ನೀಟ್ ಪರೀಕ್ಷೆಯಲ್ಲಿ (NEET Exam) ನಡೆದಿರುವ ಲೋಪ ಖಂಡಿಸಬೇಕೆಂದು ಇಂದು ಭಾರತ್ ಬಂದ್ (Bharat Bandh), ಶಾಲಾ ಕಾಲೇಜುಗಳಿಗೆ ರಜೆ!
ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಉತ್ತಮ ಅಂಕ ಗಳಿಸಿ (good marks) ಒಳ್ಳೆಯ ಕೆಲಸ ಪಡೆಯಬೇಕು ಎಂದು ಬಹಳ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ನೀಟ್ ನಂತಹ ಪರೀಕ್ಷೆಗಳನ್ನು ಬರೆದು, ಉತ್ತಮ ಅಂಕ ಗಳಿಸಿ ರ್ಯಾಂಕ್(Rank) ಪಡೆಯಬೇಕು ಎಂದಿರುತ್ತಾರೆ. ಆದರೆ ಇಂತಹ ದೊಡ್ಡ ಪರೀಕ್ಷೆಗಳಲ್ಲಿ ಗೋಲ್ ಮಾಲ್ ಆಗುತ್ತಿರುವುದು ತುಂಬಾ ಬೇಸರ ಉಂಟು ಮಾಡುತ್ತದೆ. ಇದೀಗ ಮೊನ್ನೆ ಮೊನ್ನೆ ಅಷ್ಟೇ ನಡೆದಿರುವ ನೀಟ್ ಪರೀಕ್ಷೆಯಲ್ಲಿ ಲೋಪ ಕಂಡು ಬಂದಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲೇಬೇಕು. ಏಕೆಂದರೆ, ಹಲವಾರು ವಿದ್ಯಾರ್ಥಿಗಳು ಮನ ಮನನೊಂದಿದ್ದಾರೆ. ಹಾಗಾಗಿ ಇಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಭಾರತ್ ಬಂದ್ :
ಇಂದು (ಗುರುವಾರ) ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜಾ ನೀಡಲಾಗಿದೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (student federation of India) ಮತ್ತು ಪ್ರೋಗ್ರೆಸ್ಸಿವ್ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ (progressive Democratic student of India) ಸೇರಿದಂತೆ ಹಲವು ವಿದ್ಯಾರ್ಥಿಗಳ ಒಕ್ಕೂಟಗಳು ಗುರುವಾರ ಭಾರತ್ ಬಂದ್ ಗೆ ಕರೆ ನೀಡಿವೆ.
ಭಾರತ್ ಬಂದ್ ಗೆ ಕರೆ ನೀಡಲು ಕಾರಣ (cause) :
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಲೋಪ ಖಂಡಿಸಬೇಕೆಂದು ಹಾಗೂ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನಲೆ ದೇಶಾದ್ಯಂತ ಪ್ರೀಪೈಮರಿ (pre primary), ಶಾಲಾ- ಕಾಲೇಜುಗಳನ್ನು (school and colleges) ಬಂದ್ ಮಾಡಲಾಗುವುದು ಎಂದು ಒಕ್ಕೂಟಗಳು ತಿಳಿಸಿವೆ.
ಹೈದರಾಬಾದ್ ನಲ್ಲಿ ಒಕ್ಕೂಟದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ತೆಲಂಗಾಣ, ಆಂಧ್ರಪ್ರದೇಶ ಹಾಗೂ ಉತ್ತರ ಭಾರತ ಹಲವು ರಾಜ್ಯಗಳಲ್ಲಿ ಪ್ರತಿಭಟನೆಯ ಕಾವು (Incubation of protest in states) ಹೆಚ್ಚಾಗಿರಲಿದೆ. ಆದರೆ, ಕರ್ನಾಟಕದಲ್ಲಿ ಗುರುವಾರ ಶಾಲಾ-ಕಾಲೇಜುಗಳು ರಜೆ ಇರುವುದು ಕುರಿತು ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ಕುರಿತು ಒಕ್ಕೂಟಗಳಾಗಲಿ ಅಥವಾ ಶಿಕ್ಷಣ ಇಲಾಖೆಯಾಗಲಿ (education department) ಯಾವುದೇ ಮಾಹಿತಿ ನೀಡಿಲ್ಲ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.