ಬಿಎಸ್‌ಎನ್‌ಎಲ್‌ 4G ಲಾಂಚ್ ಬಗ್ಗೆ ಕೇಂದ್ರ ದಿಂದ ಮಹತ್ವದ ಮಾಹಿತಿ..! ಇಲ್ಲಿದೆ ಡೀಟೇಲ್ಸ್

IMG 20240917 WA0009

ಬಿಎಸ್ಏನ್ಎಲ್ (BSNL) 4G ಲಾಂಚ್ ಮಾಡಲು ಸಿದ್ಧವಾದ ಸರ್ಕಾರ. ಇದರಿಂದ ಗ್ರಾಹಕರಿಗೆ ಸಿಗಲಿದೆ ಭಾರಿ ಲಾಭ.

ಇಂದು ಮೊಬೈಲ್ (Mobile) ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಕೂಡ ಹೆಚ್ಚಿನ ಮೊಬೈಲ್ ಫೋನ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.  ಅದರಲ್ಲೂ 5G, 4G ಅಳುವಡಿಕೆಯ ಮೊಬೈಲ್ ಫೋನ್ ಗಳನ್ನೇ ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ. ಆ ಮೊಬೈಲ್ ಗೆ ಸರಿಹೊಂದುವಂತಹ ಸಿಮ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಖಾಸಗಿ ಟೆಲಿಕಾಂ ಕಂಪನಿಗಳಾದಂತಹ ರಿಲಯನ್ಸ್ ಜಿಯೋ (Reliance Jio) ಭಾರ್ತಿ ಏರ್ಟೆಲ್ (Airtel) ಮತ್ತು ವೊಡಾಫೋನ್ (Vodafone) ಐಡಿಯಾ ಲಿಮಿಟೆಡ್ (IDEA LIMITED) ಈ ರೀತಿಯ ಖಾಸಗಿ ಕಂಪನಿಗಳು ಹೆಚ್ಚಿನ ಮಟ್ಟದ ಸೇವೆಗಳನ್ನು ಪೂರೈಸಿಕೊಂಡು ಜನರ ಮನಸ್ಸನ್ನು ಸೆಳೆದಿದ್ದಾವೆ. ಆದರೆ ಬಿಎಸ್ಎನ್ಎಲ್ ಇನ್ನು ಹಳೆಯ ಕಾಲದಲ್ಲೇ ಬೇರೂರಿದೆ. ಅಂದರೆ ಈಗಲೂ ಕೂಡ 2G, ಹಾಗೂ 3G ಸೇವೆಗಳನ್ನು ಮಾತ್ರ ನೀಡುತ್ತಿದೆ. ಆದ್ದರಿಂದ ಜನರು ಖಾಸಗಿ ಟೆಲಿಕಾಂ ಕಂಪನಿಗಳ ಸಿಮ್ ಗಳತ್ತ ಮುಖ ಮಾಡಿದ್ದಾರೆ. ಇದರಿಂದ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ. ಸದ್ಯ ಬಿಎಸ್ಎನ್ಎಲ್ ಬಳಕೆದಾರರ ಸಂಖ್ಯೆ 8.8 ಕೋಟಿಗೆ ಕುಸಿದಿದೆ. ಆದ್ದರಿಂದ ಬಿಎಸ್ಎನ್ಎಲ್ ಕೂಡ ಕೆಲವು ಖಾಸಗಿ ಕಂಪನಿಗಳಿಗೆ ಪೈಪೋಟಿಯನ್ನು ನೀಡಲು 4G ನೆಟ್ವರ್ಕ್‌ ಅಳವಡಿಕೆಯನ್ನು ಮಾಡಿಕೊಳ್ಳುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸದ್ಯದಲ್ಲೇ ಬಿಎಸ್ಎನ್ಎಲ್ ಕೂಡ ದೇಶದ ಜನಪ್ರಿಯ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಲಿದೆ. 4G ನೆಟ್ವರ್ಕ್ ಅಳವಡಿಕೆಯ ಜೊತೆ ಜೊತೆಯಲ್ಲೇ ಹಲವು ಆಫರ್ ಗಳನ್ನು ನೀಡಲು ಬಯಸುತ್ತಿದ್ದಂತೆಯೇ ಎರಡು ಮೂರು ತಿಂಗಳಿನಿಂದ ಟೆಲಿಕಾಂ ಅಂಗಳದಲ್ಲಿ ಖಾಸಗಿ ಕಂಪನಿಗಳ ನಿದ್ದೆಗೆಡಿಸಿದೆ. ಖಾಸಗಿ ಕಂಪನಿಗಳಲ್ಲಿ ಪೋಸ್ಟ್ ಪೇಡ್ (Post Paid) ಮತ್ತು ಪ್ರಿಪೇಯ್ಡ್ (prepaid) ಬೆಲೆ ಜಾಸ್ತಿ ಇದ್ದು ಈ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ಪೋಸ್ಟ್ ಪೇಡ್ ಮತ್ತು ಪ್ರಿಪೇಡ್ ಗಳಲ್ಲಿ ಗ್ರಾಹಕರಿಗೆ ಶೇಕಡ 15ರಷ್ಟು ಕಡಿಮೆ ಬೆಲೆಯಲ್ಲಿ ಆಫರ್ ಗಳನ್ನು ನೀಡುತ್ತಿದೆ.

ಬಿಎಸ್ಎನ್ಎಲ್ 4G ನೆಟ್ವರ್ಕ್ ಅಳವಡಿಕೆಯಿಂದ ಆಗುವ ಪ್ರಯೋಜನಗಳು :

ಈಗಾಗಲೇ ಬೇರೆ ಸಿಮ್ ಗಳನ್ನು ತೆಗೆದುಕೊಂಡು ಅದರ ಪ್ರಯೋಜನವನ್ನು ಪಡೆಯುತ್ತಿರುವ ಗ್ರಾಹಕರು ಕ್ರಮೇಣ ಬಿಎಸ್ಎಲ್ಎನ್(BSNL) ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದ ಬಿಎಸ್ಎಲ್ ಬಳಕೆದಾರರ ಸಂಖ್ಯೆಯೂ ಕೂಡ ಹೆಚ್ಚಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರವೂ ಕೂಡ ಸಾಥ್ ನೀಡುತ್ತಿದ್ದು ಬಿಎಸ್ಎನ್ಎಲ್ 4G ನೆಟ್ವರ್ಕ್ ಹಲವರಿಗೆ ಮಾಡಲು 6,000 ಕೋಟಿ ಅನುದಾನವನ್ನು ಮೀಸಲಿಟ್ಟ ವರದಿ ಬಹಿರಂಗವಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನಿಸಿದರೆ ಬಿಎಸ್ಎನ್ಎಲ್ ಬಳಕೆದಾರರ ಸಂಖ್ಯೆ ಶೀಘ್ರದಲ್ಲಿ ಏರಿಕೆಯಾಗಲಿದೆ. ಇದರ ಜೊತೆಯಲ್ಲಿ ಬಿಎಸ್ಎನ್ಎಲ್ ರಿಚಾರ್ಜ್ (BSNL Recharge) ಬೆಲೆಗಳು ಕೂಡ ಕಡಿಮೆಯಾಗಲಿದೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya Scindia) ಹೇಳಿರುವ ಪ್ರಕಾರ ಮುಂಬರುವ ವರ್ಷಗಳಲ್ಲಿ ಎಲ್ಲಾ ನಗರಗಳಲ್ಲಿಯೂ ಕೂಡ 4G ನೆಟ್ವರ್ಕ್ ಅನ್ನು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹಾಗೂ 2025ರ ಮಧ್ಯೆದೊಳಗೆ 1ಲಕ್ಷಕ್ಕೂ ಅಧಿಕ ಹೊಸ 4G ಟವರ್ (Tower) ಅಳವಡಿಸಲಾಗುವುದು ಎಂದು ಮಾಹಿತಿ ದೊರಕಿದೆ. ಈಗಾಗಲೇ ಇರುವ ಮಾಹಿತಿಯ ಪ್ರಕಾರ 25000 ಹಳ್ಳಿಗಳಲ್ಲಿ ಇದುವರೆಗೂ ಕೂಡ ಯಾವುದೇ ರೀತಿಯ ಮೊಬೈಲ್ ನೆಟ್ವರ್ಕ್ (Mobile network) ಅಳವಡಿಕೆ ಮಾಡಿಲ್ಲ. ಅಂತಹ ಹಳ್ಳಿಗಳನ್ನು ತಲುಪುವ ಗುರಿಯನ್ನು ಬಿಎಸ್ಎನ್ಎಲ್ ಹೊಂದಿದೆ ಎಂದು ಹೇಳಿದ್ದಾರೆ.ಇದರ ಜೊತೆಯಲ್ಲಿ ದೇಶದ 25000 ಸಾವಿರಕ್ಕೂ ಅಧಿಕ ಹಳ್ಳಿಗಳಲ್ಲಿಯೂ ಕೂಡ ದೂರ ಸಂಚಾರದ ಸಂಪರ್ಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಖಾಸಗಿ ಟೆಲಿಕಾಂ ಕಂಪನಿಗಳಿಂದ  ಬೆಲೆ ಹೆಚ್ಚಳದಿಂದ ಭಾರಿ  ಅನಾಹುತ ಉಂಟಾಗಿದೆ. ರಿಚಾರ್ಜ್ ಬೆಲೆ ಹಾಗೂ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್  ಗಳ ಬೆಲೆ ಹೆಚ್ಚಳವನ್ನು ಎನ್ ಕ್ಯಾಚ್ ಮಾಡಿಕೊಂಡು ಬಿಎಸ್ಎನ್ಎಲ್ ಹೊಸ ಬಳಕೆದಾರರಿಗೆ ಉತ್ತಮ ಆಫರ್ ಅನ್ನು ಕೂಡ ನೀಡುತ್ತಿದೆ.

ದೀಪಾವಳಿ 2024ರೊಳಗೆ 75,000 4G ನೆಟ್‌ವರ್ಕ್ ಅಳವಡಿಕೆಯ ಗುರಿಯನ್ನು ಹೊಂದಿದೆ ಬಿಎಸ್‌ಎನ್‌ಎಲ್:

ಹೌದು ಬಿಎಸ್ಎನ್ಎಲ್ 2024ರ ದೀಪಾವಳಿಯ ಹಬ್ಬದೊಳಗೆ 75,000 4g ನೆಟ್ವರ್ಕ್ ಅಳವಡಿಕೆ ಮಾಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಭಾರತದ ದೇಸಿ ಕಂಪನಿ ಟಿಸಿಎಸ್ ಸಹ ಬಿಎಸ್ಎನ್ಎಲ್ ಗೆ ಸಾಥ್ ನೀಡಿದೆ. ಹಾಗೂ TCS, C-DoT & Tejas Networks 3 38 BSNL 4G ರೋಲ್‌ಔಟ್ ಗಾಗಿ ಟೆಕ್ನಿಕಲ್ ಸಪೋರ್ಟ್ ಪಡೆದುಕೊಂಡಿದೆ.

ಗಮನಿಸಿ :

ಬಿ ಎಸ್ ಏನ್ ಎಲ್  4g ನೆಟ್ವರ್ಕ್ ಅಳವಡಿಕೆಯು 2025ರ ಮಧ್ಯದೊಳಗೆ ಪೂರ್ಣಗೊಳ್ಳಲಿದ್ದು, ಇದರಿಂದ ಹೈ ಸ್ಪೀಡ್ ಡೇಟಾ ಬಳಕೆದಾರರನ್ನು ಸೆಳೆಯೋದು ಸ್ವಲ್ಪ ಕಷ್ಟಕರವಾಗಿದೆ. ಎಲ್ಲಾ ಖಾಸಗಿ ಕಂಪನಿಗಳಿಗೂ ಕೂಡ ಪೈಪೋಟಿಯನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡಿರುವ ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಮತ್ತೆ ತನ್ನತ್ತ ಸೆಳೆದುಕೊಳ್ಳಲು ಉತ್ತಮ ರೀತಿಯ ಬೆಲೆ ಹಾಗೂ ಸೇವೆಗಳನ್ನು ನೀಡುತ್ತಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!