ಈ ಫಲಾನುಭವಿಗಳ ಬಿಪಿಎಲ್ ಕಾರ್ಡ್ ರದ್ದು: ಗ್ಯಾರಂಟಿ ಸೌಲಭ್ಯಕ್ಕೂ ಕೊಕ್!

IMG 20241004 WA0001

ನೀವು ಕೂಡ ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ (PAN Card – Aadhaar Card Link) ಮಾಡಿದ್ದೀರಾ. ಹಾಗಿದ್ದಲ್ಲಿ ನಿಮ್ಮ ಬಿಪಿಎಲ್‌ ಕಾರ್ಡ್‌ ರದ್ದು (BPL Card Cancellation) ಆಗಲಿದೆ.

ರಾಜ್ಯ ಸರ್ಕಾರ (State Government) ಆಡಳಿತಕ್ಕೆ ಬಂದಾಗಿನಿಂದಲೂ ಕೂಡ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಹಲವು ಯೋಜನೆಗಳನ್ನು ಜಾರಿಗೆ ತರುವ ಜೊತೆಯಲ್ಲಿ ಕೆಲವು ಸರ್ಕಾರದ ಆಡಳಿತವನ್ನು ಸುಧಾರಣೆ ಮಾಡುವ ಕಾರಣಕ್ಕೆ ಹಾಗೂ ಭ್ರಷ್ಟಾಚಾರ ಕಡಿಮೆ ಮಾಡುವ ಕಾರಣಕ್ಕೂ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಜನರು ಬಳಸುತ್ತಿರುವ ಬಿಪಿಎಲ್ ಕಾರ್ಡ್ (BPL card) ಪಟ್ಟಿಯಲ್ಲಿ ಅನರ್ಹರೂ ಇದ್ದಾರೆ. ಬಿಪಿಎಲ್ ಕಾರ್ಡ್ ಕಡುಬಡವರಿಗೆ ಮಾತ್ರ ನೀಡುವಂತಹ ಸೌಲಭ್ಯವಾಗಿದೆ. ಆದರೆ ಕೆಲವು ನಕಲಿ ದಾಖಲೆಗಳನ್ನು (Duplicate documents) ನೀಡಿ ಫಲಾನುಭವಿಗಳಲ್ಲದವರು ಕೂಡ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಇದರಿಂದ ಬಡವರಿಗೂ ಕೂಡ ಶಾಕ್ ಆಗಿದೆ. ಯಾಕೆಂದರೆ ಇತ್ತೀಚಿಗೆ ಪ್ಯಾನ್ ಹಾಗೂ ಆಧಾ‌ರ್ ಕಾರ್ಡ್ (PAN and Aadhaar Card) ಲಿಂಕ್ ಮಾಡಬೇಕು, ಇದು ಕಡ್ಡಾಯ ಎಂದೂ ಸಹ ತಿಳಿಸಲಾಗಿತ್ತು. ಅದರಂತೆ ಪ್ಯಾನ್ ಹಾಗೂ ಆಧಾ‌ರ್ ಕಾರ್ಡ್ (PAN and Aadhaar Card) ಲಿಂಕ್ ಮಾಡಿದ ಜನರು ತಮ್ಮ ಬಿಪಿಎಲ್ ಕಾರ್ಡ್ ಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಬಿಪಿಎಲ್ ಕಾರ್ಡ್ ಏಕೆ ರದ್ದು ಮಾಡಲಾಗುತ್ತಿದೆ? ಎಷ್ಟು ಜನರ ಬಿಪಿಎಲ್ ಕಾರ್ಡ್ ರದ್ದಾಗಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಪಿಎಲ್ ಕಾರ್ಡ್ ರದ್ದು ಮಾಡಲು ಕಾರಣವೇನು?:

ಇತ್ತೀಚಿಗೆ ರಾಜ್ಯ ಸರ್ಕಾರ ಪ್ಯಾನ್ ಹಾಗೂ ಆಧಾ‌ರ್ ಕಾರ್ಡ್ (PAN and Aadhaar Card) ಲಿಂಕ್ ಮಾಡಬೇಕು, ಇದು ಕಡ್ಡಾಯ ಎಂದೂ ಸಹ ತಿಳಿಸಿತ್ತು, ಆದರೆ ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆಗೆ ನೀಡಿದ್ದ ಗಡುವು ಮೀರಿದ ಕಾರಣಕ್ಕೆ ದಂಡದೊಂದಿಗೆ ಆಧಾರ್ ಕಾರ್ಡ್ -ಪಾನ್ ಕಾರ್ಡ್ ಲಿಂಕ್ ಮಾಡಲು ತಿಳಿಸಿತ್ತು. ಅದೇ ಕಾರಣವನ್ನು ಇಟ್ಟುಕೊಂಡು ಇದೀಗ ಬಿಪಿಎಲ್ ಕಾರ್ಡ್ ರದ್ದುಗೆ ಸರ್ಕಾರ ಮುಂದಾಗಿದೆ. ಹೌದು, ನಿಗದಿತ ಅವಧಿ ಮೀರಿದ ನಂತರ 1 ಸಾವಿರ ರೂಪಾಯಿ ದಂಡದ ಮೊತ್ತ ಆದಾಯ ತೆರಿಗೆ ಇಲಾಖೆಗೆ ಪಾವತಿಸಿ ಪಾನ್ – ಆಧಾರ್ ಕಾರ್ಡ್ ಜೋಡಣೆ ಮಾಡಿದವರನ್ನು ಆದಾಯ ತೆರಿಗೆ ಪಾವತಿದಾರರು ಎನ್ನುವ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ (BPL Ration Card) ರದ್ದು ಮಾಡಲು ಮುಂದಾಗಿದೆ.

ಒಟ್ಟು ಎಷ್ಟು ಜನರಿಗೆ ಈ ಸಮಸ್ಯೆ ಎದುರಾಗಿದೆ?:

ರಾಜ್ಯದಲ್ಲಿ ಒಟ್ಟಾರೆ 1,06,152 ಜನರು ಈ ಕೆಲಸ ಮಾಡಿದ್ದು, ಇದೀಗ ಇವರನ್ನ ಆದಾಯ ತೆರಿಗೆ (Income tax) ಪಾವತಿದಾರರು ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ 1,06,152 ಆದಾಯ ತೆರಿಗೆ ಪಾವತಿದಾರರು ಹೊಂದಿದ ಅನರ್ಹ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ರದ್ದು ಪಡಿಸಲು ಮುಂದಾಗಿದೆ. ಇದರಲ್ಲಿ ಅರ್ಧಕ್ಕೂ ಅಧಿಕ ಮಂದಿ ಬಡವರು ಇದ್ದಾರೆ ಎನ್ನಲಾಗಿದೆ. ಬಿಪಿಎಲ್ ಕಾರ್ಡ್ ನಿಂದ ವಂಚಿತರಾದ ಬಡವರಿಗೆ ಆದಾಯ ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ(NOC) ತರುವಂತೆ ಆಹಾರ ಇಲಾಖೆ ಅಧಿಕಾರಿಗಳು ಸೂಚಿಸುತ್ತಿದ್ದು, ಹೀಗಾಗಿ ಬಡವರು ಐಟಿ ಕಚೇರಿಗೆ ಅರ್ಜಿ ಸಲ್ಲಿಸಿ ಎನ್‌ಒಸಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ.

ಬಿಪಿಎಲ್ ಕಾರ್ಡ್ ರದ್ದಾಗಿರುವುದರಿಂದ ತೊಂದರೆಗಳು :

1,000 ರೂಪಾಯಿ ದಂಡ ಪಾವತಿಸಿ ಆಧಾರ್-ಪಾನ್ ಕಾರ್ಡ್ ಜೋಡಣೆ ಮಾಡಿದ ಬಡವರು ಗ್ಯಾರಂಟಿ ಸೇರಿ ಹಲವು ಸೌಲಭ್ಯಗಳನ್ನು ಕಳೆದುಕೊಳ್ಳುವಂತಾಗಿದೆ. ಬಿಪಿಎಲ್ ಕಾರ್ಡ್ (BPL Ration Card) ಗಳು ರದ್ದಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪಡಿತರ ಕೂಡ ಸಿಗುತ್ತಿಲ್ಲ. ಗೃಹಲಕ್ಷ್ಮಿ ಹಣ ನಿಂತುಹೋಗಿದೆ. ಅನ್ನಭಾಗ್ಯದ ಅಕ್ಕಿ, ಹೆಚ್ಚುವರಿ ಅಕ್ಕಿ ಹಣ ಕೂಡ ಸಿಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾವು ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಿಸಿದ್ದೇ ತಪ್ಪಾಗಿ ಹೋಯ್ತಾ ಅನ್ನೊ ಚರ್ಚೆಗೆ ಜನರು ಇಳಿದಿದ್ದಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!