ಬೆಂಗಳೂರಿನಲ್ಲಿ ಈ ಭಾಗಗಳಲ್ಲಿ ಭೂಮಿ ಖರೀದಿಸುವವರಿಗೆ ಇದೆ ಅದೃಷ್ಟ, ಯಾಕೆ ಎಂದು ತಿಳಿಯಬೇಕೆ?.. ಇಲ್ಲಿದೆ ಸಂಪೂರ್ಣ ಮಾಹಿತಿ..!
Real estate : ದಿನ ಕಳೆದಂತೆ ಹೆಚ್ಚುತ್ತಿದೆ ಜನಸಂಖ್ಯೆ (Population) ಹೆಚ್ಚಳದ ಕಾರಣದಿಂದ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳು ಕಾಲಿಡಲು ಜಾಗವಿಲ್ಲದೆ ತುಂಬಿ ತುಳುಕುತ್ತಿವೆ. ಜನಸಂಖ್ಯೆ ಹೆಚ್ಚಳದ ಪ್ರಭಾವದಿಂದ ಬೆಂಗಳೂರು ವಿಸ್ತರಣೆ ಆಗುತ್ತದೆ. ಅಷ್ಟೇ ಅಲ್ಲದೆ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಭೂಮಿಯ ಬೆಲೆ (Land rate) ಗಗನಕ್ಕೇರುತ್ತಿದೆ. ಅದರಲ್ಲಿ ಇಂದು ಜನರು ಎಲ್ಲಾ ಸೌಲಭ್ಯಗಳು ಇರುವಂತಹ, ವಾಸಿಸಲು ಯೋಗ್ಯವಾದ ಸ್ಥಳಗಳನ್ನು ಆರಿಸುತ್ತಿದ್ದಾರೆ.
ನಗರದ ಹಲವು ಕಡೆಗಳಲ್ಲಿ ಭೂಮಿಯನ್ನು ಹೊಂದಿದವರಿಗೆ ಇಂದು ಅದೃಷ್ಟ ಕುಲಾಯಿಸಿದೆ. ಹೌದು, ಯಾಕೆಂದರೆ ಜನಸಂಖ್ಯೆ ಹೆಚ್ಚಿದ ಕಾರಣ ನಗರಗಳ ವಿಸ್ತರಣೆ ಮಾಡುತ್ತಲೇ ಇದ್ದಾರೆ. ಹಲವು ಕಡೆಗಳಲ್ಲಿ ನಗರಗಳ ಸ್ಥಾಪನೆ ಆಗಲಿದೆ. ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು (All facilities) ಕೂಡ ದೊರೆಯಲಿವೆ. ಅಂತಹ ಸ್ಥಳಗಳು ಎಲ್ಲಿವೆ ಮತ್ತು ಅದರಿಂದ ಏನೆಲ್ಲಾ ಲಾಭವಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಮೈಸೂರು ರಸ್ತೆಗೆ ಹತ್ತಿರದಲ್ಲಿರುವ ದೊಡ್ಡ ಆಲದಮರ ಸಮೀಪದ ಪ್ರದೇಶಗಳಲ್ಲಿ ಭೂಮಿ ಖರೀದಿಗೆ ಹೂಡಿಕೆ ಮಾಡುತ್ತಿದ್ದಾರೆ :
ಬೆಂಗಳೂರಿನಿಂದ ಹಿಡಿದು ಮೈಸೂರು ರಸ್ತೆ (Bangalore to mysore road) ಅನೇಕ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ. ದಿನೇ ಜನರು ಬೆಂಗಳೂರಿನಿಂದ ಮೈಸೂರು ರಸ್ತೆಗಳಲ್ಲಿ ಓಡಾಟ ನಡೆಸುತ್ತಾರೆ. ಈ ರಸ್ತೆಯ ಅಕ್ಕ ಪಕ್ಕದಲ್ಲಿರುವ ಭೂಮಿಯನ್ನು ಖರೀದಿ ಮಾಡಬೇಕೆಂದರೆ ಸುಲಭದ ಮಾತಲ್ಲ. ಅದರಲ್ಲಿಯೂ ಬೆಂಗಳೂರಿನ ಮೈಸೂರು ರಸ್ತೆಗೆ ಹತ್ತಿರದಲ್ಲಿರುವ ದೊಡ್ಡಆಲದಮರ ಸಮೀಪದ ಪ್ರದೇಶಗಳಲ್ಲಿ ಭೂಮಿ ಖರೀದಿ ಮಾಡಬೇಕೆಂದರೆ ಬಹಳ ಕಷ್ಟ. ಈ ಪ್ರದೇಶದಲ್ಲಿರುವ ಉತ್ತಮ ಸೌಲಭ್ಯಗಳಿರುವ ಕಾರಣ ಜನರು ಇಲ್ಲಿನ ವಸತಿ ಪ್ರಾಪರ್ಟಿ (Home property) ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಬೆಂಗಳೂರಿನ ಮೈಸೂರು ರಸ್ತೆಗೆ ಹತ್ತಿರದಲ್ಲಿರುವ ದೊಡ್ಡಆಲದಮರ ಸಮೀಪದ ಪ್ರದೇಶ ಈಗ ರಿಯಲ್ ಎಸ್ಟೇಟ್ ಹಬ್ ಆಗಿಯೂ ಗುರುತಿಸಿಕೊಂಡಿದೆ :
ಈ ಪ್ರದೇಶದಲ್ಲಿ ಭೂಮಿಗೆ ಬೇಡಿಕೆ ಹೆಚ್ಚಿದ್ದು, ಈ ಹಿನ್ನೆಲೆ ಭೂಮಿಯ ಬೆಲೆ ದುಪ್ಪಟ್ಟಾಗುತ್ತಲೇ ಇದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೇತೋಹಳ್ಳಿಯಲ್ಲಿರುವ ಬೃಹತ್ ಆಲದಮರದಿಂದಾಗಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದ ಈ ಪ್ರದೇಶ ಈಗ ರಿಯಲ್ ಎಸ್ಟೇಟ್ ಹಬ್ (Real estate hub) ಆಗಿಯೂ ಗುರುತಿಸಿಕೊಂಡಿದೆ. ದೊಡ್ಡಆಲದಮರ ಸಮೀಪದ ಪ್ರದೇಶದಲ್ಲಿರುವ ನಿವೇಶನಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ದುಪ್ಪಟ್ಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮೈಸೂರು-ಬೆಂಗಳೂರು ಹೆದ್ದಾರಿ ಗ್ರಾಹಕರಿಗೆ ಪ್ಲಸ್ ಪಾಯಿಂಟ್ :
ಮೈಸೂರು ಹಾಗೂ ಬೆಂಗಳೂರಿನ ಹೆದ್ದಾರಿಯೂ(Bangalore mysore highway) ಅನೇಕ ರೀತಿಯ ಸೌಲಭ್ಯಗಳನ್ನು ಒಳಗೊಂಡಿರುವುದರಿಂದ ಇಂದು ಜನರು ಇಲ್ಲಿನ ಭೂಮಿಯನ್ನು ಖರೀದಿಸಲು ಇಚ್ಛೆಪಡುತ್ತಾರೆ. ಈಗಾಗಲೇ ಇಲ್ಲಿನ ಆಸುಪಾಸಿನ ಪ್ರದೇಶಗಳಲ್ಲಿ ಭೂಮಿಯನ್ನು ಖರೀದಿಸಿದ್ದರೆ ಅದು ಅವರ ಲಕ್ (Luck) ಎನ್ನುವುದು. ಯಾಕೆಂದರೆ, ಇಲ್ಲಿ ನಿವೇಶನಗಳ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಬೆಂಗಳೂರು-ಮೈಸೂರು ದಶಪಥ ಯೋಜನೆಯೂ ಈ ಪ್ರದೇಶದಲ್ಲಿ ಭೂಮಿ ಬೆಲೆ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ.
ನೇರಳೆ ಮೆಟ್ರೋ ಮಾರ್ಗ ಹಾದು ಹೋಗುವ ಸ್ಥಳ ಇದಾಗಿದೆ :
ಇನ್ನೂ ನೋಡುವುದಾದರೆ ನೇರಳೆ ಮೆಟ್ರೋ ಮಾರ್ಗ (Purple line metro) ಸಹ ಚಲ್ಲಘಟ್ಟದವರೆಗೆ ವಿಸ್ತರಣೆಯಾಗಿದೆ. ಈ ಭಾಗದ ಭೂಮಿ ದರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ದೊಡ್ಡಆಲದಮರ ಸುತ್ತಮುತ್ತಲಿನ ಪ್ರದೇಶ ಈಗ ತುಂಬಾ ಅಬಿವೃದ್ಧಿ ಕಂಡಿದ್ದು, ಬೃಹತ್ ರೆಸಾರ್ಟ್, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಮತ್ತು ಆಸ್ಪತ್ರೆಗಳು ಇಲ್ಲಿಗೆ ಹತ್ತಿರದಲ್ಲಿವೆ. ಆದ್ದರಿಂದ ಇಲ್ಲಿನ ನಿವೇಶನಗಳ ದರ ಏರಿಕೆಯಾಗುತ್ತಲಿದೆ. ಜನರು ಇಂತಹ ಸ್ಥಳಗಳಲ್ಲಿ ನಡೆಸಲು ಆಸೆಯನ್ನು ಪಡುತ್ತಾರೆ. ಅಲ್ಲದೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದಿರುವ ದೊಡ್ಡ ಆಲದಮರ ರಸ್ತೆಯಲ್ಲಿರುವ ನಿವೇಶನಗಳ ಖರೀದಿ ಆಸ್ತಿ ಹೂಡಿಕೆದಾರರಿಗೆ ಬೃಹತ್ ಮಟ್ಟದಲ್ಲಿ ಲಾಭ ತಂದುಕೊಡಲಿದೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ :
ಮೈಸೂರು ರಸ್ತೆಗೆ ಸಮೀಪದಲ್ಲಿರುವ ದೊಡ್ಡಆಲದಮರ ಪ್ರದೇಶದಲ್ಲಿ ಇದೀಗ ರಿಯಾಲ್ ಎಸ್ಟೇಟ್ (Real estate) ಚಟುವಟಿಕೆಗಳು ನಡೆಯಲು ಇರುವ ಮತ್ತೊಂದು ಪ್ರಮುಖ ಕಾರಣ ಎಂದರೆ ಕುಣಿಗಲ್ ಸಮೀಪ ಪ್ರಸ್ತಾವಿತ ವಿಮಾನ ನಿಲ್ದಾಣ (Airport) ಯೋಜನೆಯಾಗಿದೆ. ಈ ಪ್ರಸ್ತಾವನೆ ಬಂದ ನಂತರ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಂತಾಗಿದೆ. ಕುಣಿಗಲ್‌ನಲ್ಲಿ ವಿಮಾನ ನಿಲ್ದಾಣ ಆದರೆ, ನೆಲಮಂಗಲಕ್ಕೆ ಮಾತ್ರವಲ್ಲದೆ, ಮಾಗಡಿ ರೋಡ್ ಮೂಲಕ ದೊಡ್ಡಆಲದಮರ ಪ್ರದೇಶಕ್ಕೂ ಹತ್ತಿರ ಆಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಭೂಮಿ ಬೆಲೆ ಮುಂದಿನ ದಿನಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.