ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನಿಮ್ಮ ಆಧಾರ್ ಕಾರ್ಡ್ ಎಷ್ಟು ಬ್ಯಾಂಕ್ಗಳಿಗೆ ಲಿಂಕ್ ಆಗಿದೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್ ತುಂಬಾ ಅವಶ್ಯಕವಾದ ದಾಖಲೆಯಾಗಿದೆ, ನೀವೇನಾದರೂ ಈ ಆಧಾರ್ ಕಾರ್ಡ್ ಅನ್ನೋ ಚಿಕ್ಕ ಪ್ರತಿ ಎಂದು ನಿರ್ಲಕ್ಷನೆ ಮಾಡಿ ನಿಮ್ಮ ಬಳಿ ಹೊಂದಿಲ್ಲದಿದ್ದರೆ , ನಿಮ್ಮ ಅನೇಕ ಕೆಲಸಗಳು ಸ್ಥಗಿತವಾಗಬಹುದು ಹೌದು, ಒಂದು ಚಿಕ್ಕ ಕೆಲಸದಿಂದ ಹಿಡಿದು ಸರ್ಕಾರಿ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳುವರೆಗೂ ಈ ಆಧಾರ್ ಕಾರ್ಡ್ ಅತ್ಯ ಅಗತ್ಯ ದಾಖಲೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇತ್ತೀಚಿನ ದಿನಗಳಲ್ಲಿ ಗುರುತಿನ ಮತ್ತು ವಿಳಾಸದ ಪ್ರಮುಖ ಗುರುತಿನ ಪುರಾವೆಗಳಲ್ಲಿ ಆಧಾರ್ ಕಾರ್ಡ್( Adhar card) ಒಂದಾಗಿದೆ . ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು, ಡಿಜಿಟಲ್ ರೂಪದಲ್ಲಿ ಸಾಗಿಸಬಹುದು ಮತ್ತು ದೃಢೀಕರಣ/ಪರಿಶೀಲನೆಗಾಗಿ ತಕ್ಷಣವೇ ಹಂಚಿಕೊಳ್ಳಬಹುದಾಗಿದೆ .
ನಿಮ್ಮ ಆಧಾರ್ ಕಾರ್ಡ್ ಎಷ್ಟು ಬ್ಯಾಂಕ್ಗಳಿಗೆ ಲಿಂಕ್ ಆಗಿದೆ ಗೊತ್ತಾ:
ಅದೇ ಸಮಯದಲ್ಲಿ, ನೀವು ಬ್ಯಾಂಕಿನಲ್ಲಿ ಏನಾದರೂ ಖಾತೆಯನ್ನು ತೆರೆದಾಗ, ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ.
ಹೌದು, ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಆದರೆ ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಮತ್ತು ಯಾವ ಖಾತೆಗೆ ಲಿಂಕ್ ಆಗಿಲ್ಲಾ ಎಂದು ಯೋಚನೆ ಮಾಡುತಿದ್ದಿರಿಯೇ, ಯೋಚನೆ ಬೇಡಾನಿಮ್ಮ ಬ್ಯಾಂಕ್ ಖಾತೆಯು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿದೆಯೇ ಇಲ್ಲವೇ ಎಂದು ಸುಲಭವಾಗಿ ಪರಿಶೀಲಿಸಬಹುದು. ಇದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಎಷ್ಟು ಖಾತೆಗಳಿಗೆ ಲಿಂಕ್ ಆಗಿದೆ ಎನ್ನುವ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದು.
UIDAI ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ, NPCI ಮ್ಯಾಪರ್‌ನಲ್ಲಿ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವ ಸ್ಥಿತಿಯನ್ನ ಮತ್ತು ಆಧಾರ್‌ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಸಹ ಪರಿಶೀಲಿಸಲು ಈ ಕೆಳಗೆ ನೀಡಿರುವ ಸರಳ ಹಂತಗಳನ್ನು ಅನುಸರಿಸಿ:
ಹಂತ 1: ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. https://resident.uidai.gov.in/bank-mapper
ಹಂತ 2: ನೀವು UID/VID, ಭದ್ರತಾ ಕೋಡ್ ಅನ್ನು ನಮೂದಿಸಬೇಕಾದ ಬ್ಯಾಂಕ್ ಮ್ಯಾಪರ್ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ ಮತ್ತು ” OTP ಕಳುಹಿಸಿ” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3: UIDAI ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಒದಗಿಸಿದ ಜಾಗದಲ್ಲಿ OTP ಅನ್ನು ನಮೂದಿಸಿ ಮತ್ತು ” ಸಲ್ಲಿಸು ” ಕ್ಲಿಕ್ ಮಾಡಿ .
ಹಂತ 4: ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಮತ್ತು ನೀವು ಒಂದೇ ಬ್ಯಾಂಕ್‌ನಲ್ಲಿ ಬಹು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಖಚಿತಪಡಿಸಲು ನೀವು ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
Ration card update – ರೇಷನ್ ಕಾರ್ಡ್‌ದಾರರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ : ಕೇಂದ್ರದ ಮಹತ್ವದ ಘೋಷಣೆ
Gruhalakshmi – ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಕಾಲಾವಕಾಶ – ಯಾವ ಜಿಲ್ಲೆಗೆ ಯಾವ ದಿನ ಇಲ್ಲಿದೆ ಕಂಪ್ಲೀಟ್ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ