ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನಲ್ಲಿ ಬಹುದೊಡ್ಡ ಗಂಧರ್ವರು ಹಾಗೂ ರಾಕ್ಷಸರ ಆಟವು ಕ್ಷಣಕ್ಷಣಕ್ಕೆ ರೋಚಕತೆಯನ್ನು ಮೂಡಿಸುತ್ತಿದೆ. ಈಗಾಗಲೇ ರಾಕ್ಷಸರು ಗಂಧರ್ವರಾಗಿದ್ದಾರೆ ಹಾಗೂ ಗಂಧರ್ವರು ರಾಕ್ಷಸಕರಾಗಿದ್ದಾರೆ. ದಿನ 60 ರಂದು ಬೆಳಗ್ಗೆ ಎದ್ದ ಕೂಡಲೇ ಗಂಧರ್ವರ ಗುಂಪಿನಲ್ಲಿರುವ ಸಂಗೀತ ರವರಿಗೆ ಒಂದು ಉಪಾಯ ಹೊಳೆದಿದೆ. ಇದು ಆಟದ ರೀತಿಯನ್ನೇ ಬದಲಾಯಿಸುವ ಎಲ್ಲಾ ಸಾಧ್ಯತೆಗಳು ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಾಕ್ಷಸರ ಆದೇಶವನ್ನು ಪಾಲಿಸಬೇಕಾಗಿಲ್ಲ ಎಂದ ಸಂಗೀತ :
ಸಂಗೀತ ಅವರು ಎದ್ದ ಕೂಡಲೇ ವಿನಯವರತ್ತ ಮಾತನಾಡುತ್ತ ನಾವು ರಾಕ್ಷಸರ ಮಾತನ್ನು ಅಥವಾ ಆದೇಶವನ್ನು ಕೇಳಬೇಕೆಂದಿಲ್ಲ. ಬಿಗ್ ಬಾಸ್ ಎಲ್ಲಿಯೂ ಕೂಡ ಇದನ್ನು ಮೆನ್ಷನ್ ಮಾಡಿಲ್ಲ. ಹಾಗಾಗಿ ನಾವು ಅವರ ಆದೇಶವನ್ನು ವಿರೋಧಿಸಬೇಕು ಎಂದು ಕಾರ್ತಿಕ್ ಅವರೊಂದಿಗೆ ಹೇಳಿದರು. ಮೊದಲಿಗೆ ಕಾರ್ತಿಕ್ ಅವರು ಅದನ್ನು ಒಪ್ಪಲಿಲ್ಲ ಸುಮ್ಮನೆ ಏಕೆ ತೊಂದರೆ ಹೀಗೆ ಮಾಡುವಂತಿಲ್ಲ ಎಂದು ಹೇಳಿದರು. ನಂತರ ಬಿಗ್ ಬಾಸ್ ನೀಡಿದ ನಿಯಮವನ್ನು ಸಂಗೀತ ಹಾಗೂ ಸ್ನೇಹಿತ ಅವರು ಓದಿದರು. ಅದರಲ್ಲಿ ರಾಕ್ಷಸರ ಬೇಡಿಕೆಗಳನ್ನು ಈಡೇರಿಸಬೇಕು ಎಂದಿತ್ತು, ಅದಕ್ಕೆ ಸಂಗೀತರವರು ಅವರು ಬೇಡಿಕೊಂಡರೆ ನಾವು ಮಾಡುತ್ತೇವೆ ಆದರೆ ಆದೇಶ ನೀಡಿದರೆ, ನಾವು ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳಿದರು.
ಸಂಗೀತ ಅವರು ಕಾರ್ತಿಕ್ ಒಂದಿಗೆ ಮಾತನಾಡುತ್ತ ನಾವು ಇಗೋ ಹರ್ಟ್ ಮಾಡಿಕೊಂಡು ಅವರ ಕೆಲಸವನ್ನು ಮಾಡಬೇಕಾಗಿಲ್ಲ ಎಂದು ಹೇಳಿದಾಗ ಕಾರ್ತಿಕ್ ಅವರು ಕೂಡ ಒಪ್ಪಿಕೊಂಡರು, ಅಷ್ಟೇ ಅಲ್ಲದೆ ಸಂಗೀತ ಅವರು ತನ್ನ ಗುಂಪಿನ ಎಲ್ಲರಲ್ಲಿಯೂ ಮಾತನಾಡಿ ರಾಕ್ಷಸರ ಮಾತನ್ನು ಕೇಳಬೇಕಾಗಿಲ್ಲ ಎಂದು ಮನವಲಿಸಿದರು. ಹಾಗಾಗಿ ಸಂಗೀತ ಅವರು ತಮ್ಮ ಕಾರ್ಯವನ್ನು ತಾವು ಮಾಡುತ್ತಿದ್ದರು. ಆಗ ನಮ್ರತಾ ಹೇಳಿದ ಆದೇಶವನ್ನು ಕೂಡ ಕೇಳಲಿಲ್ಲ. ಹಾಗಾಗಿ ನಮ್ರತಾ ಹಾಗೂ ಸಂಗೀತನ ನಡುವೆ ದೊಡ್ಡ ಮಾತುಕತೆಯೇ ನಡೆಯಿತು. ಅಷ್ಟೇ ಅಲ್ಲದೆ ಗಂಧರ್ವರು ಹಾಗೂ ರಾಕ್ಷಸರ ಕಿತ್ತಾಟದಿಂದಾಗಿ ಬಿಗ್ ಬಾಸ್ ಮನೆಯಲ್ಲಿದ್ದ ಸ್ವಲ್ಪ ಅಕ್ಕಿಯೂ ಕೂಡ ನೆಲಕ್ಕೆ ಬಿದ್ದಿದೆ .
ಕಾರ್ತಿಕ್ ಮುಖಕ್ಕೆ ಚಪಾತಿ ಹಿಟ್ಟಿನಿಂದ ಹೊಡೆದ ವಿನಯ್
ಸಂಗೀತ ಅವರು ರಾಕ್ಷಸರು ಹೇಳಿದ ಯಾವ ಕೆಲಸವನ್ನು ಕೂಡ ಮಾಡುತ್ತಿರಲಿಲ್ಲ, ಕಾರ್ತಿಕ್ ಅವರು ನಿಧಾನವಾಗಿ ಮಾಡುತ್ತಿದ್ದರು, ಆದರೆ ಎಲ್ಲಾ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ವಿನಯವರು ಚಪಾತಿ ಹಿಟ್ಟಿನ ತೆಗೆದುಕೊಂಡು ಜೋರಾಗಿ ಕಾರ್ತಿಕ್ ಅವರ ಮೇಲೆ ಹೊಡೆದರು. ಅದನ್ನು ಸಹಿಸಿಕೊಳ್ಳದ ಕಾರ್ತಿಕ್, ಸ್ನೇಹಿತ್ ಅವರೊಂದಿಗೆ ವಿನಯವರು ದೈಹಿಕವಾಗಿ ದೌರ್ಜನ್ಯವನ್ನು ಮಾಡುತ್ತಿದ್ದಾರೆ ಎಂದು ಆರೋಪವನ್ನು ಮಾಡಿದರು. ಅಷ್ಟೇ ಅಲ್ಲದೆ ನಮ್ರತಾ ಅವರು ನೀರಿಗೆ ತಳ್ಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ