ಇದೀಗ ಗ್ರಾಹಕರಿಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. 2024 ರಲ್ಲಿ ಹಲವಾರು ಯೋಜನೆಗಳು ಮತ್ತು ಹೊಸ ಬದಲಾವಣೆಗಳು ಆಗುತ್ತಿವೆ. ಹಾಗೆಯೇ ಹೊಸ ವರ್ಷಕ್ಕೆ ( New Year ) ಎಲ್ಲ ಆನ್ಲೈನ್ ವಹಿವಾಟುಗಳಲ್ಲಿ ( Online Service ) ವಿಶೇಷ ಆಫರ್ ಗಳು ದೊರೆಯುತ್ತಿವೆ. ಹಾಗೆಯೇ ಇದೀಗ ಬ್ಯಾಂಕ್ ( Bank ) ಗಳಲ್ಲಿಯೂ ಕೂಡ ಹೊಸ ರೂಲ್ಸ್ ಮತ್ತು ಅನೇಕ ಹಣ ಉಳಿತಾಯದ ಸ್ಥಿರ ಠೇವಣಿಗಳನ್ನು ನೀಡಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಲವಾರು ಜನಪ್ರಿಯ ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ( Fixed Deposit ) ವ್ಯವಸ್ಥೆ :
ಈ ಹಿಂದೆ ಹಲವಾರು ಬ್ಯಾಂಕ್ ಗಳಲ್ಲಿ ಅನೇಕ ಠೇವಣಿ ವ್ಯವಸ್ಥೆ ಗಳು ಇದ್ದು ಇದು ಜನರಿಗೆ ತಮ್ಮ ಹಣವನ್ನು ಹೂಡಿಕೆ(invest) ಮಾಡಲು ಸಹಾಯವಾಗಿದೆ. ಆದರೆ ಅದರಲ್ಲಿ ಯಾವಾಗ ಬೇಕಾದರೂ ಹಣವನ್ನು ಪಡೆದುಕೊಳ್ಳಬಹುದು ಇತ್ತು. ಆದರೆ ಇದೀಗ ನೀಡಿರುವುದು ಸ್ಥಿರ ಠೇವಣಿ ವ್ಯವಸ್ಥೆ. ಇದರಲ್ಲಿ ನೀವು ಒಂದು ಸಲ ಹಣವನ್ನು ಹೂಡಿಕೆ ಮಾಡಲು ಪ್ರಾರಂಭ ಮಾಡಿದರೆ, ಅದರಲ್ಲಿ ನೀಡಿರುವ ಸಮಯದ ವರೆಗೆ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
ಈ ಒಂದು ಸ್ಥಿರ ಠೇವಣಿ ವ್ಯವಸ್ಥೆಯನ್ನು ನೀವು ಕೂಡ ಪಡೆಯಲು ಬಯಸಿದರೆ ಅದಕ್ಕಾಗಿ ಹಲವು ಬ್ಯಾಂಕ್ ಗಳು ಈ ಒಂದು ಸ್ಥಿರ ಠೇವಣಿ ವ್ಯವಸ್ಥೆಯನ್ನು ನೀಡಿದೆ. ಈ ಬ್ಯಾಂಕ್ ಗಳಲ್ಲಿ ನೀವು 3 ವರ್ಷದ ಎಫ್ ಡಿ(FD) ಮಾಡಿದ್ರೆ ನಿಮಗೆ ಶೇ 7.25 ವರೆಗೆ ಬಡ್ಡಿ ಸಿಗತ್ತದೆ. ಹೆಚ್ಚು ಬಡ್ಡಿ ನೀಡುವ 10 ಬ್ಯಾಂಕ್ ಗಳ ಲಿಸ್ಟ್ ಅನ್ನು ಈ ಕೆಳಗೆ ನೀಡಲಾಗಿದೆ.
ಸ್ಥಿರ ಠೇವಣಿಯನ್ನು ನೀಡಲಾದ ಬ್ಯಾಂಕ್ ಮತ್ತು ಮೊತ್ತದ ವಿವರ ಈ ಕೆಳಗೆ ನೀಡಲಾಗಿದೆ:
ಬ್ಯಾಂಕ್ ಆಫ್ ಬರೋಡಾ ( Bank of Baroda ) :
ಬ್ಯಾಂಕ್ ಆಫ್ ಬರೋಡ ಅತ್ಯಂತ ಜನಪ್ರಿಯ ಬ್ಯಾಂಕ್ ಗಳಲ್ಲಿ ಒಂದು. ಈ ಬ್ಯಾಂಕ್ ನಲ್ಲಿ ಹಲವಾರು ಸಣ್ಣ ಮತ್ತು ದೊಡ್ಡ ಮಟ್ಟದ ಹೂಡಿಕೆ ವ್ಯವಸ್ಥೆ ಇದ್ದು ಜನರಿಗೆ ಬಹಳ ರೀತಿಯಲ್ಲಿ ಸ್ಪಂದನೆ ನೀಡುತ್ತಿದೆ.
ಬಡ್ಡಿ ದರ :
ಈ ಬ್ಯಾಂಕ್ ನಲ್ಲಿ ಮೂರು ವರ್ಷಗಳ ಎಫ್ ಡಿಗೆ 1 ಲಕ್ಷ ರೂಪಾಯಿ ಡೆಪಾಟಿಟ್ ಮಾಡಿದರೆ ಮೂರು ವರ್ಷದ ಬಳಿಕ ನಿಮಗೆ ಶೇ 7.25 ವರೆಗೆ ಬಡ್ಡಿ(interest) ದೊರೆಯಲಿದೆ. ಅಂದರೆ 1.25 ಲಕ್ಷ ರೂಪಾಯಿ ದೊರೆಯುತ್ತದೆ.
ಆ್ಯಕ್ಸಿಸ್ ಬ್ಯಾಂಕ್ ( Axis Bank ) :
ಆ್ಯಕ್ಸಿಸ್ ಬ್ಯಾಂಕ್ ಖಾಸಗಿ ವಲಯದಲ್ಲಿ ಹೆಸರು ಮಾಡಿದ ಬ್ಯಾಂಕ್ ಗಳಲ್ಲಿ ಆ್ಯಕ್ಸಿಸ್ ಬ್ಯಾಂಕ್ ಕೂಡ ಒಂದು. ಹಾಗೆಯೇ ಈ ಬ್ಯಾಂಕ್ ನಲ್ಲಿ ದೊರೆಯುವ ಮೂರು ವರ್ಷಗಳ ಎಫ್ ಡಿ ಬಡ್ಡಿ ದರ 7.10 ಪ್ರತಿಶತದವರೆಗೆ ಇರುತ್ತದೆ. ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೂರು ವರ್ಷಗಳಲ್ಲಿ 1.24 ಲಕ್ಷಗಳ ವರೆಗೆ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗುತ್ತದೆ.
ಕೆನರಾ ಬ್ಯಾಂಕ್ ( Canara Bank ) :
ಇದೀಗ ಅತ್ಯಂತ ಜನಪ್ರಿಯ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದು. ಈ ಬ್ಯಾಂಕ್ ಜನರ ಅಚ್ಚು ಮೆಚ್ಚಿನ ಬ್ಯಾಂಕ್ ಎಂದು ಹೇಳಬಹುದು. ಹಾಗೆಯೇ ಈ ಬ್ಯಾಂಕ್ ನಲ್ಲಿ ಮೂರು ವರ್ಷಗಳ ಸ್ಥಿರ ಠೇವಣಿ ಮೇಲೆ 6.80 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡಲಾಗುತ್ತದೆ. ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.22 ಲಕ್ಷ ರೂ. ದೊರೆಯುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( State Bank of India ) :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಸಾವಿರಾರು ಜನರು ತಮ್ಮ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಹಾಗೆಯೇ ಈ ಬ್ಯಾಂಕ್ ನಲ್ಲಿ ಹಲವು ಹೂಡಿಕೆ ವ್ಯವಸ್ಥೆ ಗಳು ಕೂಡ ಇವೆ.
ನಿವೇನಾದರು ಈ ಬ್ಯಾಂಕ್ ನಲ್ಲಿ ಮೂರು ವರ್ಷಗಳ ಸ್ಥಿರ ಠೇವಣಿ ಹೂಡಿಕೆ ಮಾಡಲು ಬಯಸಿದರೆ ನಿಮಗೆ ಇದರಲ್ಲಿ 6.75 ಪ್ರತಿಶತದವರೆಗೆ ಬಡ್ಡಿದರಗಳು ದೊರೆಯಲಿವೆ. ಈ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.22 ಲಕ್ಷದ ವರೆಗೆ ದೊರೆಯುತ್ತದೆ.
ಇಂಡಿಯನ್ ಬ್ಯಾಂಕ್ ( Indian Bank ) :
ಹಾಗೆಯೇ ಇಂಡಿಯನ್ ಬ್ಯಾಂಕ್ ನಲ್ಲಿಯೂ ಕೂಡ ಮೂರು ವರ್ಷಗಳ ಸ್ಥಿರ ಠೇವಣಿ ಮೇಲೆ ಶೇಕಡಾ 6.25 ರವರೆಗೆ ಬಡ್ಡಿದರಗಳನ್ನು ನೀಡಲಾಗಿದೆ. ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.20 ಲಕ್ಷ ರೂ. ನಿಮಗೆ ಸಿಗುತ್ತದೆ. ಉತ್ತಮ ಬ್ಯಾಂಕ್ ಗಳಲ್ಲಿ ಇಂಡಿಯನ್ ಬ್ಯಾಂಕ್ ಕೂಡ ಒಂದು. ಹಾಗಾಗಿ ನೀವು ಈ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಬಹುದು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ( Union Bank of India ) ಮತ್ತು ಬ್ಯಾಂಕ್ ಆಫ್ ಇಂಡಿಯಾ ( Bank of India ) :
ಇನ್ನು 6.50 ಪ್ರತಿಶತದವರೆಗೆ ಮೂರು ವರ್ಷಗಳ ಬಡ್ಡಿದರವನ್ನು ಈ ಎರಡು ಬ್ಯಾಂಕ್ ಗಳಲ್ಲಿ ನೀಡಲಾಗಿದೆ. ಇಲ್ಲಿ ನೀವೇನಾದರೂ 1 ಲಕ್ಷ ರೂ.ಗಳ ಹೂಡಿಕೆ ಮಾಡಿದರೆ ಆ ಮೊತ್ತವು ಮೂರು ವರ್ಷಗಳಲ್ಲಿ 1.21 ಲಕ್ಷದ ವರೆಗೆ ದೊರೆಯುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ( HDFC Bank ), ಪಂಜಾಬ್ ನ್ಯಾಷನಲ್ ಬ್ಯಾಂಕ್ ( Punjab National Bank ) ಮತ್ತು ಐಸಿಐಸಿಐ ಬ್ಯಾಂಕ್ ( ICICI Bank ) :
ಇನ್ನು ಈ ಮೂರೂ ಬ್ಯಾಂಕ್ ಗಳು ಮೂರು ವರ್ಷಗಳ FD ಗಳ ಮೇಲೆ 7 ಪ್ರತಿಶತದವರೆಗೆ ಬಡ್ಡಿದರಗಳು ದೊರೆಯಲಿವೆ. ಹಾಗೆಯೇ ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.23 ಲಕ್ಷಕ್ಕೆ ಬೆಳೆಯುತ್ತದೆ. ನೀವು ಈ ಮೂರು ಜನಪ್ರಿಯ ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿಗಳ ಮೇಲೆ ಹೂಡಿಕೆ ಮಾಡಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!
- ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ಅಕ್ರಮ ಸಕ್ರಮದ ಈ 7000 ರೈತರಿಗೆ ಸಿಗಲಿದೆ ಸರ್ಕಾರಿ ಭೂಮಿ, ಇಲ್ಲಿದೆ ಸಂಪೂರ್ಣ ಮಾಹಿತಿ.
- ಮನೇಲಿ ₹ 2000 ನೋಟು ಇದ್ದವರಿಗೆ ʻRBIʼ ಬಿಗ್ ರಿಲೀಫ್, ನೋಟು ಬದಲಾವಣೆಗೆ ಇಲ್ಲಿ ಅವಕಾಶ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.