ಕೇಂದ್ರದಿಂದ  ಹೊಸ ಪಿಂಚಣಿ ಯೋಜನೆ, ಎಲ್ಲರಿಗೂ ಸಿಗಲಿದೆ ಪಿಂಚಣಿ ಹಣ.! ಇಲ್ಲಿದೆ ವಿವರ 

Picsart 25 03 01 00 00 59 252

WhatsApp Group Telegram Group

ನೂತನ ಪಿಂಚಣಿ ಯೋಜನೆ: ಸರ್ಕಾರಿ-ಖಾಸಗಿ, ಅಸಂಘಟಿತ ವಲಯದ ಎಲ್ಲರಿಗೂ ಆರ್ಥಿಕ ಭರವಸೆ!

ಭಾರತ ಸರ್ಕಾರವು (Indian government) ದೇಶದ ಪ್ರತಿಯೊಬ್ಬ ಉದ್ಯೋಗಿಗೆ, ನಿರುದ್ಯೋಗಿಗೆ, ಮತ್ತು ಸ್ವಯಂ ಉದ್ಯೋಗಿಗಳಿಗೆ ಪಿಂಚಣಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸುತ್ತಿದೆ. ಸಾರ್ವತ್ರಿಕ ಪಿಂಚಣಿ ಯೋಜನೆ (Universal Pension Scheme) ಎಂದು ಕರೆಯಲ್ಪಡುವ ಈ ಯೋಜನೆ, ದೇಶದ ನೌಕರರ ನಿವೃತ್ತಿಯ ಬಳಿಕ ಜೀವನವನ್ನು ಆರ್ಥಿಕ ದೃಷ್ಟಿಯಿಂದ ಸುರಕ್ಷಿತಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಯು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳ ಜೊತೆಗೆ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು, ಗೃಹ ಕೆಲಸಗಾರರು, ಗಿಗ್‌ ಕೆಲಸಗಾರರು, ರೈತರು ಮತ್ತು ಬೀದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ. ಹಾಗಿದ್ದರೆ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯ ಪ್ರಮುಖ ಗುರಿ ನಿವೃತ್ತಿಯ ಬಳಿಕ ಜನರು ಆರ್ಥಿಕ ಸಂಕಷ್ಟ ಎದುರಿಸದೇ, ಸುರಕ್ಷಿತ ಜೀವನ ನಡೆಸಲು ಅನುಕೂಲವಾಗುವುದು. ಇದರಿಂದ, ದೇಶದ ಪ್ರತಿಯೊಬ್ಬ ಉದ್ಯೋಗಿಗೆ ನಿವೃತ್ತಿ ವೇತನದ (Retairment salary) ಭರವಸೆ ಸಿಗಲಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನಾ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ, ಮತ್ತು ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರುವ ನಿರೀಕ್ಷಿಯೂ ಕೂಡ ಇದೆ.

ಸಾರ್ವತ್ರಿಕ ಪಿಂಚಣಿ ಯೋಜನೆಯ (Universal Pension Scheme) ಮಹತ್ವವೇನು?:

ಈ ಹೊಸ ಪಿಂಚಣಿ ಯೋಜನೆಯು ಆರ್ಥಿಕ ಅನಿಶ್ಚಿತತೆ ತಪ್ಪಿಸಲು ಮತ್ತು ನಿವೃತ್ತಿ ಜೀವನವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ. ಈ ಯೋಜನೆಯ ಮುಖ್ಯ ಪ್ರಯೋಜನಗಳೆಂದರೆ:

ಉದ್ಯೋಗದಿಂದ ನಿವೃತ್ತಿಯಾದ ನಂತರವೂ ಪ್ರತಿಮಾಸದ ಆದಾಯ ಒದಗಿಸುವ ಮೂಲಕ ಆರ್ಥಿಕ ಭದ್ರತೆ ನೀಡುತ್ತದೆ.
ಈ ಯೋಜನೆಯು ಕೇವಲ ಸರ್ಕಾರಿ ಉದ್ಯೋಗಿಗಳಿಗೆ (Government employees) ಮಾತ್ರವಲ್ಲ, ಖಾಸಗಿ ವಲಯದ ಮತ್ತು ಅಸಂಘಟಿತ ವಲಯದ ಕಾರ್ಮಿಕರು, ಗೃಹ ಕೆಲಸಗಾರರು, ಗಿಗ್ ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ರೈತರು, ಬೀದಿ ವ್ಯಾಪಾರಿಗಳು, ನಿರ್ಮಾಣ ಕಾರ್ಮಿಕರು ಮುಂತಾದವರಿಗೆ ಸಹ ಅನ್ವಯವಾಗಲಿದೆ.
ಉದ್ಯೋಗ ವಲಯ ಬದಲಾವಣೆ ಅಥವಾ ನಿರುದ್ಯೋಗ ಸೃಷ್ಟಿಯಾದಾಗಲೂ ಈ ಯೋಜನೆಯಿಂದ ಹೆಚ್ಚಿನ ಸೌಲಭ್ಯ ದೊರೆಯುತ್ತದೆ.
ಸಂಸ್ಥೆಯ ಮೂಲಸೌಲಭ್ಯಗಳಿಲ್ಲದ ಉದ್ಯೋಗಸ್ಥರಾದ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಪರಿಹಾರವಾಗಿ ನಿವೃತ್ತಿಯ ನಂತರವೂ ಪಿಂಚಣಿ ದೊರಕಲಿದೆ.
ವೃದ್ಧಾಪ್ಯದ ದಿನಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದವರಿಗೆ ಈ ಯೋಜನೆಯು ಭರವಸೆ ನೀಡುತ್ತದೆ.

ಈ ಯೋಜನೆಯು ಯಾವಾಗ ಜಾರಿಗೆ ಬರುತ್ತದೆ?:

ಪ್ರಸ್ತುತ ಕೇಂದ್ರ ಸರ್ಕಾರ (Central government) ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನಾ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2025ರ ಏಪ್ರಿಲ್ 1 ರಿಂದ ಈ ಯೋಜನೆ ಜಾರಿಗೆ ಬರಬಹುದು. ಈ ಯೋಜನೆ ಜಾರಿಗೆ ಬಂದರೆ, ಉದ್ಯೋಗಿಗಳ ಕಡಿಮೆ ಸಂಬಳದ ಅಸಮತೋಲನ ನಿವಾರಣೆಯಾಗುವುದು ಮತ್ತು ನಿವೃತ್ತಿ ಜೀವನವು ಸ್ವಾವಲಂಬಿಯಾಗಿ ಸಾಗಲು ಸಹಾಯ ಮಾಡಲಿದೆ.

ಈ ಹೊಸ ಯೋಜನೆಯು ಈಗಾಗಲೇ ಜಾರಿಗೆ ಇರುವ ಪಿಂಚಣಿ ಯೋಜನೆಗಳ (Pension schemes) ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಭಾರತ ಸರ್ಕಾರ ಹಲವಾರು ಪಿಂಚಣಿ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ, ಆದರೆ ಅವುಗಳು ನಿರ್ದಿಷ್ಟ ವರ್ಗದ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ಈ ಯೋಜನೆ ಎಲ್ಲರಿಗೂ ಅನ್ವಯವಾಗುವ ಸಮಗ್ರ ಯೋಜನೆ ಆಗಲಿದೆ.

ಈಗ ಜಾರಿಯಲ್ಲಿ ಇರುವ ಪಿಂಚಣಿ ಯೋಜನೆಗಳು ಹೀಗಿವೆ :

1. ರಾಷ್ಟ್ರೀಯ ಪಿಂಚಣಿ ಯೋಜನೆ (NPS – National Pension Scheme)

NPS ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗಳಿಗೆ ಹೂಡಿಕೆ ಆಧಾರಿತ ಪಿಂಚಣಿ ಯೋಜನೆ. ಈ ಯೋಜನೆಯಡಿ ನಿರ್ದಿಷ್ಟ ಮೊತ್ತವನ್ನು ಸೇವಾ ಅವಧಿಯಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ನಿವೃತ್ತಿಯ ಬಳಿಕ ಪಿಂಚಣಿ ರೂಪದಲ್ಲಿ ಲಾಭ ಸಿಗುತ್ತದೆ.

2. ಅಟಲ್ ಪಿಂಚಣಿ ಯೋಜನೆ (APY – Atal Pension Yojana)

ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕಡಿಮೆ ಆದಾಯದ ಉದ್ಯೋಗಿಗಳಿಗೆ ನಿವೃತ್ತಿ ವೇತನವನ್ನು ನೀಡುವ ಯೋಜನೆಯಾಗಿದ್ದು, 60 ವರ್ಷಗಳ ನಂತರ ₹1,000 ರಿಂದ ₹5,000ವರೆಗೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ಸಾಧ್ಯ. ಆದರೆ, ಈ ಯೋಜನೆಯಲ್ಲಿ ಮೊತ್ತಕ್ಕೆ ಅನುಗುಣವಾಗಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇಡಬೇಕಾಗುತ್ತದೆ.

3. ಶ್ರಮಯೋಗಿ ಮಾನ್‌ಧನ್ ಯೋಜನೆ (PM-SYM – Pradhan Mantri Shram Yogi Maandhan Yojana)

ಬೀದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಪಿಂಚಣಿ ಯೋಜನೆ. ಈ ಯೋಜನೆಯಡಿ 60 ವರ್ಷಕ್ಕೆ ತಲುಪಿದ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ದೊರಕುತ್ತದೆ.

4. ಕಿಸಾನ್ ಮಾನ್‌ಧನ್ ಯೋಜನೆ (Kisan Mandhan Yojana)

ಕೃಷಿಕರಿಗಾಗಿ ವಿಶೇಷವಾಗಿ ರೂಪಿಸಲಾದ ಪಿಂಚಣಿ ಯೋಜನೆ. ಈ ಯೋಜನೆಯಡಿ 60 ವರ್ಷಗಳ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಸಿಗುತ್ತದೆ.

ಸಾರ್ವತ್ರಿಕ ಪಿಂಚಣಿ ಯೋಜನೆ (Universal Pension Scheme) ದೇಶದ ಎಲ್ಲ ಉದ್ಯೋಗಿಗಳಿಗೆ ನಿವೃತ್ತಿ ಭದ್ರತೆಯನ್ನು ನೀಡಲು ಉದ್ದೇಶಿತವಾಗಿದ್ದು, ಇದು ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರು ಮಾತ್ರವಲ್ಲದೆ, ಅಸಂಘಟಿತ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ರೈತರು, ಬೀದಿ ವ್ಯಾಪಾರಿಗಳು ಮತ್ತು ಗೃಹಕಾರ್ಮಿಕರಿಗೂ ಅನ್ವಯವಾಗಲಿದೆ. ಇನ್ನು ಈ ಆರ್ಥಿಕ ಸುರಕ್ಷತೆ ಒದಗಿಸುವುದರ ಜೊತೆಗೆ, ವೃದ್ಧಾಪ್ಯದ ದಿನಗಳಲ್ಲಿ ಸಹಾಯ ಮಾಡಲಿದೆ.

ಈ ಹೊಸ ಯೋಜನೆಯು ನಿರುದ್ಯೋಗದ ಸಂದರ್ಭದಲ್ಲಿ ಸಹಾಯ ಮಾಡುವುದು, ನಿವೃತ್ತಿ ಆದಾಯ ಭದ್ರತೆ ಒದಗಿಸುವುದು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಸ್ವಾಯತ್ತತೆ (Financial autonomy) ನೀಡುವುದು ಎಂಬ ಪ್ರಮುಖ ಗುರಿಗಳನ್ನು ಹೊಂದಿದೆ. ಇದರಿಂದ ಭಾರತದ ಕೋಟ್ಯಾಂತರ ಜನರಿಗೆ ಭವಿಷ್ಯದ ಭದ್ರತೆ ಕಲ್ಪಿಸಲು ಸಾಧ್ಯವಾಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!