Bank Holiday : ಡಿಸೆಂಬರ್‌ನಲ್ಲಿ ಬರೋಬ್ಬರಿ 17 ದಿನ ಬ್ಯಾಂಕ್‌ಗಳಿಗೆ ರಜೆ! ಇಲ್ಲಿದೆ ಮಾಹಿತಿ

IMG 20241128 WA0003 1

WhatsApp Group Telegram Group

ಮುಂದಿನ ತಿಂಗಳು ಅಂದರೆ ಡಿಸೆಂಬರ್ (December) ತಿಂಗಳು 17 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತವೆ. ಬ್ಯಾಂಕ್ (bank) ಗಳಿಗೆ ಹೋಗುವ ಮುನ್ನ ಎಚ್ಚರ ಗ್ರಾಹಕರೇ?

ವಾಸ್ತವವಾಗಿ ರಜೆ ಎಂದರೆ ಎಲ್ಲರಿಗೂ ಖುಷಿಕೊಡುವ ಸಂಗತಿ ಆದರೆ ಕೆಲವೊಮ್ಮೆ ಕೆಲವೊಬ್ಬರಿಗೆ ಈ ರಜೆ ಯಾಕೆ ಆದ್ರೂ ಬಂತೋ ಅನ್ನಿಸಿ ಬಿಡುತ್ತದೆ. ಅದರಲ್ಲೂ ಬ್ಯಾಂಕ್ ರಜೆಗಳು(Banks holiday). ಯಾಕೆಂದರೆ ಯಾವಾಗ, ಯಾವ ಸಂದರ್ಭದಲ್ಲಿಯಾದರೂ  ತುರ್ತು ಸಂದರ್ಭಗಳು (emergency situations) ಎದುರಾಗಬಹುದು. ಆದರೆ ಇಂದು ನಾವು ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಬ್ಯಾಂಕ್ ಅವಶ್ಯಕತೆ ಹೆಚ್ಚೇನೂ ಇರುವುದಿಲ್ಲ ಎಂದು ಅನಿಸುವುದುಂಟು. ಆದರೆ ಕೆಲವೊಮ್ಮೆ  ಬಹಳ ಮುಖ್ಯವಾದ ಕೆಲಸಗಳಿಗೆ ಬ್ಯಾಂಕ್ ಗಳಿಗೆ ತೆರಳುವ ಸಂದರ್ಭ ಎದುರಾಗಿಯೇ ಎದುರಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಮುಂದಿನ ತಿಂಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಬಿಡುಗಡೆ ಮಾಡಿರುವ ಬ್ಯಾಂಕ್‌ ರಜಾ ದಿನಗಳ ಪಟ್ಟಿಯ ಪ್ರಕಾರ ಡಿಸೆಂಬರ್  ನಲ್ಲಿ ಒಟ್ಟು 17 ದಿನಗಳ (17 days)ಕಾಲ ಬ್ಯಾಂಕ್‌ಗಳು ಮುಚ್ಚಿರಲಿವೆ. ಯಾವ ಯಾವ ದಿನ ರಜೆ ಇರಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ತಿಂಗಳು ಬ್ಯಾಂಕ್ ಗಳಿಗೆ ಹೋಗದೆ ನಿಮ್ಮ ಕಾರ್ಯಗಳನ್ನು ಮುಂದೂಡಿದ್ದೀರಾ? ನಿಮ್ಮ ಕೆಲಸ ಕಾರ್ಯಗಳಿಗೆ ಬ್ಯಾಂಕ್ ಗಳನ್ನು ಅವಲಂಬಿಸಿದ್ದರೆ ಬ್ಯಾಂಕ್ ರಜಾ ದಿನಗಳ ಬಗ್ಗೆ  ಎಚ್ಚರವಹಿಸಿ. ಡಿಸೆಂಬರ್​ನಲ್ಲಿ ಒಂದು ಹೆಚ್ಚುವರಿ ಭಾನುವಾರದ ರಜೆ ಇದ್ದು, ಕರ್ನಾಟಕದಲ್ಲಿ 8 ದಿನಗಳ ಕಾಲ ಬ್ಯಾಂಕ್ ರಜೆ ಇದೆ. ಪ್ರಾದೇಶಿಕ ರಜೆಗಳನ್ನೂ(Regional holidays ) ಸೇರಿಸಿದರೆ ಡಿಸೆಂಬರ್​ನಲ್ಲಿ ಒಟ್ಟಾರೆ ರಜಾ ದಿನಗಳ ಸಂಖ್ಯೆ 17 ಆಗುತ್ತದೆ. ಪ್ರತಿ ತಿಂಗಳ ಎಲ್ಲ ಭಾನುವಾರ ಮತ್ತು 2ನೇ ಮತ್ತು 4ನೇ ಶನಿವಾರದಂದು ಬ್ಯಾಂಕುಗಳಿಗೆ ರಜೆ ಇರುತ್ತದೆ. ಇದನ್ನು ಹೊರತುಪಡಿಸಿ ಡಿಸೆಂಬರ್ ತಿಂಗಳಲ್ಲಿ ಬಹಳ ದಿನಗಳ ಕಾಲ ಬ್ಯಾಂಕ್ ರಜೆಗಳು ಬಂದಿರುವುದರಿಂದ  ನೀವು ಯಾವ ದಿನ ಬ್ಯಾಂಕ್ ರಜೆ ಇದೆ ಎಂದು ತಿಳಿದುಕೊಂಡು ಬ್ಯಾಂಕ್ ಗಳಿಗೆ ಹೋಗುವುದು ಸೂಕ್ತ.

ಇನ್ನು ಡಿಸೆಂಬರ್ ತಿಂಗಳಲ್ಲಿ ಬರುವ ಪ್ರಮುಖ ಹಬ್ಬವಾದ ಕ್ರಿಸ್ಮಸ್ (Christmas)ಪ್ರಯುಕ್ತ ದೇಶದ ಎಲ್ಲೆಡೆ ಸಾರ್ವತ್ರಿಕ ರಜೆ ಇರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ರಾಜ್ಯಗಳಲ್ಲಿ 8 ದಿನಗಳ ಕಾಲ ಅಷ್ಟೇ ಬ್ಯಾಂಕ್ ರಜೆ ಇದೆ. ಆದರೆ ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಮೇಘಾಲಯ, ಮಿಝೋರಾಂ ಹಾಗೂ ಗೋವಾ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಅತೀ ಹೆಚ್ಚು ದಿನ ಬ್ಯಾಂಕ್ ರಜೆ ಇರಲಿದೆ.

ಡಿಸೆಂಬರ್ ತಿಂಗಳಲ್ಲಿ 17 ದಿನಗಳು ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ:

ಡಿಸೆಂಬರ್ 01: ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ 01, 2024 ರಂದು ವಾರಾಂತ್ಯ ರಜೆ ಇರುತ್ತದೆ.

ಡಿಸೆಂಬರ್ 03: ಸೇಂಟ್ ಫ್ರಾನ್ಸಿಸ್ ಜೇವಿಯರ್ ಔತಣದ ಪ್ರಯುಕ್ತ ಗೋವಾದಲ್ಲಿ ಬ್ಯಾಂಕುಗಳು ಡಿಸೆಂಬರ್ 03, 2024 (ಮಂಗಳವಾರ)ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 08 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ 08, 2024 ರಂದು ವಾರಾಂತ್ಯ ರಜೆ ಇರುತ್ತದೆ.

ಡಿಸೆಂಬರ್ 12 : ಪಾ ತೋಗನ್ ನೆಂಗ್​ಮಿಂಜಾ ಸಾಂಗ್ಮಾ ಅಂಗವಾಗಿ ಮೇಘಾಲಯದಲ್ಲಿ ಬ್ಯಾಂಕುಗಳು ಡಿಸೆಂಬರ್ 12, 2024 ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 14 : ಎರಡನೇ ಶನಿವಾರವಾದ್ದರಿಂದ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ 14, 2024 ರಂದು ರಜೆ ಇರುತ್ತದೆ.

ಡಿಸೆಂಬರ್ 15 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ 15, 2024 ರಂದು ವಾರಾಂತ್ಯ ರಜೆ ಇರುತ್ತದೆ.

ಡಿಸೆಂಬರ್ 18 : ಗುರು ಘಾಸಿದಾಸ್ ಜಯಂತಿ, ಉ ಸೋಸೋ ತಾಮ್ ಪುಣ್ಯತಿಥಿಯ ಪ್ರಯುಕ್ತ ಪಂಜಾಬ್, ಹರ್ಯಾಣದಲ್ಲಿ, ಹಾಗು ಮೇಘಾಲಯದಲ್ಲಿ ಬ್ಯಾಂಕುಗಳು ಡಿಸೆಂಬರ್ 18, 2024 ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 19 : ಗೋವಾ ವಿಮೋಚನಾ ದಿನದ ಅಂಗವಾಗಿ ಗೋವಾದಲ್ಲಿ ಬ್ಯಾಂಕುಗಳು ಡಿಸೆಂಬರ್ 19, 2024 ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 22 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ 22, 2024 ರಂದು ವಾರಾಂತ್ಯ ರಜೆ ಇರುತ್ತದೆ.

ಡಿಸೆಂಬರ್ 24 : ಕ್ರಿಸ್ಮಸ್, ಗುರು ತೇಗ್ ಬಹದೂರ್ ಬಲಿದಾನ ದಿನದ ಪ್ರಯುಕ್ತ ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಹಾಗೂ ಪಂಜಾಬ್, ಹರ್ಯಾಣದಲ್ಲಿ ಬ್ಯಾಂಕುಗಳು ಡಿಸೆಂಬರ್ 24, 2024(ಮಂಗಳವಾರ) ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 25 : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇಶಾದ್ಯಂತ ಬ್ಯಾಂಕುಗಳು ಡಿಸೆಂಬರ್ 25, 2024(ಬುಧವಾರ) ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 26 ಹಾಗೂ 27 : ವಿಸ್ತೃತ ಕ್ರಿಸ್ಮಸ್ ಆಚರಣೆಗಳಿಗಾಗಿ ನಾಗಾಲ್ಯಾಂಡ್, ಮಿಜೋರಾಂ ಮತ್ತು ಮೇಘಾಲಯದಲ್ಲಿ ಬ್ಯಾಂಕುಗಳು ಡಿಸೆಂಬರ್ 26 ಹಾಗೂ 27, 2024 ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 28 : ನಾಲ್ಕನೇ ಶನಿವಾರವಾದ್ದರಿಂದ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ 28, 2024 ರಂದು ರಜೆ ಇರುತ್ತದೆ.

ಡಿಸೆಂಬರ್ 29 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಡಿಸೆಂಬರ್ 29, 2024 ರಂದು ವಾರಾಂತ್ಯ ರಜೆ ಇರುತ್ತದೆ.

ಡಿಸೆಂಬರ್ 30 : ಟಮು ಲೋಸರ್, ಯು ಕಿಯಾಂಗ್ ನಾಂಗ್​ಬಾ ಪ್ರಯುಕ್ತ ಸಿಕ್ಕಿಂ, ಮೇಘಾಲಯದಲ್ಲಿ ಬ್ಯಾಂಕುಗಳು ಡಿಸೆಂಬರ್ 30, 2024 ರಂದು ಮುಚ್ಚಲ್ಪಡುತ್ತವೆ.

ಡಿಸೆಂಬರ್ 31 : ಹೊಸ ವರ್ಷ ಆರಂಭವಾಗುವ ಹಿನ್ನಲೆ ಮಿಜೋರಾಂನಲ್ಲಿ ಬ್ಯಾಂಕುಗಳು ಡಿಸೆಂಬರ್ 31, 2024 ರಂದು ಮುಚ್ಚಲ್ಪಡುತ್ತವೆ. 

ಗಮನಿಸಿ (notice) :
ಬ್ಯಾಂಕ್‌ ರಜಾ ದಿನಗಳಲ್ಲಿ ಎಟಿಎಂ(ATM) ಹಾಗೂ ಆನ್‌ಲೈನ್‌ ಬ್ಯಾಂಕಿಂಗ್‌(Online banking) ಸೇವೆ ಲಭ್ಯವಿರುತ್ತದೆ. ಈ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಈ ಕಾರಣದಿಂದಾಗಿ, ಸ್ಥಳೀಯ ಜನರು ತಮ್ಮ ತಮ್ಮ ಕೆಲಸಗಳನ್ನು ರಜಾ ದಿನಗಳಲ್ಲಿಯೂ ಕೂಡ ಮಾಡಿಕೊಳ್ಳಬಹುದು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “Bank Holiday : ಡಿಸೆಂಬರ್‌ನಲ್ಲಿ ಬರೋಬ್ಬರಿ 17 ದಿನ ಬ್ಯಾಂಕ್‌ಗಳಿಗೆ ರಜೆ! ಇಲ್ಲಿದೆ ಮಾಹಿತಿ

  1. Kindly add foreign countries holidays also..
    So that entire December month bank people will get holiday…
    What an analysis Boss..
    Nimge Dodda Namaskara

Leave a Reply

Your email address will not be published. Required fields are marked *

error: Content is protected !!