ಜೋಳದ ರೊಟ್ಟಿ ಊಟ ಸವಿಯಲು ಉತ್ತರ ಕರ್ನಾಟಕದ ಖಾನಾವಳಿಗಳಿಗಿಂತ ಬೆಣ್ಣೆ ನಗರಿ ದಾವಣಗೆರೆಯ ಊಟದ ಹೋಟೆಲ್ ಗಳೇ ಬೆಸ್ಟ್ ಅನ್ಸುತ್ತೆ, ಯಾಕೆ ಅಂತೀರಾ ದಾವಣಗೆರೆ ಬೆಣ್ಣೆ ದೋಸೆಯನ್ನು ದಾವಣಗೆರೆಯಲ್ಲಿಯೇ ತಿನ್ಬೇಕು ಅಂತಾರಲ್ಲ ಹಾಗೇ ಜೋಳದ ರೊಟ್ಟಿಯನ್ನು ಉತ್ತರ ಕರ್ನಾಟಕದಲ್ಲಿ ತಿಂದರೆನೇ ರುಚಿ ಜಾಸ್ತಿ ಅನ್ನೋ ಮಾತು ಇಂದು ತಪ್ಪು ಅನಿಸಿದ್ದು ನಿಜ,
ಪತ್ರಿಕೋಧ್ಯಮದ 3ನೇ ಸೆಮಿಸ್ಟರ್ ಪ್ರಾಕ್ಟಿಕಲ್ ಎಕ್ಸಾಮ್ ಮುಗಿಸಿದ ನಂತರ ಊಟ ಮಾಡೋಣ ಅಂತ ಸಾರಿಗೆ ಬಸ್ ಹತ್ತಿ ಸೀದಾ ಧಾರವಾಡದ ಪ್ರಸಿದ್ದ ಖಾನಾವಳಿ ಕಡೆ ಹೆಜ್ಜೆ ಹಾಕಿದ್ವಿ 2012 ರಿಂದಾನು ಧಾರವಾಡ ಕ್ಕೆ ಬಂದಾಗ್ಲೇಲ್ಲಾ ಇಲ್ಲಿ ಊಟ ಮಾಡ್ಕೊಂಡ್ ಹೋಗೋ ರೂಡಿ ನಮ್ದು, ಆದ್ರೆ ಈ ಸಾರಿ ಊಟ ಅಷ್ಟಾಗಿ ಟೆಸ್ಟ್ ಇರಲಿಲ್ಲ, ಕುಡಿಯೋಕೆ ಬೋರ್ ನೀರು ಇಟ್ಟಿದ್ದು ತುಂಬಾ ಆಶ್ಚರ್ಯ ಅನಿಸಿದ್ದು ನಿಜ, ಸರ್ವಿಸ್ ನವರಿಗೆ ಸ್ವಲ್ಪನೂ patience ಇಲ್ಲ ಅನಿಸ್ತು.. 110 ರೂ ತಗೊಂಡ್ರು ಹಪ್ಪಳ ಕೊಡದೆ ಇರೋದು ಗ್ರೇಟ್ ಅಲ್ವಾ ಅನಿಸಿತು. ಪಕ್ಕಾ ಉತ್ತರ ಕರ್ನಾಟಕದ ಹುಡುಗನಾದ ನನಗೆ ನಮ್ಮ್ ಊಟದ ಕರಾಮತ್ತು ತುಂಬಾ ಚೆನ್ನಾಗಿ ಗೊತ್ತು, ಇತ್ತೀಚೆಗೆ ಕೆಲವು ಪ್ರಸಿದ್ಧ ಖಾನಾವಳಿ ಗಳೂ ಪಕ್ಕಾ ಬಿಸಿನೆಸ್ ಮಾಡ್ಯೂಲ್ ಆಗಿರೋದು ನೋಡಿದ್ರೆ ಆಶ್ಚರ್ಯ ಪಡಬೇಕಾಗಿಲ್ಲ ಬಿಡಿ..!
ಇನ್ನೂ ದಾವಣಗೆರೆ ಊಟದ ಹೋಟೆಲ್ ಯಾಕೆ ಬೆಸ್ಟ್ ಅನ್ನೋ ಪ್ರಶ್ನೆ ಈಗ ನಿಮಗೆ ಕಾಡುತ್ತಿರಬಹುದು ಅಲ್ವೇ? ಹೇಳ್ತಿನಿ ಕೇಳಿ, ದಾವಣಗೆರೆಯ ರಾಮ್ & ಕೋ ಸರ್ಕಲ್ ನಲ್ಲಿ ಹೋಟೆಲ್ ಕೈ ರುಚಿ ಊಟದ ಹೋಟೆಲ್ ನಲ್ಲಿ ಊಟ ಮಾಡಿದ್ಮೇಲೆ ಈ ಭಾವನೆ ನನಗೆ ಬಂದಿದ್ದು ನಿಜ, ವಾಹ್ ಎನ್ ಊಟ ಅಂತೀರಿ ಮೇನು ಕೂಡ ಬರೀಬೇಕು ಅನಿಸುತ್ತೆ.. ಪ್ರತಿ ಟೇಬಲ್ ಗೆ ಫಿಲ್ಟರ್ ನೀರಿನ ವ್ಯವಸ್ಥೆ, ದೊಡ್ಡ ಪ್ಲೇಟ್ ನಲ್ಲಿ 2 ತರದ ಪಲ್ಯ, ಬದ್ನೇ ಖಾಯಿ ಬಜ್ಜಿ, ಕೆಂಪು ಚೆಟ್ನಿ, ಮೊಸರು, ಸೌತೆಕಾಯಿ ಈರುಳ್ಳಿ ಸಲಾಡ್, ಮಸಾಲೆ ಮಜ್ಜಿಗೆಯ ಚಿಕ್ಕ ತಂಬಿಗೆ, ರಸಂ ಮತ್ತು 2 ಬಿಸಿ ಜೋಳದ ರೊಟ್ಟಿ, ಇನ್ನೂ ಅನ್ನ ಸಾಂಬಾರ್ ಬಗ್ಗೆ ಹೇಳೋದೆ ಬೇಡಾ ಮದ್ವೆ ಸಾಂಬಾರ್ ಗುರು, ಸಾಂಬಾರ್ ಕೇಳಿ ಕುಡಿಬೇಕು ಅನಿಸುತ್ತೆ.. ಇಷ್ಟು ಊಟದ ಬಿಲ್ ಎಷ್ಟು ಅಂತೀರಾ 100 ರೂಪಾಯಿ. ಮುಂದೊಂದು ದಿನ ದಾವಣಗೆರೆ ಬರೀ ಬೆಣ್ಣೆ ದೋಸೆಗೆ ಅಷ್ಟೇ ಅಲ್ಲಾ ಉತ್ತರ ಕರ್ನಾಟಕದ ಊಟಕ್ಕೂ ಫೇಮಸ್ ಆದ್ರೂ ಆಶ್ಚರ್ಯ ಪಡಬೇಕಿಲ್ಲ.
ಈ ಜೋಳದ ರೊಟ್ಟಿ ಉತ್ತರ ಕರ್ನಾಟಕದಲ್ಲಿ ತುಂಬಾನೇ ಫೇಮಸ್. ಇಲ್ಲಿ ಜೋಳದ ರೊಟ್ಟಿ ಇಲ್ದೆ ಇದ್ದರೆ ಆ ದಿನದ ಊಟ ಪೂರ್ಣ ಆಗೋದೇ ಇಲ್ಲ.
ಲಿಂಗರಾಜ
ಪತ್ರಿಕೋದ್ಯಮ ವಿಭಾಗ,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ನಾಳೆಯಿಂದ ರಾಜ್ಯದಲ್ಲಿ SSLC ಪರೀಕ್ಷೆಗಳು ಪ್ರಾರಂಭ, ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಪ್ರಕಟ
- SSP ವಿದ್ಯಾರ್ಥಿ ವೇತನ 2024, ಆನ್ಲೈನ್ ಅರ್ಜಿ ಸಲ್ಲಿಸಿ | Karnataka SSP Scholarship 2024
- ಕರ್ನಾಟಕ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ
- ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ಈ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ 2000/- ಹಣ ಜಮೆ ಆಗೋಲ್ಲ, ಇಲ್ಲಿದೆ ಕಾರಣ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.