ಫೆಬ್ರವರಿಯಲ್ಲಿ 11 ಬ್ಯಾಂಕ್ ರಜೆ(Bank Holiday)! ಬ್ಯಾಂಕ್ ಸೇವೆ ಯಾವಾಗ ಲಭ್ಯ? ಎಂದು ತಿಳಿಯಬೇಕೇ, ಹಾಗಿದ್ದರೆ ಈ ವರದಿಯನ್ನು ಓದಿ. ಈ ಬ್ಯಾಂಕ್ ರಜೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫೆಬ್ರವರಿಯಲ್ಲಿ ತುಂಬಾ ಬ್ಯಾಂಕ್ ರಜೆ ಇರುತ್ತದೆ :
2024ರ ಫೆಬ್ರವರಿಯು ಬ್ಯಾಂಕ್ ರಜೆ(Bank holidays)ಗಳ ಮಳೆಗೆ ತುತ್ತಾಗಲಿದೆ. ಈ ಬಾರಿಯ ಫೆಬ್ರವರಿ 29 ದಿನಗಳದ್ದಾಗಿದ್ದು, ಅದರಲ್ಲಿ 11 ದಿನಗಳು ಬ್ಯಾಂಕ್ ರಜೆಗಳಾಗಿವೆ. ಈ ರಜೆಗಳಲ್ಲಿ ರಾಷ್ಟ್ರೀಯ ಹಬ್ಬಗಳು(Festivals), ಧಾರ್ಮಿಕ ಹಬ್ಬಗಳು ಮತ್ತು ಕೆಲವು ರಾಜ್ಯಗಳಿಗೆ ವಿಶೇಷವಾದ ರಜೆಗಳು ಸೇರಿವೆ.
ಫೆಬ್ರವರಿಯಲ್ಲಿ ನೀವು ಯಾವುದೇ ಪ್ರಮುಖ ಬ್ಯಾಂಕಿಂಗ್ ವ್ಯವಹಾರ ಮಾಡಲು ಯೋಜಿಸುತ್ತಿದ್ದರೆ, ಮೊದಲೇ ಯೋಜನೆ ಮಾಡುವುದು ಉತ್ತಮ. ಯಾವ ದಿನಗಳು ಬ್ಯಾಂಕ್‌ಗಳು ತೆರೆದಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ವ್ಯವಹಾರಗಳನ್ನು ಅದಕ್ಕೆ ಅನುಗುಣವಾಗಿ ಯೋಜಿಸಿ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಫೆಬ್ರವರಿ ತಿಂಗಳ ರಜಾದಿನಗಳ ಪಟ್ಟಿಯ ಪ್ರಕಾರ, ಈ ತಿಂಗಳಲ್ಲಿ ಒಟ್ಟು 11 ರಜಾದಿನಗಳಿವೆ. ಇದರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ(2nd and 4th saturday) ಗಳು ಸೇರಿವೆ. ಹಬ್ಬಗಳು(Festivals) ಮತ್ತು ಜನ್ಮದಿನಗಳಿಗಾಗಿಯೂ ಕೆಲವು ದಿನಗಳ ರಜೆ ನೀಡಲಾಗಿದೆ.
ಆದರೆ, ಈ ರಜಾದಿನಗಳಲ್ಲಿಯೂ ಡಿಜಿಟಲ್ ಬ್ಯಾಂಕಿಂಗ್ ಸೇವೆ(Digital Banking services) ಗಳು ಸಕ್ರಿಯವಾಗಿರುತ್ತವೆ. ಬ್ಯಾಂಕ್‌ಗಳು ಮುಚ್ಚಿದ್ದರೂ, ಆನ್‌ಲೈನ್(Online), ಮೊಬೈಲ್ ಮತ್ತು ಇತರ ಡಿಜಿಟಲ್ ಮಾಧ್ಯಮಗಳ ಮೂಲಕ ಹಣಕಾಸು ವಹಿವಾಟುಗಳನ್ನು ನಡೆಸಬಹುದು. ಖಾತೆಗಳಿಗೆ ಹಣ ತುಂಬುವುದು, ಎಟಿಎಂ(ATM) ಮೂಲಕ ಹಣ ಡ್ರಾ(Withdraw) ಮಾಡುವುದು, ಯುಪಿಐ ಪೇಮೆಂಟ್‌ಗಳು(UPI payment), ಇ-ಪೇಮೆಂಟ್(E-payment) ಗಳು ಇತ್ಯಾದಿಗಳಿಗೆ ಯಾವುದೇ ರೀತಿಯ ರಜೆಗಳು ಅನ್ವಯಿಸುವುದಿಲ್ಲ.
ಬ್ಯಾಂಕುಗಳು ಮುಚ್ಚಿರುವ ದಿನಗಳಲ್ಲಿ ನೇರ ವಹಿವಾಟುಗಳಿಗೆ ಅವಕಾಶ ಇರುವುದಿಲ್ಲ. ಬ್ಯಾಂಕ್ ರಜೆಗಳ ದಿನಗಳಲ್ಲಿ, ಠೇವಣಿ, ಹಣ ಪಡೆಯುವುದು, ಚೆಕ್‌ಗಳನ್ನು ಪಾವತಿಸುವುದು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಹಣ ತುಂಬಿಸುವುದು, ಇತ್ಯಾದಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಲು ಸೂಚಿಸಲಾಗುತ್ತದೆ. ಆದರೆ, ಡಿಜಿಟಲ್ ಮಾಧ್ಯಮಗಳ ಮೂಲಕ ಎಲ್ಲಾ ರೀತಿಯ ಹಣಕಾಸು ವಹಿವಾಟುಗಳನ್ನು ನಡೆಸಬಹುದು.
ಫೆಬ್ರವರಿಯ ಈ 11 ದಿನಗಳವರೆಗೆ ದೇಶದ ವಿವಿಧ ವಲಯಗಳಲ್ಲಿ ಬ್ಯಾಂಕ್ ಮುಚ್ಚಿರುತ್ತವೆ. ಈ ದಿನಗಳಲ್ಲಿ ನೀವು ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್‌ಗಳ ರಜೆ ದಿನಗಳ ಪಟ್ಟಿ ಇಲ್ಲಿದೆ:
ಫೆಬ್ರವರಿ 4, ಭಾನುವಾರ- ದೇಶಾದ್ಯಂತ ಈ ದಿನ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ .
ಫೆಬ್ರವರಿ 10, ಶನಿವಾರ – ಎರಡನೇ ಶನಿವಾರ ಆಗಿರುವ ಕಾರಣ ಬ್ಯಾಂಕ್‌ಗಳಿಗೆ ಸಾಮಾನ್ಯ ರಜಾದಿನವಾಗಿದೆ.
ಫೆಬ್ರವರಿ 11, ಭಾನುವಾರ – ದೇಶಾದ್ಯಂತ ಈ ದಿನ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ .
ಫೆಬ್ರವರಿ 14, ಬುಧವಾರ – ಬಸಂತ್ ಪಂಚಮಿ(Basant panchami)ಅಥವಾ ಸರಸ್ವತಿ ಪೂಜೆ (Sarswati pooja)ಕಾರಣ ತ್ರಿಪುರಾ, ಒರಿಸ್ಸಾ(Odissa), ಪಶ್ಚಿಮ ಬಂಗಾಳ(West bengal) ದಲ್ಲಿ ಬ್ಯಾಂಕ್‌ಗಳಿಗೆ ರಜೆ.
ಫೆಬ್ರವರಿ 15, ಗುರುವಾರ – ಮಣಿಪುರದಲ್ಲಿ ಲುಯಿ-ನ್ಗೈ (Lui-Ngai-Ni)ಹಬ್ಬದ ಸಂದರ್ಭದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಫೆಬ್ರವರಿ 18, ಭಾನುವಾರ- ದೇಶಾದ್ಯಂತ ಈ ದಿನ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ
ಫೆಬ್ರವರಿ 19, ಸೋಮವಾರ – ಛತ್ರಪತಿ ಮಹಾರಾಜರ ಜಯಂತಿಯ ಸಂದರ್ಭದಲ್ಲಿ, ಮಹಾರಾಷ್ಟ್ರದಲ್ಲಿನ ಎಲ್ಲಾ ಬ್ಯಾಂಕುಗಳು ರಜೆ ಪಡೆಯುತ್ತಿವೆ.
ಫೆಬ್ರವರಿ 20, ಮಂಗಳವಾರ – ಮಿಜೋರಾ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಸಂಸ್ಥಾಪನಾ ದಿನ(Constitution Day)ದಂದು, ಈ ಎರಡೂ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಫೆಬ್ರವರಿ 24, ಶನಿವಾರ – ನಾಲ್ಕನೇ ಶನಿವಾರ ಆಗಿರುವ ಕಾರಣ ಬ್ಯಾಂಕ್‌ಗಳಿಗೆ ಸಾಮಾನ್ಯ ರಜಾದಿನವಾಗಿದೆ.
ಫೆಬ್ರವರಿ 25, ಭಾನುವಾರ- ದೇಶಾದ್ಯಂತ ಈ ದಿನ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ .
ಫೆಬ್ರವರಿ 26, ಸೋಮವಾರ – ಅರುಣಾಚಲ ಪ್ರದೇಶದಲ್ಲಿ ನ್ಯೋಕಮ್ ಹಬ್ಬ( Nyokum festival)ದ ಸಂದರ್ಭದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರದಿಂದ ಉಚಿತ ಮನೆ ಪಡೆಯಲು ಹೀಗೆ ಅರ್ಜಿ ಹಾಕಿ!
- ಗುಡ್ ನ್ಯೂಸ್ – ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರೋತ್ಸಾಹ ಧನ ಬಿಡುಗಡೆ
- Gruhalakshmi ; ಗೃಹಲಕ್ಷ್ಮಿ 2000/-ರೂ. ಬರದೇ ಇರುವ ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ.
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಬಂದ್..? ಕೇಂದ್ರದ ಸ್ಪಷ್ಟನೆ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.