ಹೊಸ ವರ್ಷದ(New year) ಆರಂಭದ ತಿಂಗಳಾದ ಜನವರಿ 2025ರಲ್ಲಿ(January 2025) 15 ದಿನ ಬ್ಯಾಂಕ್(bank) ರಜೆ ಇರಲಿದೆ. ಯಾವ ದಿನ ಬ್ಯಾಂಕ್ ರಜೆ ಇರಲಿದೆ? ಇಲ್ಲಿದೆ ಮಾಹಿತಿ.
ಹೊಸ ವರ್ಷ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷದಲ್ಲಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಜನರು ಕಾತರದಿಂದ ಕುಳಿತಿದ್ದಾರೆ. ಹೊಸ ಯೋಜನೆಗಳಿಗಾಗಿ ಹಲವು ಕಾರ್ಯಗಳನ್ನು ಈಗಾಗಲೇ ಆರಂಭಿಸಿರುತ್ತಾರೆ. ಇನ್ನು ಕೆಲವರು ವ್ಯಾಪಾರವನ್ನು ಹೊಸದಾಗಿ ಶುರು ಮಾಡಬೇಕೆಂದು ಇಂತಿಷ್ಟು ಮೊತ್ತವನ್ನು ಸಂಗ್ರಹಿಸಿ ಬ್ಯಾಂಕುಗಳಲ್ಲಿ(bank) ಇಟ್ಟಿರುತ್ತಾರೆ. ಹೊಸ ವರ್ಷದ ಆರಂಭದಲ್ಲಿ ಹೊಸದಾಗಿ ಏನನ್ನಾದರೂ ಪ್ರಯತ್ನ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಎಂದು ಹಣವನ್ನು ಬ್ಯಾಂಕುಗಳಲ್ಲಿ ಕೂಡಿಟ್ಟಿರುತ್ತಾರೆ. ಆದ್ದರಿಂದ ಜನವರಿಯಲ್ಲಿ ಯಾರೆಲ್ಲಾ ಬ್ಯಾಂಕ್ ಗಳಿಗೆ ಹೋಗುವ ಯೋಚನೆಗಳನ್ನು ಹಾಕಿಕೊಂಡುವರು ಎಚ್ಚರದಿಂದ ಇರಬೇಕು. ಏಕೆಂದರೆ ಜನವರಿ 2025ರಲ್ಲಿ ಒಟ್ಟಾರೆಯಾಗಿ 15 ದಿನ ಸರ್ಕಾರಿ(government) ಮತ್ತು ಖಾಸಗಿ ಬ್ಯಾಂಕ್ ಗಳಿಗೆ(private bank) ರಜೆ ಇರಲಿವೆ. ಯಾವ ಯಾವ ದಿನಗಳು ರಜೆ ಇರಲಿವೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2025ರ ಜನವರಿ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 15 ದಿನ ರಜೆ ಇದೆ. ಈ ರಜಾದಿನಗಳಲ್ಲಿ 6 ದಿನಗಳು ಶನಿವಾರ(Saturday) ಮತ್ತು ಭಾನುವಾರದ(Sunday) ರಜೆಗಳಾಗಿದ್ದು, ಉಳಿದವು ಪ್ರಾದೇಶಿಕ ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳನ್ನು ಒಳಗೊಂಡಿವೆ.
ಜನವರಿ ತಿಂಗಳಲ್ಲಿ 15 ದಿನಗಳು ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ:
ಜನವರಿ 01: ಹೊಸ ವರ್ಷಾಚರಣೆ ಪ್ರಯುಕ್ತ ಬ್ಯಾಂಕುಗಳು ಜನವರಿ 01, 2025(ಬುಧವಾರ)ರಂದು ಮುಚ್ಚಲ್ಪಡುತ್ತವೆ.
ಜನವರಿ 02 : ಹೊಸ ವರ್ಷದ ಪ್ರಯುಕ್ತ ಮಿಜೋರಾಂ ರಾಜ್ಯದಲ್ಲಿ ಬ್ಯಾಂಕುಗಳು ಜನವರಿ 02 2025 (ಗುರುವಾರ)ರಂದು ಮುಚ್ಚಲ್ಪಡುತ್ತವೆ.
ಜನವರಿ 05 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಜನವರಿ 05, 2025 ರಂದು ವಾರಾಂತ್ಯ ರಜೆ ಇರುತ್ತದೆ.
ಜನವರಿ 06 : ಗುರು ಗೋವಿಂದ್ ಸಿಂಗ್ ಜಯಂತಿ ಪ್ರಯುಕ್ತ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಬ್ಯಾಂಕುಗಳು ಜನವರಿ 06 2025 (ಸೋಮವಾರ) ರಂದು ಮುಚ್ಚಲ್ಪಡುತ್ತವೆ.
ಜನವರಿ 11 : ಎರಡನೇ ಶನಿವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಜನವರಿ 11, 2025 ರಂದು ವಾರಾಂತ್ಯ ರಜೆ ಇರುತ್ತದೆ.
ಜನವರಿ 12 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಜನವರಿ 12, 2025 ರಂದು ವಾರಾಂತ್ಯ ರಜೆ ಇರುತ್ತದೆ.
ಜನವರಿ 13 : ಲೋಹ್ರಿ ಹಬ್ಬದ ಹಿನ್ನಲೆ ಪಂಜಾಬ್ ಮೊದಲಾದ ಕೆಲ ರಾಜ್ಯಗಳಲ್ಲಿ ಬ್ಯಾಂಕುಗಳು ಜನವರಿ 13 2025 (ಸೋಮವಾರ) ರಂದು ಮುಚ್ಚಲ್ಪಡುತ್ತವೆ.
ಜನವರಿ 14 : ಮಕರ ಸಂಕ್ರಾಂತಿ, ಪೊಂಗಲ್ ಹಬ್ಬದ ಪ್ರಯುಕ್ತ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳು ಜನವರಿ 14 2025 (ಮಂಗಳವಾರ) ರಂದು ಮುಚ್ಚಲ್ಪಡುತ್ತವೆ.
ಜನವರಿ 15 : ತಿರುವಳ್ಳುವರ್ ದಿನ, ಮಾಘ ಬಿಹು ಹಿನ್ನಲೆ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬ್ಯಾಂಕುಗಳು ಜನವರಿ 15 2025 (ಬುಧವಾರ) ರಂದು ಮುಚ್ಚಲ್ಪಡುತ್ತವೆ.
ಜನವರಿ 16 : ಕಾಣುಮಾ ಪಂಡುಗ ಪ್ರಯುಕ್ತ ಅರುಣಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಜನವರಿ 16 2025 (ಗುರುವಾರ) ರಂದು ಮುಚ್ಚಲ್ಪಡುತ್ತವೆ.
ಜನವರಿ 19 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಜನವರಿ 19, 2025 ರಂದು ವಾರಾಂತ್ಯ ರಜೆ ಇರುತ್ತದೆ.
ಜನವರಿ 23 : ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಹಿನ್ನಲೆ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳು ಜನವರಿ 33 2025 (ಗುರುವಾರ) ರಂದು ಮುಚ್ಚಲ್ಪಡುತ್ತವೆ.
ಜನವರಿ 25 : ನಾಲ್ಕನೇ ಶನಿವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಜನವರಿ 25, 2025 ರಂದು ವಾರಾಂತ್ಯ ರಜೆ ಇರುತ್ತದೆ.
ಜನವರಿ 26 : ಗಣರಾಜ್ಯೋತ್ಸವ ಹಾಗೂ ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಜನವರಿ 26, 2025 ರಂದು ವಾರಾಂತ್ಯ ರಜೆ ಇರುತ್ತದೆ.
ಜನವರಿ 30 : ಸೋನಮ್ ಲೋಸರ್ ಹಬ್ಬ ಹಿನ್ನಲೆ ಸಿಕ್ಕಿಂನಲ್ಲಿ ಬ್ಯಾಂಕುಗಳು ಜನವರಿ 33 2025 (ಗುರುವಾರ) ರಂದು ಮುಚ್ಚಲ್ಪಡುತ್ತವೆ.
ಕರ್ನಾಟಕದಲ್ಲಿ ಜನವರಿ ತಿಂಗಳಲ್ಲಿ ಬ್ಯಾಂಕುಗಳಿಗೆ 8 ರಜಾದಿನಗಳಿವೆ:
ಜನವರಿ 1, ಬುಧವಾರ: ಹೊಸ ವರ್ಷ
ಜನವರಿ 5, ಭಾನುವಾರ: ಭಾನುವಾರದ ರಜೆ
ಜನವರಿ 11, ಶನಿವಾರ: ಎರಡನೇ ಶನಿವಾರ
ಜನವರಿ 12, ಭಾನುವಾರ: ಭಾನುವಾರದ ರಜೆ
ಜನವರಿ 14, ಮಂಗಳವಾರ: ಮಕರ ಸಂಕ್ರಾಂತಿ
ಜನವರಿ 19, ಭಾನುವಾರ: ಭಾನುವಾರದ ರಜೆ
ಜನವರಿ 25, ಶನಿವಾರ: ನಾಲ್ಕನೇ ಶನಿವಾರ
ಜನವರಿ 26, ಭಾನುವಾರ: ಗಣರಾಜ್ಯೋತ್ಸವ
ಗಮನಿಸಿ (notice) :
ಬ್ಯಾಂಕ್ ರಜಾ ದಿನಗಳಲ್ಲಿ ಎಟಿಎಂ(ATM) ಹಾಗೂ ಆನ್‌ಲೈನ್ ಬ್ಯಾಂಕಿಂಗ್(Online banking) ಸೇವೆ ಲಭ್ಯವಿರುತ್ತದೆ. ಈ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಈ ಕಾರಣದಿಂದಾಗಿ, ಸ್ಥಳೀಯ ಜನರು ತಮ್ಮ ತಮ್ಮ ಕೆಲಸಗಳನ್ನು ರಜಾ ದಿನಗಳಲ್ಲಿಯೂ ಕೂಡ ಮಾಡಿಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.