ಕಲರ್ಸ್ ಕನ್ನಡ ( Colours Kannada ) ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 10’ ( Big Boss Season 10 ) ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿತ್ತು. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ( Thanisha Kuppanda ) ಎಲಿಮಿನೇಟ್ ( Eliminate ) ಆಗಿದ್ದರು. ಈಗ ನಮ್ರತಾ ಗೌಡ ( Namratha Gowda ) ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಮ್ರತಾ ಗೌಡ ಅವರ ಮನದಾಳದ ಮಾತು :
ಬಿಗ್ ಬಾಸ್ ನ ಮಿಡ್ ವೀಕ್ ನಲ್ಲಿ ( Mid week ) ನಟಿ ನಮ್ರತಾ ಗೌಡ ( Namratha Gowda ) ಎಲಿಮಿನೇಟ್ ಆಗಿದ್ದರು. ಇದಾದ ನಂತರ ಬಿಗ್ ಬಾಸ್ ಮನೆಯ ( Bigg Boss Kannada ) ಜರ್ನಿಯ ಅನುಭವನ್ನು ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಆದ ಪ್ರತಿಯೊಂದು ಕ್ಷಣದ ನೋವು ನಲಿವನ್ನು ಮತ್ತು ಬಿಗ್ ಬಾಸ್ ಮನೆಯಲ್ಲಿ ಕಲಿತ ಪಾಠವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ತುಕಾಲಿ ಸಂತೋಷ್ ( Tukaali Santhosh ) ಫೇಕ್ ( Fake ) ಎಂದ ನಮ್ರತಾ ಗೌಡ :
ಬಿಗ್ ಬಾಸ್ ಮನೆಯಲ್ಲಿ ನನಗೆ ಅಕ್ಷರಶಃ ಫೇಕ್ ಅನಿಸಿದ್ದು ತುಕಾಲಿ ಸಂತೋಷ್ ಅವರು ಎಂದಿದ್ದಾರೆ. ಅದಾದ ನಂತರ ಅವರನ್ನು ಬಿಟ್ಟರೆ ವಾಪಸ್ ಬಿಗ್ ಬಾಸ್ ಮನೆಯೊಳಗೆ ಬಂದಾಗ ಫೇಕ್ ಅನಿಸಿದ್ದು ಸ್ನೇಹಿತ್ ಎಂದರು. ಮೊದಲು ನಾನು ಮನೆಯೊಳಗೆ ಅವರಿಬ್ಬರ ಕಡೆಯಿಂದ ಸಾಕಷ್ಟು ಬೆಂಬಲ ನಿರೀಕ್ಷಿಸಿದ್ದೆ. ಆದರೆ ಅದು ಸುಳ್ಳಾಯಿತು. ನನ್ನನ್ನು ಬಹಳ ಡಿಮೋಟಿವೇಟ್ (demotivate) ಮಾಡಿದ್ದು ಎಂದರೆ ಸ್ನೇಹಿತ್. ಇಡೀ ಮನೆಯಲ್ಲಿ ನಾನು ತುಂಬ ಜೆನ್ಯೂನ್ ( Jenune ) ಆಗಿದ್ದೆ. ಹಾರ್ಟ್‌ಫುಲಿ ಜೆನ್ಯೂನ್ ಆಗಿದ್ದೆ ಎಂದು ನಮ್ರತಾ ಅವರು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 10 ನ ವಿನ್ನರ್ ( Big Boss Season 10 Winner ) ಯಾರಗಬಹುದು ಎಂದ ನಮ್ರತಾ ಗೌಡ :
ನಾನು ಬಿಗ್ ಬಾಸ್ ಮನೆಯೊಳಗೆ ಬಹಳ ಜೇನ್ಯುನ್ ಆಗಿದ್ದೆ. ನಾನು ಯಾರ ಜೊತೆ ಆದರೂ ಜಗಳ ಆಡಿದರೆ, ಮುನಿಸಿಕೊಂಡರೆ ಮತ್ತೆ ಅವರ ಜೊತೆ ಹಳೆದ್ದನ್ನೆಲ್ಲ ಬಿಟ್ಟು ಮತ್ತೆ ಹೃದಯದಿಂದ ಖುಷಿ ಖುಷಿಯಿಂದ ಮಾಡ್ತಿದ್ದೆ. ನನ್ನ ಬಿಟ್ರೆ ನನಗೆ ಬಹಳ ಉತ್ತಮ ಎನಿಸಿದ್ದು ವಿನಯ್ ( Vinay ) ಯಾಕೆಂದರೆ ಅವರಲ್ಲಿ ನನಗೆ ಯಾವತ್ತೂ ಕಲ್ಮಶ ಕಾಣಿಸಲಿಲ್ಲ ಹಾಗೆಯೇ ಸಂಗೀತ ಕೂಡ. ಅವರನ್ನು ನಾನು ತುಂಬ ತಪ್ಪು ತಿಳ್ಕೊಂಡಿದ್ದೆ. ಆದರೆ ಅವರು ಅವರಿಗೆ ಏನನಿಸುತ್ತದೋ ಅದನ್ನೇ ಮಾತಾಡ್ತಾರೆ. ಅವರಿಗೆ ಇಷ್ಟ ಬಂದಂತೆ ಇರುತ್ತಾರೆ. ಅವರೂ ಕೂಡ ನನಗೆ ಜೆನ್ಯೂನ್ ಅನಿಸಿದ್ರು. ಈ ಸೀಸನ್ ನ ಟಾಪ್ 3 ನಲ್ಲಿ ( Top 3 ) ವಿನಯ್, ಸಂಗೀತಾ ಮತ್ತು ತುಕಾಲಿ ಇರ್ತಾರೆ. ನನಗೆ ವಿನಯ್ ವಿನ್ ಆಗ್ಬೇಕು ಅಂತ ಇದೆ. ಆದರೆ ಯಾಕೋ ನನ್ನ ಸಿಕ್ಸ್ತ್ ಸೆನ್ಸ್ ( Sixth Sense ) ಹೇಳ್ತಿದೆ ಸಂಗೀತಾ ವಿನ್ ಆಗ್ತಾರೆ ಎಂದರು.
ಬಿಗ್ ಬಾಸ್ ಮನೆಯಲ್ಲಿ ಮೈಕಲ್ ( Machel ) ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದ ನಮ್ರತಾ :
ನನಗೆ ಬಿಗ್ ಬಾಸ್ ಮನೆಯಲ್ಲಿ ಬಹಳ ಮೆಮೊರಿ ಇದೆ ( Missing Big Boss memories ). ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರ ನಾನು ಇಲ್ಲಿತನಕ ಮನೆಯೊಳಗೆ ನಡೆದ ಪ್ರತಿಯೊಂದು ಕ್ಷಣವನ್ನು ಕೂಡ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗೆಯೇ ಬಿಗ್‌ಬಾಸ್ ಮನೆಯಲ್ಲಿ ನಾನು ತುಂಬ ಮಿಸ್ ಮಾಡ್ಕೊಳ್ಳೋದು ಎಂದರೆ ಅದು ಮೈಕಲ್. ಅವರು ಮಸಲ್ ಮೆಮರಿ ( muscle ) ಅಚ್ಚುಳಿದಿದ್ದಾರೆ. ಅವರ ಜೊತೆ ಮನೆಯೊಳಗಿನ ಒಡನಾಟವನ್ನು ನಾನು ಈಗಲೂ ಕೂಡ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗೂ ಬಹಳ ಮುಖ್ಯವಾಗಿ ಬಿಗ್‌ಬಾಸ್ ವಾಯ್ಸ್ ಬಹಳ ಮಿಸ್ ಮಾಡ್ಕೋತೀನಿ ( Missing Big Boss Voice ). ಹೀಗೆ ಬಿಗ್ ಬಾಸ್ ಮನೆಯಲ್ಲಿ ಒಂದೊಂದು ಮೂಲೆಯಲ್ಲಿ ಒಂದೊಂದು ಮೆಮರಿ ಇದೆ. ಅದನ್ನು ಕೇಳಿದ್ರೆ ಹೇಳೋಕೆ ಕಷ್ಟವಾಗತ್ತೆ ಎಂದರು.
ಜಿಯೊ ಸಿನಿಮಾ ಫನ್ ಫ್ರೈಡೆ ( Jio Cinema Fun Friday ) ನನಗೆ ಖುಷಿ ಕೊಟ್ಟಿದೆ :
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಜಿಯೊ ಸಿನಿಮಾ ಫನ್ ಫ್ರೈಡೆಯ ಎಲ್ಲ ಟಾಸ್ಕ್‌ಗಳನ್ನೂ ( Task ) ನಾನು ಎಂಜಾಯ್ ಮಾಡಿದ್ದೇನೆ. ಅದರಲ್ಲಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಲೂನ್ ಒಡೆಯುವ ಟಾಸ್ಕ್ ಅನ್ನು ನಾನು ಸಖತ್ ಎಂಜಾಯ್ ಮಾಡಿದ್ದೇನೆ ಎಂದರು.
ಬಿಗ್ ಬಾಸ್ ಗೆ ನನ್ನ ಧನ್ಯವಾದಗಳು ( Thanks for Big Boss ) :
ನಾನು ಕೊನೆದಾಗಿ ಬಿಗ್‌ಬಾಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಯಾಕೆಂದರೆ, ‘ಬಿಗ್‌ಬಾಸ್ ನಿಮ್ಮ ಧ್ವನಿ ನನಗೆ ತುಂಬಾ ಇಷ್ಟ ಆಗಿದೆ. ಆ ಒಂದು ಧ್ವನಿಗೆ ಫಿದಾ ಆಗಿದ್ದೀನಿ. ನೀವು ಹೇಗಿದ್ದೀರಾ ಎಂದು ನೋಡ್ಬೇಕು. ನನ್ನನ್ನು ನಾನು ಪ್ರೀತಿಸಲು ಶುರುಮಾಡಿದ್ದೀನಿ. ನೀವು ಕೊಟ್ಟ ಎಲ್ಲ ಸಿಚುವೇಷನ್ ನ (situation)ಪಾಠಗಳು ನನ್ನನ್ನು ಗಟ್ಟಿಗೊಳಿಸಿವೆ. ಇಲ್ಲಿ ಇಷ್ಟೊಂದು ಫೇಸ್ ಮಾಡಿದವಳು ಹೊರಗಡೆ ಏನು ಬೇಕಾದ್ರೂ ಫೇಸ್ ಮಾಡೋಕೆ ರೆಡಿ ಇದ್ದೀನಿ. ಥ್ಯಾಂಕ್ಯೂ ಸೋ ಮಚ್ ಬಿಗ್‌ಬಾಸ್ ( Thank you so much big boss ) ಎಂದರು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಬಿಗ್ ಬಾಸ್ ಮನೆಯಿಂದ ತನಿಷಾ ಕುಪ್ಪಂಡ ಔಟ್! ವಾರದ ಮಿಡ್ ಎಲಿಮಿನೇಷನ್
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- ಬಿಗ್ ಬಾಸ್ ಮನೆಯ ಶನಿ ಸಂಗೀತ ಎಂದ ಕಾರ್ತಿಕ್, ಆದ್ರೆ ಕಿಚ್ಚ ಮುಂದೆ ನೋ ಬೋರ್ಡ್!
- ತಾರಕಕ್ಕೇರಿದ ಡ್ರೋನ್ & ವಿನಯ್ ಜಗಳ, ಮತ್ತೇ ಟಾರ್ಗೆಟ್ ಆದ್ನಾ ಪ್ರತಾಪ್..?
- BBK 10 – ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಔಟ್ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.