ಬೆಸ್ಕಾಂ ನಿಂದ ಗ್ರಾಹಕರಿಗೆ ಶಾಕಿಂಗ್ ಸುದ್ದಿ, ಮೊಬೈಲ್ ರಿಚಾರ್ಜ್‌ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್!?
ತಿಂಗಳ ಕೊನೆ ಬಂತೆಂದರೆ ಸಾಕು, ಮನೆಯ ಬಾಡಿಗೆ, ದಿನಸಿ ವಸ್ತುಗಳು, ನೀರಿನ ಬಿಲ್ ಅಷ್ಟೇ ಅಲ್ಲದೆ ಕರೆಂಟ್ ಬಿಲ್ ಅನ್ನು ಕೂಡ ಕಟ್ಟಬೇಕು. ಆದರೆ ಇದೀಗ ಬೆಸ್ಕಾಂ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಒಂದನ್ನು ನೀಡಿದೆ. ಹೌದು, ಇನ್ಮುಂದೆ ಮೊಬೈಲ್ ರಿಚಾರ್ಜ್ ನಂತೆ ಬೆಸ್ಕಾಂ ರಿಚಾರ್ಜ್ (Bescom Recharge) ಅನ್ನು ಕೂಡ ಮಾಡಿಸಬೇಕು. ನೀವು ರೀಚಾರ್ಜ್ ಮಾಡಿಸಿದಷ್ಟು ಮಾತ್ರ ಕರೆಂಟ್ ಕೊಡಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದಿಂದ ಜನರಿಗೆ ಸುಗಮ ಸೇವೆಯನ್ನು ಕೊಡಲು ಯೋಜನೆ ರೂಪಿಸಲಾಗುತ್ತಿದೆ :
ಇಂದು ಬೆಂಗಳೂರು ಅಂತಾರಾಷ್ಟ್ರೀಯ (International level) ಮಟ್ಟದಲ್ಲಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಇಲ್ಲಿ ಖರ್ಚು ವೆಚ್ಚಗಳು ಬಹಳ ಹೆಚ್ಜು, ಹಾಗಾಗಿ ಇಲ್ಲಿ ವಾಸ ಮಾಡುವ ಜನರಿಂದ ದೊಡ್ಡ ಮಟ್ಟದಲ್ಲಿಯೇ ಹಣ ವಸೂಲಿ ಮಾಡಿ ಸುಗಮ ಸೇವೆಯನ್ನು ಕೊಡುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಸೇವೆಗಳನ್ನು ಕೊಡಲು ಸರ್ಕಾರದಿಂದ ಯೋಜನೆ ರೂಪಿಸಲಾಗುತ್ತಿದೆ.
ಬೆಸ್ಕಾಂ ನಿಂದ ಈ ಹೊಸ ನಿಯಮ (New rule) ಜಾರಿಗೆ ಬರಲು ಕಾರಣ ?
ಇದೀಗ ಜಾರಿಯಲ್ಲಿರುವ ವಿದ್ಯುತ್ ಬಳಸಿ ಬಿಲ್ ಕಟ್ಟುವ ವ್ಯವಸ್ಥೆಯಿಂದ ಬೆಸ್ಕಾಂ ಸಂಸ್ಥೆಗೆ ಭಾರೀ ಸಮಸ್ಯೆ ಎದುರಾಗುತ್ತಿದ್ದು, ಗ್ರಾಹಕರು ಬಿಲ್ ಪಾವತಿಸದೆ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ವಿದ್ಯುತ್ ಇಲಾಖೆಗೆ ಭಾರೀ ನಷ್ಟ ಉಂಟಾಗುತ್ತಿದೆ. ಈ ಕಾರಣದಿಂದ ಬೆಸ್ಕಾಂ ಈ ಹೊಸ ನಿಯಮ ಜಾರಿಗೆ ತಂದಿದೆ.
ರೀಚಾರ್ಜ್ ಮಾಡಿದಷ್ಟೇ ಹಣದ ಮೊತ್ತಕ್ಕೆ ವಿದ್ಯುತ್ ಪೂರೈಕೆ :
ಹೌದು, ಈ ಹಿಂದೆ ವಿದ್ಯುತ್, ನೀರಿನ ಬಿಲ್ ಅನ್ನು ನಾವು ಬಳಕೆ ಮಾಡಿದಷ್ಟು ಹಣ ಪಾವತಿ ಮಾಡಬೇಕಿತ್ತು. ಆದರೆ, ಇದೀಗ ಬೆಸ್ಕಾಂ ಈ ನಿಯಮವನ್ನು ಬದಲಾಯಿಸಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಬೆಸ್ಕಾಂ ನಿಯಮದ ಪ್ರಕಾರ ಮೊದಲು ನೀವು ಹಣ ಪಾವತಿ ಮಾಡಿ ರೀಚಾರ್ಜ್ ಮಾಡಿಕೊಂಡ ಹಣದ ಮೊತ್ತಕ್ಕೆ ಎಷ್ಟಾಗುತ್ತದೆಯೋ ಅಷ್ಟು ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಹಣ ಪಾವತಿ ಮಾಡಿದಷ್ಟು ವಿದ್ಯುತ್ ಪೂರೈಸಿದ ನಂತರ ಕರೆಂಟ್ ಸ್ಥಗಿತವಾಗಿತ್ತದೆ. ಪುನಃ ಮೊಬೈಲ್ ರೀಚಾರ್ಜ್‌ನಂತೆ ಕರೆಂಟ್ ರೀಚಾರ್ಜ್ ಮಾಡಿಸಿಕೊಂಡು ವಿದ್ಯುತ್ ಪೂರೈಕೆಯನ್ನು ಪಡೆಯಬಹುದಾಗಿದೆ.
ಎಲ್ಲ ಮನೆಗಳಿಗೂ ಈ ಪ್ರೀಪೇಯ್ಡ್ ಮೀಟರ್ (Prepaid meter) ಅಳವಡಿಕೆ ಯುನಿಟ್‌ಗೆ ತಕ್ಕಂತೆ ರೀಚಾರ್ಜ್ ಮಾಡಬೇಕು :
ಇನ್ನುಮುಂದೆ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ಪ್ರಮುಖವಾಗಿ ಉಂಟಾಗುತ್ತಿದ್ದ ವಿದ್ಯುತ್ ಬಿಲ್ (Current Bill) ನಷ್ಟವನ್ನು ತಡೆಯಲು ಮುಂದಾಗಿದೆ. ಇದಾದ ನಂತರ ಉಳಿದ ಎಲ್ಲ ಹಳೆಯ ಗ್ರಾಹಕರ ಮನೆಗಳಿಗೂ ಈ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದಂತೆ ದುಡ್ಡು ಕಟ್ ಆಗುತ್ತದೆ. ಬ್ಯಾಲೆನ್ಸ್ (Balance) ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಲಿದೆ. ಆದ್ದರಿಂದ ಮನೆಯ ವಿದ್ಯುತ್ ಬಳಕೆಯ ಯುನಿಟ್(unit)ಗೆ ತಕ್ಕಂತೆ ರೀಚಾರ್ಜ್ ಮಾಡಬೇಕಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ