ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(Big boss) ಇದೀಗ 7 ನೇ ವಾರವನ್ನು ಮುಗಿಸಲು 2 ದಿನಗಳು ಬಾಕಿ ಇದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಹಲವಾರು ಅವಾಂತರಗಳು ನಡೆದಿವೆ. ಮೊನ್ನೆ ಹಲವರಿಗೆ ಕಳಪೆ ಪಟ್ಟ ಕಟ್ಟಿ ಜೈಲಿಗೆ ಸೇರಿಸಿದ್ದರು. ಇದೀಗ ಡ್ರೋನ್ ಪ್ರತಾಪ್(Drone Prathap) ಅವರ ಸರದಿ ಬಂದಿದೆ. ಹೌದು ಡ್ರೋಣ್ ಪ್ರತಾಪ್ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜೈಲಿನಲ್ಲಿ ಬಿಗ್ ಬಾಸ್ ಪ್ರತಾಪ್ :
ವಾರದ ಕೊನೆಯಲ್ಲಿ ಎಲ್ಲರಿಗೂ ಕಳಪೆ ಮತ್ತು ಉತ್ತಮರನ್ನು ಆರಿಸುವ ಅಥವಾ ಪಟ್ಟ ಕಟ್ಟುವ ಅವಕಾಶ ಇದೆ. ಹಾಗೆಯೇ ಈ ವಾರದ ಕೊನೆಗೆ ಕಳಪೆ ಯಾರು?, ಉತ್ತಮ ಯಾರು? ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಹಲವಾರು ಸದಸ್ಯರು ಡ್ರೋಣ್ ಪ್ರತಾಪ್ ಹೆಸರನ್ನು ಹೇಳಿ ಅವರಿಗೆ ಕಳಪೆ ಪಟ್ಟ ಕಟ್ಟಿದ್ದಾರೆ.
ಈ ವಾರದಲ್ಲಿ ನಡೆದ ಎಲ್ಲ ಟಾಸ್ಕ್‌ಗಳಲ್ಲಿಯೂ ‘ಮಣ್ಣಿನ ಮಕ್ಕಳು’ ತಂಡ ಸೋತಿದೆ. ಆ ತಂಡದ ನಾಯಕನಿಗೆ ಕಳಪೆ ಪಟ್ಟ ನೀಡಿ ಜೈಲು ಪಾರು ಮಾಡಿದ್ದಾರೆ. ಇದರಿಂದ ಡ್ರೋಣ್ ಪ್ರತಾಪ್ ಮನನೊಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ರತಾ ಕೊಟ್ಟ ಕಾರಣ ಇದೆ ನೋಡಿ :
ಇನ್ನು ಉಳಿದ ಸ್ಪರ್ಧಿಗಳು ಪ್ರತಾಪ್ ಅವರ ಬಗ್ಗೆ ಮಾತನಾಡಿದ್ದಾರೆ. ನಮ್ರತಾ ಅವರು ಕ್ಯಾಪ್ಟನ್ಸಿ ಓಟದಿಂದ ನನ್ನನ್ನ ಪ್ರತಾಪ್ ಹೊರಗಿಟ್ಟಿದ್ದು ಬೇಜಾರಾಯ್ತು… ಆ ಕ್ಷಣಕ್ಕೆ! ಆಮೇಲೆ ನಾನು ಮೂವ್ ಆನ್ ಆದೆ. ಆ ಕಾರಣದಿಂದ ನಾನು ಕಳಪೆ ಕೊಡುತ್ತಿಲ್ಲ. ಪ್ರತಾಪ್‌ನ ನಂಬಿ ಟೀಮ್‌ಗೆ ಬಂದಾಗ ನಿರ್ಧಾರ, ಸ್ಟ್ರಾಟೆಜಿ ಅವರಿಂದ ಬರಲಿಲ್ಲ. ಅವರ ಸ್ಟ್ರಾಟೆಜಿ ಪ್ರಕಾರ ನಾವು ಮಾತನಾಡಲೇಬಾರದು. ಅದು ವರ್ಕೌಟ್ ಆಗಲಿಲ್ಲ ಎಂದು ತಿಳಿಸಿದರು. ಹಾಗೆಯೇ ವಿನಯ್ ಅವರು ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ಸೋಲುವಂತಾಯ್ತು’ ಎಂಬ ಕಾರಣ ನೀಡಿದ್ದಾರೆ. ಹಾಗೆಯೇ ತನಿಷಾ, ವರ್ತೂರು, ಮತ್ತು ಸ್ನೇಹಿತ್ ಕೂಡ ಪ್ರತಾಪ್ ಹೆಸರನ್ನೇ ಹೇಳಿ ಅವರನ್ನು ಕಳಪೆ ಎಂದು ಗುರುತಿಸಿದ್ದಾರೆ.
ಎಲ್ಲರೂ ಪ್ರತಾಪ್ ಅವರ ಹೆಸರನ್ನು ಹೇಳಿದ ನಂತರ ಅವರ ನಿರ್ಧಾರಕ್ಕೆ ಪ್ರತಾಪ್ ಜೈಲಿನ ಬಟ್ಟೆ ತೊಟ್ಟುಕೊಂಡಿದ್ದಾರೆ. ಹಾಗೆಯೇ ನಂತರ ಮಾತನಾಡಿದ ಅವರು ಮನೆಯ ಉಳಿದ ಸ್ಪರ್ಧಿಗಳ ನಿರ್ಧಾರ ನನಗೆ ಸರಿ ಎನಿಸಿಲ್ಲ ಎಂದು ಗಟ್ಟಿಯಾಗಿ ಎಲ್ಲರ ಮುಂದೆ ಹೇಳಿದ್ದಾರೆ. ಮತ್ತು ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇತ್ತು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ” ಎಂದು ಹೇಳಿ ಅವರು ಜೈಲಿನೊಳಗೆ ಹೋಗಿ ಕೂತಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ