Bricks Machine – ಗಂಟೆಗೆ ಬರೋಬ್ಬರಿ 25 ಸಾವಿರ ಇಟ್ಟಿಗೆ ತಯಾರಿಸುವ ಹೊಸ ಮಷಿನ್ ಬಿಡುಗಡೆ.

bricks kannada

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ನಾವು ಭಾರತದ ಒಂದು ಐತಿಹಾಸಿಕ ಆವಿಷ್ಕಾರ,  Fully Automated brick-making (ಇಟ್ಟಿಗೆ ತಯಾರಿಸುವ) vehicle ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಏನಿದು ಇಟ್ಟಿಗೆ ತಯಾರಿಸುವ ಮಷೀನ್

ಒಬ್ಬ ಮನುಷ್ಯ 25,000 ಇಟ್ಟಿಗೆಗಳನ್ನು ತಯಾರಿಸಲು ಕೆಲವೊಂದಿಷ್ಟು ದಿನಗಳನ್ನು ತೆಗೆದುಕೊಳ್ಳಬಹುದು. ಆದರೆ ಈಗ ನಮ್ಮ ಭಾರತದಲ್ಲಿ ಆಟೋಮ್ಯಾಟಿಕ್ ಇಟ್ಟಿಗೆ ತಯಾರಿಸುವ ಮಷೀನ್ ಬಂದಾಗಿದೆ,ಇದು ಕೇವಲ ಒಂದು ಗಂಟೆಯಲ್ಲಿ 25,000 ಇಟ್ಟಿಗೆ(bricks) ಅನ್ನು ತಯಾರು ಮಾಡುತ್ತದೆ.

ಹೌದು, ಸತೀಶ ಕುಮಾರ್ ಮತ್ತು ವಿಲಾಸ್ ಚಿಕಾರ ಎಂಬ ಹರಿಯಾಣಾದ ವ್ಯಕ್ತಿಗಳು ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ವಾಹನವನ್ನು ನಿರ್ಮಿಸಿದ್ದಾರೆ. ಹತ್ತನೇ ತರಗತಿ ಡ್ರಾಪ್-ಔಟ್ ಆಗಿದ್ದ ಸತೀಶ ಸಂಪೂರ್ಣ ಭಾರತದಲ್ಲಿ ಹೊಸ ಕ್ರಾಂತಿಯನ್ನು ತಂದಿದ್ದಾರೆ. ಈ ವಾಹನವು ಪ್ರತಿ ನಿಮಿಷಕ್ಕೆ 300 ಇಟ್ಟಿಗೆಯನ್ನು ತಯಾರಿಸುತ್ತದೆ. SnPC ಮಷೀನ್ಸ್ ಗ್ರೂಪ್ ಸಂಸ್ಥಾಪಕರಾದ ಸತೀಶ ಅವರು ಮೇಡ್ ಇನ್ ಇಂಡಿಯಾ  BMM410 ಮೂಲಕ ಸಂಪೂರ್ಣ ಜಗತ್ತನ್ನು ರೋಮಾಂಚನಗೊಳಿಸಿದ್ದಾರೆ.  120 ಕಾರ್ಮಿಕರು ಮಾಡುವಷ್ಟು ಕೆಲಸವನ್ನು ಈ ಒಂದೇ ಮಷೀನ್ ಮಾಡುತ್ತದೆ ಹಾಗೆಯೇ ಕಾಂಪನಿ ಪ್ರಕಾರ ಉತ್ಪಾದನೆ ವೆಚ್ಚವನ್ನು ಶೇಕಡಾ 40% ಕಡಿಮೆ ಆಗಿಸುತ್ತದೆ.

ಇಟ್ಟಿಗೆಗಳು ಜಗತ್ತಿನಾದ್ಯಂತ, ಗರಿಷ್ಠ ದೇಶಗಳಲ್ಲಿ ಕೋಟಿ ಮನೆಗಳ ಮೂಲ ಕಟ್ಟಡವಾಗಿದೆ. ಆದ್ದರಿಂದ, ಇಟ್ಟಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿರುತ್ತದೆ. ಕಚ್ಚಾ ವಸ್ತುಗಳನ್ನು ಇಟ್ಟಿಗೆಗಳ ಆಕಾರದಲ್ಲಿ ಅಚ್ಚು ಮಾಡಿ, ಗುಣಮಟ್ಟದ ಇಟ್ಟಿಗೆ ಆಕಾರ ನೀಡಿ, ತಯಾರಿಸಿದ ಕಚ್ಚಾ ವಸ್ತುಗಳನ್ನು  ಕೈಯಾರೆ ಉತ್ಪಾದನಾ ಪ್ರದೇಶಕ್ಕೆ ಹಾಕುವುದು, ಇವೆಲ್ಲವೂ ಹೆಚ್ಚು ಶ್ರಮದಾಯಕ ಕೆಲಸ. ಇನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಬಹಳಷ್ಟು ಕಾರ್ಮಿಕರು ಬೇಕಾಗುತ್ತಾರೆ. ಹೀಗಿರುವಾಗ, ಈ ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ವಾಹನವು  ಶ್ರಮವನ್ನು ಕಡಿಮೆ ಮಾಡುತ್ತೆ, ಸಮಯ ಉಳಿಸುತ್ತೆದೆ ಹಾಗೂ ಹೆಚ್ಚಿನ ಉತ್ಪಾದನೆಯನ್ನು ನೀಡುತ್ತದೆ.

ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ವಾಹನ ತಯಾರಿಸುವ ಹಿಂದಿನ ಸ್ಫೂರ್ತಿ(Inspiration)

e6GW2oIFtx0 HD

ಮೊದಲಿಗೆ ಇಟ್ಟಿಗೆ ತಯಾರಿಸುವ ಕಾರ್ಯವು ತುಂಬಾ ಕಷ್ಟಕರವಾಗಿತ್ತು ಬಹಳಷ್ಟು ಕಾರ್ಮಿಕರು ಬೇಕಾಗುತ್ತಿದ್ದರು ಹಾಗೆ ಖರ್ಚು ಸಹ ಅಷ್ಟೇ ಮಾಡ್ಬೇಕಿತ್ತು. ಹೀಗಾಗಿ ಸತೀಶ ಅವರು ತಮ್ಮ ಇಟ್ಟಿಗೆ ಕಾರ್ಖಾನೆಯನ್ನು ಬಂದ್ ಮಾಡುಲಾಯಿತು , ಈ ವ್ಯವಸ್ಥೆ ಆಟೋಮ್ಯಾಟಿಕ್ ಆಗ್ಬೇಕು ಎಂದು ಅವರು ನಿರ್ಧರಿಸಿದರು. ಇದೆ ನಿರ್ಧಾರವನ್ನು ಮುನ್ನಡೆಸುತ್ತಾ 2010 ರಿಂದ 2014 ರ ವರೆಗೆ ಈ ಮಷೀನ್ ನ ವಿನ್ಯಾಸ ದ ಕುರಿತಾಗಿ ತಮ್ಮ ಅನಿಸಿಕೆಯನ್ನು ಇಂಜಿನೀರ್ಸ ( Engineers)ಮತ್ತು ಇತರ ಇಟ್ಟಿಗೆ ಗೂಡು ನಿರ್ಮಾಣ ಮಾಡುವವರ ಜೊತೆ ಮಷೀನ್ ವಿನ್ಯಾಸದ ಬಗ್ಗೆ ಚರ್ಚಿಸಿದರು.

ಇದನ್ನೂ ಓದಿ – ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳ ಪಟ್ಟಿ ಇಲ್ಲಿದೆ

“ಸ್ವಯಂಚಾಲಿತ ವ್ಯವಸ್ಥೆಗಳು ಅಸ್ತಿತ್ವದಲ್ಲಿದ್ದರೂ, ಅವು ಸ್ಥಿರ ಯಂತ್ರಗಳಾಗಿವೆ. ಕಚ್ಚಾ ಇಟ್ಟಿಗೆಗಳನ್ನು ಒಣಗಿಸಲು ತೆರೆದ ಸ್ಥಳಗಳಿಗೆ ಸ್ಥಳಾಂತರಿಸಲು ಕೈಯಿಂದ ಕೆಲಸ ಮಾಡಬೇಕಾಗಿತ್ತು. ಯಂತ್ರವು ಟ್ರಕ್‌ನಂತೆ ಚಲಿಸಬಹುದು ಮತ್ತು ಬದಲಿಗೆ ಇಟ್ಟಿಗೆಗಳನ್ನು ಹಾಕಬಹುದು ಎಂದು ಅದು ನನಗೆ ಅನಿಸಿತು,”ಎಂದು ಸತೀಶ ಅವರು ಹೇಳುತ್ತಾರೆ.

ಸತೀಶ ಕುಮಾರ್ ಅವರು ಸ್ಥಳೀಯ  ಸಹಾಯಕರೊಂದಿಗೆ ಹಾಗೂ ವೆಲ್ಡರ್ ಅವರ ಸಹಾಯದೊಂದಿಗೆ ತಯಾರಿಕಾ ಘಟಕದ ಮಾದರಿಯನ್ನು ತಯಾರಿಸಿದ್ದರು. ಹಾಗೆ ಥರ್ಡ್ ಪಾರ್ಟಿ ( Third party ) ಮಾರಾಟಗಾರರೊಂದಿಗೆ ಕೈ ಜೋಡಿಸಿ ಟ್ರಕ್ ನ ಭಾಗಗಳನ್ನು ಸಂಗ್ರಹಿಸಿದರು. ಹೀಗೆ ಅಂತಿಮವಾಗಿ 2015 ರಲ್ಲಿ ಒಂದು ಮಾದರಿಯನ್ನು ತಯಾರಿಸಿ ಪರೀಕ್ಷಿಸಿದರು. ಇದು ಮೂಲ  ಯಂತ್ರವಾಗಿದ್ದು ಗಂಟೆಗೆ 9,000 ಇಟ್ಟಿಗೆ ತಯಾರಮಾಡಬಲ್ಲದಾಗಿತ್ತು. ನಂತರ ಕಂಪನಿಯು ಇನ್ನು ಎರಡು ಸುಧಾರಿತ ಅವೃತ್ತಿಗಳೊಂದಿಗೆ ಗಂಟೆಗೆ  12,000 ಇಟ್ಟಿಗೆ ಹಾಕಬಲ್ಲ ಯಂತ್ರವನ್ನು ತಯಾರ್ ಮಾಡಲಾಯಿತು. ನಂತರ ಹೊಸ ಮಾದರಿಯಾದ BMM410 ಮೂಲಕ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಇಟ್ಟಿಗೆಗಳನ್ನು ತಯಾರಿಸಬಹುದು.

ಈ ಯಂತ್ರ ಹೇಗೆ ಕೆಲಸ ಮಾಡುತ್ತದೆ?

ಈ ಯಂತ್ರವು ಇಟ್ಟಿಗೆಗಳನ್ನು ಉತ್ಪಾದಿಸಲು ಜನರೇಟರ್, ಮಿಕ್ಸರ್ ಮತ್ತು ಅಚ್ಚನ್ನು ಹೊಂದಿದೆ. ಟ್ರಕ್‌ಗೆ ಕಚ್ಚಾ ವಸ್ತುಗಳನ್ನು ಸೇರಿಸಿದ ನಂತರ, ಇಟ್ಟಿಗೆಗಳನ್ನು ಹಾಕಲು ಟ್ರಕ್ ಸಜ್ಜಾಗುತ್ತದೆ. ಚಾಲಕನು ಯಂತ್ರವನ್ನು ನಿರ್ವಹಿಸಬೇಕು ಮತ್ತು ಅದನ್ನು ಮೈದಾನದ ಮೇಲೆ ಚಲಿಸಬೇಕು, ಅಲ್ಲಿ ಇಟ್ಟಿಗೆಗಳನ್ನು ಬೇಯಿಸಬೇಕು. ಮೈದಾನದ ಮೇಲೆ    ಇಟ್ಟಿಗೆಗಳ ನಡುವೆ ಒಂದು ಇಂಚಿನಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು.

ಇಲ್ಲಿವರೆಗೂ ಕಂಪನಿಯು ಹರಿಯಾಣಾ, UP, ಬಿಹಾರ್, ಕರ್ನಾಟಕ, ರಾಜಸ್ಥಾನ್, ತಮಿಳನಾಡು, ಹಾಗೂ ನೆರಹೊರಯ ದೇಶ ನೇಪಾಳಗೆ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸುಮಾರು 250 ಯಂತ್ರಗಳನ್ನು ವಿತರಿಸಿದೆ. ಅಲ್ಲದೆ, ಅಕ್ಟೋಬರ್ 2020 ಭಾರತ ಸರ್ಕಾರದಿಂದ ರಾಷ್ಟ್ರೀಯ ಆರಂಭಿಕ (start-up)ಪ್ರಶಸ್ತಿ ಹಾಗೂ ‘ನಿರ್ಮಾಣ ಅಭಿವೃದ್ಧಿ ಮಾನಿಟರಿಂಗ್ ಸೇವೆಗಳು’ ವಿಭಾಗದ ಅಡಿಯಲ್ಲಿ ಗೆದ್ದು ನಗದು ಬಹುಮಾನವನ್ನು ಸಹ ಪಡೆದಿದ್ದಾರೆ. ಇದು ದೇಶದ ಯುವಕರಿಗೆ ಸ್ಫೂರ್ತಿದಾಯಕವಾಗದೆ.

ಹಾಗೆಯೇ ಇಂತಹ ಸ್ಫೂರ್ತಿದಾಯಕ ಆವಿಷ್ಕಾರಗಳ  ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ಇದನ್ನೂ ಓದಿ – Bigg News – ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್  82 ಕೋಟಿ ‘ಆಧಾರ್ ಕಾರ್ಡ್’ ಡೇಟಾ ‘ಡಾರ್ಕ್ ವೆಬ್’ನಲ್ಲಿ ಮಾರಾಟ

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!