ಬ್ರೇಕಿಂಗ್: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ, ಇಲ್ಲಿದೆ ಕಂಪ್ಲೀಟ್ ಮಾಹಿತಿ 

Picsart 25 04 26 08 15 25 840

WhatsApp Group Telegram Group

ಬೆಂಗಳೂರು ತಂತ್ರಜ್ಞಾನ ನಗರ, ಆದರೆ ನಗರಾಡಳಿತದಲ್ಲಿ ಮುಗ್ಗರಿಸುತ್ತಿರುವ ಬೃಹತ್ ಮಹಾನಗರ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ ಅನ್ನು ಜಾರಿಗೊಳಿಸಿದ್ದು, ರಾಜ್ಯಪಾಲರ ಸಹಿಯಿಂದ ಇದೀಗ ಅಧಿಕೃತವಾಗಿರುತ್ತದೆ. ಈ ಹೊಸ ಕಾನೂನು, ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿಧೇಯಕದ ಕೇಂದ್ರಬಿಂದುಗಳು (Highlights of the bill ):

ಗರಿಷ್ಠ ಏಳು ನಗರ ಪಾಲಿಕೆಗಳು: ಈಗಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ಗರಿಷ್ಠ ಏಳು ನಗರ ಪಾಲಿಕೆಗಳಾಗಿಯಾಗಿ ವಿಭಜನೆ ಮಾಡಲು ಅವಕಾಶ ನೀಡಲಾಗಿದೆ. ಇದರರ್ಥ, ಸ್ಥಳೀಯ ನಿರ್ವಹಣೆ ಹೆಚ್ಚು ಸ್ಥಳೀಯವಾಗಲಿದೆ, ಸಮಸ್ಯೆಗಳ ಪರಿಹಾರಕ್ಕೆ ವೇಗ ಮತ್ತು ಸೂಕ್ತತೆಯು ಹೆಚ್ಚಾಗಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸ್ಥಾಪನೆ: ಈ ಪ್ರಾಧಿಕಾರ ನಗರದ ಅಭಿವೃದ್ಧಿಗೆ ಗೈಡ್ ಲೈನ್ (Guide line) ನೀಡುವ ಕೇಂದ್ರವಾಗಲಿದೆ. ನಿರ್ಧಾರಗಳ ಸಮನ್ವಯ, ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಹೊಣೆ ಈ ಪ್ರಾಧಿಕಾರದಲ್ಲಿರಲಿದೆ.

ವಾರ್ಡ್ ಸಮಿತಿಗಳ ಪ್ರಾಮುಖ್ಯತೆ: ವಾರ್ಡ್‌ಗಳನ್ನು ಆಡಳಿತದ ಮೂಲ ಘಟಕಗಳೆಂದು ಪರಿಗಣಿಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ನೇರ ಪರಿಹಾರವನ್ನೊದಗಿಸಲು ಈ ವಿಧೇಯಕ ಮಾರ್ಗ ತೆರೆದಿದೆ. ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಸ್ಥಳೀಯ ಜನರ ಅಭಿಪ್ರಾಯದ ಪ್ರಾಮುಖ್ಯತೆಯು ಹೆಚ್ಚು ಆಗಲಿದೆ.

ವಿಧೇಯಕದ ಬೆನ್ನೆಲೆಯಲ್ಲಿದ್ದ ವಿರೋಧ:

ವಿಧಾನಸಭೆಯಲ್ಲಿ ಈ ವಿಧೇಯಕ ಮಂಡನೆಯಾಗಿದ್ದಾಗ ಕೆಲ ಬೆಂಗಳೂರು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಕ್ಷೇತ್ರಗಳು ವಿಭಜನೆಯಿಂದ ತೊಂದರೆಗೊಳಗಾಗಬಹುದು ಎಂಬ ಆತಂಕವಿತ್ತು. ಆದರೂ, ಜಂಟಿ ಆಯ್ಕೆ ಸಮಿತಿಯ ಶಿಫಾರಸುಗಳೊಂದಿಗೆ ತಿದ್ದುಪಡಿ ರೂಪದಲ್ಲಿ ತರುವ ಮೂಲಕ ಸರ್ಕಾರ ವಿವೇಕದ ಹಾದಿ ಹಿಡಿದಿದೆ.

ರಾಜ್ಯದ ದೃಷ್ಟಿಕೋಣದಿಂದ ಮುನ್ನಡೆ:

ಬೆಂಗಳೂರು ಭಾರತದ ನಗರೀಕರಣದ ಒಂದು ಮಾದರಿ ನಗರವಾಯಿತು ಆದರೆ ನಗರ ನಿರ್ವಹಣೆಯಲ್ಲಿ ಏಕವ್ಯಕ್ತಿ ಕೇಂದ್ರಿತ ಆಡಳಿತ ವ್ಯವಸ್ಥೆ ಹಲವಾರು ದೋಷಗಳನ್ನು ಹುಟ್ಟಿಸಿದೆ. ಈ ವಿಧೇಯಕದಿಂದಾಗಿ ಆಡಳಿತವ್ಯವಸ್ಥೆಯ ಪ್ರಾದೇಶೀಕರಣ ನಡೆಯಲಿದೆ. ಇದು ನಗರ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಬಹುದಾದ ಹೆಜ್ಜೆ.

ಕೊನೆಯದಾಗಿ ಹೇಳುವುದಾದರೆ, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ಕೇವಲ ಕಾನೂನು ಪ್ರಕ್ರಿಯೆಯ ಪರಿವರ್ತನೆ ಅಲ್ಲ – ಇದು ಬೆಂಗಳೂರಿನ ಭವಿಷ್ಯದ  ಪ್ರಭಾವಿ ಹಾಗೂ ನೈಜ ಆಡಳಿತದ ದಿಕ್ಕಿನಲ್ಲಿ ಇದು ಒಂದು ನಿರ್ಣಾಯಕ ಹೆಜ್ಜೆ. ಇಲ್ಲಿನ ಯಶಸ್ಸು ಇತರ ಮಹಾನಗರಗಳಿಗೆ ಮಾದರಿ ರೂಪವಾಗುವ ಸಾಧ್ಯತೆ ಇದೆ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!