ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳಿಗೆ ಸಿಗಲಿದೆ 35,000 ರೂ. 18 ವರ್ಷದ ಈ ಫಲಾನುಭವಿಗಳಿಗೆ ಮಾತ್ರ

WhatsApp Image 2024 11 28 at 11.42.34 AM

ಬಿಎಸ್‌ ಯಡಿಯೂರಪ್ಪನವರು (BS Yadiyurappa) ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಈ ಒಂದು ಯೋಜನೆಯು ಬಹಳಷ್ಟು ಬಡ ಹೆಣ್ಣು ಮಕ್ಕಳಿಗೆ ವರದಾನವಾಗಿದೆ. ಹಾಗೆಯೇ ಇದೀಗ ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ಜಮಾ ಮಾಡುತ್ತಿದ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ ತಿಳಿದು ಬಂದಿದೆ. ಯೋಜನೆ ಆರಂಭಗೊಂಡು ಇದೀಗ 18 ವರ್ಷ ತುಂಬಿದ್ದು, ಇದೀಗ 2.30 ಲಕ್ಷ ಫಲಾನುಭವಿಗಳಿಗೆ ಮೆಚ್ಯುರಿಟಿ ಹಣ ದೊರೆಯಲಿದೆ.

ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳ ಕೈಗೆ ಬಾಂಡ್‌ ಸಿಕ್ಕಿದೆ

ಬಡತನ ರೇಖೆಗಿಂತ ಕೆಳಗಿನ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸರ್ವಾಂಗೀಣ ಅಭಿವೃದ್ಧಿಗೆ ನಿಶ್ಚಿತ ಠೇವಣಿ ಹೂಡಿಕೆ ಮಾಡಿ ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ (with interest) ಮೆಚೂರಿಟಿ ಹಣ ನೀಡುವ ಯೋಜನೆ ಇದಾಗಿದೆ. ರಾಜ್ಯದಲ್ಲಿ ಆರಂಭದಿಂದ ಇದುವರೆಗೆ 34.50 ಲಕ್ಷ ಮಂದಿ ಭಾಗ್ಯ ಲಕ್ಷ್ಮಿ ಬಾಂಡ್ ಪಡೆದುಕೊಂಡಿದ್ದಾರೆ. ಈಗ ಭಾಗ್ಯಲಕ್ಷ್ಮಿ ಸುಕನ್ಯಾ ಹೆಸರಿನಲ್ಲಿ 4.30 ಲಕ್ಷ ಮಂದಿ ಬಾಂಡ್ ಪಡೆದುಕೊಂಡಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್ ಪಡೆದು 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಷರತ್ತುಗಳ ಅನ್ವಯ ಅವರ ಖಾತೆಗಳಿಗೆ ಮೆಚೂರಿಟಿ ಹಣ ವರ್ಗಾವಣೆ ಮಾಡಲಾಗುವುದು.

18 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದ ‘ಭಾಗ್ಯಲಕ್ಷ್ಮೀ’ ಯೋಜನೆ ಈಗ (ಮೆಚ್ಯೂರಿಟಿ) ಪ್ರೌಢಾವಸ್ಥೆ ತಲುಪಿದೆ. ಸರ್ಕಾರ ನೀಡಿದ್ದ ಭಾಗ್ಯಲಕ್ಷ್ಮೀ ಬಾಂಡ್‌ಗಳು ಮೆಚ್ಯೂರಿಟಿ ಆಗುತ್ತಿವೆ. ಈ ಯೋಜನೆಯ ಫಲಾನುಭವಿ 35 ಸಾವಿರ ರೂ. ಪಡೆಯಲಿದ್ದಾಳೆ.

2006 ರಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಆರಂಭವಾದ ಎರಡು ವರ್ಷಗಳವರೆಗೆ ಮೆಚ್ಯೂರಿಟಿ ಹಣವನ್ನು 35 ಸಾವಿರಕ್ಕೆ ಮಿತಿಗೊಳಿಸಲಾಗಿತ್ತು. ಬಳಿಕ 1 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. 15 ವರ್ಷ ಇದೇ ಹೆಸರಿನಲ್ಲಿದ್ದ ಯೋಜನೆ 2020-21ನೇ ಸಾಲಿನಲ್ಲಿ’ಸುಕನ್ಯಾ ಸಮೃದ್ಧಿ ಯೋಜನೆ’ ಹೆಸರಿನಡಿ ಬದಲಾಗಿದೆ.

ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ವಾಪಾಸ್‌ ಪಡೆಯಲು ಹಲವು ನಿಯಮಗಳನ್ನು ಅನುಸರಿಸಬೇಕು :

ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ವಾಪಾಸ್‌ ಪಡೆಯಲು ಹಲವು ನಿಯಮಗಳನ್ನು ಸರಕಾರ ಜಾರಿಗೆ ತಂದಿದ್ದು, ಈ ನಿಯಮಗಳು (Rules) ಬಹಳ ಮುಖ್ಯವಾಗಿದ್ದು ಇವುಗಳನ್ನು ಅನುಸರಿದರೆ ಮಾತ್ರ ಭಾಗ್ಯಲಕ್ಷ್ಮಿ ಹಣ ವಾಪಸ್ ದೊರೆಯುತ್ತದೆ.

ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಬಿಪಿಎಲ್‌ ಕಾರ್ಡ್‌ (BPL Card) ಹೊಂದಿರಲೇ ಬೇಕು.
ಅಲ್ಲದೇ ಮೂರು ಮಕ್ಕಳನ್ನು ಮೀರಿರಬಾರದು.
ಯೋಜನೆಯಲ್ಲಿ ನೋಂದಣಿ ಮಾಡಿರುವ ಮಗುವು ಕಡ್ಡಾಯವಾಗಿ 8 ನೇ ತರಗತಿ ವಿದ್ಯಾಭ್ಯಾಸವನ್ನು ಪೂರೈಸಿರಲೇ ಬೇಕು. ಈ ಕುರಿತು ಶಾಲೆಗಳಿಂದ ಅಧಿಕೃತ ದಾಖಲೆಯನ್ನು ನೀಡಬೇಕು.
ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಸಿರುವ ಫಲಾನುಭವಿಗಳು ಬಾಲ ಕಾರ್ಮಿಕರಾಗಿರಬಾರದು.
ಅಲ್ಲದೇ ಬಾಲ್ಯ ವಿವಾಹಕ್ಕೆ (Child marriage) ಒಳಗಾಗಿರಬಾರದು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ಒಟ್ಟಿನಲ್ಲಿ ಹದಿನೆಂಟು ವರ್ಷಗಳ ಹಿಂದೆ ಹಣವನ್ನು ಹೂಡಿಕೆ ಮಾಡಿರುವ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಯೋಜನೆ ವರದಾನವಾಗಲಿದೆ.

ಈಗಾಗಲೇ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಅಮ್ಮ ಹಿರಿಯರಿಗೆ 2000 ಉಚಿತವಾಗಿ ಬರುತ್ತಿದ್ದು, ಇದರ ಜೊತೆಗೆ ಮನೆಯಲ್ಲಿರುವ ಮಗಳಿಗೂ ಸಹಿತ ಒಂದೇ ಬಾರಿಗೆ 35,000 ಒಲಿದು ಬರುತ್ತಿರುವುದು ಬಿಪಿಎಲ್ ಕಾರ್ಡ್ ಕುಟುಂಬಸ್ಥರಿಗೆ ಸಂತೋಷವನ್ನು ತಂದು ಕೊಟ್ಟಿದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!