ಬೆಂಗಳೂರಿಗರೇ ಶಾಕಿಂಗ್ ವಿಚಾರ ಬಹಿರಂಗ!  ಇಡ್ಲಿ ತಿನ್ನೋ ಮುನ್ನ ಎಚ್ಚರ; ಕ್ಯಾನ್ಸರ್​ ಸಾಧ್ಯತೆ.! 

Picsart 25 02 28 23 43 28 599

WhatsApp Group Telegram Group

ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಎರಡು ಪ್ರಮುಖ ಸುದ್ದಿಗಳು ಬೆಳಕಿಗೆ ಬಂದಿದ್ದು, ಇದರ ಪರಿಣಾಮ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಒಂದೆಡೆ ಜನಪ್ರಿಯ ಆಹಾರವಾಗಿರುವ ಇಡ್ಲಿಯ ಆರೋಗ್ಯಕರತೆ ಕುರಿತು ಗಂಭೀರ ಪ್ರಶ್ನೆಗಳು ಏಳುತ್ತಾ ಇದ್ದರೆ, ಇನ್ನೊಂದೆಡೆ ನಗರದ ತಾಪಮಾನವು ಗಣನೀಯವಾಗಿ ಏರಿಕೆ ಕಂಡು ಬಿಸಿಲಿನ ಬೇಗೆ ಹೆಚ್ಚಾಗುವ ಮುನ್ಸೂಚನೆ ಲಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಇಡ್ಲಿ: ಆರೋಗ್ಯಕ್ಕೆ ಹಾನಿಕರವೇ?

ಬೆಂಗಳೂರು ಅಡುಗೆಪ್ರಿಯರ ಮೆಚ್ಚಿನ ತಿಂಡಿ ಇಡ್ಲಿ (IDLI) ಈಗ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎಂಬ ಆತಂಕ ಮೂಡಿಸಿದೆ. ಆಹಾರ ಮತ್ತು ಗುಣಮಟ್ಟ ಇಲಾಖೆಯ ವರದಿ ಪ್ರಕಾರ, ರಸ್ತೆ ಬದಿಯ ಇಡ್ಲಿ(road side idli) ತಯಾರಿಕೆಯಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಈ ಪ್ಲಾಸ್ಟಿಕ್, ಹೆಚ್ಚಿನ ಉಷ್ಣತೆಗೆ ಒಡ್ಡಿದಾಗ ಕ್ಯಾನ್ಸರ್ (Cancer) ಹುಟ್ಟಿಸುವ ರಾಸಾಯನಿಕಗಳನ್ನು ಹೊರಸೂಸುತ್ತದೆ, ಇದು ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು.

ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಠಿಣ ಕ್ರಮಗಳು?

ಆಹಾರ ಇಲಾಖೆ (Food department) 500 ಇಡ್ಲಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 35ಕ್ಕೂ ಹೆಚ್ಚು ಮಾದರಿಗಳು ಅಪಾಯಕಾರಿ ಎಂದು ತೋರಿಸಿದೆ. ಇನ್ನು 100 ಮಾದರಿಗಳ ವರದಿ ಬಾಕಿ ಇರುವ ಕಾರಣ, ಅಂತಿಮ ನಿರ್ಧಾರ ಇನ್ನಷ್ಟೇ ಬರಬೇಕಾಗಿದೆ. ಅಷ್ಟೇ ಅಲ್ಲದೆ, ಪ್ಲಾಸ್ಟಿಕ್ ಬಳಕೆಯನ್ನು (using plastic) ಸಂಪೂರ್ಣವಾಗಿ ನಿಷೇಧಿಸುವ  ದಿಕ್ಕಿನಲ್ಲಿ ಇಲಾಖೆ ತೀರ್ಮಾನಕ್ಕೆ ಬರುತ್ತಿದೆ.

ಕೊನೆಯದಾಗಿ ಜನತೆಗೆ ಎಚ್ಚರಿಕೆ ಬಗ್ಗೆ ಹೇಳುವುದಾದರೆ, ಪ್ಲಾಸ್ಟಿಕ್ ಬಳಕೆಯ ಹೋಟೆಲ್ ಅಥವಾ ರಸ್ತೆಬದಿ ಅಂಗಡಿಗಳಲ್ಲಿ ಆಹಾರ ಸೇವಿಸಲು ಮುನ್ನ ಯೋಚಿಸಿ.ಇಡ್ಲಿ ತಯಾರಿಸುವಾಗ ಅಥವಾ ಬಡಿಸುವಾಗ ಪ್ಲಾಸ್ಟಿಕ್ ಬಳಸುತ್ತಿದ್ದರೆ ಹೋಟೆಲ್‌ಗಳ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಬಹುದು.
ಮನೆಯಲ್ಲಿಯೇ ಸ್ವಚ್ಛ ಮತ್ತು ಸುರಕ್ಷಿತವಾದ ಇಡ್ಲಿ ತಯಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!