ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (season 10) ಇನ್ನೇನು ನಾಲ್ಕು ದಿನಗಳಲ್ಲಿ ಮುಗಿಯಲಿದೆ. ಮನೆಯಲ್ಲಿ ಎಲ್ಲರೂ ತಮ್ಮ ತಪ್ಪುಗಳನ್ನು ಅರಿತುಕೊಂಡು, ಅವುಗಳನ್ನೆಲ್ಲ ಒಪ್ಪಿಕೊಂಡು, ಒಬ್ಬರನ್ನು ಒಬ್ಬರು ಕ್ಷಮಿಸುತ್ತಾ ಸಂತೋಷದಿಂದ ದಿನಗಳನ್ನು ಕಳುಹಿಸಿದ್ದಾರೆ. ಇಂತಹ ಸಮಯದಲ್ಲಿ ಬಿಗ್ ಬಾಸ್ ಮನೆಯ ಆಟಗಾರರಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದರು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಲಾಗುತ್ತದೆ. ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಿಡ್ ವೀಕ್ ಎಲಿಮಿನೇಷನ್ ಏನಾಯ್ತು ಗೊತ್ತಾ!?
ಬಿಗ್ ಬಾಸ್ ಮನೆಯಲ್ಲಿ ವೇಕಪ್ ಸಾಂಗ್ ಹಾಕಿದ ನಂತರ, ಮನೆಯ ಎಲ್ಲರನ್ನು ಗಾರ್ಡನ್ ಏರಿಯಕ್ಕೆ ಕರೆದು, ಬಿಗ್ ಬಾಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರೇಕ್ಷಕರ ಕೋರ್ಟಿನ ಬದಲಾಗಿ ಮನೆಯವರ ವೋಟನ್ನು ಪರಿಗಣಿಸಿ ಎಲಿಮಿನೇಷನ್(elimination) ಅನ್ನು ಮಾಡಲಾಗುವುದು ಎಂದು ಹೇಳಿದರು. ನಂತರ ಮನೆಯವರೆಲ್ಲ ಒಬ್ಬೊಬ್ಬರ ಹೆಸರನ್ನು ಕೇಳಿದ ಹೋದರು. ಮೊದಲಿಗೆ ತುಕಾಲಿ ಹೇಳೋದು ಪ್ರತಾಪ್ ಅವರ ಹೆಸರನ್ನು ತೆಗೆದುಕೊಂಡರು. ಪ್ರತಾಪ್(Drone Prathap) ಅವರು ಈ ಎರಡು ವಾರದಲ್ಲಿ ಆಟ ಆಡುತ್ತಿರುವ ಹಾಗೆ ಮೊದಲಿನಿಂದ ಆಟ ಮಾಡಿದ್ದರೆ ನಾನು ಅವರ ಹೆಸರನ್ನು ತೆಗೆದುಕೊಳ್ಳುತ್ತಿರಲಿಲ್ಲ ಆದರೆ ಮೊದಲಿನಿಂದ ಅವರು ಏನು ಆಟ ಆಡಿಲ್ಲ ಎಂದು ತುಕಾಲಿಯವರು ಕಾರಣವನ್ನು ನೀಡಿದರು. ನಂತರ ವರ್ತೂರ್ ಸಂತೋಷ್ ಅವರು ಕಾರ್ತಿಕ್ ಎಲಿಮಿನೇಟ್ ಆಗಬೇಕು ಎಂದು ಹೇಳಿದರು. ಸಂಗೀತ ಅವರು ಕೂಡ ಕಾರ್ತಿಕ್ ಹೆಸರನ್ನು ಹೇಳುತ್ತಾ, ಅವರು ಮನೆಯಲ್ಲಿ ಇರಲು ಅರ್ಹವಿಲ್ಲ ಎಂದು ಹೇಳಿದರು. ನಂತರ ವಿನಯ್(vinay gowda) ಅವರು ಪ್ರತಾಪ್ ಅವರ ಹೆಸರನ್ನು ತೆಗೆದುಕೊಂಡರು. ಪ್ರತಾಪ್ ಅವರು ಕೂಡ ವಿನಯ್ ಅವರ ಹೆಸರನ್ನು ತೆಗೆದುಕೊಂಡು, ಅವರು ಮನೆಯಲ್ಲಿ ಆಡಿದ ಮಾತುಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಅವರು ಮನೆಯಲ್ಲಿ ಇರಲು ಅರ್ಹವಿಲ್ಲ ಎಂದು ಕಾರಣವನ್ನು ನೀಡಿದರು.
ಬಿಗ್ ಬಾಸ್ ತನ್ನ ತೀರ್ಮಾನವನ್ನು ಹೇಳುವುದಕ್ಕಿಂತ ಮುಂಚೆಯೇ ಮೂರು ವೋಟುಗಳು ಪ್ರತಾಪ್ ಅವರಿಗೆ ಬಂದಿದ್ದರಿಂದ ಸಂಗೀತ ಹಾಗೂ ಪ್ರತಾಪ್ ಅವರ ಕಣ್ಣಿನಲ್ಲಿ ನೀರು ಬರಲು ಪ್ರಾರಂಭವಾಗಿದ್ದವು. ಮೂರು ವೋಟುಗಳು ಪ್ರತಾಪ್ ಅವರಿಗೆ, ಒಂದು ವೋಟು ವಿನಯ್ಗೆ, ಎರಡು ವೋಟು ಕಾರ್ತಿಕ್ ಅವರಿಗೆ ಬಂದಿದ್ದವು. ಪ್ರತಾಪ್ ಅವರು ಕೂಡ ಕಾರ್ತಿಕ್ ಅವರಿಗೆ ವೋಟನ್ನು ಹಾಕಿದ್ದರೆ ಡ್ರಾ ಆಗುವ ಸಾಧ್ಯತೆ ಇತ್ತು. ಆದರೆ ಹಾಗಾಗಲಿಲ್ಲ. ಬಿಗ್ ಬಾಸ್, ಡ್ರೋನ್ ಪ್ರತಾಪ್ ಅವರು ಈ ಕೂಡಲೇ ಮನೆಯಿಂದ ಹೊರಗೆ ನಡೆಯಬೇಕು, ಮನೆಯವರು ಕಪ್ಪುಗೆರೆಯನ್ನು ದಾಟಿ ಮುಂದೆ ಬರುವಂತಿಲ್ಲ ಎಂದು ತನ್ನ ತೀರ್ಮಾನವನ್ನು ಹೇಳಿದರು. ಸಂಗೀತಾ ಅವರು ಜೋರಾಗಿ ಅಳುತ್ತಾ ಪ್ರತಾಪ್ ಹೋಗಬೇಡ ಎಂದು ಕೆಳಗೆ ಕೂತುಬಿಟ್ಟರು.
ಈ ಸೀಸನ್ ನಲ್ಲಿ ಫೈನಲ್ ವಾರಕ್ಕೆ 6 ಜನ :
ಇನ್ನೇನು ಪ್ರತಾಪ್ ಮನೆಯಿಂದ ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಬಿಗ್ ಬಾಸ್, ಮೇಟಿನ ಮೇಲೆ ನೀಡಲಾಗಿದ್ದ ಲಕೋಟೆಯನ್ನು ಓದುವಂತೆ ಹೇಳಿದರು. ಅದನ್ನು ಓದಿ ಪ್ರತಾಪ್ ಅವರು ನಗುನಗುತ್ತಾ ಅಲ್ಲಿಯೇ ಕುಳಿತು ಬಿಟ್ಟರು. ಆ ಪತ್ರದಲ್ಲಿ ಮಿಡ್ ನೈಟ್ ಎಲಿಮಿನೇಷನ್(mid night eviction) ಇಲ್ಲ ಎಂದು ಬರೆದಿತ್ತು. ಈ ಸಂಚಿಕೆಯಲ್ಲಿ ಫೈನಲ್ ವಾರಕ್ಕೆ 6 ಜನರು ಇರುತ್ತಾರೆ. ಮಿಡ್ ನೈಟ್ ಅಥವಾ ಮಿಡ್ ವೀಕ್(mid week) ಎಲಿಮಿನೇಷನ್ ಇರುವುದಿಲ್ಲ. ಹಾಗಾಗಿ ಮೊದಲ ಬಾರಿಗೆ ಬಿಗ್ ಬಾಸ್ ನಲ್ಲಿ ಮಿಡ್ ನೈಟ್ ಎಲಿಮಿನೇಷನ್ ಕ್ಯಾನ್ಸಲ್ ಆಗಿದೆ ಎಂದು ಹೇಳಬಹುದು. ಪ್ರತಾಪ್ ಅವರಿಗೆ ತುಂಬಾ ಖುಷಿಯಾಗಿದೆ. ಸಂತೋಷದಿಂದ ಬಿಗ್ ಬಾಸ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಅಷ್ಟೇ ಅಲ್ಲದೆ ಇಂದಿನ ಸಂಚಿಕೆಯಲ್ಲಿ ರೇಡಿಯೋ RJ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಕೊನೆಯಲ್ಲಿ ವಾಲ್ ಆಫ್ ಮೆಮೊರಿ ಇವೆಂಟನ್ನು ನಡೆಸಲಾಯಿತು. ಅದರಲ್ಲಿ ಎಲ್ಲರ ಫೋಟೋಗಳನ್ನು ಗೋಡೆಯ ಮೇಲೆ ಅಂಟಿಸಿ ಹಳೆಯ ನೆನಪುಗಳನ್ನು ಬಿಗ್ ಬಾಸ್ ಸ್ಪರ್ಧೆಗಳಲ್ಲಿ ಮರುಕಳಿಸಿದರು. ಮುಂದಿನ ದಿನ ಹೇಗಿರುತ್ತದೆ ಎಂದು ಕಾದು ನೋಡಬೇಕಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಬಿಗ್ ಬಾಸ್ ಮನೆಯಿಂದ ತನಿಷಾ ಕುಪ್ಪಂಡ ಔಟ್! ವಾರದ ಮಿಡ್ ಎಲಿಮಿನೇಷನ್
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- ಬಿಗ್ ಬಾಸ್ ಮನೆಯ ಶನಿ ಸಂಗೀತ ಎಂದ ಕಾರ್ತಿಕ್, ಆದ್ರೆ ಕಿಚ್ಚ ಮುಂದೆ ನೋ ಬೋರ್ಡ್!
- BBK 10- ಬಿಗ್ ಬಾಸ್ ಮನೆಯಲ್ಲಿ ತುಕಾಲಿನೆ ಫೇಕ್ – ನಟಿ ನಮ್ರತಾ ಗೌಡ
- BBK 10 – ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಔಟ್ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.