BPL Card: ಈ ವಾಹನ ​​ ಇದ್ದೂ ಬಿಪಿಎಲ್​ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಶಾಕ್.!

IMG 20241022 WA0001

ನೀವು ಫೋರ್ ವೀಲರ್ ವೆಹಿಕಲ್ (Four Wheeler Vehicle) ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಬಿಪಿಎಲ್ ಕಾರ್ಡ್(BPL card) ರದ್ದಾಗಲಿದೆ!.

ಸರ್ಕಾರದಿಂದ(government) ಇಂದು ಹಲವಾರು ಯೋಜನೆಗಳು ಬಂದಿವೆ. ಈ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಲು ಜನರಿಗೆ ಅಗತ್ಯ ದಾಖಲೆಗಳಲ್ಲಿ (necessary documents) ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಹಲವಾರು ದಾಖಲೆಗಳ ಅವಶ್ಯಕತೆ ಇದೆ. ಅದರಲ್ಲೂ ಈ ರೀತಿಯ ಗುರುತಿನ ಚೀಟಿಗಳನ್ನು ಅರ್ಹರಿಂದ ಹಿಡಿದು ಅನರ್ಹರೂ ಕೂಡ ಮಾಡಿಸಿಕೊಂಡಿದ್ದಾರೆ. ಇನ್ನು ಸರ್ಕಾರದ ಎಲ್ಲಾ ಯೋಜನೆಗಳನ್ನು(scheme) ಪಡೆಯಲು ರೇಷನ್ ಕಾರ್ಡ್(Ration card) ಬಹಳ ಮುಖ್ಯವಾಗಿರುವಂತದ್ದು. ಆದ್ದರಿಂದ ಜನರು ಅಡ್ಡದಾರಿಯಲ್ಲಿ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದಾರೆ. ಆರ್ಥಿಕವಾಗಿ ಸಭಲರಾಗಿದ್ದರು (financially strong) ಕೂಡ ಈ ಉಪಯೋಗವನ್ನು ಪಡೆದುಕೊಂಡಿರುವುದು ಸರ್ಕಾರದ ನಿಯಮಕ್ಕೆ ವಿರುದ್ಧವಾಗಿದೆ. ಇನ್ನು ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ಯಾರೆಲ್ಲಾ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
 
ಬಡತನ ರೇಖೆಗಿಂತ ಕೆಳಗಿರುವವರಿಗೆ (below  poverty line) ಆಹಾರ ಇಲಾಖೆಯು ಬಿಪಿಎಲ್ (BPL)ಕಾರ್ಡ್ ಅನ್ನು ನೀಡುತ್ತದೆ. ಆದರೆ ಇತ್ತೀಚಿಗೆ ಆರ್ಥಿಕವಾಗಿ ಸದೃಢರಾಗಿರುವ ಎಷ್ಟೋ ಮಂದಿ ಸುಳ್ಳು ದಾಖಲೆಯನ್ನು ನೀಡಿ ಪಡಿತರ ಚೀಟಿಯನ್ನು (Illegal BPL Ration Cards) ಪಡೆದುಕೊಂಡಿದ್ದಾರೆ. ಅಂತವರನ್ನು ಪತ್ತೆ ಮಾಡಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಸರ್ಕಾರ ಅಂಥವರನ್ನು ಪತ್ತೆ ಹಚ್ಚಿದೆ. ಎಷ್ಟೋ ಅನರ್ಹರು ಅಂದರೆ ಸರ್ಕಾರಿ ವೇತನವನ್ನು ತೆಗೆದುಕೊಳ್ಳುತ್ತಿರುವವರಿಂದ ಹಿಡಿದು ಕಾರು, ಟ್ಯಾಕ್ಟರ್ ಈ ರೀತಿಯ ಫೋರ್ ವೀಲರ್ ವಾಹನಗಳನ್ನು ಬಳಸುತ್ತಿದ್ದು ಅವರು ಬಿಪಿಎಲ್ ಪಡಿತರ ಚೀಟಿದಾರರಾಗಿದ್ದರೆ ಅಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.

ಒಟ್ಟಾರೆ ಎಷ್ಟು ಬಿಪಿಎಲ್ ಕಾರ್ಡ್ ಗಳು ರದ್ದಾಗಲಿವೆ :

ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರುವ ಅನರ್ಹರ ಪಟ್ಟಿಯನ್ನು(List of ineligible) ಕಳೆದು ತಿಂಗಳು ಸರ್ಕಾರ ಬಿಡುಗಡೆ ಮಾಡಿತ್ತು. ಈ ನಿಟ್ಟಿನಲ್ಲಿ ಚಿಕ್ಕಮಗಳೂರು(Chikmagalur) ಜಿಲ್ಲೆಯಲ್ಲೇ 52 ಸಾವಿರದ 200 ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಪಿಎಲ್ ಕಾರ್ಡ್ ಅನರ್ಹರ ಪರಿಷ್ಕರಣೆಗೆ (revision of ineligible) ಮುಂದಾಗಿರುವ ಸರ್ಕಾರ ಸರ್ಕಾರದ ನಿಯಮಗಳ ವಿರುದ್ಧವಾಗಿ ನಡೆದುಕೊಂಡು ಅಕ್ರಮ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಅವರ ವಿರುದ್ಧವಾಗಿ ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರರು ನೋಟಿಸ್ ಜಾರಿ ಮಾಡಿದ್ದಾರೆ. ಎಲ್ಲಾ ಅನರ್ಹ ಬಿಪಿಎಲ್ ಕಾರ್ಡ್ ದಾರರು ಆದಷ್ಟು ಬೇಗ ಅಕ್ರಮ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಗಳನ್ನು ವಾಪಸ್ ನೀಡುವಂತೆ ಸೂಚನೆಗೆ ನೀಡಿದ್ದಾರೆ. ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ತಾಲೂಕು ಕಚೇರಿ, ಆಹಾರ ಖಾತೆಗೆ ವಾಪಸ್ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಅನರ್ಹ ಬಿಪಿಎಲ್ ದಾರರು ಕಾರ್ಡ್ ಗಳನ್ನು ಹಿಂದಿರುಗಿಸದಿದ್ದರೆ ದಂಡದ ಜೊತೆಗೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಡಿತರ ಚೀಟಿಗಳನ್ನು ಹೊಂದಲು ಯಾರು ಅರ್ಹರು?:

ಸರ್ಕಾರ ನೀಡಿರುವ ಮಾನದಂಡಗಳ ಪ್ರಕಾರ, ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವವರು ಸರ್ಕಾರ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಸಂಸ್ಥೆಗಳಿಂದ ವೇತನ ಪಡೆಯುತ್ತಿರಬಾರದು.
ಆದಾಯ ತೆರಿಗೆ(income tax) ಸೇರಿದಂತೆ ಸೇವಾ ತೆರಿಗೆ ವೃತ್ತಿ ತೆರಿಗೆ ಪಾವತಿಸುತ್ತಿರುವವರು ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಪಡೆಯಲು ಅನರ್ಹರಾಗಿರುತ್ತಾರೆ.
ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಜನರು 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಭೂಮಿ ಹೊಂದಿರುವ ಕುಟುಂಬಗಳು ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅನರ್ಹರಾಗುತ್ತಾರೆ.
ಬಹಳ ಮುಖ್ಯವಾಗಿ ಕುಟುಂಬದ ವಾರ್ಷಿಕ ಆದಾಯವು(Annual income) ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರಬಾರದು. ಒಂದು ವೇಳೆ ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಆದಾಯ ಗಳಿಸುತ್ತಿದ್ದರೆ ಅಂತಹ ಕುಟುಂಬಗಳು ಪಡಿತರ ಚೀಟಿ ಹೊಂದಲು ಅರ್ಹರಾಗಿರುವುದಿಲ್ಲ.
ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಿರುವವರು ಕೂಡ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅನರ್ಹರಾಗಿರುತ್ತಾರೆ. ಇನ್ನು ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು, ಅದರ ನಡುವೆಯೂ ಕೂಡ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣಿಗೆ ಮುಂದಾಗಿದೆ. ಆದರೆ ನಾಲ್ಕು ಚಕ್ರದ ವಾಹನಗಳನ್ನು ಬಳಸಿರುವವರಿಗೆ ಸ್ಪಷ್ಟನೆ ನೀಡಲಾಗಿದ್ದು, ಯಾರೆಲ್ಲ ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಪಡಿತರ ಚೀಟಿದಾರರ ಕುಟುಂಬಗಳು ಅನರ್ಹರಾಗಿರುತ್ತಾರೆ.

ಗಮನಿಸಿ :

ಸರ್ಕಾರ ನೀಡಿರುವ ಈ ಮಾನದಂಡಗಳ ವಿರುದ್ಧವಾಗಿ ಯಾರೆಲ್ಲಾ ಪಡಿತರ ಚೀಟಿಯನ್ನು ಹೊಂದಿದ್ದರೋ ಅವರು ತಕ್ಷಣ ಕಚೇರಿಯ ಆಹಾರ ಶಾಖೆಗೆ ಪಡಿತರ ಚೀಟಿಯನ್ನು ಒಪ್ಪಿಸುವಂತೆ ಸರ್ಕಾರ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ. ಒಂದು ವೇಳೆ ಅನರ್ಹರು ಕಾರ್ಡುಗಳನ್ನು ಹಿಂದಿರುಗಿಸದಿದ್ದರೆ ಅಗತ್ಯ ವಸ್ತುಗಳ ಕಾಯ್ದೆ 1955, IPC ಅಡಿ ಕಾನೂನು ಕ್ರಮದ ಜೊತೆ ದಂಡದ‌ ಎಚ್ಚರಿಕೆ ನೀಡಲಾಗಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!