Business Idea: ಕಡಿಮೆ ದುಡ್ಡು ಇದ್ರೂ ಈ ಬ್ಯುಸಿನೆಸ್‌ ಶುರು ಮಾಡಿ ಹಣ ಗಳಿಸಿ !

IMG 20241024 WA0000

ಬ್ಯುಸಿನೆಸ್ ಮಾಡಬೇಕು ಎಂಬ ಆಲೋಚನೆ ಇದೆಯೇ? ಆದರೆ ಕೈಯಲ್ಲಿ ಕಡಿಮೆ ಬಜೆಟ್ (Low budget) ಇದ್ದರೆ ಈ ವ್ಯಾಪಾರಗಳನ್ನು ಪ್ರಾರಂಭಿಸಿ ನಿಮ್ಮ ಸ್ವಂತ ಬ್ಯುಸಿನೆಸ್ ಶುರುಮಾಡಿ.

ಬ್ಯುಸಿನೆಸ್ (Business) ಮಾಡಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದು ದುಡ್ಡೇ ದೊಡ್ಡಪ್ಪ ಆಗಿರುವುದರಿಂದ ದುಡ್ಡಿಲ್ಲ ಅಂದ್ರೆ ಏನು ಮಾಡೋಕಾಗಲ್ಲ. ಅದರಲ್ಲೂ ನಾವು ಯಾವುದಾದರೂ ವ್ಯಾಪಾರ ಶುರು ಮಾಡುತ್ತೇವೆ ಎಂದರೆ ಲಕ್ಷಗಟ್ಟಲೆ ದುಡ್ಡು ಇರಬೇಕು. ಆದ್ದರಿಂದ ವ್ಯಾಪಾರ ಮಾಡುವ ಆಸೆ ಇದ್ದರೂ ಕೂಡ ಹಣ ಇಲ್ಲ ಎಂಬ ಒಂದೇ ಕಾರಣಕ್ಕೆ ಬ್ಯುಸಿನೆಸ್‌‌ ಶುರು ಮಾಡುವ ಯೋಚನೆಯನ್ನು ಬಿಟ್ಟಿರುತ್ತಾರೆ. ಅಂಥವರಿಗೆ ಇಲ್ಲೊಂದಷ್ಟು ವ್ಯಾಪಾರಗಳಿವೆ, ಕಡಿಮೆ ಬಂಡವಾಳದಲ್ಲಿ ಲಕ್ಷಗಟ್ಟಲೆ ದುಡಿಯುವಂತಹ ದುಡಿಮೆಗಳಿವು. ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ವ್ಯಾಪಾರಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಕಡಿಮೆ ಬಂಡವಾಳದಿಂದ(With less capital) ಸಾಕಷ್ಟು ಬ್ಯುಸಿನೆಸ್‌‌ಗಳನ್ನು ಶುರುಮಾಡಬಹುದು. ಆದರೆ ಬ್ಯುಸಿನೆಸ್‌‌ ಮಾಡುತ್ತೀರಾ ಎಂದರೆ ಮೊದಲಿಗೆ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವಿರಬೇಕು. ಲಾಭಗಳಿಸುವುದು ಸ್ವಲ್ಪ ತಡವಾದರೂ ಪರವಾಗಿಲ್ಲ ಕಾಯುವ ಮನಸ್ಥಿತಿ ಇರಬೇಕು. ವ್ಯಾಪಾರ ಶುರುಮಾಡಲು ಸರಿಯಾದ ಸಮಯ ಹಾಗೂ ಪರಿಶ್ರಮ ಬಹಳ ಮುಖ್ಯ. ಇದರ ಜೊತೆಯಲ್ಲಿ ತಾಳ್ಮೆ ಸೇರಿಕೊಂಡರೆ ನಿಮಗೆ ಯಶಸ್ಸು ಕಟ್ಟಿಟ್ಟಬುತ್ತಿ. ಸುಲಭವಾಗಿ ಸಣ್ಣ ವ್ಯಾಪಾರಗಳನ್ನು ಸರಿಯಾದ ಯೋಜನೆಗಳೊಂದಿಗೆ(with right plans) ಮಾಡಿದರೆ ನಿಮ್ಮ ಕಷ್ಟಗಳೆಲ್ಲ ದೂರವಾಗಿ ಲಕ್ಷಗಟ್ಟಲೆ ಸಂಪಾದನೆ ಮಾಡಬಹುದು.

ಅದರಲ್ಲೂ ಜನರ ಆಸೆ ಹಾಗೂ ಅಭಿಲಾಷೆಗಳು ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಜನರು ಏನನ್ನು ಇಷ್ಟಪಡುತ್ತಿದ್ದಾರೆ ಎಂಬ ವಿಷಯವನ್ನು ಅರಿತುಕೊಂಡು ಈ ನಿಟ್ಟಿನಲ್ಲಿ ವ್ಯವಹಾರಗಳನ್ನು ಮಾಡಲು ಮುಂದಾಗಬೇಕು. ಅದರಲ್ಲೂ ಇಂದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ವ್ಯವಹಾರಗಳನ್ನು ಮಾಡುವುದರಿಂದ ಕಡಿಮೆ ಸಮಯ ಹಾಗೂ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭಗಳಿಸಬಹುದು. 

ಯಾವೆಲ್ಲ ವ್ಯಾಪಾರ ಕ್ಷೇತ್ರಗಳಲ್ಲಿ ಕಡಿಮೆ ಖರ್ಚಿನಲ್ಲಿ ಲಾಭಗಳಿಸಬಹುದು:

ಕಾಫಿ ಶಾಪ್
ದಿನಸಿ ಅಂಗಡಿ
ಟಿಫಿನ್ ಸರ್ವೀಸ್ ಬ್ಯುಸಿನೆಸ್
ಕೌಡ್ ಕಿಚನ್
ಸಲೂನ್ ಬ್ಯುಸಿನೆಸ್!
ಕಾರ್ ವಾಶಿಂಗ್ ಬಿಸಿನೆಸ್

ಕಾಫಿ ಶಾಪ್(coffee shop):

ಇತ್ತೀಚಿನ ದಿನಗಳಲ್ಲಿ ಕಾಫಿ ಕುಡಿಯುವವರ ಟ್ರೆಂಡ್ ಹೆಚ್ಚಾಗುತ್ತಿದ್ದು, ಸರಿಯಾದ ಯೋಜನೆಯನ್ನು ಮಾಡಿಕೊಂಡು ಕಾಫಿ ಶಾಪ್ ಓಪನ್ ಮಾಡಿದರೆ ಉದ್ಯೋಗದಲ್ಲಿ ನಷ್ಟವಾಗುವ ಮಾತೇ ಇಲ್ಲ. ಕಾಫಿ ಶಾಪ್ ತೆರೆಯಲು ಕಡಿಮೆ ಬಜೆಟ್(Low budget) ಬೇಕಾಗುತ್ತದೆ. ಕಡಿಮೆ ಬಂಡವಾಳವನ್ನು ಹೂಡಿ ಹೆಚ್ಚಿನ ಸಂಪಾದನೆಯನ್ನು ಮಾಡಬಹುದು. ಆದರೆ ಕಾಫಿ ಶಾಪ್ ತೆರೆಯಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಿ. ಹೆಚ್ಚಿನ ಜನರು ಕೆಲಸ ಕಾರ್ಯಗಳಿಗೆ ತೆರಳುವ ದಾರಿಯಲ್ಲಿ ಅಥವಾ ಕಚೇರಿಗಳ ಪಕ್ಕದಲ್ಲಿ ಈ ರೀತಿಯ ಸ್ಥಳಗಳಲ್ಲಿ ಕಾಫಿ ಶಾಪ್ ತೆರೆದರೆ ಹೆಚ್ಚಿನ ಲಾಭವಾಗುತ್ತದೆ.

ದಿನಸಿ ಅಂಗಡಿ(grocery store):

ತಂತ್ರಜ್ಞಾನದಿಂದ(technology) ಭಾರತ(India) ಎಷ್ಟೇ ಮುಂದುವರೆದರು ಕೆಲವೊಂದಷ್ಟು ಹಳೆಯ ಸಂಪ್ರದಾಯವನ್ನು ಜನರು ಬಿಡಲು ತಯಾರಿಲ್ಲ. ಈ ನಿಟ್ಟಿನಲ್ಲಿ ಒಳ್ಳೆ ಒಳ್ಳೆ ಮಾಲ್ ಗಳು ಇದ್ದರೂ ಕೂಡ ಜನರು ದಿನಸಿ ಅಂಗಡಿಗಳತ್ತ ಮುಖ ಮಾಡುತ್ತಾರೆ. ಕಾರಣ ದಿನಸಿ ಅಂಗಡಿಗಳಲ್ಲಿ ಚೌಕಾಸಿ ಮಾಡಬಹುದು ಹಾಗೂ ಸಣ್ಣಪುಟ್ಟ ವಸ್ತುಗಳು ಕಿರಾಣಿ ಅಂಗಡಿಗಳಲ್ಲಿ ಸಿಗುತ್ತವೆ. ಆದ್ದರಿಂದ ದಿನಸಿ ಅಂಗಡಿಯನ್ನು ತೆರೆದು ಒಳ್ಳೆಯ ಲಾಭವನ್ನು ಗಳಿಸಬಹುದು. ಆದರೆ ದಿನಸಿ ಅಂಗಡಿಯಲ್ಲಿ ಎಲ್ಲಾ ರೀತಿಯ ಗೃಹಪಯೋಗಿ ವಸ್ತುಗಳು ಸಿಗುವಂತೆ ನೋಡಿಕೊಳ್ಳಬೇಕು.

ಟಿಫಿನ್ ಸರ್ವೀಸ್ ಬ್ಯುಸಿನೆಸ್(Tiffin Service Business):

ಮನುಷ್ಯ ಎಷ್ಟೇ ದುಡಿದರು ಸರಿಯಾದ ಊಟ ಇಲ್ಲದಿದ್ದರೆ ದುಡಿಯುವ ದುಡ್ಡಿಗೂ ಅರ್ಥವಿಲ್ಲದಂತಾಗುತ್ತದೆ. ಆದ್ದರಿಂದ ರುಚಿಕರವಾದ ಊಟ ಶುದ್ಧವಾಗಿದ್ದು ಕಡಿಮೆ ದುಡ್ಡಿನಲ್ಲಿ ಸಿಗುತ್ತಿದೆ ಎಂದರೆ ಜನರು ನಿಮ್ಮ ಅಂಗಡಿ ಬಳಿ ಬರುತ್ತಾರೆ. ಇನ್ನು ನೀವು ಸೊಗಸಾಗಿ ಅಡುಗೆ ಮಾಡುತ್ತೀರಾ ಎಂದರೆ ಏಕೆ ಅದನ್ನು ಮಾರಾಟ ಮಾಡಬಾರದು? ಅದರಲ್ಲೂ ಇಂದಿನ ಜನರು ಸ್ಥಳೀಯ ತಿಂಡಿ ತಿನಿಸುಗಳಿಗೆ ಹೆಚ್ಚು ಇಷ್ಟ ಕೊಡುತ್ತಿರುವುದರಿಂದ ಸ್ಥಳೀಯ ಊಟವನ್ನು ಮಾಡಲು ಮುಂದೆ ಬರುತ್ತಾರೆ. ಆದ್ದರಿಂದ ಸರಳವಾಗಿ, ಸೊಗಸಾಗಿ, ರುಚಿಯಾಗಿ, ಶುದ್ಧವಾಗಿ ಟಿಫಿನ್ ಸರ್ವೀಸ್ ಬ್ಯುಸಿನೆಸ್ ಶುರುಮಾಡಿದರೆ  ನಿಮ್ಮ ಈ ವ್ಯಾಪಾರ ನಿಮಗೆ ಹೆಚ್ಚು ಲಾಭ ತಂದುಕೊಡುತ್ತದೆ.

ಕೌಡ್ ಕಿಚನ್:

ಕೌಡ್ ಕಿಚನ್‌ ಅನ್ನು ವರ್ಚುವಲ್ ಕಿಚನ್ ಅಥವಾ ಡೆಲಿವರಿ ಕಿಚನ್ ಎಂದೂ ಕರೆಯಲಾಗುತ್ತದೆ. ಕೌಡ್ ಕಿಚನ್‌ ಎಂಬುದು ಕೇಂದ್ರೀಕೃತ ವಾಣಿಜ್ಯ ಆಹಾರ ಉತ್ಪಾದನಾ ಸೌಲಭ್ಯವಾಗಿದೆ. ಕೌಡ್ ಕಿಚನ್‌ಗಳು ಸೌಲಭ್ಯ ಸೇವೆಗಳನ್ನು ನೀಡುತ್ತವೆ. ವರ್ಷದಿಂದ ವರ್ಷಕ್ಕೆ ಕೌಡ್ ಕಿಚನ್‌ಗಳ ಸಂಖ್ಯೆಯು ಹೆಚ್ಚುತ್ತಿದೆ ಆದ್ದರಿಂದ ಕಡಿಮೆ ಖರ್ಚಿನಲ್ಲಿ ಕೌಡ್ ಕಿಚನ್‌ಗಳನ್ನು ಪ್ರಾರಂಭಿಸಿ ಒಳ್ಳೆಯ ಲಾಭವನ್ನು ಗಳಿಸಬಹುದು.

ಸಲೂನ್ ಬ್ಯುಸಿನೆಸ್(Salon Business):

ಇಂದು ಜನರು ತಾವು ಚೆನ್ನಾಗಿ ಕಾಣಿಸಬೇಕು ಎಲ್ಲರಿಗಿಂತಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸಲೂನ್‌ಗಳು (Salon) ಮತ್ತು ಪಾರ್ಲರ್ ಗಳಿಗೆ(Parlor) ಹಣವನ್ನು ಇಡುತ್ತಾರೆ. ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಒಂದೊಳ್ಳೆ ಪಾರ್ಲರ್ ಅಥವಾ ಸಲೂನ್ ಅನ್ನು ತೆರೆದರೆ ಒಳ್ಳೆಯ ಲಾಭವನ್ನು ಗಳಿಸಬಹುದು. ಆದರೆ ಇದಕ್ಕಾಗಿ ಉತ್ತಮ ತರಬೇತಿ ಪಡೆದ ಉದ್ಯೋಗಿಗಳ ಅವಶ್ಯಕತೆ ಇರುತ್ತದೆ. ನಿಮ್ಮ ಸಲೂನ್ ಅಥವಾ ಪಾರ್ಲರ್ ವಿಶ್ವಾಸಾರ್ಹವಾದದ್ದು ಎಂದರೆ ಜನರು ನಿಮ್ಮ ಅಂಗಡಿಗೆ ಬರಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಈ ಬ್ಯುಸಿನೆಸ್ ನಲ್ಲಿ ನೈಜತೆ ಹಾಗೂ ನಿಖರತೆ ಬಹಳ ಮುಖ್ಯ.

ಕಾರ್ ವಾಶಿಂಗ್ ಬಿಸಿನೆಸ್(Car washing business):

ಇಂದು ತಂತ್ರಜ್ಞಾನ(Technology) ಹೆಚ್ಚು ಮುಂದುವರೆಯುತ್ತಿರುವುದರಿಂದ ಎಲ್ಲರೂ ವಾಹನಗಳನ್ನು (Vehicles) ಖರೀದಿಸಿರುತ್ತಾರೆ. ಆದರೆ ಆ ವಾಹನಗಳ ಮೇಂಟೆನೆನ್ಸ್(Maintenance) ಮಾಡಲು ಅವರ ಬಳಿ ಸಮಯ ಇರುವುದಿಲ್ಲ. ಕೆಲಸದ ಒತ್ತಡದಲ್ಲಿ ವಾಹನಗಳನ್ನು ಕ್ಲೀನ್ ಮಾಡಲು ಸಮಯ ಇರುವುದಿಲ್ಲ. ಹಾಗಾಗಿ ಕಾರ್ ವಾಶಿಂಗ್ ಬಿಸಿನೆಸ್ ಪ್ರಾರಂಭಿಸಿ ಒಳ್ಳೆಯ ಸಂಪಾದನೆಯನ್ನು ಮಾಡಬಹುದು. ಆದರೆ ಕಾರ್ ವಾಶಿಂಗ್ ಬಿಸಿನೆಸ್ ಶುರು ಮಾಡಲು ಸ್ವಚ್ಛಗೊಳಿಸುವ ಯಂತ್ರ ಬಹಳ ಮುಖ್ಯ. ಹಾಗೂ ಒಮ್ಮೆ ಇದನ್ನು ಖರೀದಿ ಮಾಡಿದರೆ ಎಷ್ಟು ವರ್ಷಗಳು ಬಂಡವಾಳವಿಲ್ಲದೆ ಲಾಭವನ್ನು ಗಳಿಸಬಹುದು.

ಸಾಧ್ಯವಾದರೆ, ಅದರಲ್ಲೂ ನಿಮ್ಮ ಬಳಿ ಕಡಿಮೆ ಬಂಡವಾಳ(Low capital) ಇದೆ ಎಂದರೆ ಈ ರೀತಿಯ ವ್ಯಾಪಾರಗಳನ್ನು ಶುರುಮಾಡಿ ಒಳ್ಳೆಯ ಲಾಭಗಳಿಸಬಹುದು. ಈ ರೀತಿಯ ವ್ಯಾಪಾರಗಳಲ್ಲಿ ಖರ್ಚಿಗಿಂತ ಒಂದು ತೂಕ ಲಾಭವೇ ಹೆಚ್ಚುರುತ್ತದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!