ನಿಮ್ಮ ಮನಸ್ಸನ್ನು ನೆಗೇಟಿವ್ ಯೋಚನೆಗಳು ಕಾಡುತ್ತಾಯಿತಾ? ಈ ಮಾರ್ಗ ಅನುಸರಿಸಿ ಬದಲಾವಣೆ ನೋಡಿ!
ನಮ್ಮ ಮನಸ್ಸು ಯಾವಾಗಲೂ ಪಾಸಿಟಿವ್(Positive) ಆಗಿರಬೇಕು, ಪಾಸಿಟಿವ್ ಯೋಚನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇದು ಯಾವಾಗಲೂ ಸಾಧ್ಯವಿಲ್ಲ. ನಮ್ಮ ಮನಸ್ಸು ಒಂದು ಯಂತ್ರವಲ್ಲ, ಅದು ಹಲವಾರು ಭಾವನೆಗಳು, ಅನುಭವಗಳು, ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆ. ನೆಗೆಟಿವ್(Negative) ಯೋಚನೆಗಳು ಸಹಜ. ಆದರೆ ಅದನ್ನು ನಿಯಂತ್ರಿಸಲು ನಾವು ಏನು ಮಾಡಬಹುದು? ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಮಗೆ ಮೈಂಡ್ ಕಂಟ್ರೋಲ್ ಮಾಡೋಕೆ ಆಗಲ್ಲ!
ನಾವು ನಮ್ಮ ಮನಸ್ಸನ್ನು ಸಂಪೂರ್ಣವಾಗಿ ನಿಯಂತ್ರಿಸಬಲ್ಲೆವೆ? ಬಹುತೇಕ ಸಮಯಕ್ಕೆ ಇಲ್ಲ. ಮನಸ್ಸು ಅನೇಕ ತರುವಾಯ ಭಾವನೆಗಳನ್ನು ಹಬ್ಬಿಸುತ್ತದೆ. ನಮ್ಮ ಯೋಚನೆಗಳು ಆಗಾಗ್ಗೆ ನೆಗೆಟಿವ್ ನತ್ತ ಹೋಗುತ್ತವೆ. ಆದರೆ ಅದನ್ನು ನಿಯಂತ್ರಿಸಲು ಬಲವಂತ ಮಾಡೋದಾದರೆ ಅದು ಇನ್ನಷ್ಟು ತೊಂದರೆ ಉಂಟುಮಾಡಬಹುದು. ನೀವು ಹೆಚ್ಚು ಪಾಸಿಟಿವ್ ಆಗಿರಬೇಕು ಎಂದು ಒತ್ತಡ ಹಾಕಿದರೆ, ಆಗ ಆ ಒತ್ತಡವೇ ಮತ್ತಷ್ಟು ನೆಗೆಟಿವ್ ಯೋಚನೆಗಳನ್ನು ಹುಟ್ಟಿಸಬಹುದು.
ನೆಗೆಟಿವ್ ಯೋಚನೆ ಬಂದಾಗ ಏನು ಮಾಡಬೇಕು?What to do when a negative thought comes?
ಯೋಚನೆಗಳನ್ನು ಅರ್ಥೈಸಿ, ಅವುಗಳಿಗೆ ಅಷ್ಟು ಮಹತ್ವ ಕೊಡಬೇಡಿ: ನೀವು ನೆಗೆಟಿವ್ ಯೋಚನೆ ಮಾಡುತ್ತಿದ್ದರೆ, ಅದನ್ನು ಗಮನಿಸಿ ಆದರೆ ಅದರಲ್ಲಿ ಇಡೀ ಗಮನ ಕೊಡಬೇಡಿ. ಅದು ಬಂದು ಹೋಗುವ ಒಂದು ಮೋಡದಂತೆ ಕಾಣಿ.
ಮನಸ್ಥಿತಿ ಬದಲಾವಣೆ(Change the mindset): ನೀವು ತೊಂದರೆ ಅನುಭವಿಸುತ್ತಿದ್ದರೆ, ಅದನ್ನು ಬದಲಾಯಿಸುವ ಪ್ರಯತ್ನ ಮಾಡಿ. ಒಮ್ಮೆ ಯೋಚನೆ ಬಿಟ್ಟು ಬೇರೆ ವಿಷಯದಲ್ಲಿ ತೊಡಗಿಕೊಳ್ಳಿ.
ಮೈಂಡ್ ಅನ್ನು ಡೈವರೆಟ್ ಮಾಡಿ(Divert your mind): ಸಂಗೀತ ಕೇಳುವುದು, ಓದುವುದು, ಅಭ್ಯಾಸ ಮಾಡುವುದು, ಶಾರೀರಿಕ ಚಟುವಟಿಕೆ ಮಾಡುವುದು ಮುಂತಾದವು ನಿಮ್ಮ ಮನಸ್ಸನ್ನು ಬೇರೆ ಕಡೆ ಕೊಂಡೊಯ್ಯಬಹುದು.
ಧ್ಯಾನ ಮತ್ತು ಶ್ಲೋಕ ಪಠಣ(Meditation and chanting): ಹನುಮಾನ್ ಚಾಲೀಸಾದಂತಹ ಶ್ಲೋಕಗಳು ನಮ್ಮ ಮನಸ್ಸನ್ನು ಶುದ್ಧಗೊಳಿಸಲು ಸಹಾಯ ಮಾಡಬಹುದು.
ಹನುಮಾನ್ ಚಾಲೀಸಾ – ಮನಸ್ಸಿನ ಶುದ್ಧತೆಯ ಮಂತ್ರ!
ತುಳಸಿದಾಸರು ಹನುಮಾನ್ ಚಾಲೀಸಾದಲ್ಲಿ ಹೇಳುತ್ತಾರೆ:
“ನಿಜ ಮನು ಮುಕುರ ಸುಧಾರ್. ಬರನು ರಘುಬರ ಬಿಮಲ ಜಸು. ಜೋದಾಯಕ ಫಲ ಚಾರಿ”
ಇದರ ಅರ್ಥವೇನು? ನಮ್ಮ ಮನಸ್ಸು ಒಂದು ಕಳಸದಂತೆ. ಅದು ಹೊಳೆಯಲು, ಸುಧಾರಿಸಲು ಶ್ರದ್ಧೆ ಮತ್ತು ಶ್ರೇಷ್ಟ ಯೋಚನೆಗಳು ಬೇಕು. ಹನುಮಾನ್ ಚಾಲೀಸಾದಂತಹ ಶ್ಲೋಕಗಳನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿ ಶುದ್ಧತೆ ಮೂಡುತ್ತದೆ.
ಸಿಂಪಲ್ ಲಾಜಿಕ್(Simple logic)- ನೀವೇ ಪ್ರಯತ್ನಿಸಿ!
ನೀವು ಯಾರಾದರೂ ನಿಮಗೆ ಪ್ರತಿಕ್ರಿಯೆ ನೀಡದೆ ಇದ್ದರೆ, ಅವರ ಬಳಿ ಮಾತಾಡಲು ಹೋಗಲು ಇಚ್ಛಿಸುವುದಿಲ್ಲ ಅಲ್ವಾ? ಇದೇ ತಂತ್ರವನ್ನು ನೆಗೆಟಿವ್ ಯೋಚನೆಗಳ ಮೇಲೆ ಬಳಸಬಹುದು. ಅದನ್ನು ನಿರ್ಲಕ್ಷಿಸಿ. ನಿರಂತರವಾಗಿ ಅದಕ್ಕೆ ಪ್ರತಿಕ್ರಿಯೆ ನೀಡದಿದ್ದರೆ, ನಿಮ್ಮ ಮನಸ್ಸು ಸಹಜವಾಗಿ ಅದು ಬೇಡವೆಂದು ತಿಳಿಯುತ್ತದೆ.
ಒಂದು ತಿಂಗಳೊಳಗೆ ಬದಲಾವಣೆ ಗಮನಿಸಿ!
ಈ ವಿಧಾನವನ್ನು ಅನುಸರಿಸಿ, ಒಂದು ತಿಂಗಳೊಳಗೆ ನಿಮ್ಮ ಮನಸ್ಸಿನಲ್ಲಿ ಬದಲಾವಣೆ ಅನುಭವಿಸಿ. ನೀವು ನೆಗೆಟಿವ್ ಯೋಚನೆಗಳ ಹಿಂದೆ ಓಡದಿದ್ದರೆ, ಅವು ಸಹ ನಿಮ್ಮ ಹಿಂದೆ ಬರೋದನ್ನು ನಿಲ್ಲಿಸುತ್ತವೆ. ಪಾಸಿಟಿವ್ ಯೋಚನೆಗಳು ತಾನಾಗಿಯೇ ಬರಲು ಪ್ರಾರಂಭಿಸುತ್ತವೆ. ನಿಮ್ಮ ನೆಮ್ಮದಿ ನಿಮ್ಮ ಕೈಯಲ್ಲಿದೆ, ಅದನ್ನು ಉಳಿಸಿಕೊಳ್ಳಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.