ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ( Big Boss ) ಮುಗಿಯುವ ಹಂತದಲ್ಲಿದೆ. ಹಾದು, ಬಿಗ್ ಬಾಸ್ ಮನೆಯಿಂದ ವಾರದಿಂದ ವಾರಕ್ಕೆ ಒಬ್ಬೊಬ್ಬ ಸ್ಪರ್ಧಿ ಎಲಿಮಿನೆಟ್ ( Eliminate ) ಆಗುತ್ತಾ ಬರುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಮೈಕಲ್ ( Michael ) ಅವರು ಎಲಿಮಿನೆಟ್ ಆಗಿ ಹೊರ ಬಂದಿದ್ದಾರೆ. ಅವರು ಅವರ ಸ್ವಂತ ಮನೆಗೆ ತೆರಳಿದ ನಂತರ ಬಿಗ್ ಬಾಸ್ ಮನೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೈಕಲ್ ಹೊರಬಂದ ನಂತರ ಹೇಳಿದ್ದೇನು?:
ಬಿಗ್‌ಬಾಸ್ ಕನ್ನಡ ಸೀಸನ್ 10 ನಲ್ಲಿ ಭಾಗವಹಿಸಿದ್ದ ಮೈಕಲ್ ಹಿಂದಿಯ ರಿಯಾಲಿಟಿ ಷೋ ( Hindi Reality Show ) ಒಂದರಲ್ಲಿ ಭಾಗವಹಿಸಿರುವ ವಿದೇಶದ ಪ್ರಜೆ. ಇವರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ನಂತರ ಹಲವರು ಇವರ ಬಗ್ಗೆ ಮತನಾಡಿದ್ದಾರೆ. ಇವರು ವಿದೇಶದವರು ಇವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಇವರು ಬಿಗ್ ಬಾಸ್ ಈ ಸೀಸನ್ ನಲ್ಲಿ ಬಹಳ ದಿನ ಉಳಿದು ಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ಅದೀಗ ಎಲ್ಲವೂ ಸುಳ್ಳಾಗಿದೆ. ಮೈಕಲ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಉತ್ತಮ ಪರ್ಫಾರ್ಮೇನ್ಸ್ ( performance ) ಕೊಟ್ಟು ಕನ್ನಡದ ನೆಲದಲ್ಲಿ ಕನ್ನಡ ಕಲಿತು ಎಲ್ಲರೂ ಮೆಚ್ಚುಗೆಯ ಮನಸ್ಸಿಂದ ನೋಡುವಂತೆ ಮಾಡುವ ಹಾಗೆ ಬೆಳೆದರು, ಬಿಗ್‌ಬಾಸ್ ಮನೆಯಲ್ಲಿ ಬಹುದೀರ್ಘಕಾಲದವರೆಗೆ, ಫಿನಾಲೆಯ ಕೆಲವೇ ಹೆಜ್ಜೆಗಳಷ್ಟು ದೂರದವರೆಗೆ ಕ್ರಮಿಸಿ ಇದೀಗ ಎಲಿಮಿನೇಟ್ ಆಗಿದ್ದಾರೆ.
ದೊಡ್ಮನೆಯಿಂದ ಹೊರ ಹೋಗುವಾಗ ಭಾವುಕರಾದ ( Emotional ) ಮೈಕಲ್ :
ಬಿಗ್ ಬಾಸ್ ನಲ್ಲಿ ಮೈಕಲ್ ಈಗಾಗಲೇ ಎರಡು ಬಾರಿ ಎಲಿಮಿನೇಷನ್‌ನಿಂದ ಬಚಾವ್ ಆಗಿದ್ದರು. ಈ ಹಿಂದೆ ಸ್ನೇಹಿತ್ ಗೌಡ ಮತ್ತು ಮೈಕಲ್ ಅಜಯ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೋಗಬೇಕಿತ್ತು. ಆಗ ಸುದೀಪ್ ( Sudeep ) ತಮ್ಮ ವಿಶೇಷ ಅಧಿಕಾರ ಬಳಸಿ ಇಬ್ಬರನ್ನು ಉಳಿಸಿಕೊಂಡಿದ್ದರು. ಎರಡು ವಾರಗಳ ಹಿಂದೆ ವೈಲ್ಡ್ ಕಾರ್ಡ್ ಎಂಟ್ರಿ ಅವಿನಾಶ್ ಶೆಟ್ಟಿ ಜೊತೆಗೆ ಮೈಕಲ್ ಕೂಡ ಡಬಲ್ ಎಲಿಮಿನೇಶನ್ ( double Elimination ) ಆಗಿದ್ದರು. ಅದಾದ ನಂತರ ಮತ್ತೆ ಮನೆಗೆ ಮರಳಿ ಬಂದು. ಮನೆಯೊಳಗೆ ಹಲವು ದಿನಗಳ ಕಾಲ ಇದ್ದು ಖುಷಿ ಆಯ್ತು ಎಂದರು.
ಬಿಗ್ ಬಾಸ್ ಮನೆಯನ್ನು ಮಿಸ್ ಕಡಿಕೊಂಡ ಅನುಭವ ಹಂಚಿಕೊಂಡ ( Experience ) ಮೈಕಲ್ :
ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ನನಗೆ ಏನು ಅನಿಸುತ್ತಿರಲಿಲ್ಲ. ಆದರೆ ಇದೀಗ ನನಗೆ ಬೇಸರ ತಂದಿದೆ. ಹೌದು, ಬಿಗ್ ಬಾಸ್ ( Big Boss ) ಮನೆಯಲ್ಲಿ ಇದ್ದ ದಿನಗಳು ಈಗ ನನಗೆ ನೆನಪಿಗೆ ಬರುತ್ತಿವೆ. ಹಾಗೆಯೇ ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ.
ಬೆಳಿಗ್ಗೆ ಬೆಳಿಗ್ಗೆ ಹಾಡು ಹಾಕಿ ನಮ್ಮನ್ನು ಬಿಗ್ ಬಾಸ್ ಎಬ್ಬಿಸುತ್ತಿದ್ದರು. ಹಾಡು ಕೇಳುತ್ತಾ ಡ್ಯಾನ್ಸ್ ಮಾಡಿಕೊಂಡು ಎದ್ದು ವರ್ಕ್ ಔಟ್ ಮಾಡಿಕೊಂಡು ಮನೆಯ ಕೆಲಸಗಳನ್ನು ಮಾಡುತ್ತಿದ್ದೆ. ಆ ಒಂದು 90 ದಿನಗಳ ಡೈಲಿ ದಿನಚರಿಯನ್ನು ಮಾಡಿಕೊಳ್ಳುತ್ತಿದ್ದೇನೆ.
ಹಾಗೆಯೇ ಈ ಒಂದು ಬಿಗ್ ಬಾಸ್ ಜರ್ನಿ ನನಗೆ ಹಲವು ಪಾಠಗಳನ್ನು ಕಲಿಸಿದೆ. ಇನ್ನು ಮುಂದೆ ಕೂಡ ಸಾಧನೆ ಮಾಡುವ ಹುಮ್ಮಸ್ಸು ನನ್ನಲ್ಲಿ ತುಂಬಿದೆ. ಬಿಗ್ ಬಾಸ್ ಮನೆಗೆ ಹೋದ ನಂತರ ನಾನು ಒಂದು ಭಾಷೆಯನ್ನು ಕಳಿತುಕೊಂಡು ಮಣ್ಣಿನ ಮಗ ಎನಿಸಿಕೊಂಡಿದ್ದೇನೆ. ಎಂದು ಮಕೈಲ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮೈಕಲ್ ಪ್ರಕಾರ ಟಾಪ್ 5 ನಲ್ಲಿ ಇರುವವರು ( Top Five List ) :
ಮೈಕಲ್ ಅವರು ಬಿಗ್ ನಲ್ಲಿ ಉಳಿದಿರುವವರಲ್ಲಿ ಐದು ಜನ ಟಾಪ್ 5 ಗೆ ಹೋಗುತ್ತಾರೆ. ಅವರೆಂದರೆ : ವಿನಯ್ ( Karthik ), ಸಂಗೀತ ( Sangeetha ) , ಕಾರ್ತಿಕ್ ಸಂಗೀತಾ( Karthik Sangeetha ), ತುಕಾಲಿ ( Thukali ) ಮತ್ತು ಪ್ರತಾಪ್ ( Prathap ).
ಈ ಐದು ಜನ ನನ್ನ ಪ್ರಾಕಾರ ಟಾಪ್5 ನ ಲಿಸ್ಟ್ ನಲ್ಲಿ ಇರುತ್ತಾರೆ. ನನ್ನ ಪ್ರಕಾರ ಸಂಗೀತ ಬಿಗ್ ಬಾಸ್ ವಿನ್ನರ್ ಆಗಬಹುದು ಎಂದರು. ಹಾಗೆಯೇ ಮುಂದಿನ ವಾರ ತನಿಷಾ ಅವರು ಎಲಿಮಿನೇಟ್ ಅಗಬಹುದು. ಯಾಕೆಂದರೆ, ಅವರ ಗೇಮ್ ತುಂಬಾ ಸ್ಲೋ ಆಗಿದೆ ಎಂದರು.
ಜಿಯೊ ಫನ್ ಫ್ರೈಡೆ ( Jio Fun Friday ) ಗೆದ್ದ ಖುಷಿ ಹಂಚಿಕೊಂಡ ( Shared Experience ) ಮೈಕಲ್ :
ಬಿಗ್ ಬಾಸ್ ನಲ್ಲಿ ಮೈಕಲ್ ತುಂಬಾ ಚೆನ್ನಾಗಿ ಗೇಮ್ ಆಡುತ್ತಿದ್ದರು. ಹಾಗೆಯೇ ಅವರಿಗೆ ಜಿಯೊ ಫನ್ ಫ್ರೈಡೆ ಟಾಸ್ಕ್‌ಗಳು ನನಗೆ ಬಹಳ ಖುಷಿ ಕೊಡುತ್ತದೆ ಎಂದರು. ನನಗೆ ಫ್ರೈಡೆ ಮಾಡಲಿಕ್ಕೆ ಏನು ಅಂತ ಹೆಚ್ಚಿನ ವಿಷಯ ಇರುತ್ತಿರಲಿಲ್ಲ. ಫನ್ ಫ್ರೈಡೆಗಾಗಿ ನಾವೆಲ್ಲ ಕಾಯುತ್ತಿದ್ದೆವು. ಅದೇ ದೊಡ್ಡ ಎಂಟರ್‍ಟೈನ್ಮೆಂಟ್. ಯಾವಾಗಲೂ ಒಂದು ಎಂಟರ್‍ಟೈನಿಂಗ್ ಟಾಸ್ಕ್ ( Entertaining Task ) ಆಗಿರುತ್ತಿತ್ತು ಎಂದರು.
ಬಿಗ್ ಬಾಸ್ ಮನೆಯಲ್ಲಿ ನಾನು ಹಲವು ಟಾಸ್ಕ್ ಗಳನ್ನ ಗೆದ್ದಿದೀನಿ, ಹಾಗೆಯೇ ಕಿಚ್ಚನ ಚಪ್ಪಾಳೆ ತಗೊಂಡಿದೀನಿ, ಕ್ಯಾಪ್ಟನ್ ಆಗಿದ್ದೀನಿ. ಆದ್ರೆ ಜಿಯೊ ಟಾಸ್ಕ್ ಗೆದ್ದಿಲ್ಲವಲ್ಲ ಅಂತ ಬೇಜಾರು ಇತ್ತು. ಆದರೆ ಎರಡು ವಾರದ ಹಿಂದೆ ಬ್ರೆಡ್ ತಿನ್ನುವ ಟಾಸ್ಕ್ ( Eating Bread ) ಬಂತು. ನನಗೋಸ್ಕರವೇ ಮಾಡಿದ ಟಾಸ್ಕ್ ಆಗಿತ್ತು ಅದು. ಅದನ್ನು ಗೆದ್ದು ನನಗೆ ತುಂಬ ಖುಷಿಯಾಯ್ತು ಎಂದು ಹೇಳಿಕೊಂಡರು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.