ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ, ಎಟಿಎಂ(ATM) ಹೊಂದಿದವರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸ್ನೇಹಿತರೆ ಇವತ್ತಿನ ದಿನಮಾನಗಳಲ್ಲಿ ATM ಗಳು ಬಳಸುವುದು ಸಾಮಾನ್ಯವಾಗಿದೆ. ATM ನಿಂದ ಹಣವನ್ನು ತೆಗೆಸಿಕೊಳ್ಳುವಾಗ ಸಾಮಾನ್ಯವಾಗಿ ಸಣ್ಣ – ಪುಟ್ಟ ತಪ್ಪುಗಳು ಸಹಜ, ಆದರೆ ಅವು ಕೆಲವೊಂದು ಸಂದರ್ಭದಲ್ಲಿ ನಿಮ್ಮ ಬ್ಯಾಂಕಿಂಗ್ ವಿಷಯಕ್ಕೆ ಸಂಭಂದಿಸಿದಂತೆ ಹಾನಿಯಂನ್ನುಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಒಹಿಸುವುದೂ ಒಳ್ಳೆಯದು. ಇವತ್ತಿನ ಈ ಲೇಖನದಲ್ಲಿ ಇದರ ಕುರಿತಾಗಿಯೇ ಚರ್ಚಿಸೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆ ಇರಲಿ :
ATMಗಳು ಹಣ ಮತ್ತು ಬ್ಯಾಂಕಿಂಗ್ ಸೇವೆಗಳಿಗೆ 24/7 ಓಪನ್ ಇರುತ್ತದೆ. ಇದು ದೂರದ ಪ್ರದೇಶಗಳಲ್ಲಿಯೂ ಸಹ ಅನುಕೂಲತೆ, ಗೌಪ್ಯತೆ ಮತ್ತು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಒದಗಿಸುತ್ತಾರೆ. ATM ನಲ್ಲಿ ಸಣ್ಣ ಪ್ರಮಾಣದಿಂದ ಹಿಡಿದು ದೊಡ್ಡ ಪ್ರಮಾಣದವರೆಗೂ ಹಣವನ್ನು ಟ್ರಾನ್ಸಾಕ್ಷನ್(transaction) ಮಾಡಲು ಅವಕಾಶ ಒದಗಿಸುತ್ತದೆ. ಇದರ ಹಲವಾರು ಉಪಯೋಗಗಳು ಇದ್ದರು ಕೂಡ ಕೆಲವೊಬ್ರು ಇದರ ದುರುಪಯೋಗ ಕೂಡ ಮಾಡುತ್ತಾರೆ. ATM ಕಾರ್ಡ್ ಬ್ಲಾಕ್ ಮಾಡುವುದಾಗಲಿ ಹಾಗೂ ಹಣ ಕದಿಯುವ ಸಾಧ್ಯತೆಗಳು ಕೂಡ ಇವೆ. ಹಾಗಾಗಿ ನಾವು ಖುದ್ದಾಗಿ ಕೆಲವೊಂದು ಮುನ್ನೆಚ್ಚರಿಕೆಯನ್ನು ಕೈಗೊಂಡು ನೀವು ಕಷ್ಟ ಪಟ್ಟ ಸಂಪಾದಿಸಿದ ಹಣವನ್ನು ರಕ್ಷಿಸಿಕೊಳ್ಳಬಹುದು. ATM ನಲ್ಲಿ ಹಣವನ್ನು ಡ್ರಾ ಮಾಡುವಾಗ ಎಚ್ಚರಿಕೆ ವಹಿಸಬೇಕಾದ ಕೆಲವೊಂದು ಮುಖ್ಯ ಅಂಶಗಳು ಇಲ್ಲಿವೇ
ಮೊದಲನೆಯದಾಗಿ ನೀವು ಬ್ಯಾಂಕ್ ನಿಂದ ನಿಮ್ಮ ATM ಕಾರ್ಡ್ ಪಡೆದುಕೊಂಡ ನಂತರ ಅದರ ಹಿಂದೆ ಸಹಿಯನ್ನು ಹಾಕಲು ನೀಡಿರುವ ಜಾಗದಲ್ಲಿ ಸಹಿ ಹಾಕಿ. ATM ಮಷೀನ್ ನಿಂದ ಹಣವನ್ನು ತಗೆಸಿಕೊಳ್ಳುವ ಮುನ್ನ ಯಾವುದೇ ಅಪರಿಚಿತ ವ್ಯಕ್ತಿ ಒಳಗಡೆ ಬರದ ಹಾಗೆ ನೋಡಿಕೊಳ್ಳಿ
ಇನ್ನು ಅತ್ಯಂತ ಮಹತ್ವದ ಮಾತು, ಯಾರೊಂದಿಗೂ ನಿಮ್ಮ ATM ಅಥವಾ Debit card ಪಿನ್ ಹಂಚಬೇಡಿ ಅದನ್ನು ನಿಮ್ಮಷ್ಟಕ್ಕೆ ಇಟ್ಟುಕೊಂಡರೆ ಒಳ್ಳೆಯದು ನಿಮ್ಮ ATM ಅಥವಾ Debit ಕಾರ್ಡ್ ನ ಪಿನ್ ಬದಲಾಯಿಸುತ್ತಿರಿ, ಒಂದೇ ಪಿನ್ ನಂಬರ್ ಇಟ್ಟುಕೊಳ್ಳಬೇಡಿ.
ATM ಅಥವಾ Debit ಕಾರ್ಡ್ ನಲ್ಲಿ ನಿಮ್ಮ ಪಿನ್ ನಂಬರ್ ಯಾವುದೇ ಕಾರಣಕ್ಕೂ ಬರೆಯಬೇಡಿ.
ಇನ್ನು ATM ನಲ್ಲಿ ನೀವು ಪಿನ್ ಹಾಕುವುದನ್ನು ಯಾರು ನೋಡದಂತೆ ನೋಡಿಕೊಳ್ಳಿ. ATM ಕಳೆದುಕೊಂಡರೆ, ತಕ್ಷಣವೇ ಬ್ಯಾಂಕ್ ಕಸ್ಟಮರ್ ಕೇರ್ ಗೆ ಕರೆಮಾಡಿ ತಿಳಿಸಿ. ಹಣವನ್ನು ವಿಥ್ ಡ್ರಾ ಮಾಡಿದೆ ನಂತರ ಸ್ವಲ್ಪ ಹೊತ್ತು ಕಾದು ನಿಮ್ಮ ಟ್ರಾನ್ಸಾಕ್ಷನ್ ಸಂಪೂರ್ಣಗೊಂಡ ನಂತರವೇ ಹೊರಗೆ ಹೋಗಿ. ಟ್ರಾನ್ಸಾಕ್ಷನ್ ಮಾಡಿದ ನಂತರ ಸ್ವೀಕರಿಸಿದ ರಸೀದಿಯನ್ನು ಅಲ್ಲೇ ಎಸೆಯಬೇಡಿ.
ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ನೀಡಿ. ಇದರಿಂದ ನಿಮ್ಮ ಡೆಬಿಟ್ ಕಾರ್ಡಿನ ಪ್ರತಿಯೊಂದು ಟ್ರ್ಯಾನ್ಸಾಕ್ಷನ್ ಗೆ ಸಂಬಂದಿಸಿದ ವಿವರ ಸಿಗುತ್ತಾ ಇರುತ್ತದೆ.
ಹೀಗೆ ಎಟಿಎಂ ಕಾರ್ಡ್ ಗಳನ್ನು ಹೊಂದಿದ ಪ್ರತಿಯೊಬ್ಬರು ಕೂಡ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸಾಮಾನ್ಯ ಜನತೆಗೆ ಉಪಯೋಗವಾಗಲೆಂದೆ ಈ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ