ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಆದಾಯ ಹಾಗೂ ಜಾತಿ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವುದು ಹೇಗೆ ಎಂಬುದರ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಈ ಪ್ರಮಾಣ ಪತ್ರದ ಹೆಸರಲ್ಲೇ ಸೂಚಿಸಿರುವಂತೆ ವ್ಯಕ್ತಿಯ ಅಥವಾ ಕುಟುಂಬದ ವಾರ್ಷಿಕ ಆದಾಯವನ್ನು ಮತ್ತು ಜಾತಿಯನ್ನು ದೃಢೀಕರಿಸುವ ದಾಖಲೆಯಾಗಿದೆ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಎಂದರೇನು?, ಈ ಪ್ರಮಾಣ ಪತ್ರಕ್ಕೆ ಆನ್ಲೈನ್ ಮೂಲಕ ಹೇಗೆ ಅರ್ಜಿಯನ್ನು ಸಲ್ಲಿಸಬಹುದು?, ನಂತರ ಈ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸುಕೊಡಲಾಗುತ್ತದೆ.
ಸುಲಭವಾಗಿ ಆನ್ಲೈನ್ ಮುಖಾಂತರ ಆದಾಯ ಹಾಗೂ ಜಾತಿ ಪ್ರಮಾಣಪತ್ರ ಪಡೆಯಿರಿ (Get income and caste certificate easily through online):
ಮೊದಲಿನ ದಿನಗಳಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪಡೆಯಲು ನಾಡಕಚೇರಿಗೆ ತರಲಿ ಅಧಿಕಾರಿಗಳನ್ನು ಭೇಟಿ ಮಾಡಬೇಕಾಗಿತ್ತು. ಆದರೆ ಇಂದು ಹಾಗಿಲ್ಲ, ಮನೆಯಲ್ಲಿಯೇ ಕುಳಿತುಕೊಂಡು ಆನ್ಲೈನ್ ಮೂಲಕ ಆದಾಯ ಹಾಗೂ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೆ, ಅದರ ಸ್ಥಿತಿಯನ್ನು ಕೂಡ ಆನ್ಲೈನ್ ನಲ್ಲೆ ನೋಡಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ನಮ್ಮ ಬಳಿ, ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಪಡೆಯಲು ಕೆಲವು ದಾಖಲೆಗಳಿದ್ದರೆ ಸಾಕು. ನಾವೇ ಸ್ವತಃ ಯಾರ ಸಹಾಯವಿಲ್ಲದೆ, ಈ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು.
ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಬೇಕಾದ ಮುಖ್ಯ ದಾಖಲೆಗಳು :
ಒಂದು ಅರ್ಜಿ ನಮೂನೆ
ಪಡಿತರ ಚೀಟಿಯ ಪ್ರತಿ ಅಥವಾ ಮತದಾರರ ಚೀಟಿಯ ನಕಲು ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು (ಅವುಗಳಲ್ಲಿ ಒಂದು)
ಜಾತಿ ಪಟ್ವಾರಿ/ಸರ್ಪಂಚ್ ಬಗ್ಗೆ ವರದಿ
ಆದಾಯ ವರದಿ
ನಿವಾಸ ಪುರಾವೆ
ಜಾತಿ ಮತ್ತು ಧರ್ಮ ವರದಿ
ಹಳೆಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
ಹಾಗೂ ಶಾಲೆಯ ವರ್ಗಾವಣೆಯ ಪ್ರಮಾಣ ಪತ್ರ
ಅರ್ಜಿ ಶುಲ್ಕ:
ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ರಿನಿವಲ್ : 40/- ರೂಪಾಯಿ
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ : 40/- ರೂಪಾಯಿ
ಆನ್ಲೈನ್ ಮೂಲಕ ಆದಾಯ ಜಾತಿ ಪ್ರಮಾಣ ಪತ್ರವನ್ನು ಪಡೆಯುವ ವಿಧಾನ:
ಹಂತ 1: ಮೊದಲಿಗೆ, ನಾಡಕಚೇರಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಹಂತ 2: ನಂತರ ಅಪ್ಲೈ ಆನ್ಲೈನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಮುಂದಿನ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹೊಂದಿಸಿ ಓಟಿಪಿಯನ್ನು ಪಡೆದುಕೊಳ್ಳುವ ಆಯ್ಕೆಯನ್ನು ಮಾಡಿ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಹಂತ 3: ಬಂದ ಓಟಿಪಿಯನ್ನು ನೋಂದಣಿ ಮಾಡಿದ ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ನೀವು “New Request” ಮೇಲೆ ಕ್ಲಿಕ್ ಮಾಡಿ, ಮುಂದುವರೆದು ಜಾತಿ ಪ್ರಮಾಣ ಪತ್ರದ ಆಯ್ಕೆಯನ್ನು ಮಾಡಿಕೊಳ್ಳಿ.
ಹಂತ 5: ನಂತರ ಆಧಾರ್ ಕಾರ್ಡ್, ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ, ಜಾತಿ, ಕೆಟಗರಿ, ನಿಮ್ಮ ಹೆಸರು ಹಾಗೂ ತಂದೆಯ ಹೆಸರನ್ನು ಭರ್ತಿ ಮಾಡಿದ ಮೇಲೆ ಸರ್ಚ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 6: ಒಂದು ವೇಳೆ ನಿಮ್ಮ ಜಾತಿ ಪ್ರಮಾಣ ಪತ್ರ ರಿನಿವಲ್ ಆಗುವುದಿದ್ದಲ್ಲಿ, ಅಲ್ಲಿ ನಿಮ್ಮ ಆರ್ಡಿ ನಂಬರ್ ಕಾಣಿಸುತ್ತದೆ.
ಹಂತ 7: ನಂತರ ಅಲ್ಲಿ ನೋಂದಣಿ ಮಾಡಲಾದ ನಿಮ್ಮ ಹೆಸರು, ತಂದೆಯ ಹೆಸರು ಹಾಗೂ ಇನ್ನಿತರ ವೈಯಕ್ತಿಕ ವಿಷಯಗಳು ಸರಿ ಇದೆಯೇ ಎಂದು ಪರಿಶೀಲಿಸಿಕೊಳ್ಳಿ.
ಹಂತ 8: ಅಲ್ಲಿ ಕಾಣಿಸುವ ನಿಮ್ಮ ವೈಯಕ್ತಿಕ ಮಾಹಿತಿಗಳು ಸರಿ ಇದ್ದಲ್ಲಿ, ಚೆಕ್ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿಕೊಂಡು, 40 ರುಪಾಯಿಗಳ ಶುಲ್ಕವನ್ನು ಭರಿಸಿ ಪ್ರಿಂಟ್ ತೆಗೆದುಕೊಳ್ಳಬಹುದು.
ಸೂಚನೆ : ಒಂದು ವೇಳೆ ನಿಮ್ಮ ಯಾವುದೇ ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರಿನಿವಲ್ ಗೆ ಇರದೇ ಇದ್ದಲ್ಲಿ. ನೀವು ಕಡ್ಡಾಯವಾಗಿ ಹೊಸ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ
ಹೊಸದಾಗಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ವಿಧಾನ :
ಹಂತ 1: ಮೊದಲಿಗೆ, ನಾಡಕಚೇರಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಹಂತ 2: ನಂತರ ಅಪ್ಲೈ ಆನ್ಲೈನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಮುಂದಿನ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹೊಂದಿಸಿ ಓಟಿಪಿಯನ್ನು ಪಡೆದುಕೊಳ್ಳುವ ಆಯ್ಕೆಯನ್ನು ಮಾಡಿ.
ಹಂತ 3: ಬಂದ ಓಟಿಪಿಯನ್ನು ನೋಂದಣಿ ಮಾಡಿದ ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ನೀವು ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ, ಮುಂದುವರೆದು ಜಾತಿ ಪ್ರಮಾಣ ಪತ್ರದ ಆಯ್ಕೆಯನ್ನು ಮಾಡಿಕೊಳ್ಳಿ.
ಹಂತ 5: ನಂತರ ಆಧಾರ್ ಕಾರ್ಡ್, ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ, ಜಾತಿ, ಕೆಟಗರಿ ಹೀಗೆ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ.
ಹಂತ 6: ಈಗ ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ಕೆಂಪು ಬಣ್ಣದ ಕ್ಷೇತ್ರಗಳು ಕಡ್ಡಾಯವಾಗಿದೆ.
ಹಂತ 7: ಡೆಲಿವರಿ ಮೋಡ್ ಅನ್ನು ಆಯ್ಕೆ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
ಹಂತ 8: ‘ ಉಳಿಸು’ ಬಟನ್ ಕ್ಲಿಕ್ ಮಾಡಿ , ನಂತರ ಸ್ವೀಕೃತಿ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ ಮತ್ತು ಅದನ್ನು ಬಳಕೆದಾರರ ಮೊಬೈಲ್‌ಗೆ ಕಳುಹಿಸಲಾಗುತ್ತದೆ.
ಹಂತ 9: ಸರಿ ಬಟನ್ ಮೇಲೆ ಕ್ಲಿಕ್ ಮಾಡಿ .
ಹಂತ 10: ಈಗ ಅರ್ಜಿ ಶುಲ್ಕವನ್ನು ಪಾವತಿಸಲು ‘ ಆನ್‌ಲೈನ್ ಪಾವತಿ’ ಆಯ್ಕೆಯನ್ನು ಕ್ಲಿಕ್ ಮಾಡಿ .
ಹಂತ 11: ಪಾವತಿ ಮಾಡಿದ ನಂತರ ಸಂಬಂಧಪಟ್ಟ ಪ್ರಾಧಿಕಾರದಿಂದ ವಿತರಿಸುವ ದಿನಾಂಕದ ಪ್ರಕಾರ ಜಾತಿ ಪ್ರಮಾಣಪತ್ರವನ್ನು ಸ್ವೀಕರಿಸಲಾಗುತ್ತದೆ.
ಜಾತಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವ ಪ್ರಕ್ರಿಯೆ:
ಹಂತ 1: ಪೋರ್ಟಲ್‌ನಲ್ಲಿ ಪ್ರಮುಖ ಲಿಂಕ್ ಅಡಿಯಲ್ಲಿ ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ.
https://nadakacheri.karnataka.gov.in/Online_service/loginpage.aspx
ಹಂತ 2: ಈಗ ನಿಮ್ಮ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ.
ಹಂತ 3: ಪ್ರದರ್ಶನ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ನಿಮ್ಮ ಪ್ರಮಾಣಪತ್ರವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 5: “ಪ್ರಿಂಟ್ ಅಥವಾ ಡೌನ್‌ಲೋಡ್ ಪ್ರಮಾಣಪತ್ರ” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ಲೈವ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಸೂಚನೆ : ಎಸ್ಸಿ ಹಾಗೂ ಎಸ್ ಟಿ ವರ್ಗದವರಿಗೆ ಒಮ್ಮೆ ಜಾತಿ ಪ್ರಮಾಣವನ್ನು ಮಾಡಿಸಿದರೆ ಅದು ಜೀವಿತಾವಧಿಯ ಖಾತರಿಯನ್ನು ಹೊಂದಿರುತ್ತದೆ. ಆದರೆ ಆದಾಯ ಪ್ರಮಾಣ ಪತ್ರವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ರಿನಿವಲ್ ಮಾಡಿಸಿಕೊಳ್ಳಬೇಕು.
ಈ ರೀತಿಯಲ್ಲಿ ನೀವು ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಸಹಾಯದಿಂದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ