ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್!. ಬಿಮಾ ಸಖಿ(Bima Sakhi Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ.
ಪ್ರಧಾನಮಂತ್ರಿ ನರೇಂದ್ರ ಮೋದಿ(Prime minister Narendra Modi) ಅವರು ಇತ್ತೀಚಿಗೆ ಬಿಮಾ ಸಖಿ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಮಹಿಳೆಯರ (Rural women’s) ಆರ್ಥಿಕ ಸ್ವಾವಲಂಬನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಆತ್ಮಸಬಲೀಕರಣದ ಸಾಧನೆಗೆ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು (Central government) ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯು ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಬಿಮಾ ಸೇವೆಗಳನ್ನು ತಿಳಿದುಕೊಳ್ಳಲು ಮತ್ತು ಅವುಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಮಹಿಳೆಯರು ಬಿಮಾ ಏಜೆಂಟ್‌ಗಳಾಗಿ ತಮ್ಮ ಗ್ರಾಮಗಳಲ್ಲಿಯೇ ಸೇವೆ ಸಲ್ಲಿಸಿ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದು. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು? ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಒದಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಸೋಮವಾರ ಅಂದರೆ ಡಿಸೆಂಬರ್ 9 ರಂದು ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದರು. ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಎಲ್‌ಐಸಿಯ (LIC) ಮಾರ್ಗಸೂಚಿಯಡಿಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಯೋಜನೆಯಡಿ 2 ಲಕ್ಷ ಮಹಿಳಾ ವಿಮಾ ಏಜೆಂಟರನ್ನು 3 ವರ್ಷಗಳಲ್ಲಿ ನೇಮಿಸುವ ಗುರಿಯನ್ನು ಎಲ್‌ಐಸಿ (LIC) ಹೊಂದಿದೆ. ಬಿಮಾ ಸಖಿ ಯೋಜನೆ (Bheema Sakhi Yojana) ಯಲ್ಲಿ ಕೆಲಸ ಮಾಡುವವರನ್ನು ಏಜೆಂಟ್‌ಗಳು, ಬಿಮಾ ಸಖೀಸ್ ಎಂದು ಕರೆಯಲಾಗುತ್ತದೆ. ಮುಂದಿನ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದ ದೊಡ್ಡ ಕನಸಿನ ಯೋಜನೆಯಾಗಿದೆ. ಈ ಯೋಜನೆಯಡಿ ಸರ್ಕಾರ ಸಂಕಷ್ಟಕ್ಕೆ ಒಳಗಾದ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
ವಿಮಾ ಸಖಿ ಯೋಜನೆ ಭಾರತೀಯ ಜೀವ ವಿಮಾ ನಿಗಮದ (LIC) ಉಪಕ್ರಮವಾಗಿದೆ ಎಂದು ಪಿಎಂಒ ಹೊರಡಿಸಿದ ಹೇಳಿಕೆ ತಿಳಿಸಿದೆ.
10ನೇ ತರಗತಿ ಉತ್ತೀರ್ಣರಾದ 18 ರಿಂದ 70 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ಮೊದಲು, ನೀವು ವಯಸ್ಸಿನ ಪುರಾವೆ, ವಿಳಾಸ ಪುರಾವೆ ಮತ್ತು 10 ನೇ ಪಾಸ್ ಪ್ರಮಾಣಪತ್ರದ ಸ್ವಯಂ-ದೃಢೀಕರಿಸಿದ ಪ್ರತಿಯನ್ನ ಲಗತ್ತಿಸಬೇಕು.
ಯೋಜನೆಯ ಮುಖ್ಯ ಅಂಶಗಳು (Elements) :
ಮಹಿಳಾ ಕೆರಿಯರ್ ಏಜೆಂಟರ್ ಯೋಜನೆ (Women’s career Agenter Scheme) : ಬಿಮಾ ಸಖಿಯ ಉದ್ದೇಶ ಗ್ರಾಮೀಣ ಮಹಿಳೆಯರನ್ನು ಬಿಮಾ ಸೇವೆಗಳಲ್ಲಿ ತೊಡಗಿಸುವುದಾಗಿದೆ. ಈ ಮೂಲಕ ಅವರು ತಮ್ಮ ಗ್ರಾಮದಲ್ಲೇ ಬಿಮಾ ಏಜೆಂಟ್‌ಗಳಾಗಿ ಸೇವೆ ಸಲ್ಲಿಸಬಹುದು. ಈ ಕೆಲಸದ ಮೂಲಕ ಮಹಿಳೆಯರಿಗೆ ಶ್ರಮದೊಂದಿಗೆ ಆರ್ಥಿಕ ನೆರವು ಲಭಿಸುತ್ತದೆ.
ಆರ್ಥಿಕ ಪ್ರೋತ್ಸಾಹ: ಯೋಜನೆಯಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹7,000 ಪ್ರೋತ್ಸಾಹ ಧನ (Incentive money) ನೀಡಲಾಗುತ್ತದೆ. ಈ ಹಣದ ಮೂಲಕ ಅವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.
ಪ್ರಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ: ಬಿಮಾ ಸಖಿ ಯೋಜನೆಯಡಿ ಮಹಿಳೆಯರಿಗೆ ಅಗತ್ಯವಿರುವ ತರಬೇತಿ ಮತ್ತು ಕೌಶಲ್ಯ ಕಲಿಕೆಯನ್ನು ಒದಗಿಸಲಾಗುವುದು. ಇದರಿಂದ ಮಹಿಳೆಯರು ತಮ್ಮ ಕೆಲಸವನ್ನು ಮತ್ತಷ್ಟು ಯಶಸ್ವಿಯಾಗಿ ನಿರ್ವಹಿಸಲು ಸಹಾಯವಾಗುತ್ತದೆ.
ಸಮಾಜದ ಬದಲಾವಣೆಗೆ ಪೂರಕ: ಗ್ರಾಮೀಣ ಪ್ರದೇಶದ ಮಹಿಳೆಯರು ಬಿಮಾ ಸೇವೆಗಳ ಮೂಲಕ ಆರ್ಥಿಕ ಬಲವನ್ನು ಗಳಿಸುವುದರಿಂದ, ಗ್ರಾಮೀಣ ಸಮುದಾಯದಲ್ಲಿ ಹೊಸ ಅವಕಾಶಗಳು ಮೂಡುತ್ತವೆ.
ಈ ಯೋಜನೆಯಿಂದ ಸಿಗುವ ಆದಾಯ ಎಷ್ಟು?:
ಈ ಯೋಜನೆಯಿಂದ ಮೊದಲ ವರ್ಷದಲ್ಲಿ ಭಾಗಿಯಾಗುವವರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗಿತ್ತಿದ್ದು, ಮೊದಲ ವರ್ಷದಲ್ಲಿ ತಿಂಗಳಿಗೆ 7,000 ರೂ. ಗಳು, ಎರಡನೇ ವರ್ಷದಲ್ಲಿ ತಿಂಗಳಿಗೆ 6,000 ರೂ. ಗಳು, ಮತ್ತು ಮೂರನೇ ವರ್ಷದಲ್ಲಿ ಮಾಸಿಕ ₹5 ಸಾವಿರ ಭತ್ಯೆ ಪಡೆಯುತ್ತಾರೆ. ಒಟ್ಟಾರೆಯಾಗಿ,ತರಬೇತಿಯ ಅವಧಿ ಮೂರು ವರ್ಷವಾಗಿದ್ದು, ಈ ಅವಧಿಯಲ್ಲಿ ವಿಶೇಷ ತರಬೇತಿ ಮತ್ತು ಮಾಸಿಕ ಭತ್ಯೆ ಪಡೆಯುತ್ತಾರೆ. ಇದರ ಜೊತೆ ಕಮಿಷನ್ ಲಾಭ ಸಹ ಸಿಗಲಿದೆ. ಆರ್ಥಿಕ ಸಾಕ್ಷರತೆ ಹಾಗೂ ವಿಮೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಎಲ್‌ಐಸಿ ತಿಳಿಸಿದೆ.
ಯೋಜನೆಯಡಿ 1 ಲಕ್ಷ ಬಿಮಾ ಸಖಿ ನೊಂದಣಿ:
ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ ಮೊಹಾಂತಿ ಮಾತನಾಡಿ, ಮಹಿಳಾ ಸಬಲೀಕರಣ ಅಭಿಯಾನದ ಭಾಗವಾಗಿ ಮುಂದಿನ 12 ತಿಂಗಳಲ್ಲಿ 1 ಲಕ್ಷ ಬಿಮಾ ಸಖಿಯರನ್ನು ನೋಂದಾಯಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಈ ಯೋಜನೆಗಾಗಿ ₹840 ಕೋಟಿ ವ್ಯಯಿಸಲಾಗಿದ್ದು, ಮೊದಲ ವರ್ಷದಲ್ಲಿ ₹4 ಸಾವಿರ ಕೋಟಿ ಹೊಸ ವ್ಯವಹಾರವನ್ನು ತರಬಹುದು ಎಂಬ ನಿರೀಕ್ಷೆಯಿದ್ದು, ಮೊದಲ ವರ್ಷದಲ್ಲೇ ಪ್ರತಿ ಗ್ರಾಮ ಪಂಚಾಯಿತಿಗೆ (Gram Panchayath) ಒಬ್ಬ ಬಿಮಾ ಸಖಿಯನ್ನು ನೇಮಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಯೋಜನೆಯ ನೇಮಕಾತಿ ಹೇಗೆ ಇರುತ್ತದೆ?:
ಈ ಯೋಜನೆಯ ಮೊದಲ ಹಂತದಲ್ಲಿ 35,000 ಮಹಿಳೆಯರನ್ನು ವಿಮಾ ಏಜೆಂಟ್‌ಗಳಾಗಿ ನೇಮಿಸಿಕೊಳ್ಳುತ್ತದೆ. ನಂತರ ಹೆಚ್ಚುವರಿ 50,000 ಮಹಿಳೆಯರಿಗೆ ಅವಕಾಶವನ್ನು ವಿಸ್ತರಿಸಲಾಗುವುದು. ಮೊದಲಿಗೆ ಹರಿಯಾಣದಲ್ಲಿ ಯೋಜನೆ ಪ್ರಾರಂಭಿಸಿ ತದನಂತರ ದೇಶಾದ್ಯಂತ ವಿಸ್ತರಿಸಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ?
ಈಗಾಗಲೇ ಎಲ್ಐಸಿ ಏಜೆಂಟ್ ಅಥವಾ ಉದ್ಯೋಗಿಯಾಗಿದ್ದರೆ, ಅವನ ಕುಟುಂಭದ ಸದಸ್ಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಎಲ್ಐಸಿಯ ಯಾವುದೇ ನಿವೃತ್ತ ಉದ್ಯೋಗಿ ಅಥವಾ ಯಾವುದೇ ಮಾಜಿ ಏಜೆಂಟ್ (Ex agent) ಅಥವಾ ಪ್ರಸ್ತುತ ಏಜೆಂಟ್ (Present agent) ಈ ಯೋಜನೆಯಡಿ ಅರ್ಜಿ ಸಲ್ಲಿಸುವಂತಿಲ್ಲ.
ಪದವಿ ಪಡೆದ ಅಭ್ಯರ್ಥಿಗಳು ಅಂದರೆ ಬಿಮಾ ಸಖಿಯರು ಮೂರು ವರ್ಷಗಳ ತರಬೇತಿಯನ್ನ ಪೂರ್ಣಗೊಳಿಸಿದ ನಂತರ, ಎಲ್ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿ ಪಾತ್ರದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಹಾಗೂ ಮಹಿಳೆಯರು ಎಲ್ಐಸಿ ಏಜೆಂಟ್ಗಳಾಗಿಗಳಾಗಿ ಕೆಲಸ ಮಾಡಬಹುದು.
ಗಮನಿಸಿ (Notice) :
ಬಿಮಾ ಸಖಿ ಯೋಜನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಇದರಿಂದ ಗ್ರಾಮೀಣ ಮಹಿಳೆಯರು ಹೊಸ ಅವಕಾಶಗಳನ್ನು ಅರಸಿ, ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಅವಕಾಶ ಒದಗಿಸಲಾಗುತ್ತಿದೆ. ಗ್ರಾಮೀಣ ಮಹಿಳೆಯರು ತಮ್ಮ ಕ್ಷೇತ್ರದಲ್ಲಿನ ಪಶು ವೈದ್ಯಾಧಿಕಾರಿಗಳಿಗೆ ಅಥವಾ ಸಹಾಯಕ ನಿರ್ದೇಶಕರಿಗೆ ಅರ್ಜಿಗಳನ್ನು ಡಿಸೆಂಬರ್ 15 (December 15) ರೊಳಗೆ ಸಲ್ಲಿಸಬಹುದು. ಈ ಯೋಜನೆಯ ಗುರಿ ಮಹಿಳೆಯರಲ್ಲಿ ಉದ್ಯೋಗದ ಮೂಲಕ ಆತ್ಮಸಬಲೀಕರಣವನ್ನು ಸಾಧಿಸುವುದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.