ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆಯ ಜಾರಿ ಮುಂದಕ್ಕೆ ಹೋಗುವ ಸಾಧ್ಯತೆ ಇರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಹಲವಾರು ಮಂದಿ ಅರ್ಜಿಯನ್ನು ಸಲ್ಲಿಸಿ ಹಣ ಎಂದು ಬರುತ್ತದೆ ಎಂದು ಕಾಯುತ್ತಿದ್ದಾರೆ. ಹೀಗೆ ಕಾಯುತ್ತಿರುವ ಜನರಿಗೆ ಸರ್ಕಾರವು ಒಂದು ಶಾಕಿಂಗ್ ನ್ಯೂಸ್ ನೀಡಿದೆ. ಅದೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಅನರ್ಹ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಮತ್ತು ಹಣ ಬಿಡುಗಡೆ ದಿನಾಂಕವನ್ನು ಮತ್ತೆ ಎರಡು ದಿನ ಮುಂದೂಡಿದ್ದಾರೆ. ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ? ಗೃಹಲಕ್ಷ್ಮಿ ಯೋಜನೆಯ ಹಣ ಯಾವತ್ತು ಖಾತೆಗೆ ಬರುತ್ತದೆ?, ಏಕೆ ದಿನಾಂಕವನ್ನು ಮುಂದೂಡಲಾಗಿದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಕೊನೆಗೂ ಗೃಹಲಕ್ಷ್ಮಿಯ ಹಣ ವರ್ಗಾವಣೆಗೆ ಮುಹೂರ್ತ ಫಿಕ್ಸ್
ಇದೇ ಆಗಸ್ಟ್ 15ನೇ ದಿನದಂದು ಸ್ವತಂತ್ರ ದಿನಾಚರಣೆಯ ನಂತರ, ಆಗಸ್ಟ್ 16ನೇ ದಿನಾಂಕದ ಒಳಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮೊದಲ ತಿಂಗಳ 2,000 ರೂಪಾಯಿಗಳನ್ನು ಜಮಾ ಮಾಡೋದಾಗಿ ಹೇಳಿದ್ದರು. ಆದರೆ, ಗೃಹಲಕ್ಷ್ಮಿ ಯೋಜನೆಯನ್ನು ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆಯಿಸಿ ಚಾಲನೆ ನೀಡಲು ಸರ್ಕಾರವು ಆಲೋಚಿಸಿದೆ ಆದ್ದರಿಂದ ಆಗಸ್ಟ್ 28 ಅಥವಾ 29 ರಂದು ಡಿ ಬಿ ಟಿ ಮುಖಾಂತರ ಮನೆಯ ಯಜಮಾನಿ ಗೆ ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ? Gruhalakshmi Cancelled List
ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices
ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
ನಂತರ e-Ration Card ಎಂಬ ಆಯ್ಕೆಯಲ್ಲಿ Show cancelled/Suspended ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.
ಇನ್ನೇನು ಎಲ್ಲ ಮಹಿಳೆಯರಿಗೂ ಹಣ ಬರುತ್ತದೆ ಎಂಬ ಖುಷಿಯ ಸಮಯದಲ್ಲಿ ಸರ್ಕಾರವು ಇನ್ನೊಂದು ನಿಯಮವನ್ನು ಜಾರಿಗೆ ತಂದಿದೆ. ಅದೇನೆಂದರೆ, ಬಿಪಿಎಲ್ ಕುಟುಂಬದ ಯಜಮಾನಿಗೆ ಮಾತ್ರ ರೂ.2000 ಅಂತ ಹೇಳಲಾಗಿದ್ದು. 5 ಎಕರೆ ಮೀರಿದ ಒಣ ಭೂಮಿ ಹೊಂದಿರುವ ಜನರಿಗೆ 2000 ಬೇಡ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಾಲ್ಕು ಚಕ್ರಗಳ ವಾಹನ ಹೊಂದಿದ ಕುಟುಂಬದವರಿಗೆ ಹಣವನ್ನು ನೀಡಲಾಗದು ಎನ್ನುತ್ತಿದ್ದಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಯಾರಿಗೂ ಬೇಡ ಎಂದು ಹೇಳಲಾಗಿದೆ.
ಸರ್ಕಾರಿ ಉದ್ಯೋಗ ಮತ್ತು ಪೆನ್ಷನ್ ಪಡೆಯುವವರೆಗೂ ಬೇಡ ಎಂದು ಹೇಳಲಾಗಿದೆ. ಸರ್ಕಾರ ಇನ್ಕಮ್ ಟ್ಯಾಕ್ಸ್ ಪಾವತಿದಾರರ ಕುಟುಂಬಕ್ಕೂ ಹಣ ದೊರೆಯುವುದಿಲ್ಲ. ಜಿಎಸ್ಟಿ ರಿಟರ್ನ್ ಪಾವತಿಸುವ ಮಹಿಳೆಯರಿಗೂ ನೀಡಬಾರದು. ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೂ ಕೊಡಬಾರದು ಎಂದು ಸರ್ಕಾರ ತಿಳಿಸಿದೆ ಎಂದು ಸುದ್ದಿಗಳು ಹೇಳುತ್ತಿವೆ. ಅದೇನೆ ಇದ್ದರೂ ಒಂದು ಒಂದು ಬಾರಿ ಹಣ ಜಮಾ ಆದ ನಂತರ ಯಾರ್ಯಾರಿಗೆ ಬಂದಿದೆ ಎಂದು ತಿಳಿಯಿತ್ತದೆ.
ಸೂಚನೆ – ಮನೆಯ ಯಜಮಾನಿಯರಿಗೆ 2000 ಕೊಡುತ್ತಿದ್ದರಿಂದ, ರೇಷನ್ ಕಾರ್ಡ್ ನಲ್ಲಿ ಇರುವ ಮನೆ ಯಜಮಾನಿಯರನ್ನೇ ಗೃಹಲಕ್ಷ್ಮಿ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಕೆಳಗಿನ ಕಾರಣಗಳನ್ನು ಕೊಟ್ಟು ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರಿಗೂ 2000 ಹಣ ಬರುವುದಿಲ್ಲ ಎಂದು ಹೇಳಬಹುದು
ಇದೇ ಆಗಸ್ಟ್ 29 ರಂದು ಈ ಕೆಳಗಿನ ಪಟ್ಟಿಯಲ್ಲಿಇರುವ ಮನೆ ಯಜಮಾನಿಯರಿಗೆ ಸಿಗಲಿದೆ ರೂ.2000ಗಳು ನಿಮ್ಮ ಹೆಸರನ್ನು ಈಗಲೇ ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿಯ ಮನೆ ಯಜಮಾನಿಯರ ಪಟ್ಟಿ ಬಿಡುಗಡೆ.
ಗೃಹಲಕ್ಷ್ಮಿ ಹಣ ಪಡೆದುಕೊಳ್ಳಲು ಅಗಸ್ಟ ತಿಂಗಳ ಮನೆ ಯಜಮಾನಿಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಹೆಸರಿಗೆ ಚೆಕ್ ಮಾಡಿಕೊಳ್ಳಿ. ಕೆಳಗೆ ಕೊಟ್ಟಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ahara.kar.nic.in/Home/EServices
ನಿಮ್ಮ ಮೊಬೈಲ್ ಫೋನ ಮುಖಪುಟದ ಎಡಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ e-Ration card ಸೆಲೆಕ್ಟ್ ಮಾಡಿಕೊಂಡು ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ಇಲ್ಲಿ ತೋರಿಸುತ್ತಿರುವ ಬಾಕ್ಸ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ ಮತ್ತು ಗ್ರಾಮವನ್ನು ಸೆಲೆಕ್ಟ್ ಮಾಡಿ Go ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಯಜಮಾನಿಯರ ಕಂಪ್ಲೀಟ್ ಡೀಟೇಲ್ಸ್ ಕಾಣಿಸುತ್ತದೆ
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ