ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ನೀಡಲಿದೆ ಹೊಸ ಪ್ಲಾನ್, ಪಡೆಯಿರಿ 200Mbps ಸ್ಪೀಡ್ ಜೊತೆ 5000GB ಡೇಟಾ..!
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅನ್ನು ಸಂಕ್ಷಿಪ್ತವಾಗಿ ಬಿಎಸ್ಎನ್ಎಲ್ (BSNL) ಎಂದು ಕರೆಯುತ್ತಾರೆ. ಭಾರತೀಯ ಸರ್ಕಾರಿ ಸ್ವಾಮ್ಯದ (Government owned) ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆ ಇದಾಗಿದೆ. ಈ ಸಂಸ್ಥೆಯು ಅನೇಕ ಗ್ರಾಹಕರನ್ನು ಹೊಂದಿದ್ದು, ಸಮಯಕ್ಕೆ ತಕ್ಕಂತೆ ಹೊಸ ಪ್ಲಾನ್, ರಿಯಾಯಿತಿ ದರ, ಹಾಗೂ ಹಲವು ಯೋಜನೆಗಳನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಇನ್ನು ಕೂಡ ತನ್ನ ಜನಪ್ರಿಯತೆನ್ನು ಹೊಂದಿದೆ. ಇದೀಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲ್ಲರೂ ಬೆಚ್ಚಿ ಬೀಳುವಂತ ಆಫರ್ ನೀಡಿದ ಬಿಎಸ್‌ಎನ್‌ಎಲ್ :
ಬಿಎಸ್‌ಎನ್‌ಎಲ್ ಇದೀಗ ತನ್ನ ಗ್ರಾಹಕರಿಗೆ ಮತ್ತೆ ವಿಶೇಷ ಆಫರ್ ನೀಡುವ ಮೂಲಕ ಎಲ್ಲರ ಮನ ಗೆದಿದ್ದೆ. ಹೌದು, ಇಂದು ಬಿಎಸ್‌ಎನ್‌ಎಲ್ ವಿಶೇಷ ಆಫರ್‌ಗಳನ್ನು (special offers) ಪರಿಚಯಿಸುವುದರ ಮೂಲಕ ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಟಕ್ಕರು ನೀಡಿದೆ. ಎಲ್ಲಾ ಟೆಲಿಕಾಂ ಕಂಪನಿಗಳು ಮೊಬೈಲ್ ಡೇಟಾ ಜೊತೆ ಬ್ರಾಡ್‌ಬ್ಯಾಂಡ್ ಸೇವೆಯನ್ನು ಸಹ ನೀಡುತ್ತಿವೆ. ಇದೀಗ ಸರ್ಕಾರಿ ಕಂಪನಿಯಾಗಿರುವ ಬಿಎಸ್‌ಎನ್‌ಲ್ ಎದುರಾಳಿ ಕಂಪನಿಗಳು ನಡುಗುವಂತಹ ಹೊಸ ಪ್ಲಾನ್ (new plan) ಅನ್ನು ಪರಿಚಯಿಸಿದೆ.
200Mbps ಸ್ಪೀಡ್‌ನಲ್ಲಿ 5000GB ಡೇಟಾ ದೊರೆಯುವ ಹೊಸ ಪ್ಲಾನ್ :
ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ (broad brand internet) ಬಳಕೆದಾರರಿಗೆ ಕಡಿಮೆ ಬೆಲೆಯ ಪ್ಲಾನ್ ತಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ ಸಿಗುತ್ತದೆ ಭಾರತ ಸಂಚಾರ ನಿಗಮ ಲಿಮಿಟೆಡ್ ನೀಡುತ್ತಿರುವ 5000GB ಡೇಟಾ ಪ್ಲಾನ್ ಇದಾಗಿದೆ.
ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ನ ಸೌಲಭ್ಯಗಳು (facilities) :
5000GB ಡೇಟಾ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಲು ಗ್ರಾಹಕರು ತಿಂಗಳಿಗೆ 999 ರೂಪಾಯಿ ರೀಚಾರ್ಜ್ ಮಾಡಬೇಕು.
ಈ ಯೋಜನೆಯಡಿ ಗ್ರಾಹಕರಿಗೆ 200Mbps ಸ್ಪೀಡ್‌ನಲ್ಲಿ ಇಂಟರ್‌ನೆಟ್ ಲಭ್ಯವಾಗುತ್ತದೆ.
ಡೇಟಾ ಪ್ಯಾಕ್ ಖಾಲಿಯಾದ ನಂತರ 10Mbps ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್ ಇಂಟರ್‌ನೆಟ್(Unlimited internet) ಲಭ್ಯವಾಗುತ್ತದೆ.
ಈ ಪ್ಲಾನ್ ಮತ್ತೊಂದು ವಿಶೇಷತೆ ಏನೆಂದ್ರೆ ಬಿಎಸ್‌ಎನ್‌ಎಲ್ ಯಾವುದೇ ಇನ್‌ಸ್ಟಾಲೇಷನ್ ಶುಲ್ಕ ಪಡೆಯದೇ ಉಚಿತ ಸೇವೆಯನ್ನು ನೀಡುತ್ತದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಮನೆಗೆ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಇಂಟರ್‌ನೆಟ್ ಸೌಲಭ್ಯ ಸಿಗುತ್ತದೆ.
ಈ ಪ್ಲಾನ್ ನಲ್ಲಿ ಇತರ ಆಫರ್ಸ್ (offer’s) ಮತ್ತು ಕೊಡುಗೆಗಳು :
999 ರೂಪಾಯಿಯಲ್ಲಿಯೇ ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ಹಲವು ಓಟಿಟಿ ಆಪ್ ಗಳ ಉಚಿತ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. ಬಳಕೆದಾರರಿಗೆ Disney Plus Hotstar, Sony LIV, Zee5, YuppTV, Hungama ಸೇರಿದಂತೆ ಹಲವು OTTಯ ಚಂದಾದಾರಿಕೆ ಉಚಿವಾಗಿ ಸಿಗಲಿದೆ. ಇಷ್ಟು ಮಾತ್ರವಲ್ಲದೇ ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ನಂಬರ್‌ಗೆ ಇಡೀ ದೇಶದ ತುಂಬೆಲ್ಲಾ ಅನ್‌ಲಿಮಿಟೆಡ್ ಕಾಲಿಂಗ್ ಫ್ರೀ ಆಫರ್ ಕೊಡಲಾಗುತ್ತದೆ.
ಬಿಎಸ್‌ಎನ್‌ಎಲ್ ನ ಈ ಹೊಸ ಪ್ಲಾನ್ ಅನ್ನು ಪಡೆದುಕೊಳ್ಳಲು ಹೀಗೆ ಮಾಡಿ :
999 ರೂಪಾಯಿಗೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ ಪ್ಯಾಕ್ ಬಗ್ಗೆ ಬಿಎಸ್‌ಎನ್‌ಎಲ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗ್ರಾಹಕರು ತಮ್ಮ ಮೊಬೈಲ್ ನಂಬರ್‌ನಿಂದ ಬಿಎಸ್‌ಎನ್‌ಎಲ್ ನ 18004444 ಈ ಸಂಖ್ಯೆಗೆ ವಾಟ್ಸಪ್‌ನಲ್ಲಿ (whatsapp) Hi ಅಂತ ಟೈಪ್ ಮಾಡಿ ಮೆಸೇಜ್ ಕಳುಹಿಸಬೇಕು ಅಥವಾ ಬಿಎಸ್‌ಎನ್‌ಎಲ್ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಈ ಪ್ಲಾನ್ ಕುರಿತ ಮಾಹಿತಿ ಸಿಗುತ್ತದೆ. ಇಲ್ಲವೇ ನೇರವಾಗಿ ಬಿಎಸ್‌ಎನ್‌ಎಲ್ ವೆಬ್‌ಸೈಟ್ ಅಥವಾ ಸಮೀಪದ ಟೆಲಿಫೋನ್ ಎಕ್ಸ್‌ಚೇಂಜ್ ಕೇಂದ್ರಕ್ಕೆ (Telephone exchange center) ಭೇಟಿ ನೀಡಿ ಫೈಬರ್ ಪ್ಲಾನ್ ಬಗ್ಗೆ ತಿಳಿದುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.