ವಿದ್ಯಾರ್ಥಿಗಳಿಗೆ ಗಮನಿಸಿ : ಅರಿವು ಸಾಲ ಯೋಜನೆಗೆ ಅರ್ಜಿ ಆಹ್ವಾನ, Student Education Loan, Apply for Loan

Picsart 23 06 22 13 27 19 987

ಎಲ್ಲರಿಗೂ ನಮಸ್ಕಾರ, ಇಂದು ಈ ಲೇಖನದಲ್ಲಿ ಅಲ್ಫಾಸಂಖ್ಯಾತ ಅಭಿವೃದ್ದಿ ನಿಗಮದಿಂದ ಅರಿವು ಸಾಲದ ಯೋಜನೆಗೆ ಸೇರಿದಂತೆ ತಮ್ಮಲ್ಲಿ ಮಾಹಿತಿಯನ್ನು ಒದಗಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿಯನ್ನು ಕರೆಯಲಾಗಿದೆ :

Arivu Educational loan 2023: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2023- 24ನೇ ಸಾಲಿನಲ್ಲಿ CET ಮತ್ತು NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ವೃತ್ತಿಪರ ಕೋರ್ಸ್‌(ಎಂಬಿಬಿಎಸ್ / ಬಿಡಿಎಸ್ / ಆಯುಷ್ / ಬ್ಯಾಚುಲರ್ ಆಫ್‌ ಆರ್ಕಿಟೆಕ್ಚರ್ / ಬ್ಯಾಚುಲರ್ ಆಫ್‌ ಇಂಜಿನಿಯರಿಂಗ್ / ಬ್ಯಾಚುಲರ್ ಆಫ್‌ ಟೆಕ್ನಾಲಜಿ ) ಗಳಿಗೆ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆಯಡಿಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Untitled 1 scaled

ಈ ಯೋಜನಯ ಲಾಭವನ್ನು ಯಾರು ಪಡೆಯಬಹುದು?.

ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳು, ಮುಸ್ಲಿಂ, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರು ಅರ್ಜಿ ಸಲ್ಲಿಸಬಹುದು

CET ಮತ್ತು NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ವೃತ್ತಿಪರ ಕೋರ್ಸ್‌ ಎಂಬಿಬಿಎಸ್ / ಬಿಡಿಎಸ್ / ಆಯುಷ್ / ಬ್ಯಾಚುಲರ್ ಆಫ್‌ ಆರ್ಕಿಟೆಕ್ಚರ್ / ಬ್ಯಾಚುಲರ್ ಆಫ್‌ ಇಂಜಿನಿಯರಿಂಗ್ / ಬ್ಯಾಚುಲರ್ ಆಫ್‌ ಟೆಕ್ನಾಲಜಿ/ ಅಗ್ರಿಕಲ್ಚರ್ ವಿಜ್ಞಾನ ಗಳಿಗೆ ಪ್ರವೇಶಿಸಿದ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸುವ ಆಕಾಂಕ್ಷಿಗಳ ಎಲ್ಲಾ ಮೂಲಗಳಿಂದ ವಾರ್ಷಿಕ ಕುಟುಂಬದ ವಾರ್ಷಿಕ  ರೂ.8 ಲಕ್ಷ ಮೀರಿರಬಾರದು. ಅಂತಹ ಕುಟುಂಬದ ವಿದ್ಯಾರ್ಥಿಗಳು ಈ ಅರ್ಜಿಯನ್ನು ಸಲ್ಲಿಸಬಹುದು.

ಎಷ್ಟು ಸಾಲ ದೊರೆಯುತ್ತದೆ?:

ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.5 ಲಕ್ಷದವರೆಗೆ ಶೈಕ್ಷಣಿಕ ಸಾಲ ಸೌಲಭ್ಯ ದೊರೆಯಲಿದೆ. ವರ್ಷಕ್ಕೆ ಒಂದು ಲಕ್ಷ ರೂ.ನಂತೆ ಕೋರ್ಸ್‌ನ ಅವಧಿಗೆ ಗರಿಷ್ಠ 4 ಲಕ್ಷದಿಂದ 5 ಲಕ್ಷ ರೂ ವರೆಗೆ ಶೈಕ್ಷಣಿಕ ಸಾಲ ನೀಡಲಾಗುತ್ತದೆ. ಈ ಲೋನ್‌ಗೆ ವಾರ್ಷಿಕ ಶೇಕಡ.2 ಬಡ್ಡಿ ದರ ಇರುತ್ತದೆ.

ಸಾಲದ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

KMDC ಅಧಿಕೃತ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ ನೋಟರಿ ಮಾಡಿಸಿದ ಇಂಡಿಮ್ನಿಟ್ ಬಾಂಡ್ ಮತ್ತು ಇನ್ನಿತರೆ ಧಾಖಲೆಗಳನ್ನು ಜೋಡಿಸಿ ಪಾಂಡೇಶ್ವರ ನಗರದಲ್ಲಿರುವ ಮೌಲನಾ ಅಜಾದ್ ಭವನದಲ್ಲಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

telee

ಅರ್ಜಿ ಸಲ್ಲಿಸಲು ಬೇಕಾಗಿರುವ ಡಾಕ್ಯುಮೆಂಟ್ಸ್ :

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು )
ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಗ್ಗತಿಸಬೇಕು.
CET / NEET  ಪರೀಕ್ಷಾ ಪ್ರವೇಶ ಪತ್ರ (Admit Card)
SSLC ಮತ್ತು PUC ಅಂಕಪಟ್ಟಿ.
50 ರೂಪಾಯಿಯ ಇ – ಸ್ಟ್ಯಾಂಪ್ ನೊಂದಿಗೆ ನೋಟರಿ ಮಾಡಿಸಿದ ಇಂಡಿಮ್ನಿಟ್ ಬಾಂಡ್
2 ಅಭ್ಯರ್ಥಿ ಮತ್ತು ಪೋಷಕ ಫೋಟೋ.

ಈ ಮೇಲಿನ ದಾಖಲಾತಿಯನ್ನು ಮತ್ತು ಆನ್ಲೈನ್ ಅರ್ಜಿ ಸಲ್ಲಿಸಿದ ದಾಖಲಾತಿಯನ್ನು ಹಾಗೂ ಇಂಡಿಮ್ನಿಟ್ ಬಾಂಡ್ ಎಲ್ಲವನ್ನು ಸೇರಿಸಿ ಕಚೇರಿಯಲ್ಲಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂಲೈ 10 ರ ಒಳಗಾಗಿ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವಂತಹ ಇಂತಹ ಸಾಲದ ಯೋಜನೆಯ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಬಂಧುಗಳಿಗೆ ಹಾಗೂ ಪೋಷಕರಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

2 thoughts on “ವಿದ್ಯಾರ್ಥಿಗಳಿಗೆ ಗಮನಿಸಿ : ಅರಿವು ಸಾಲ ಯೋಜನೆಗೆ ಅರ್ಜಿ ಆಹ್ವಾನ, Student Education Loan, Apply for Loan

Leave a Reply

Your email address will not be published. Required fields are marked *

error: Content is protected !!