ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಬೆಂಗಳೂರು ಬಂದ್(Bengaluru bandh) ಕುರಿತಾಗಿ ಮಾಹಿತಿಯನ್ನು ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಇದೇ ಸೆಪ್ಟೆಂಬರ್ 11 ಅಂದರೆ ನಾಳೆ ಆಟೋ ರಿಕ್ಷಾ, ಓಲಾ, ಉಬರ್, ಖಾಸಗಿ ಟ್ಯಾಕ್ಸಿಗಳು ಮತ್ತು ಶಾಲಾ ಬಸ್‌ಗಳು ಮುಷ್ಕರ ನಡೆಸಲಿವೆ. ಈ ಬೆಂಗಳೂರು ಬಂದ್ ಏಕೆ ನಡೆಯುತ್ತಿದೆ?, ಬಂದ್ ಇರುವುದರ ಕಾರಣ ಏನೆಲ್ಲಾ ಇರುತ್ತದೆ ಹಾಗೂ ಏನೆಲ್ಲಾ ಬಂದ್ ಆಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ನಾಳೆ ಏಕೆ ಆಗಲಿದೆ ಬೆಂಗಳೂರು ಬಂದ್ :
ರಾಜ್ಯದಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದೆ. ಆ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳುವುದರಲ್ಲಿ ರಾಜ್ಯದ ಜನರು ತುಂಬಾ ಬಿಝಿ ಆಗಿಬಿಟ್ಟಿದ್ದಾರೆ. ಆ 5 ಯೋಜನೆಗಳ ಪೈಕಿ ಶಕ್ತಿ ಯೋಜನೆಯೂ ಕೂಡಾ ಒಂದಾಗಿದೆ.
ಹೌದು, ಈ ಯೋಜನೆಯಿಂದ ರಾಜ್ಯದ ಎಲ್ಲಾ ಮಹಿಳೆಯರು ಬಹಳ ಅನುಕೂಲವನ್ನು ಪಡೆದುಕೊಂಡಿದ್ದಾರೆ ಅದರ ಜೊತೆ ಎಲ್ಲೆಡೆ ಫ್ರೀ ಆಗಿ ಕೂಡಾ ಸಂಚರಿಸುತ್ತಿದ್ದಾರೆ . ಈ ಯೋಜನೆಯಿಂದ ಕೆಲವರು ಉಪಯೋಗವನ್ನು ಪಡೆದುಕೊಂಡಿದ್ದಾರೆ ಅದರ ಜೊತೆ ಜೊತೆಗೆ ನಿರುಪಯೋಗವನ್ನು ಕೂಡಾ ಮಾಡಿಕೊಂಡಿದ್ದಾರೆ.
ಇದರಿಂದ ಖಾಸಗಿ ಸಾರಿಗೆ(private transport)ಗೆ ಬಹಳ ನಷ್ಟ ಉಂಟಾಗುತಿರುವ ಕಾರಣದಿಂದ ಬೇಸೆತ್ತ ಖಾಸಗಿ ಸಾರಿಗೆ ವ್ಯವಸ್ಥೆಗಳು ಇದರ ಕುರಿತು ಸರ್ಕಾರಕ್ಕೆ ತನ್ನ ನಷ್ಟದ ಕುರಿತು ವಿಷಯ ತಿಳಿಸಿದ್ದರು. ಹಾಗೂ ಈ ನಷ್ಟಕ್ಕೆ ಪರಿಹಾರವನ್ನು ಕೊಡಬೇಕು ಎಂದು 10 ದಿನಗಳ ಕಾಲವಕಾಶವನ್ನೂ ಕೂಡಾ ನೀಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆನ್ನೂ ಸರ್ಕಾರ ನೀಡದೇ ಇರುವ ಹಿನ್ನಲೆಯಲ್ಲಿ ಆಟೋ ರಿಕ್ಷಾ, ಓಲಾ, ಉಬರ್, ಖಾಸಗಿ ಟ್ಯಾಕ್ಸಿಗಳು ಮತ್ತು ಶಾಲಾ ಬಸ್‌ಗಳು ಎಲ್ಲಾ ಖಾಸಗಿ ವಾಹನಗಳು ಇದೆ ಸೆಪ್ಟೆಂಬರ್ 11 ರಂದು ಸೋಮವಾರ ಬೆಂಗಳೂರನ್ನೂ ಸಂಪೂರ್ಣ ಸ್ಥಗಿತಕ್ಕೆ ನಿರ್ಧಾರ ಮಾಡಿದ್ದಾರೆ.
ಬೆಂಗಳೂರು ಬಂದ್ಗೆ ಓಲಾ, ಓಬರ್ ಗಳ ಬೆಂಬಲ :
ಬೆಂಗಳೂರು ಜನತೆಗೆ ಮತ್ತೊಂದು ದೊಡ್ಡ ಶಾಕಿಂಗ್ ನ್ಯೂಸ್ ಇದಾಗಿದೆ. ದಿನ ಬಳಿಕೆ ಸಂಚಾರಕ್ಕೆ ಬಳಸುತ್ತಿದ್ದ ಓಲಾ ಉಬರ್ ಅವರು ಕೂಡ ಬಂದ್ ಗೆ ಬೆಂಬಲ ನೀಡುತ್ತಿದ್ದಾರೆ. ಬೆಂಗಳೂರು ಬಂದ್ ಗೆ ಓಲಾ ಉಬರ್ ಚಾಲಕರು ಬೆಂಬಲ ಕೊಟ್ಟು ಸಂಪೂರ್ಣ ಸ್ಥಗಿತಕ್ಕೆ ನಿರ್ಧಾರ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸೆಪ್ಟಂಬರ್ 11ರಂದು ಟ್ಯಾಕ್ಸಿಗಳು ಓಡಾಟ ಕೂಡ ಕಂಪ್ಲೀಟ್ ಆಗಿ ಬಂದ್ ಗೊಳಿಸಲಾಗುತ್ತದೆ.
ಬೆಂಗಳೂರಲ್ಲಿ ತುಂಬಾ ಜನ ಓಲಾ ಉಬರ್ ಹಾಗೂ ಆಟೋಗಳಿಗೆ ಡಿಪೆಂಡ್ ಆಗಿದ್ದಾರೆ. ಓಲಾ ಉಬರ(OLA, uber)ನ್ನು ತುಂಬಾ ಆರಾಮದಾಯಕವಾಗಿ ಜನಗಳು ಸಂಚಾರಕ್ಕೆ ಬಳಸುತ್ತಿದ್ದಾರೆ. ಜನರು ತಾವು ಕೂತಲ್ಲೇ ನಿಂತಲ್ಲೇ ಆನ್ಲೈನ್(online) ಬುಕಿಂಗ್ ಮಾಡಿ ಇದ್ದ ಕಡೆ ವಾಹನಗಳನ್ನು ಕರೆಸಿಕೊಳ್ಳುತ್ತಿದ್ದರು. ಈಗ ಬಂದ್ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗುವ ಹಾಗೆ ಇದೆ.
ಬೆಳಿಗ್ಗೆಯಿಂದ ಸಭೆ ನಡೆಸಿರುವ ಓಲಾ ಉಬರ್ ಚಾಲಕರು ಹಾಗೂ ಮಾಲೀಕರು ಕಠಿಣ ನಿರ್ಧಾರವನ್ನು ಕೈಗೊಂಡಿದ್ದಾರೆ ಅದೇನೆಂದರೆ ಸಂಪೂರ್ಣ ಒಕ್ಕೂಟ ಬಂದ್ ಗೆ ಪೂರ್ತಿ ಬೆಂಬಲ ಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಹೋಗಲಿ ಆಟೋಗಳನ್ನಾದರೂ ಸಹಾಯ ಪಡೆದುಕೊಳ್ಳಬಹುದು ಅಥವಾ ಏನಾದರೂ ಜಾಸ್ತಿ ದುಡ್ಡು ಕೊಟ್ಟರು ಪರವಾಗಿಲ್ಲ ಸಂಚಾರ ಮಾಡಬಹುದು ಎನ್ನುವವರಿಗೆ ಅದು ಕೂಡ ಇಲ್ಲದಾಗಿದೆ.
ಹೌದು ಆಟೋ ಚಾಲಕರು ಕೂಡಾ ಬಂದ್ ಗೆ ಬೆಂಬಲ ನೀಡುತ್ತಿದ್ದಾರೆ. ಆದರಿಂದ ಸೋಮವಾರದಂದು ಬೆಂಗಳೂರಲ್ಲಿ ಬಂದ್ ಹಿನ್ನೆಲೆ ಆಟೋ ಸಂಚಾರ ಕೂಡ ಸ್ಥಗಿತವಾಗುತ್ತದೆ. ಆದ್ದರಿಂದ ಎಲ್ಲಾ ಕಡೆಯಿಂದ ಅವತ್ತು ಸಮಸ್ಯೆ ಇದ್ದೆ ಇರುತ್ತದೆ ಎನಿಸುತ್ತದೆ.
ಕೆಲವು ಶಾಲೆಗಳಿಗೆ ಬಂದ್ ಇಂದ ರಜೆ :
ಈ ಮುಷ್ಕರದ ಕಾರಣ ನಗರದ ಕೆಲವು ಶಾಲೆಗಳು ಸೆಪ್ಟೆಂಬರ್ 11 ರಂದು ರಜೆ ಘೋಷಿಸಿವೆ ಮತ್ತು ಪರೀಕ್ಷೆಗಳನ್ನು ಮರುಹೊಂದಿಸಲು ಒತ್ತಾಯಿಸಲಾಗಿದೆ ಎಂದು ತಿಳಿದು ಬಂದಿದೆ. ಮತ್ತು ಒಟ್ಟಲ್ಲಿ ಸಾರ್ವಜನಿಕರಿಗೆ ಬಂದ್ ಬಿಸಿ ದೊಡ್ಡ ಮಟ್ಟದಲ್ಲಿ ತಟ್ಟಲಿದೆ ಎಂದು ತಿಳಿಯಲಿದೆ .
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ