ಗ್ರಾಹಕರಿಗೆ(customers) ಗುಡ್ ನ್ಯೂಸ್ ಕೊಟ್ಟ ಬಿಎಸ್ಎನ್ಎಲ್(BSNL)!. 7 ಹೊಸ ಸೇವೆಗಳ (7 new services) ಜೊತೆ ಬಿಎಸ್ಎನ್ಎಲ್ ಹೊಸ ಲೋಗೋ(New logo) ಅನಾವರಣ.
ಇಂದು ಹಲವಾರು ಟೆಲಿಕಾಂ ಕಂಪನಿಗಳು (Telecom company) ವಿಶೇಷ ಪ್ಲ್ಯಾನ್, ರೀಚಾರ್ಜ್, ರಿಯಾಯಿತಿ ದರಗಳನ್ನು ನೀಡುತ್ತಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗೆಯೇ ರೀಚಾರ್ಜ್ ಪ್ಲ್ಯಾನ್ ಗಳ(recharge plans) ಬೆಲೆ ವಿಷಯಕ್ಕೆ ಬಂದರೆ ಈ ಹಿಂದೆ ಅಷ್ಟೇ ಬೆಲೆ ಏರಿಕೆ ಮಾಡಿದ್ದವು. ಖಾಸಗಿ ಟೆಲಿಕಾಂ ಕಂಪನಿಗಳು (Private Telecom Companies) ತಮ್ಮ ಪ್ರಮುಖ ರೀಚಾರ್ಜ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ್ದವು. ಆದ್ದರಿಂದ ಗ್ರಾಹಕರು ಬೇರೆ ಕಂಪನಿಗಳ ಸಿಮ್ ಗಳನ್ನು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ಬದಲಾಯಿಸುತ್ತಿದ್ದರು. ಹಾಗೆಯೇ ಇದೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗಾಗಿ ಹೊಸ ಸೇವೆಗಳನ್ನು ಪರಿಚಯಿಸುವ ಜೊತೆಯಲ್ಲಿ ತನ್ನ ಹೊಸ ಲೋಗೋವನ್ನು(new logo) ಅನಾವರಣಗೊಳಿಸಿದೆ. 7 ಸೇವೆಗಳು ಯಾವುವು? ಬಿಎಸ್ಎನ್ಎಲ್ ನ ಲೋಗೋ ಹೇಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅನ್ನು ಸಂಕ್ಷಿಪ್ತವಾಗಿ ಬಿಎಸ್ಎನ್ಎಲ್ ಎಂದು ಕರೆಯುತ್ತಾರೆ. ಭಾರತೀಯ ಸರ್ಕಾರಿ ಸ್ವಾಮ್ಯದ (Government owned) ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆ ಇದಾಗಿದೆ. ಈ ಸಂಸ್ಥೆಯು ಅನೇಕ ಗ್ರಾಹಕರನ್ನು ಹೊಂದಿದ್ದು, ಸಮಯಕ್ಕೆ ತಕ್ಕಂತೆ ಹೊಸ ಪ್ಲಾನ್, ರಿಯಾಯಿತಿ ದರ, ಹಾಗೂ ಹಲವು ಯೋಜನೆಗಳನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಇನ್ನು ಕೂಡ ತನ್ನ ಜನಪ್ರಿಯತೆನ್ನು ಹೊಂದಿದೆ. ಇದೀಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ 7 ಹೊಸ ಸೇವೆಗಳನ್ನು ಪರಿಚಯಿಸಿದೆ. ಹಾಗೂ ತನ್ನ ಹೊಸ ಲೋಗೋವನ್ನು ಅನಾವರಣಗೊಳಿಸಿದೆ.
ಹೊಸ ಲೋಗೋ ಎಂದು ಅನಾವರಣಗೊಳಿಸಲಾಯಿತು :
ಅಕ್ಟೋಬರ್(October) 22ರಂದು, ಅವರ ಕೇಂದ್ರ ಸಂವಹನ ಇಲಾಖೆ ಸಚಿವ(Union Minister of Communications) ಜ್ಯೋತಿರಾದಿತ್ಯ ಸಿಂಧಿಯಾ(Jyotiraditya Scindia), ಬಿಎಸ್ಎನ್ಎಲ್ ಹೊಸ ಲೋಗೋ ಅನಾವರಣಗೊಳಿಸಿದರು. ಇದರ ಜೊತೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಏಳು ಹೊಸ ಸೇವೆಗಳನ್ನು ಘೋಷಣೆ ಮಾಡಿದ್ದಾರೆ. ಸದ್ಯದಲ್ಲೇ ಬಿಎಸ್ಎನ್ಎಲ್ 5ಜಿ ಸೇವೆಗಳನ್ನು (5G services) ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುತ್ತದೆ. ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಬಿಎಸ್ಎನ್ಎಲ್ ಬೆಲೆಯನ್ನು ಹೆಚ್ಚಳ ಮಾಡುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಅಧಿಕೃತವಾಗಿ ಹೇಳಿಕೆ ನೀಡಿತ್ತು. ಆದ್ದರಿಂದ ಯಾವುದೇ ಬೆಲೆ ಏರಿಕೆ ಸದ್ಯದ ಪರಿಸ್ಥಿತಿಯಲ್ಲಿ ಆಗುವುದಿಲ್ಲ ಎಂದು ತಿಳಿಸಿದರು.
ಬಿಎಸ್ಎನ್ಎಲ್ ಹೊಸ ಲೋಗೋ ಹೇಗಿದೆ?:
ಅಕ್ಟೋಬರ್ 22ರಂದು ಬಿಎಸ್ಏನ್ಎಲ್ ತನ್ನ ಹೊಸ ಲೋಗೋ ಅನಾವರಣಗೊಳಿಸಿದೆ. ತ್ರಿವರ್ಣ ಮಾದರಿಯಲ್ಲಿ ಇರುವ ಈ ಲೋಗೋದಲ್ಲಿ ಕೇಸರಿ ಬಣ್ಣವನ್ನು ಮುಂಚೂಣಿಯಲ್ಲಿಟ್ಟುಕೊಂಡು ರಾಷ್ಟ್ರೀಯ ಧ್ವಜವನ್ನು(national flag) ಪ್ರತಿಬಿಂಬಿಸುವಂತೆ ಲೋಗೋಸಿದ್ಧಪಡಿಸಲಾಗಿದೆ. ಅಲ್ಲದೆ ಲೋಗೋದಲ್ಲಿ ಈ ಹಿಂದೆ ಇದ್ದಂತಹ ಕನೆಕ್ಟಿಂಗ್ ಇಂಡಿಯಾ(Connecting India) ಎಂಬುದನ್ನು ಬದಲಾಯಿಸಿ ಕನೆಕ್ಟಿಂಗ್ ಭಾರತ್ ಎಂದು ಮಾಡಲಾಗಿದೆ.
ಬಿಎಸ್ಎನ್ಎಲ್ ನೀಡಿರುವ ಏಳು ಹೊಸ ಸೇವೆಗಳು ಯಾವುವು?:
ಸ್ಪ್ಯಾಮ್ ಕರೆಗಳನ್ನು ಪರಿಶೀಲಿಸುವುದು
ಉಚಿತ ವೈ-ಫೈ ರೋಮಿಂಗ್ ಸೇವೆ
ಫೈಬರ್ ಆಧಾರಿತ ಟಿವಿ ಸೇವೆ
ಸಿಮ್ ಕಿಯೋಸ್ಕ್ ಸೇವೆ
ಡೈರೆಕ್ಟ್ ಟು ಡಿವೈಸ್
ವಿಪತ್ತು ಪರಿಹಾರ ಜಾಲ
ಸಂಭಾವ್ಯ ಚಂದಾದಾರರಿಗೆ
ಸ್ಪ್ಯಾಮ್ ಕರೆಗಳನ್ನು ಪರಿಶೀಲಿಸುವುದು(Spam-Free Network):
ಗ್ರಾಹಕರು ಕರೆಗಳನ್ನು ಸ್ವಯಂಚಾಲಿತವಾಗಿ ನಿರ್ಭಂಧಿಸುವ ತಂತ್ರಜ್ಞಾನವನ್ನು ಅಳವಡಿಸಿದೆ. ಈ ಮೂಲಕ ಅನಗತ್ಯ ಅಥವಾ ಸ್ಕ್ಯಾಮ್ ಮೆಸೇಜ್, ಕರೆಗಳನ್ನು ತಪ್ಪಿಸಬಹುದು.
ಉಚಿತ ವೈ-ಫೈ ರೋಮಿಂಗ್ ಸೇವೆ(ational Wi-Fi Roaming):
ಈ ಸೇವೆಯಿಂದ ಗ್ರಾಹಕರು ಅನಗತ್ಯವಾಗಿ ಮೊಬೈಲ್ ಡೇಟಾ ತಡೆದುಕೊಳ್ಳುವುದನ್ನು ತಪ್ಪಿಸಬಹುದು. ಬಿಎಸ್ಎನ್ಎಲ್ ನ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರು ಎಲ್ಲಿಗೆ ಹೋದರು ಬಿಎಸ್ಏನ್ಎಲ್ ಹಾಟ್ ಸ್ಪಾಟ್ ಉಚಿತವಾಗಿ ಪಡೆಯಬಹುದು.
ಫೈಬರ್ ಆಧಾರಿತ ಟಿವಿ ಸೇವೆ(BSNL IFTV):
ಈ ಸೇವೆಯಡಿಯಲ್ಲಿ ಬಿಎಸ್ಏನ್ಎಲ್ ಫೈಬರ್ ಬ್ರಾಡ್‌ಬ್ಯಾಂಡ್ ಮಾಲೀಕರು 500 ಟಿವಿ ಚಾನೆಲ್ ಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಇನ್ನೊಂದು ಖುಷಿಯ ವಿಚಾರ ಏನೆಂದರೆ ಇದರಲ್ಲಿ ಬಿಎಸ್‌ಎನ್‌ಎಲ್ ಫೈಬರ್ ಬ್ರಾಡ್‌ಬ್ಯಾಂಡ್ ಡೇಟಾದ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಸಿಮ್ ಕಿಯೋಸ್ಕ್ ಸೇವೆ (SIM Kiosk):
ಈ ಸೇವೆಯಡಿಯಲ್ಲಿ ಗ್ರಾಹಕರು ತಮಗೆ ಇಷ್ಟ ಬಂದಲ್ಲಿ ಅಥವಾ ಎಲ್ಲಿ ಬೇಕಾದರೂ ಬಿಎಸ್ಎನ್ಎಲ್ ಸಿಮ್ ಖರೀದಿ ಮಾಡಬಹುದು.
ಡೈರೆಕ್ಟ್ ಟು ಡಿವೈಸ್(Direct-to-Device Connectivity):
ಡೈರೆಕ್ಟ್ ಟು ಡಿವೈಸ್ ಸಂಪರ್ಕವನ್ನು ಪರಿಚಯಿಸಿದೆ. ಉಪಗ್ರಹ ಮತ್ತು ಮೊಬೈಲ್ ನೆಟ್‌ವರ್ಕ್‌ಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಇದು ಉಪಗ್ರಹ ಮತ್ತು ಮೊಬೈಲ್ ನೆಟ್‌ವರ್ಕ್‌ಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಆಪತ್ಕಾಲದಲ್ಲಿ ಗ್ರಾಹಕರಿಗೆ ಸಹಾಯಮಾಡುತ್ತದೆ.ಹಾಗೂ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ.
ವಿಪತ್ತು ಪರಿಹಾರ ಜಾಲ(Disaster Relief Network):
ಬಿಎಸ್ಏನ್ಎಲ್ ತನ ಗ್ರಾಹಕರಿಗೆ ಎಲ್ಲಾ ರೀತಿಯಲ್ಲೂ ಕೂಡ ಸಹಾಯ ಮಾಡುತ್ತಿದ್ದು, ಇದೀಗ ತುರ್ತು ಪರಿಸ್ಥಿತಿಗಳಲ್ಲಿಯೂ ಕೂಡ ಸುರಕ್ಷಿತ ನೆಟ್ವರ್ಕ್ ಒದಗಿಸುತ್ತದೆ.
ಸಂಭಾವ್ಯ ಚಂದಾದಾರರಿಗೆ(potential subscribers):
ಈ ಎಲ್ಲವುದರ ಜೊತೆಯಲ್ಲಿ ಸಂಭಾವ್ಯ ಚಂದದಾರರಿಗೆ ಆಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಜೊತೆಯಲ್ಲಿ 9444133233, 94444099099 ನಂತಹ ಸಂಖ್ಯೆಗಳನ್ನು ಇ-ಹರಾಜು ಮೂಲಕ ಖರೀದಿಸಬಹುದು. ಇ-ಹರಾಜು ಸೇವೆ ಪ್ರಸ್ತುತ ಚೆನ್ನೈ, ಉತ್ತರಪ್ರದೇಶ ಮತ್ತು ಹರಿಯಾಣದಲ್ಲಿ ನಡೆಯುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.