ಕರ್ನಾಟಕದ ಜಾತಿ ಗಣತಿ ವರದಿ
ಬೆಂಗಳೂರು: ಕರ್ನಾಟಕ ಸರ್ಕಾರದ ಜಾತಿ ಗಣತಿ ವರದಿ (ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆ) ಅಧಿಕೃತವಾಗಿ ಬಹಿರಂಗವಾಗಿದೆ. ಈ ವರದಿಯ ಪ್ರಕಾರ, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಅತ್ಯಧಿಕವಾಗಿದ್ದು, ಅದು 72.25 ಲಕ್ಷ (18.7%) ಎಂದು ತಿಳಿದುಬಂದಿದೆ. ಇದು SC/ST, OBC, ಲಿಂಗಾಯಿತ ಮತ್ತು ಇತರೆ ಸಮುದಾಯಗಳಿಗಿಂತ ಹೆಚ್ಚಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಾತಿ ವಾರು ಜನಸಂಖ್ಯೆ ವಿವರ:
- ಮುಸ್ಲಿಮರು – 72.25 ಲಕ್ಷ (18.7%)
- ಲಿಂಗಾಯಿತರು – 66 ಲಕ್ಷ
- ವೀರಶೈವ ಲಿಂಗಾಯಿತರು – 10 ಲಕ್ಷ
- ಒಕ್ಕಲಿಗರು – 61 ಲಕ್ಷ
- ಪರಿಶಿಷ್ಟ ಜಾತಿ (SC) – 1.09 ಕೋಟಿ (101 ಜಾತಿಗಳು)
- ಪರಿಶಿಷ್ಟ ಪಂಗಡ (ST) – 42.81 ಲಕ್ಷ (49 ಜಾತಿಗಳು)
- ಕುರುಬರು – 44 ಲಕ್ಷ
- ಬಣಜಿಗರು – 10 ಲಕ್ಷ
- ಕ್ರಿಶ್ಚಿಯನ್ – 9 ಲಕ್ಷ
ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವುದರಿಂದ ಮೀಸಲಾತಿ ಶಿಫಾರಸು
ಜಾತಿ ಗಣತಿ ಆಯೋಗವು 2B ಪ್ರವರ್ಗದ (OBC) ಮುಸ್ಲಿಮರಿಗೆ ನೀಡಲಾಗುವ 4% ಮೀಸಲಾತಿಯನ್ನು 8%ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಇದಕ್ಕೆ ಕಾರಣ, ಅವರ ಜನಸಂಖ್ಯೆಯ ಪ್ರಮಾಣ ಹೆಚ್ಚಾಗಿರುವುದು.
ಪರಿಶಿಷ್ಟ ಜಾತಿ (SC) ಮತ್ತು ಪಂಗಡ (ST) ವಿವರ:
- SC ಜನಸಂಖ್ಯೆ 1.09 ಕೋಟಿ (18.27%) ಆದರೂ, 101 ಜಾತಿಗಳನ್ನು ಒಳಗೊಂಡಿರುವುದರಿಂದ ಒಂದೇ ಜಾತಿಯ ಮುಸ್ಲಿಮರಿಗಿಂತ ಕಡಿಮೆ.
- ST ಜನಸಂಖ್ಯೆ 42.81 ಲಕ್ಷ (49 ಜಾತಿಗಳು).
ಲಿಂಗಾಯಿತರು ಮತ್ತು ಒಕ್ಕಲಿಗರ ಸ್ಥಾನಮಾನ
- ಲಿಂಗಾಯಿತ ಸಮುದಾಯ (66 ಲಕ್ಷ) ಮತ್ತು ವೀರಶೈವ ಲಿಂಗಾಯಿತರು (10 ಲಕ್ಷ) ಎಂದು ವಿಂಗಡಿಸಲಾಗಿದೆ.
- 3B ಪ್ರವರ್ಗದಲ್ಲಿ (ಲಿಂಗಾಯಿತ + ಉಪಜಾತಿಗಳು) 81 ಲಕ್ಷ ಜನ.
- 2A ಪ್ರವರ್ಗದಲ್ಲಿ (ಕುರುಬರು, ಇತರೆ) 77.78 ಲಕ್ಷ.
- 3A ಪ್ರವರ್ಗದಲ್ಲಿ (ಒಕ್ಕಲಿಗ + ಉಪಜಾತಿಗಳು) 72.99 ಲಕ್ಷ.
ಅತ್ಯಂತ ಹಿಂದುಳಿದ ವರ್ಗಗಳ (AHV) ಹೊಸ ವರ್ಗೀಕರಣ
- 1A ಪ್ರವರ್ಗವನ್ನು 1A ಮತ್ತು 1B ಎಂದು ವಿಂಗಡಿಸಲಾಗಿದೆ.
- ಅಲೆಮಾರಿ ಸಮುದಾಯಗಳನ್ನು 1ರ ವ್ಯಾಪ್ತಿಗೆ ತರಲಾಗಿದೆ.
- 1A + 1B ಪ್ರವರ್ಗದ ಒಟ್ಟು ಜನಸಂಖ್ಯೆ – 1.07 ಕೋಟಿ.
ಈ ವರದಿಯು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನೀತಿಗಳ ಮೇಲೆ ದೊಡ್ಡ ಪ್ರಭಾವ ಬೀರಬಹುದು. ಮುಸ್ಲಿಮರಿಗೆ ಮೀಸಲಾತಿ ಹೆಚ್ಚಳ, SC/ST/OBC ಹಕ್ಕುಗಳ ಪುನರ್ವಿಮರ್ಶೆ ಮತ್ತು ಲಿಂಗಾಯಿತ-ಒಕ್ಕಲಿಗರ ರಾಜಕೀಯ ಒತ್ತಡ ಮುಂತಾದ ವಿಷಯಗಳು ಮುಂದಿನ ದಿನಗಳಲ್ಲಿ ಚರ್ಚೆಯಾಗಲಿವೆ.
(ಮೂಲ: ಕರ್ನಾಟಕ ಸರ್ಕಾರದ ಜಾತಿ ಗಣತಿ ವರದಿ 2025)
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.