ಭರ್ಜರಿ ಮೈಲೇಜ್ ನೀಡುವ ಬಜಾಜ್ ಫ್ರೀಡಂ 125( Bajaj Freedom 125) ಸಿಎನ್‌ಜಿ ಬೈಕ್ ವಿತರಣೆ ಶುರು. 330 ಕೀಮಿ ಚಲಿಸುವ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು.
ಇಂದು ತಂತ್ರಜ್ಞಾನ (Technology) ಬಹಳಷ್ಟು ಮುಂದುವರೆದಿದೆ. ಪೆಟ್ರೋಲ್(Petrol), ಡೀಸೆಲ್ (Diesel)ಗಳನ್ನು ಬಳಸಿ ಚಲಿಸುವ ವಾಹನಗಳಿಗೆ ಪರ್ಯಾಯವಾಗಿ ಎಷ್ಟೋ ವಾಹನಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಂತಹ ವಾಹನಗಳಲ್ಲಿ ಹೆಚ್ಚಾಗಿ ಸ್ಕೂಟರ್ ಗಳನ್ನು ನಾವು ಕಾಣಬಹುದು. ಹಾಗೂ ಇಂತಹ ವಾಹನಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಸ್ಕೂಟರ್ ಗಳನ್ನು ಹೊರತುಪಡಿಸಿ ಬೈಕ್ ಗಳಲ್ಲಿ ಬ್ಯಾಟರಿ ಚಾಲಿತ ವಾಹನ ಒಂದೇ ಒಂದು ಬಂದಿರಲಿಲ್ಲ. ಆದರೆ ಇದೀಗ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ (Bajaj Auto) ಇತ್ತೀಚಿಗೆ ವಿಶ್ವದ ಮೊದಲ ಸಿಎನ್‌ಜಿ ಬೈಕ್(CNG bike) ಅನ್ನು ಬಿಡುಗಡೆಗೊಳಿಸಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಸಿಎನ್‌ಜಿ-ಚಾಲಿತ ಬೈಕ್ ಬರುತ್ತಿರುವುದು ಭಾರತೀಯ ದ್ವಿಚಕ್ರ ವಾಹನಗಳನ್ನು (Two wheelers) ಖರೀದಿಸುವ ಗ್ರಾಹಕರಿಗೆ ಮತ್ತೊಂದು ಆಯ್ಕೆಯನ್ನು ನೀಡಲಾಗಿದೆ.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಬಜಾಜ್ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್‌ನ ವಿತರಣೆಗಳು ಪ್ರಾರಂಭವಾಗಿದ್ದು, ಹೌದು ಬಜಾಜ್ ಫ್ರೀಡಂ 125 ಸಿಎನ್‌ಜಿ ಮೊದಲ ಬೈಕ್ ಅನ್ನು ಮಹಾರಾಷ್ಟ್ರದ ಪುಣೆಯ ಗ್ರಾಹಕ ಪ್ರವೀಣ್ ಥೋರಟ್‌ಗೆ ವಿತರಿಸಲಾಯಿತು. ಕೇವಲ ಒಂದೆರಡು ವಾರಗಳ ಹಿಂದೆ ಬಿಡುಗಡೆಗೊಂಡ ಬೈಕ್ ಗ್ರಾಹಕರ ಮನಸ್ಸನ್ನು ಗೆದ್ದಿದೆ.ಪುಣೆಯಲ್ಲಿ(Pune) ಹೊಸ ಬೈಕಿನ ಮೊದಲ ಯುನಿಟ್ ವಿತರಣೆ ಮೂಲಕ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವ ಬಜಾಜ್ ಕಂಪನಿಯು ಈ ಹೊಸ ಬೈಕ್ ಮಾದರಿಯು ವಿನೂತನ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.
ಇತ್ತೀಚಿಗೆ ಪುಣೆಯಲ್ಲಿ ಲಾಂಚ್ ಮಾಡಲಾದ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಸಕತ್ ಸ್ಟೈಲಿಶ್ ಆಗಿ ಕಾಣುವ ಜೊತೆಗೆ, ಸಿಎನ್‌ಜಿ ಬೈಕ್ ಭಾರತೀಯ ಮಾರುಕಟ್ಟೆಗಳನ್ನು ಪ್ರವೇಶಿಸುವ ಸಮಯದಲ್ಲಿ 30,000 ಕ್ಕೂ ಹೆಚ್ಚು ಜನರು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ಬಿಡುಗಡೆಗೆ ಮುಂಚೆಯೇ ಸಾಕಷ್ಟು ಗ್ರಾಹಕರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದೆ ಎಂದು ಬಜಾಜ್ ಆಟೋ ಹೇಳಿತ್ತು. ಜುಲೈ 18 ರಂದು ಫ್ರೀಡಂ 125 ಗಾಗಿ ಬುಕ್ಕಿಂಗ್ ತೆರೆಯಲಾಗಿದ್ದು, ಬೈಕ್ ಖರೀದಿಗೆ ಬುಕ್ ಮಾಡಲು 1,000 ರೂ. ಟೋಕನ್ ಮೊತ್ತವನ್ನು ಪಾವತಿಸಬೇಕು. ಈಗಾಗಲೇ ಸಿಎನ್‌ಜಿ ಬೈಕ್‌ಗಾಗಿ (CNG Bike) ಸುಮಾರು 6,000 ಬುಕಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಬಹಿರಂಗಪಡಿಸಿದೆ.
ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ನ ಬೆಲೆ ಎಷ್ಟು?
ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುವ ವಿಶ್ವದ ಮೊದಲ ಸಿಎನ್‌ಜಿ ಬೈಕ್‌ನ ಎಕ್ಸ್ ಶೋ ರೂಮ್ ಬೆಲೆ ರೂ.95,000 ದಿಂದ ಆರಂಭಿಕವಾಗಿ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ.1.10 ಲಕ್ಷದವರೆಗೆ ಇದೆ. ಕೆರಿಬಿಯನ್ ಬ್ಲೂ, ಸೈಬರ್ ವೈಟ್, ಎಬೊನಿ ಬ್ಲ್ಯಾಕ್/ಗ್ರೇ ಮತ್ತು ರೇಸಿಂಗ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಸಿಎನ್‌ಜಿ-ಚಾಲಿತ ಮೋಟಾರ್‌ಸೈಕಲ್ ಅನ್ನು ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಬಜಾಜ್ ಫ್ರೀಡಂ 125 ಚಾಲನೆಯ ವೆಚ್ಚವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುತ್ತದೆ.ಮೋಟಾರ್‌ಸೈಕಲ್ ಸಿಎನ್‌ಜಿಯಲ್ಲಿ ಚಲಿಸುವಾಗ ಗಂಟೆಗೆ 90.5 ಕಿಮೀ ಮತ್ತು ಪೆಟ್ರೋಲ್‌ನಲ್ಲಿ 93.4 ಕಿಮೀ ವೇಗವನ್ನು ಹೊಂದಿದೆ. ಮೋಟಾರ್‌ಸೈಕಲ್ 125 cc ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು ಅದು 9.4 bhp ಮತ್ತು 9.7 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಫರ್‌ನಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ಇದೆ. ಬಜಾಜ್ ಫ್ರೀಡಂ 125 ಬೈಕ್ ಡ್ರಮ್, ಡ್ರಮ್ ಎಲ್‌ಇಡಿ ಮತ್ತು ಡಿಸ್ಕ್ ಎಲ್‌ಇಡಿ ಎಂಬ ಮೂರೂ ರೂಪಾಂತರಗಳಲ್ಲಿ ಲಭ್ಯವಿದೆ.
ಈ ಬೈಕ್ ನ ವೈಶಿಷ್ಟ್ಯತೆಗಳೇನು?
ಈ ಬೈಕ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಸ್ಪೀಡೋಮೀಟರ್, ಸಿಎನ್‌ಜಿ ಮತ್ತು ಹ್ಯಾಂಡಲ್‌ಬಾರ್‌ನಲ್ಲಿನ ಪೆಟ್ರೋಲ್ ಶಿಫ್ಟ್ ಬಟನ್,ಎಲ್ಇಡಿ ಹೆಡ್ಲೈಟ್, ಯುಎಸ್‌ಬಿ ಪೋರ್ಟ್, 780 ಎಂಎಂ ಉದ್ದದ ಸೀಟ್, ಮತ್ತು ಗೇರ್ ಶಿಫ್ಟ್, ಫ್ರೀಡಂ 125 ಸೀಟ್ ಎತ್ತರ 825 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಮತ್ತು ವೀಲ್ ಬೇಸ್ 1,340 ಎಂಎಂ. ಈ ರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಬಜಾಜ್ ಫ್ರೀಡಮ್ ಬೈಕ್ ನ ವೇಗ ಎಷ್ಟು ಗೊತ್ತಾ?
ಬಜಾಜ್ ಫ್ರೀಡಂ 125 ಬೈಕ್‌ನಲ್ಲಿ ಸಿಎನ್‌ಜಿ ಹಾಗೂ ಪೆಟ್ರೋಲ್ ಈ ಎರೆಡೂ ವ್ಯವಸ್ಥೆಗಳನ್ನು ನೀಡಲಾಗಿದ್ದು, ಸಿಎನ್‌ಜಿ ಬೈಕ್ 2 ಕೆ.ಜಿ ಹಾಗೂ 2 ಲೀಟರ್ ಇಂಧನ ಟ್ಯಾಂಕ್ ನೀಡಲಾಗಿದೆ. 11 ಸುರಕ್ಷತಾ ಪರೀಕ್ಷೆಗಳಲ್ಲಿ ಪಾಸ್ ಆಗಿರುವ ಈ ಬೈಕ್ 130 ಕಿಲೋ ಮೀಟರ್ ವೇಗವಾಗಿ ಓಡುವ ಸಾಮರ್ಥ್ಯ ಹೊಂದಿದ್ದು, ಒಟ್ಟಾರೆಯಾಗಿ ಈ ಬೈಕ್ 330 ಕಿಲೋ ಮೀಟರ್ ದೂರಕ್ಕೆ ಚಲಿಸಬಹುದು. ಈಗಾಗಲೇ ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗಾಗಿ ಬುಕ್ಕಿಂಗ್‌ಗಳು ತೆರೆದಿದ್ದು, ಮೊದಲಿಗೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಡೆಲಿವರಿಗಳು ಪ್ರಾರಂಭವಾಗುತ್ತವೆ. ನಂತರ ಹಂತ ಹಂತವಾಗಿ ಉಳಿದ ರಾಜ್ಯಗಳಲ್ಲಿ ಪ್ರಾರಂಭವಾಗುತ್ತವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.