ಬಿಗ್ ಬಾಸ್ ಸೀಸನ್ 10(BigBoss season 10) ಶುರುವಾಗಿ ಒಂದು ವಾರ ಮುಗಿದಿದೆ. ಮೊದಲ ವಾರವೇ ಸ್ನೇಕ್ ಶ್ಯಾಮ್ ಅವರು ಎಲಿಮಿನೇಟ್ ( Elimination) ಆದ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಟ ಬಹಳ ಚುರುಕಾಗಿದೆ. ಎರಡನೇ ವಾರದಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿ ಸ್ನೇಹ ಮರೆಯಾಗುತ್ತಿದೆ. ಇನ್ನು ಈ ಹೊತ್ತಿನಲ್ಲೇ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಎಲ್ಲರ ಮನಸಲ್ಲೂ ವೈಮನಸ್ಸನ್ನು ಉಂಟು ಮಾಡಿದೆ.ಈ ನಾಮಿನೇಷನ್ ಪ್ರಕ್ರಿಯೆ ಯಾವಾಗ ನೆಡೆಯಿತು ಎನ್ನಲಾ ಆಗಿದೆ ಎಂದು ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಬೆಳಗ್ಗೆ ಎದ್ದ ತಕ್ಷಣ ನಾಮಿನೇಷನ್ ಶುರು :
ಬೇರೆ ಸೀಸನ್ ಗಳಲ್ಲಿ ಯಾರಿಗೂ ತಿಳಿಯದಂತೆ ಕನ್ಫೆಷನ್ ರೂಮ್ನಲ್ಲಿ ನೆಡೆಯುತ್ತಿದ್ದ ನಾಮಿನೇಟ್ ಪ್ರಕ್ರಿಯೆ, ಈ ಸೀಸನ್ನಲ್ಲಿ ಆರಂಭದಲ್ಲೇ ನೇರಾನೇರವಾಗಿ ನಾಮಿನೇಟ್ ಮಾಡಲು ಬಿಗ್ ಬಾಸ್ ಸೂಚಿಸಿದ್ದಾರೆ. ಸೋಮವಾರ (ಅಕ್ಟೋಬರ್ 16) ಬೆಳಗ್ಗೆ ಸ್ಪರ್ಧಿಗಳು ಕಣ್ಣು ಬಿಡುವುದಕ್ಕೂ ಮುನ್ನವೇ ಸಾಂಗ್ ಗೆ ಬದಲಾಗಿ(wake up song )ನಾಮಿನೇಟ್ ( Nomination) ಆದೇಶ ಬಂದಿದೆ. ಅನಿವಾರ್ಯವಾಗಿ ಎಲ್ಲರೂ ತಾವು ಇದ್ದ ಜಾಗದಲ್ಲೇ ಒಬ್ಬೊಬ್ಬರ ಹೆಸರು ಸೂಚಿಸಲೇಬೇಕಾಗಿತ್ತು.
ಇದರಿಂದಾಗಿ ದೊಡ್ಮನೆಯ ಸದಸ್ಯರ ನಡುವೆ ಕಿತ್ತಾಟ ಶುರುವಾಗಿದೆ. ಒಬ್ಬರು ಮತ್ತೊಬ್ಬರ ನಡುವೆ ಮಾತಿನ ಚಕಮಕಿ ನೆಡೆದು ಜಗಳಕ್ಕೆ ಎಡೆ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಎರಡನೇ ವಾರದ ಆರಂಭದಲ್ಲೇ ಮನಸ್ತಾಪಕ್ಕೆ ದಾರಿಮಾಡಿಕೊಟ್ಟಂತೆ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರ ಎರಡನೇ ವಾರದ ಮೊದಲ ದಿನವೇ ಸ್ಪರ್ಧಿಗಳಿಗೆ ಈ ನಾಮಿನೇಷಮ್ ಅಚ್ಚರಿ ಕಾದಿತ್ತು. ಸ್ನೇಕ್ ಶ್ಯಾಮ್ ಬಿಗ್‌ಬಾಸ್ ಮನೆಯಿಂದ ಹೊರ ಬಿದ್ದ ಮರುದಿನವೇ ಸ್ಪರ್ಧಿಗಳು ಕಣ್ಣು ಬಿಡುವ ಮೊದಲೇ ಬಿಗ್ ಬಾಸ್ ಧ್ವನಿ ಎಲ್ಲರನ್ನು ಶಾಕ್ ಆಗುವಂತೆ ಮಾಡಿತ್ತು. ಇದೀಗ ಮನೆಯಲ್ಲಿ 16 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ವೀಕೆಂಡ್ ಎಪಿಸೋಡ್ ಮುಗಿಸಿ ಸೋಮವಾರ ಸ್ಪರ್ಧಿಗಳು ಏಳುತ್ತಿದ್ದಂತೆ ಈ ನಾಮಿನೇಷನ್ ಶಾಕ್ ಕಾದಿತ್ತು.
ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆದ ಸ್ಪರ್ಧಿಗಳಲ್ಲಿ ಎರೆಡನೇ ವಾರ ಯಾರು ಮನೆ ಇಂದ ಹೊರ ಬೀಳುತ್ತಾರೆ,ಯಾರು ಸೇವ್ ಆಗಿ ಮನೆಯಲ್ಲೇ ಉಳಿಯುತ್ತಾರೆ,ಅದು ಅವರ ಆಟ ಹಾಗೂ ಜನರ ಮೇಲೆ ನಿಂತಿದೆ. ಹಾಗೂ ಎರೆಡನೇ ವಾರದ ಎಲಿಮಿನೇಷನ್ ನೋಡಲು ಭಾನುವಾರದ ಕಿಚ್ಚನ ಪಂಚಾಯಿತಿವರೆಗೂ ಕಾದು ನೋಡಬೇಕಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: BSNL Offers : ಕೇವಲ 99 ರೂ.ಗೆ ಹೊಸ ಭರ್ಜರಿ ಆಫರ್ ಘೋಷಣೆ ಮಾಡಿದ BSNL
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ