ರಾಜ್ಯದ ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

IMG 20240825 WA0000

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ, ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ(loan facility) ಪಡೆಯಬಹುದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆರ್ಥಿಕ ನೆರವಿಗಾಗಿ ಈ ಯೋಜನೆಯು ಬಹಳ ಉಪಯೋಗವಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ(students) ಶೈಕ್ಷಣಿಕಾಭಿವೃದ್ಧಿಗಾಗಿ (education) ಆರ್ಥಿಕವಾಗಿ ನೆರವು ವಾರ್ಷಿಕ ರೂ.1.00 ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ.4.00 ಲಕ್ಷಗಳಿಂದ ರೂ.5.00ಲಕ್ಷಗಳ ವರೆಗೆ ಸಾಲ ಹಾಗು ಬಡ್ಡಿದರ: ವಾರ್ಷಿಕ ಶೇ.2ರಷ್ಟು ದೊರೆಯುತ್ತದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ರಿನ್ಯೂವಲ್ (Arivu Renewal) ಸಾಲದ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು :

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ (Karnataka Minorities Development Corporation) ವತಿಯಿಂದ 2024-25 ನೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ / ನೀಟ್ (CET/NEET) ವೃತ್ತಿಪರ ಕೋರ್ಸ್ ಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳಾದ ಅಂದರೆ ವೈದ್ಯಕೀಯ, (ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್) ದಂತ ವೈದ್ಯಕೀಯ (ಬಿಡಿಎಸ್, ಎಂಡಿಎಸ್), ಆಯುಷ್(ಬಿ.ಆಯುಷ್, ಎಂ.ಆಯುಷ್) ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಬಿ.ಇ/ಬಿ.ಟೆಕ್, ಎಂ.ಇ/ಎಂ.ಟೆಕ್) ಬ್ಯಾಚುಲರ್ ಆಪ್ ಆರ್ಕಿಟೆಕ್ಚರ್(ಬಿ.ಆರ್ಕ್, ಎಂ.ಆರ್ಕ್), MBA, MCA, LLB, B.Sc in Horticulture, Agricultural Engineering, Dairy Technology, Forestry, Veterinary and Animal Technology, Fisheries, Sericulture, Home/Community Sciences Food Nutrition and Dietetics, B.Pharma, M.Pharma Pharma D and D Pharma ಇಂತಹ ಪದವಿ ಕೋರ್ಸ್ ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು, ಸಿಖ್, ಪಾರ್ಸಿ ವಿದ್ಯಾರ್ಥಿಗಳು ಅರಿವು ರಿನ್ಯೂವಲ್ (Arivu Renewal) ಸಾಲದ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ (online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ :

ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಯಾವುದೇ ರಿನಿವಲ್ ಮೊತ್ತವನ್ನು ಪಾವತಿಸದೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ವೆಬ್ ಸೈಟ್ (website):www.kmdconline.Karnataka.gov.in ನಲ್ಲಿ ಅಕ್ಟೋಬರ್ 31 ರೊಳಗೆ ಸಲ್ಲಿಸಬಹುದು ಹಾಗೂ ಸಲ್ಲಿಸಿದ ಅರ್ಜಿಯ ಹಾರ್ಡ್ ಕಾಪಿಗಳನ್ನು ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು.

ಅರಿವು ಶಿಕ್ಷಣ ಸಾಲವನ್ನು ಆನ್‌ಲೈನ್‌ನಲ್ಲಿ (online) ಅರ್ಜಿ ಸಲ್ಲಿಸುವ ವಿಧಾನ :

ಹಂತ  1 : ಅಧಿಕೃತ ವೆಬ್‌ಸೈಟ್ kmdconline.karnataka.gov.in ಗೆ ಹೋಗಿ.
ಹಂತ  2 : ಕೆಳಗೆ ಸ್ವೈಪ್ ಮಾಡಿದ ನಂತರ “ಅರಿವು ಶಿಕ್ಷಣ ಸಾಲ ಯೋಜನೆ” ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ  3 : “ಆನ್‌ಲೈನ್‌ನಲ್ಲಿ ಅನ್ವಯಿಸು” ಆಯ್ಕೆಯನ್ನು ಆರಿಸಿ.
ಹಂತ 4 : ಈಗ “ಹೊಸದನ್ನು ಅನ್ವಯಿಸು” ಬಟನ್ ಅನ್ನು ಆಯ್ಕೆ ಮಾಡಿ.
ಹಂತ 5 : OTP ಮತ್ತು ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.
ಹಂತ 6 : ಕ್ಯಾಪ್ಚಾ ಪಠ್ಯ ಮತ್ತು UID ಸಂಖ್ಯೆಯನ್ನು ಟೈಪ್ ಮಾಡಿ, ನಂತರ “ಮುಂದೆ” ಬಟನ್ ಒತ್ತಿರಿ.
ಎಲ್ಲಾ ಸಂಬಂಧಿತ ಮಾಹಿತಿಯೊಂದಿಗೆ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
ಹಂತ  7 : ಫಾರ್ಮ್ ಅನ್ನು ಡೌನ್‌ಲೋಡ್ ಮಾಡಲು, “ಅಪ್ಲಿಕೇಶನ್ ಅನ್ನು ಉಳಿಸಿ” ಟ್ಯಾಬ್ ಆಯ್ಕೆಮಾಡಿ.
ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ.
ಹಂತ 8 : ಅರ್ಜಿ ನಮೂನೆ ಮತ್ತು ಪೋಷಕ ದಾಖಲೆಗಳನ್ನು ಒಂದೇ ಹಾರ್ಡ್‌ಕಾಪಿ ಫೈಲ್‌ಗೆ ಕಂಪೈಲ್ ಮಾಡಿ.
ಹಂತ 9 : ಡಾಕ್ಯುಮೆಂಟ್ ಅನ್ನು KMDC ಕಚೇರಿಗೆ ಕಳುಹಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (Documents) :

ಈ ಸಾಲದ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು:

ಜಾತಿ ಪ್ರಮಾಣ ಪತ್ರ
ಆದಾಯದ ಪ್ರಮಾಣಪತ್ರ
ಆಧಾರ್ ಕಾರ್ಡ್
ಪ್ರಸ್ತುತ ಪಾಸ್‌ಪೋರ್ಟ್ ಗಾತ್ರದ ಫೋಟೋಗಳ ಜೋಡಿ
ವಿದ್ಯಾರ್ಥಿಯ ಆನ್‌ಲೈನ್ ಅಪ್ಲಿಕೇಶನ್
ಸಿಇಟಿ ಪ್ರವೇಶ ಪತ್ರ
NEET ಗೆ ಪ್ರವೇಶ ಪತ್ರ
SSLC ಪ್ರಮಾಣಪತ್ರದೊಂದಿಗೆ 10 ನೇ ತರಗತಿ ಅಂಕಪಟ್ಟಿ
ಪ್ರಿ-ಯೂನಿವರ್ಸಿಟಿ ಕೋರ್ಸ್‌ವರ್ಕ್‌ಗಾಗಿ ಡಿಪ್ಲೊಮಾ ಅಥವಾ ಕೋರ್ಸ್ ಮಾರ್ಕ್ ಕಾರ್ಡ್
ವಿದ್ಯಾರ್ಥಿ ಮತ್ತು ಪೋಷಕರ ನಷ್ಟ ಪರಿಹಾರ ಬಾಂಡ್
ಕಾಲೇಜಿಗೆ ಬ್ಯಾಂಕ್ ಖಾತೆ ಮಾಹಿತಿ
ಶಾಲೆಯಿಂದ ನಿಜವಾದ ಪ್ರಮಾಣಪತ್ರ ಅಥವಾ ಡಿಪ್ಲೊಮಾ
ವಿದ್ಯಾರ್ಥಿಯ ಸ್ವಯಂ ಘೋಷಣೆ ರೂಪ
ಪೋಷಕರ ಸ್ವಯಂ ಘೋಷಣೆ ರೂಪ
ಕಾಲೇಜು ಬೋಧನಾ ಶುಲ್ಕ. 

ಗಮನಿಸಿ (notice) :

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಹಮೀದ್ ಷಾ ಕಾಂಪ್ಲೆಕ್ಸ್, 2ನೇ ಮಹಡಿ, ಎಸ್.ಎಫ್.2, ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ಹಿಂಭಾಗ, ಕಬ್ಬನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ: 080-22114817, ಸಹಾಯವಾಣಿ ಸಂಖ್ಯೆ: 8277799990 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ದಕ್ಷಿಣ ವಿಭಾಗದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ)ದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!