ಮನೆಯಲ್ಲೇ ಕೂತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರ (birth certificate online) ಪಡೆಯಬಹುದು. ಅರ್ಜಿ ಸಲ್ಲಿಸುವು ವಿಧಾನ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜನನ ಪ್ರಮಾಣಪತ್ರ ವು ವ್ಯಕ್ತಿಯ ಜನ್ಮವನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿದೆ. ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಜನನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಜನನ ಪ್ರಮಾಣ ಪತ್ರವು ಮುಖ್ಯವಾಗಿ ಹೆಸರು, ಸ್ಥಳ ಮತ್ತು ಜನ್ಮ ದಿನಾಂಕ, ಪೋಷಕರ ಮಾಹಿತಿ, ನೀಡಿದ ದಿನಾಂಕ, ನೋಂದಣಿ ದಿನಾಂಕ, ನೋಂದಣಿ ಸಂಖ್ಯೆ, ಪ್ರಮಾಣಪತ್ರ ಸಂಖ್ಯೆ ಮತ್ತು ಅಧಿಕೃತ ಸಹಿಯನ್ನು ಒಳಗೊಂಡಿರುತ್ತದೆ. ಇನ್ನು ಜನನ ಪ್ರಮಾಣ ಪತ್ರವನ್ನು ಜನರು ತಮ್ಮ ಗ್ರಾಮದಲ್ಲಿರುವ ಸಕಾಲ ಅಥವಾ ಇತರೆ ಸರಕಾರಿ ವಿಭಾಗಗಳ ಮೂಲಕ ಜನ್ಮ ದೃಢೀಕರಣ ಪ್ರಮಾಣ ಪತ್ರ ಪಡೆಯಬಹುದು. ಅಥವಾ ಜನನ ಪ್ರಮಾಣ ಪತ್ರವನ್ನು ನಾವು ಆಸ್ಪತ್ರೆಯಲ್ಲಿ(Hospital) ಪಡೆದುಕೊಳ್ಳುತ್ತೇವೆ. ಜನನದ ನಂತರ ಹಲವು ದಿನಗಳ ಕಾಲದ ಬಳಿಕ ಇದನ್ನು ಆಸ್ಪತ್ರೆಯಿಂದ ಪಡೆದುಕೊಳ್ಳಬಹುದು. ಇದೀಗ ಇದಕ್ಕಿಂತಲೂ ಸುಲಭ ಮಾರ್ಗದಲ್ಲಿ ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಬಹಳ ಸರಳವಾಗಿ ಆನ್‌ಲೈನ್ ಮೂಲಕ ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು. ಈ ಹಿಂದೆ ಜನನ ಪ್ರಮಾಣ ಪತ್ರವನ್ನು ಪಡೆಯಲು ಹಲವು ದಿನಗಳು ಕಾಯಬೇಕಿತ್ತು, ಆದರೆ ಇತ್ತೀಚಿಗೆ ಜನನ ಪ್ರಮಾಣ ಪತ್ರವನ್ನು 7 ದಿನಗಳಲ್ಲೇ ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿತ್ತು. ಇದೀಗ ನಿಮ್ಮ ಮೊಬೈಲ್(Mobile) ಅಥವಾ ಲ್ಯಾಪ್ ಟಾಪ್ (Laptop)ನಲ್ಲಿ ಸೇವಾ ಸಿಂಧು ಪೋರ್ಟಲ್ (Karnataka Seva Sindhu Portal) ಮುಖಾಂತರ ಬಹಳ ಸುಲಭವಾಗಿ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.
ಜನನ ಪ್ರಮಾಣ ಪತ್ರ(Birth certificate)ಏಕೆ ಬೇಕು?:
ತಾಯಿ ಮಗುವಿಗೆ ಜನ್ಮ ನೀಡಿದ ಬಳಿಕ ಮಗು ಹುಟ್ಟಿದ ದಿನಾಂಕವನ್ನು ತಿಳಿದುಕೊಳ್ಳಲು ಈ ದಾಖಲೆ(document) ಮುಖ್ಯ. ಹಾಗೂ ಮಗುವಿಗೆ ಆಧಾರ್ ಕಾರ್ಡ್(Adhar card) ಮಾಡಿಸುವ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ ಅವಶ್ಯಕವಾಗಿ ಬೇಕಾಗಿರುವ ದಾಖಲೆಯಾಗಿದೆ. ಹಾಗೂ ಮಗು ಶಾಲೆಗೆ(School) ಹೋಗುವ ಸಂದರ್ಭದಲ್ಲಿ ಶಾಲಾ ಪ್ರವೇಶಾತಿಗೆ ಜನನ ಪ್ರಮಾಣ ಪತ್ರ ಬಹಳ ಮುಖ್ಯವಾಗಿ ಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?:
ಈಗಾಗಲೇ ತಿಳಿಸಿರುವಂತೆ ಸೇವಾ ಸಿಂಧು ಪೋರ್ಟಲ್(Seva Sindhu Portal) ಮುಖಾಂತರ ಸುಲಭವಾಗಿ ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.
ಮೊದಲಿಗೆ https://sevasindhu.karnataka.gov.in/Sevasindhu/English ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬೈಟ್ ಗೆ ಹೋಗಬೇಕು.
ಮೊದಲ ಬಾರಿ ಅರ್ಜಿ ವೆಬ್ ಸೈಟ್ ಓಪನ್ ಮಾಡಿದ್ದರೆ ಮೊದಲು ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಬೇಕು.
ಲಾಗಿನ್ ಆದ ಬಳಿಕ ಪ್ಲಾನಿಂಗ್ ಪ್ರೋಗ್ರಾಂ ಮಾನಿಟರಿಂಗ್ ಆಂಡ್ ಸ್ಟಟಿಸ್ಟಿಕ್ಸ್ ಡಿಪಾರ್ಟ್‌ಮೆಂಟ್ ಅನ್ನು ಕ್ಲಿಕ್ ಮಾಡಿ.
ನಂತರ ಅಲ್ಲಿ ಬರ್ತ್ ಸರ್ಟಿಫಿಕೇಟ್ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಥವಾ “Search” ಆಯ್ಕೆಯಲ್ಲಿ “Birth certificate” ಎಂದು ಹುಡುಕಿ “Apply” ಬಟನ್ ಮೇಲೆ ಕ್ಲಿಕ್ ಮಾಡಬಹುದು.
Apply” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
ನಂತರ ದಾಖಲೆಗಳು ಹಾಗೂ ವಿವರಗಳನ್ನು ದೃಢೀಕರಿಸಿದ ಬಳಿಕ ಪೇಮೆಂಟ್ ಆಯ್ಕೆ ಕ್ಲಿಕ್ ಮಾಡಿ. ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಶುಲ್ಕ ಪಾವತಿ ಮಾಡಿ.
ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು. ಹಾಗೂ ಮರೆಯದೇ ಅಕ್ನಾಲೆಜ್ಮೆಂಟ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಜನನ ಪ್ರಮಾಣ ಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?:
ಮೊದಲಿಗೆ sevasindhu.karnataka.gov.in ವೆಬ್ ಸೈಟ್ ಗೆ ಹೋಗಬೇಕು.
ನೀವು ಈಗಾಗಲೇ ನೀಡಿರುವ ಯೂಸರ್ ನೇಮ್ ಮತ್ತು ಪಾಸ್ವರ್ಡ್ ನೀಡಿ ಲಾಗಿನ್ ಆಗಬೇಕು.
ನಂತರ ಅರ್ಜಿ ಸಲ್ಲಿಸಿದಾಗ ನೀಡಿದ ಲಾಗಿನ್ ವಿವರ ನಮೂದಿಸಿ.
ಅಲ್ಲಿ View Status of Application ಕ್ಲಿಕ್ ಮಾಡಿ. ಇದಾದ ಬಳಿಕ Track application status ಕ್ಲಿಕ್ ಮಾಡಿ. ಅಲ್ಲಿ ಅರ್ಜಿ ರೆಫರೆನ್ಸ್ ನಂಬರ್ ಡೌನ್‌ಲೋಡ್ ಮಾಡಿ.
ಈ ಸಂಖ್ಯೆಯು ಅಕ್ನಾಲೆಜ್ಮೆಂಟ್ ಅಥವಾ ಎಸ್‌ಎಂಎಸ್ ರೂಪದಲ್ಲಿ ನಿಮಗೆ ತಲುಪಿರುತ್ತದೆ.
ಒಂದು ವೇಳೆ ಜನ್ಮ ದೃಢೀಕರಣ ಪ್ರಮಾಣ ಪತ್ರ ರೆಡಿಯಾಗಿದ್ದರೆ ಅಲ್ಲಿ “ಡೆಲಿವರ್ಡ್” ಎಂದು ಕಾಣಿಸುತ್ತದೆ.
ಅದನ್ನು ಕ್ಲಿಕ್ ಮಾಡಿದರೆ ನೀವು ನಿಮ್ಮ ಜನನ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಆಪ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?:
ಜನನ ಪ್ರಮಾನ ಪತ್ರವನ್ನು ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯತಿ(Gram Panchayat) ಕಾರ್ಯಲಯವನ್ನು ಭೇಟಿ ಮಾಡಿ ಅಥವಾ ತಮ್ಮ ಹೋಬಳಿಯ ನೆಮ್ಮದಿ ಕೇಂದ್ರ/ನಾಡಕಚೇರಿಯನ್ನು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯಬಹುದು. ಅಥವಾ ಮಗು ಜನಿಸಿದ ಇಂತಿಷ್ಟು ದಿನಗಳೊಳಗಾಗಿ ಜಿಲ್ಲೆಯ ಸಂಖ್ಯಾಶಾಸ್ತ್ರದ ಅಧಿಕಾರಿಗಳನ್ನು(District Statistical Officers) ನೀವು ಭೇಟಿ ಮಾಡಬೇಕಾಗುತ್ತದೆ ಮತ್ತು ನಿಮ್ಮ ನೋಂದಣಿ ವಿವರಗಳ ವಿವರಗಳನ್ನು ಪರಿಶೀಲಿಸಿ ನೀವು ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು. ಹಾಗೂ ಪ್ರಮಾಣಪತ್ರದ ನಕಲು ಪ್ರತಿಗಾಗಿ(Duplicate copy) ಸಂಖ್ಯಾಶಾಸ್ತ್ರದ ಕಚೇರಿಯಲ್ಲಿ ನೀವು 5 ರೂಪಾಯಿ ಶುಲ್ಕ(5 rupees fee) ಕಟ್ಟಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ