ಉತ್ತಮ ಫಿಚರ್ಸ್ ಗಳೊಂದಿಗೆ ಕೇವಲ 20,000 ರೂ ಗಳಿಗೆ ದೊರೆಯುವ ಸ್ಮಾರ್ಟ್ ಫೋನ್ ಗಳ ಪಟ್ಟಿ ಹೀಗಿದೆ :
ಇಂದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ನೂತನ ಶೈಲಿಯ ಸ್ಮಾರ್ಟ್ ಫೋನ್ (smart phones) ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಉತ್ತಮ ಪಿಚರ್ ಮತ್ತು ಉತ್ತಮ ಕ್ಯಾಮರಗಳನ್ನು ಅಷ್ಟೇ ಅಲ್ಲದೆ ತಂತ್ರಜ್ಞಾನ (technology) ಅಳವಡಿತ ಸ್ಮಾರ್ಟ್ ಫೋನ್ ಗಳು ಒಂದ್ಕಕಿಂತ ಒಂದು ಪೈಪೋಟಿ ನೀಡುತ್ತಲೇ ಇರುತ್ತವೆ. ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಸ್ಪರ್ಧೆಗೆ ಇಳಿದಿವೆ. ಕಡಿಮೆ ಬೆಲೆಯಲ್ಲಿ ದೊರೆಯುವ ಒಂದಿಷ್ಟು ಆಕರ್ಷಕ ಸ್ಮಾರ್ಟ್ ಫೋನ್ ಗಳ ಮತ್ತು ಅವುಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗೆ ಬಿಡುಗಡೆಯಾಗಿರುವ OnePlus Nord CE 4 Lite 5G, Realme P1, iQOO Z9 ಮತ್ತು Poco X6, Vivo T3 5G ಸ್ಮಾರ್ಟ್ ಫೋನ್ ಗಳ ವಿಶೇಷತೆಗಳ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ.
OnePlus Nord CE 4 5G:
ಡಿಸ್ಪ್ಲೇ (display) :
6.67 ಇಂಚಿನ ಫುಲ್ HD+ AMOLED ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ರೆಸಲ್ಯೂಶನ್, 120Hz ವರೆಗಿನ ರಿಫ್ರೆಶ್ ರೇಟ್, 2,100 nits ನ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್ (processor) :
Qualcomm Snapdragon 695 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ, Adreno 619 GPU ನಲ್ಲಿ ಕಾರ್ಯನಿರ್ವಹಿಸಲಿದೆ.
ಸ್ಟೋರೇಜ್ (storage) :
8GB ನ LPDDR4X RAM ಮತ್ತು 256GB ವರೆಗಿನ UFS 2.2 ಆಂತರಿಕ ಸಂಗ್ರಹಣೆಯನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ.
ಕ್ಯಾಮೆರಾ (camera) :
ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 2MP ಡೆಪ್ತ್ ಸೆನ್ಸಾರ್ ಜೊತೆಗೆ 50MP ಸೋನಿ LYT-600 ಪ್ರಾಥಮಿಕ ಸಂವೇದಕವನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ನಿಂದ ಬೆಂಬಲಿತವಾದ 16MP ಸಂವೇದಕವನ್ನು ಹೊಂದಿದೆ.
Realme P1 5G:
ಡಿಸ್ಪ್ಲೇ (display) :
ಈ ಸ್ಮಾರ್ಟ್ ಫೋನ್ 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 2000 nits ಪೀಕ್ ಬ್ರೈಟ್‌ನೆಸ್‌ನೊಂದಿಗೆ 6.67 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಹೊಂದಿದೆ.
ಪ್ರೊಸೆಸರ್ (processor) :
Android 14 ಆಪರೇಟಿಂಗ್ ಸಿಸ್ಟಮ್ ಆಧಾರಿತ RealmeUI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್ (storage) :
ಈ ಸ್ಮಾರ್ಟ್‌ಫೋನ್ 8GB LPDDR4x RAM ಮತ್ತು 256GB UFS 3.1 ಸಂಗ್ರಹಣೆಯನ್ನು ಹೊಂದಿದೆ.
ಕ್ಯಾಮೆರಾ (camera) :
ಈ ಸ್ಮಾರ್ಟ್‌ಫೋನ್ 50MP ಸೋನಿ LYT600 ಪ್ರಾಥಮಿಕ ಮತ್ತು 2MP ಸೆಕೆಂಡರಿ ಸಂವೇದಕಗಳನ್ನು ಹೊಂದಿದ್ದು, ಇದು ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾ ಹೊಂದಿದೆ.
iQOO Z9 5G:
ಡಿಸ್ಪ್ಲೇ (Display) :
6.67-ಇಂಚಿನ ಫುಲ್ HD+ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 1800 nits ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು IP54 ರೇಟಿಂಗ್ ಅನ್ನು ಹೊಂದಿದೆ.
ಪ್ರೊಸೆಸರ್ (processor) :
ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್ ಮತ್ತು ಮಾಲಿ ಜಿ 610 ಜಿಪಿಯು ಮೂಲಕ ಕಾರ್ಯ ನಿರ್ವಹಿಸಲಿದೆ.
ಕ್ಯಾಮೆರಾ:
OIS ಮತ್ತು EIS ಜೊತೆಗೆ 50MP ಸೋನಿ IMX882 ಪ್ರಾಥಮಿಕ ಸಂವೇದಕವನ್ನು ಒಳಗೊಂಡಿದೆ. ಜೊತೆಗೆ ಹಿಂಭಾಗದಲ್ಲಿ 2MP ಡೆಪ್ತ್ ಸೆನ್ಸಾರ್ ಮತ್ತು 16MP ಮುಂಭಾಗದ ಕ್ಯಾಮೆರಾ ಹೊಂದಿದೆ.
Poco X6 5G:
ಡಿಸ್ಪ್ಲೇ (display) :
ಈ ಮೊಬೈಲ್ 6.67 ಇಂಚಿನ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1800 nits ಗರಿಷ್ಠ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ (processor) :
ಈ ಮೊಬೈಲ್ Qualcomm Snapdragon 7s Gen 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ:
ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 64MP ಪ್ರಾಥಮಿಕ ಸಂವೇದಕದ ಜೊತೆಗೆ OIS ಬೆಂಬಲದೊಂದಿಗೆ ಬರುತ್ತದೆ. 8MP ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 16MP ಮ್ಯಾಕ್ರೋ ಲೆನ್ಸ್ ಹೊಂದಿದೆ.
ಬ್ಯಾಟರಿ (battery) :
ಇದು 5,100 mAh ಸಾಮರ್ಥ್ಯದ ಬ್ಯಾಟರಿ, 67W ಚಾರ್ಜರ್ ಹೊಂದಿದ್ದು ಅದರ ಜೊತೆಗೆ 5,000 mAh ಬ್ಯಾಟರಿ ಮತ್ತು 67W ವೇಗದ ಚಾರ್ಜರ್ ಸಹ ದೊರೆಯುತ್ತದೆ. ಹಾಗೆಯೇ ಈ ಸ್ಮಾರ್ಟ್ ಫೋನ್ IP54 ರೇಟಿಂಗ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು IR ಬ್ಲಾಸ್ಟರ್ ಅನ್ನು ಒಳಗೊಂಡಿವೆ.
Vivo T3 5G:
ಡಿಸ್ಪ್ಲೇ (display) :
ಈ ಮೊಬೈಲ್ 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 6.67 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್, HDR 10+ ಪ್ರಮಾಣೀಕರಣ ಮತ್ತು 1800 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್ (processor) :
ಇದು ಮಿಡ್ ರೇಂಜರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಎಲ್ಲಾ ಗ್ರಾಫಿಕ್ಸ್ ತೀವ್ರ ಕಾರ್ಯಗಳಿಗಾಗಿ ಮಾಲಿ G610 MC4 GPU ನೊಂದಿಗೆ ಜೋಡಿಸಲಾಗಿದೆ.
ಸ್ಟೋರೇಜ್ (storage) :
Vivo T3 ಸ್ಮಾರ್ಟ್ ಫೋನ್ 8GB ವರೆಗೆ LPDDR4x RAM ಮತ್ತು 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ, ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ.
ಈ ಎಲ್ಲಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳು ಕೇವಲ 20,000 ರೂ ಗಳ ಒಳಗೆ ಗ್ರಾಹಕರಿಗೆ ಲಭ್ಯವಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.