DTH & ಕೇಬಲ್ ಟಿವಿ ಚಂದಾದಾರರೆ ಗಮನಿಸಿ ; ಕಡಿಮೆಯಾಗಲಿದೆ ನಿಮ್ಮ ಮಾಸಿಕ ಬಿಲ್ ದರ..!

IMG 20240711 WA0001

ಮಾಸಿಕ ಬಿಲ್ ಕಡಿಮೆ ಮಾಡಿ, ತನ್ನ ಚೆಂದಾದರರಿಗೆ ಗುಡ್ ನ್ಯೂಸ್ ನೀಡಿದ ಕೇಬಲ್, ಡಿಟಿಹೆಚ್(DTH)!

ಇಂದು ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದೆ ಇದೆ. ಸ್ಮಾರ್ಟ್ಫೋನ್ ಇಲ್ಲದೆ ದಿನನಿತ್ಯ ಜೀವನ ನಡೆಯುವುದೇ ಇಲ್ಲ. ಸ್ಮಾರ್ಟ್ ಫೋನ್ ಗಳು ಬಹಳ ಉಪಯುಕ್ತವಾಗಿದ್ದು, ಮನೋರಂಜಕ ವಸ್ತುವೂ ಆಗಿದೆ. ಹಾಗೆ ಎಂಟರ್ಟೈನ್ಮೆಂಟ್ (Entertainment) ಗೆಂದು ಇರುವ ಇನ್ನೊಂದು ವಸ್ತು ಎಂದರೆ ಅದು ಟಿವಿ. ಇಂದು ನಾವು ಟಿವಿಗಳಲ್ಲಿ ಕೂಡ ಬಹಳ ಬದಲಾವಣೆಯನ್ನು ನೋಡಬಹುದು. ಅತಿ ಹೆಚ್ಚು ಜನರು ಸ್ಮಾರ್ಟ್ ಟಿವಿಗಳನ್ನು (smart TV) ಬಳಸುತ್ತಿದ್ದಾರೆ. ಹಾಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್ ಗಳನ್ನು ಒಳಗೊಂಡ ಸ್ಮಾರ್ಟ್ ಟಿವಿ ದೊರೆಯುತ್ತದೆ. ಅದರಲ್ಲೂ ಇಂದು ಕೇಬಲ್ ಟಿವಿಯನ್ನು ಬಳಸುತ್ತಿದ್ದಾರೆ. ಹೆಚ್ಚು ಜನಪ್ರಿಯವಾಗಿರುವ ಕೇಬಲ್, ಡಿಟಿಎಚ್ (cable, DTH) ಇಂದು ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೇಬಲ್ ಮತ್ತು ಡಿಟಿಹೆಚ್  ಮಾಸಿಕ ಬಿಲ್ (monthly bill) ಅಗ್ಗವಾಗಿದೆ :

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು ನಿಯಂತ್ರಿಸುವ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಪ್ರಕಟಿಸಿದೆ. ಇದು ದೇಶಾದ್ಯಂತ ಇರುವ ಲಕ್ಷಾಂತರ ಡಿಟಿಎಚ್ ಮತ್ತು ಕೇಬಲ್ ಟಿವಿ ಬಳಕೆದಾರರಿಗೆ (Cable TV Subscriber ) ದೊಡ್ಡ ಲಾಭ ನೀಡಲಿದೆ. ಪ್ರಮುಖವಾಗಿ ಸೆಟ್-ಟಾಪ್ ಬಾಕ್ಸ್ ಗಳನ್ನು ಬದಲಾಯಿಸದೇ ಒಂದು ಸೇವಾದಾರರಿಂದ ಮತ್ತೊಂದು ಸೇವಾದಾರರಿಗೆ ಬದಲಾಯಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿದೆ. ಹೀಗಾಗಿ ಸೆಟ್ ಅಪ್ ಬಾಕ್ಸ್ ಗೆ ಪದೇ ಪದೇ ಹಣ ಪಾವತಿಸುವ ಪ್ರಮೇಯ ಇರುವುದಿಲ್ಲ. ಜತೆಗೆ ಒಟ್ಟು ಮಾಸಿಕ ಬಿಲ್  ಕೂಡ ಅಗ್ಗವಾಗಲಿದೆ.

ಕಡಿಮೆ ಶುಲ್ಕ ವಿಧಿಸುವ ಆಯ್ಕೆ :

ಸೇವಾ ಪೂರೈಕೆದಾರರು ಗ್ರಾಹಕರಿಗೆ ವಿಧಿಸುವ ಎನ್ಸಿಎಫ್ ಅಥವಾ ನೆಟ್ವರ್ಕ್ ಸಾಮರ್ಥ್ಯ ಶುಲ್ಕವನ್ನು ಟ್ರಾಯ್ ತೆಗೆದುಹಾಕಿದೆ ಎಂದು ಹೇಳಲಾಗಿದೆ. ಅಂದರೆ 200 ಚಾನೆಲ್ ಗಳಿಗೆ 130 ರೂ., 200 ಕ್ಕೂ ಹೆಚ್ಚು ಚಾನೆಲ್ ಗಳಿಗೆ 160 ರೂ. ಸೇವಾ ಪೂರೈಕೆದಾರರಿಗೆ ಸ್ಪರ್ಧಾತ್ಮಕ ಮನೋಭಾವ ಮತ್ತು ಪ್ರಾದೇಶಿಕ ಸಮಸ್ಯೆಗಳು ಇತ್ಯಾದಿಗಳ ಹೆಸರಿನಲ್ಲಿ ಕಡಿಮೆ ಶುಲ್ಕ ವಿಧಿಸುವ ಆಯ್ಕೆಯನ್ನು ನೀಡಲಾಗಿದೆ.

ದರ ಕಡಿಮೆಯ ಆದೇಶ:

ನೆಟ್ವರ್ಕ್ ಸಾಮರ್ಥ್ಯ ಶುಲ್ಕ (ಎನ್  ಸಿಎಫ್) ಮಿತಿ ತೆಗೆದುಹಾಕಿರುವ ಕಾರಣ ಸೇವಾ ಪೂರೈಕೆದಾರರು ಈಗ ವಿವಿಧ ಅಂಶಗಳ ಆಧಾರದ ಮೇಲೆ ವಿಭಿನ್ನ ಎನ್  ಸಿಎಫ್  (NCF) ಗಳನ್ನು ಹೊಂದಿಸಬೇಕು. ಆದರೆ ಈ ಶುಲ್ಕಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು. ಅವರು ತಮ್ಮ ಆಯ್ಕೆಯನ್ನು ಪಡೆದುಕೊಳ್ಳಬಹುದು.

ಡಿಪಿಒಗಳು ಈಗ ಚಾನೆಲ್ ಬಂಡಲ್ ಗಳ ಮೇಲೆ 45% ವರೆಗೆ ರಿಯಾಯಿತಿಯನ್ನು ನೀಡಬಹುದು. ಹಿಂದಿನ ಮಿತಿ 15% ಮಾತ್ರ ಇತ್ತು. ಹೀಗಾಗಿ ಪಾವತಿಸುವ ಮೊತ್ತ ಕಡಿಮೆಯಾಗಲಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!