ್ಪಿಲ್ಲದೆ ಬರೆದು, ಸೆಂಡ್ ಒಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಒಟಿಪಿ ನಂಬರ್ ಬರುವುದು ಆ ನಂಬರ್ ಅನ್ನು ನೀವು ಕೊಟ್ಟಿರುವ ಕಾಲಂನಲ್ಲಿ ಎಂಟರ್ ಮಾಡಿ ವೇರಿಫೈ ಮಾಡಿಕೊಳ್ಳಿ. ಹೀಗೆ ವೆರಿಫೈ ಆದ ನಂತರ ನಿಮ್ಮ ವೋಟರ್ ಐಡಿಯನ್ನು ನೊಂದಿಸಬೇಕು.
ನಂತರ ಲಾಗಿನ್ ಆಗಲು ಯೂಸರ್ ನೇಮಲ್ಲಿ ನೀವು ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಬೇಕು ನಂತರ ಪಾಸ್ವರ್ಡ್ ಎಂಟರ್ ಮಾಡಿ ಕ್ಯಾಪ್ಚವನ್ನು ಕೊಡಬೇಕು. ಹೀಗೆ ಲಾಗಿನ್ ಮಾಡಬೇಕು. ಲೋಗಿನ್ ಆದ ನಂತರ ನಿಮಗೆ ಪೇಜ್ ಓಪನ್ ಆಗುವುದು. ಪೇಜಿನ ಎಡ ಭಾಗದಲ್ಲಿ ಕೊನೆಯ ಆಪ್ಷನ್ ಆಗಿ ಡೌನ್ಲೋಡ್ ಎಪಿಕ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಡೌನ್ಲೋಡ್ ಎಲೆಕ್ಟ್ರಿಕ್ ಕಾಪಿ ಆಫ್ ಎಪಿಕ್ ಕಾರ್ಡ್ ಎಂಬ ಮುಖ್ಯ ಅಂಶ ದೊರೆಯುವುದು ಅದರಲ್ಲಿ ಐ ಹ್ಯಾವ್ ಎಪಿಕ್ ನಂಬರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಹಳೆಯ ಎಪಿಕ್ ನಂಬರ್ ಅಂದರೆ ವೋಟರ್ ಐಡಿಯನ್ನು ನೀವು ಎಂಟರ್ ಮಾಡಬೇಕು. ನಂತರ ಕೆಳಗೆ ನಿಮ್ಮ ಸ್ಟೇಟ್ ಅಂದರೆ ಕರ್ನಾಟಕ ಎಂದು ಸೆಲೆಕ್ಟ್ ಮಾಡಿ, ಸರ್ಚ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಹೀಗೆ ಸರ್ಚ್ ಮಾಡಿದ ನಂತರ ನಿಮಗೆ ಎಪಿಕ್ ನಂಬರ್, ನಿಮ್ಮ ಹೆಸರು, ನಂತರ ರಿಲೇಟಿವ್ ನೇಮ್, ರಾಜ್ಯ ಮೊಬೈಲ್ ನಂಬರ್ ಇಮೇಲ್ ಐಡಿ ಹೀಗೆ ಮುಂತಾದ ನಿಮ್ಮ ವಿವರಗಳನ್ನು ನೀವು ಅಲ್ಲಿ ನೋಡಬಹುದು. ನಂತರ ಕೆಳಗಿನ ಭಾಗದಲ್ಲಿ ಸೆಂಡ್ ಒಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮಗೆ ಓಟಿಪಿ ನಿಮ್ಮ ರಿಜಿಸ್ಟರ್ ನಂಬರಿಗೆ ಬರುತ್ತದೆ. ಓಟಿಪಿ ನೊಂದಾವಣೆ ಮಾಡಿದ ನಂತರ ವೇರಿಫೈ ಅನ್ನು ಮಾಡಬೇಕು. ವೆರಿಫೈ ಮಾಡಲು ವೇರಿಫೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ವೆರಿಫೈ ಆದ ನಂತರ ವೆರಿಫಿಕೇಶನ್ ಸಕ್ಸಸ್ ಫುಲ್ ಎಂಬ ಮೆಸೇಜ್ ನಿಮಗೆ ಬರುತ್ತದೆ. ನಂತರ ಅಲ್ಲಿ ಕಾಣಿಸುವ ಕ್ಯಾಪ್ಸವನ್ನು ಮತ್ತೆ ಎಂಟರ್ ಮಾಡಬೇಕು. ಇಷ್ಟೆಲ್ಲ ಮಾಡಿದ ಮೇಲೆ ನಿಮಗೆ ಡೌನ್ಲೋಡ್ E-epic ಎಂಬ ಆಪ್ಷನ್ ಕೆಳಗಡೆ ಭಾಗದಲ್ಲಿ ದೊರೆಯುತ್ತದೆ. ಆ ಡೌನ್ಲೋಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಕಂಗ್ರಾಜುಲೇಷನ್ ಎಂಬ ಸಂದೇಶ ಬರುತ್ತದೆ ನೇರವಾಗಿ ನಿಮ್ಮ ವೋಟರ್ ಐಡಿಯನ್ನು ಕಾಣಬಹುದು. ಹೀಗೆ ತುಂಬಾ ಸರಳವಾದ ವಿಧಾನದಲ್ಲಿ ನಿಮ್ಮ ಹಳೆಯ ವೋಟರ್ ಐಡಿ ಹಾಗೂ ಹೊಸ ವೋಟರ್ ಐಡಿಗಳನ್ನು ನೀವು ಕೇವಲ ಎರಡರಿಂದ ಐದು ನಿಮಿಷದಲ್ಲಿ ಡೌನ್ಲೋಡ್ ಮಾಡಬಹುದು.
ಈ ವಿಧಾನವನ್ನು ವಿಡಿಯೋ ಮೂಲಕ ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಒಂದು ವೇಳೆ ನಿಮ್ಮ ವೋಟರ್ ಐಡಿ ಕಳೆದು ಹೋಗಿದ್ದರೆ ಮೊದಲೇ ನೀವು ಈ ವಿಧಾನದಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದರೆ ನಿಮಗೆ ಯಾವುದೇ ರೀತಿಯ ನಷ್ಟ ಬರುವುದಿಲ್ಲ. ಈ ಹಳೆ ಮತ್ತು ಹೊಸ ವೋಟರ್ ಐಡಿಗಳನ್ನು ಡೌನ್ಲೋಡ್ ಮಾಡುವ ಈ ಸರಳ ವಿಧಾನವನ್ನು ತಪ್ಪದೇ ನಿಮ್ಮ ಸ್ನೇಹಿತ ಮಿತ್ರರಿಗೆ ಈ ಲೇಖನವನ್ನು ಶೇರ್ ಮಾಡಿ. ಧನ್ಯವಾದಗಳು.
Hi bro