ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss season 10 ) ಇದೀಗ ಎಲ್ಲರ ಮನೆ ಮಾತಾಗಿದೆ. ಹೌದು ಬಿಗ್ ಬಾಸ್ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದ ದೊಡ್ಡ ರಿಯಾಲಿಟಿ ಶೋ ಆಗಿದೆ. ಹಾಗೆಯೇ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್ , ಜಗಳ , ಸ್ನೇಹ ( Task , Fight , Friendship ) ಇದೆಲ್ಲವನ್ನು ವೀಕ್ಷಕರು ಗಮನಿಸುತ್ತಾರೆ. ಹಾಗೆಯೇ ಇಂದು ಅವುಗಳ ಬಗ್ಗೆ ಸೋಶಿಯಲ್ ಮೀಡಿಯಾ ( Social media ) ಗಳಲ್ಲಿ ಕಾಮೆಂಟ್ ( Comment ) ಮತ್ತು ಅಭಿಪ್ರಾಯಗಳು ಹರಿದಾಡುತ್ತಿವೆ. ಅದರಲ್ಲಿ ಈಗ ಮತ್ತೋಂದು ವಿಚಾರ ಕೇಳಿ ಬರುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸಂಗೀತ ಅವರು ಲಾಭಕ್ಕಾಗಿ ಸ್ನೇಹವನ್ನು ಬಳಸುತ್ತಿದ್ದಾರೆ ಎಂಬುವುದು ನೆಟ್ಟಿಗರ ಅಭಿಪ್ರಾಯ :
ಇದೀಗ ಸಂಗೀತಾ ( Sangeetha ) ತುಂಬಾ ಸ್ವಾರ್ಥಿ ಆಗಿದ್ದಾರೆ. ಅವರು ಕಾರ್ತಿಕ್ ಕಡೆಯಿಂದ ತುಂಬಾ ನಿರೀಕ್ಷೆ ಮಾಡ್ತಿದ್ದಾರೆ ಎಂಬುವುದು ವೀಕ್ಷಕರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲದೆ ಫ್ರೆಂಡ್‌ಶಿಪ್ ಹೆಸರಿನಲ್ಲಿ ಸಂಗೀತಾ ಲಾಭವನ್ನ ನಿರೀಕ್ಷೆ ಮಾಡ್ತಿದ್ದಾರೆ. ಲಾಭಕ್ಕಾಗಿ ಸ್ನೇಹ ಬಳಸುವುದು ಸರಿಯಲ್ಲ ಅಂತ ವೀಕ್ಷಕರ ಅಭಿಪ್ರಾಯವಾಗಿದೆ.
ಹೌದು, ಬಿಗ್ ಬಾಸ್ ಮನೆಯೊಳಗೆ ಆರಂಭದಿಂದಲೂ ಕಾರ್ತಿಕ್, ತನಿಷಾ, ಸಂಗೀತಾ ಕ್ಲೋಸ್ ಆಗಿದ್ದಾರೆ. ಮೂವರ ಮಧ್ಯೆ ಸ್ನೇಹ ಇತ್ತು. ಆದರೆ ಟಾಸ್ಕ್ ಗಳ ವಿಚಾರಕ್ಕೆ ಮತ್ತು ಜಗಳಗಳಿಂದ ಆ ಸ್ನೇಹದಲ್ಲಿ ಇದೀಗ ಬಿರುಕು ಮೂಡಿದೆ. ಮೊದಲು ಟಾಸ್ಕ್ ವೇಳೆ ಸಂಗೀತಾರಿಂದ ಕಾರ್ತಿಕ್ ಇನ್‌ಫ್ಲುಯೆನ್ಸ್ ( Influence ) ಆಗ್ತಿದ್ದಾರೆ ಎಂಬ ಆರೋಪ ಕೇಳಿಬಂತು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಕಾರ್ತಿಕ್ ತಮ್ಮ ಸ್ವಂತ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಮತ್ತೆ ಅದೇ ‘ಇನ್‌ಫ್ಲುಯೆನ್ಸ್’ ಆರೋಪ ಬರಬಾರದು ಎಂಬ ಕಾರಣಕ್ಕೆ ನಾಮಿನೇಷನ್, ಕಳಪೆ ಅಥವಾ ಇನ್ಯಾವುದೇ ಮುಖ್ಯ ನಿರ್ಧಾರಗಳನ್ನ ತೆಗೆದುಕೊಳ್ಳುವ ಪರಿಸ್ಥಿತಿ ಬಂದಾಗ ಕಾರ್ತಿಕ್ ‘ಫ್ರೆಂಡ್‌ಶಿಪ್’ನ ನೋಡುತ್ತಿರಲಿಲ್ಲ. ಸಂಗೀತಾರನ್ನ ಪರಿಗಣಿಸುತ್ತಿಲ್ಲ. ಸರಿನೋ.. ತಪ್ಪೋ.. ತಮಗೆ ಅನಿಸಿದ್ದನ್ನ, ಸರಿ ಎನಿಸಿದ್ದನ್ನ ಕಾರ್ತಿಕ್ ( Karthik ) ಮಾಡುತ್ತಾ ಬಂದಿದ್ದಾರೆ.
ಇದು ಒಂದು ವಿಚಾರ ಸಂಗೀತಾಗೆ ಬೇಸರ ಮೂಡಿಸಿದೆ. ಇಂತಹ ವಿಚಾರಗಳಿಗೆ ಸಂಗೀತಾ ಪದೇ ಪದೇ ಕೋಪ ಮತ್ತು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಕಾರ್ತಿಕ್‌ಗೆ ನಾಮಿನೇಷನ್ ಪಾಸ್ ಸಿಕ್ಕಾಗ.. ಸಂಗೀತಾಗೆ ಕೊಡಲಿಲ್ಲ. ಬದಲಾಗಿ ಮೈಕಲ್‌ಗೆ ( Maical ) ನೀಡಿದರು. ಆಗಲೂ ಸಂಗೀತಾ ಸಿಟ್ಟು ಮಾಡಿಕೊಂಡಿದ್ದರು. ಮನೆಯ ರಾಜ ಯಾರು, ರಾಣಿ ಯಾರು ಅಂತ ನಿರ್ಧರಿಸುವ ಚಟುವಟಿಕೆಯಲ್ಲೂ ಸಂಗೀತಾ ಹೆಸರನ್ನ ಕಾರ್ತಿಕ್ ಹೇಳಲಿಲ್ಲ. ಇದೂ ಸಂಗೀತಾ ರವರಿಗೆ ಬೇಸರ ಮೂಡಿಸಲು ಕಾರಣ ವಾಗಿದೆ.
ಹೀಗಾಗಿ ತಮ್ಮ ಅಭಿಪ್ರಾಯ ( Opinion ) ಹಂಚಿಕೊಂಡ ವೀಕ್ಷಕರು ವಿನಯ್ ಥರ ಶತ್ರು ಇದ್ದರೂ ಪರ್ವಾಗಿಲ್ಲ. ಆದರೆ, ಸಂಗೀತಾ ಥರ ಫ್ರೆಂಡ್ ಬೇಡ ಅಂತ ಕಟುವಾಗಿ ಟೀಕೆ ಮಾಡುತ್ತಿದ್ದಾರೆ ವೀಕ್ಷಕರು. ಪದೇ ಪದೇ ಸ್ನೇಹಿತರ ಮೇಲೆ ಸಂಗೀತಾ ಅಪ್‌ಸೆಟ್ ಆಗ್ತಿರೋದನ್ನ ಕಂಡ ವೀಕ್ಷಕರು ಇಂತಹ ಲೆಕ್ಕಾಚಾರದ ಫ್ರೆಂಡ್ ನಮಗೆ ಬೇಡ’’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ