ಕರ್ನಾಟಕ ಸರ್ಕಾರವು ಮನೆಯಿಂದ ದೂರ ಹೋಗಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು BCM ಹಾಸ್ಟೆಲ್(Hostel) ಸೌಲಭ್ಯವನ್ನು ಒದಗಿಸುತ್ತಿದೆ. ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯು ನಿರ್ವಹಿಸುತ್ತಿರುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಸುರಕ್ಷಿತ ಮತ್ತು ಅನುಕೂಲಕರ ಜೀವನ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಲು ಹಣಕಾಸಿನ ನೆರವು ಮತ್ತು ವಸತಿಯನ್ನು ಒದಗಿಸುತ್ತದೆ. ಈ ಹಾಸ್ಟೆಲ್ಗಳಿಗೆ ಮೆಟ್ರಿಕ್ ಪೂರ್ವ(pre matric) ಹಾಗೂ ಮೆಟ್ರಿಕ್ ನಂತರದ(post matric) ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವ ಅವಕಾಶ ಇದೀಗ ಒಡೆಗೆ ಬಂದಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉಚಿತ ಹಾಸ್ಟೆಲ್ ಪಡೆದುಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ :
ಬೇಕಾದ ಅರ್ಹತೆಗಳು : ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಡಿಯಲ್ಲಿರುವಂತಹ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿನಿಲಯವನ್ನು ಉಚಿತವಾಗಿ ಅರ್ಜಿಯನ್ನು ಆನ್ಲೈನ್ ಮುಖಾಂತರ ಹಾಕುವುದರ ಮೂಲಕ ಪಡೆದುಕೊಳ್ಳಬಹುದು. ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು, ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಪಾರ್ಸಿ ಹಾಗೂ ಇತರೆ ಸಮುದಾಯದ ಎಸ್ ಸಿ ಹಾಗೂ ಎಸ್ ಟಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷದ ಒಳಗಿರಬೇಕು.
ಅರ್ಜಿಯನ್ನು ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳು :
ಅಂಕಪಟ್ಟಿ
ಮೊಬೈಲ್ ನಂಬರ್
SSP ವಿದ್ಯಾರ್ಥಿಯ ID
ಜಾತಿ ಆರ್ ಡಿ ಸಂಖ್ಯೆ
ಆದಾಯ ಪ್ರಮಾಣ ಪತ್ರ
ಮನೆಯ ವಿಳಾಸದ ಪುರಾದ
ಕಾಲೇಜು ಅಧ್ಯಯನ ಪ್ರಮಾಣ ಪತ್ರ
ನೊಂದಣಿ ಸಂಖ್ಯೆ
ಅರ್ಜಿಯನ್ನು ಸಲ್ಲಿಸುವ ವಿಧಾನ :
ಮೊದಲಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ : https://shp.karnataka.gov.in/
ನಂತರ ಬಿ ಸಿ ಎಂ ಹಾಸ್ಟೆಲ್ ಅಪ್ಲಿಕೇಶನ್ ಗೆ ತೆರಳಿ
ಸೈನ್ ಇನ್ ಆಗಿ ನಂತರ ಮೂಲ ಮಾಹಿತಿಗಳನ್ನು ನೊಂದಣಿ ಮಾಡಿ
ಈಗಾಗಲೇ ನೋಂದಣಿಯಾಗಿದ್ದರೆ ನೇರವಾಗಿ sign in ಆಗಿ ನಂತರ ಅರ್ಜಿಯನ್ನು ಹುಡುಕಿ ಪೂರ್ಣವಾಗಿ ಬರ್ತಿ ಮಾಡಿ
ಅಗತ್ಯವಾದ ದಾಖಲೆಗಳನ್ನು ಅಪ್ಲೋಡ್ ಮಾಡಿ
ಭರ್ತಿ ಮಾಡಿದ ವಿವರಗಳನ್ನು ಪರಿಶೀಲಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ : 31 ಜೂಲೈ, 2024
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ : 5 ಆಗಸ್ಟ್ 2024
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.