ಗ್ರಾಮೀಣ ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಹೊಸ ಯೋಜನೆ: “ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್” (MWFGP)
ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ (ಮಾರ್ಚ್ 8, 2025) ಮುನ್ನ ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಮಹತ್ವದ ಹೊಸ ಯೋಜನೆಯನ್ನು ಘೋಷಿಸಿದೆ. “ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್” (MWFGP) ಯೋಜನೆ ಎಂಬ ಹೆಸರಿನ ಈ ಕಾರ್ಯಕ್ರಮ ಪಂಚಾಯತ್ ರಾಜ್ ಸಚಿವಾಲಯದ ನೇತೃತ್ವದಲ್ಲಿ ಜಾರಿಗೆ ಬರುತ್ತಿದೆ. ಈ ಯೋಜನೆಯ ಉದ್ದೇಶ ಗ್ರಾಮೀಣ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ, ಸುರಕ್ಷತೆ, ಹಾಗೂ ಆಡಳಿತದಲ್ಲಿ ಭಾಗವಹಿಸುವ ಅವಕಾಶ ಒದಗಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಕಾರ್ಯಕ್ರಮ:
2025 ಮಾರ್ಚ್ 8 ರಂದು ರಾಷ್ಟ್ರವ್ಯಾಪಿ “ಮಹಿಳಾ ಗ್ರಾಮ ಸಭೆ” ಆಯೋಜನೆ.
ಪಂಚಾಯತ್ ಮಟ್ಟದಲ್ಲಿ ಮಹಿಳಾ ಅಭಿವೃದ್ದಿ ಕುರಿತ ಚರ್ಚೆಗಳು.
ಯೋಜನೆಯ ಮುಖ್ಯ ಉದ್ದೇಶಗಳು
MWFGP ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಕೇಂದ್ರೀಕರಿಸಿದೆ.
ಇದರ ಪ್ರಮುಖ ಉದ್ದೇಶಗಳು ಹೀಗಿವೆ:
▪️ಲಿಂಗ ಸಮಾನತೆ: ಗ್ರಾಮೀಣ ಪಂಚಾಯತ್ ಆಡಳಿತದಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವುದು.
▪️ಮಹಿಳಾ ಸುರಕ್ಷತೆ: ಬಾಲಕಿಯರು ಮತ್ತು ಮಹಿಳೆಯರು ಸುರಕ್ಷಿತವಾಗಿ ಬದುಕಲು ಅಗತ್ಯ ಸೌಕರ್ಯಗಳನ್ನು ಒದಗಿಸುವುದು.
▪️ಆರ್ಥಿಕ ಸಬಲೀಕರಣ: ಸ್ವ-ಸಹಾಯ ಗುಂಪುಗಳ (SHGs) ಮೂಲಕ ಮಹಿಳೆಯರಿಗೆ ಉದ್ಯೋಗ ಮತ್ತು ಸ್ವಾವಲಂಬನೆ ಕಲ್ಪಿಸುವುದು.
▪️ಶಿಕ್ಷಣ ಮತ್ತು ಅರಿವು: ಗ್ರಾಮೀಣ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ.
▪️ರಾಜಕೀಯ ಪಾಲ್ಗೊಳ್ಳುವಿಕೆ: ಮಹಿಳಾ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಭಾಗವಹಿಸಲು ಪ್ರೇರೇಪಿಸುವುದು.
ಯಶಸ್ವಿ ಅನುಷ್ಠಾನಕ್ಕೆ ಕ್ರಮಗಳು:
▪️ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ವಿಶೇಷ ತರಬೇತಿ.
▪️ಮಹಿಳಾ ಸ್ನೇಹಿ ಯೋಜನೆಗಳ ಸಾಧನೆಗಳು ತೋರಿಸುವ ಮಾಹಿತಿಯುಕ್ತ ವೀಡಿಯೋಗಳ ಪ್ರಸಾರ.
▪️ಯೋಜನೆಯ ಪ್ರಗತಿಯನ್ನು ಗಮನಿಸುಲು ಮಾನಿಟರಿಂಗ್ ಡ್ಯಾಶ್‌ಬೋರ್ಡ್.
ಯೋಜನೆಯ ಪ್ರಮುಖ ಅಂಶಗಳು:
1. ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಸ್ಥಾಪನೆ:
▪️ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಗ್ರಾಮ ಪಂಚಾಯತ್ “ಮಹಿಳಾ ಸ್ನೇಹಿ” ಎಂದು ಗುರುತಿಸಲಾಗುತ್ತದೆ.
▪️ಈ ಪಂಚಾಯತ್‌ಗಳು ಮಹಿಳಾ ನೇತೃತ್ವದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ.
▪️ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ, ತರಬೇತಿ ಮತ್ತು ಅವಕಾಶಗಳನ್ನು ಒದಗಿಸಲಾಗುತ್ತದೆ.
2. ಪಂಚಾಯತ್ ಪ್ರತಿನಿಧಿಗಳಿಗೆ ತರಬೇತಿ:
▪️ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು.
▪️ಮಹಿಳಾ ಸ್ನೇಹಿ ಆಡಳಿತಕ್ಕಾಗಿ ಸೂಕ್ತ ನೀತಿಗಳನ್ನು ಅನುಸರಿಸುವ ಬಗ್ಗೆ ಮಾಹಿತಿ ನೀಡಲಾಗುವುದು.
▪️ ಸ್ನೇಹಿ ಗ್ರಾಮ ಪಂಚಾಯತ್‌ಗಳ ಯಶಸ್ವಿ ಮಾದರಿಗಳನ್ನು ಹಂಚಿಕೊಳ್ಳಲಾಗುವುದು.
3. ಯೋಜನೆ ಕಾರ್ಯಗತಗೊಳಿಸಲು ತಂತ್ರಜ್ಞಾನ ಬಳಕೆ:
▪️”ಮಾನಿಟರಿಂಗ್ ಡ್ಯಾಶ್‌ಬೋರ್ಡ್” ಎಂಬ ಹೊಸ ತಂತ್ರಾಂಶದ ಮೂಲಕ ಯೋಜನೆಯ ಪ್ರಗತಿ ವೀಕ್ಷಣೆ ಮಾಡಲಾಗುತ್ತದೆ.
▪️ಪಂಚಾಯತ್ ಮಟ್ಟದಲ್ಲಿ ಯಶಸ್ವಿ ಯೋಜನೆಗಳ ಕುರಿತು ವಿಡಿಯೊಗಳ ಪ್ರಸಾರ ಮಾಡಲಾಗುವುದು.
4. ಮಹಿಳಾ ಗ್ರಾಮ ಸಭೆಗಳ ಆಯೋಜನೆ:
▪️ಮಾರ್ಚ್ 8, 2025 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದಾದ್ಯಂತ “ಮಹಿಳಾ ಗ್ರಾಮ ಸಭೆ” ಆಯೋಜಿಸಲಾಗುವುದು.
▪️ಈ ಸಭೆಯಲ್ಲಿ ಮಹಿಳಾ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರಗಳನ್ನು ರೂಪಿಸುವ ಕ್ರಮ ಕೈಗೊಳ್ಳಲಾಗುತ್ತದೆ.
▪️ಮಹಿಳಾ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಈ ಸಭೆಯಲ್ಲಿ ಭಾಗವಹಿಸುತ್ತಾರೆ.
ಯೋಜನೆಯಿಂದ ಸಿಗುವ ಲಾಭಗಳು:
▪️ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪನೆ.
▪️ಗ್ರಾಮೀಣ ಮಹಿಳೆಯರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣ.
▪️ಲಿಂಗ ಸಮಾನತೆ ಹೆಚ್ಚಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವುದು.
▪️ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದ ಮೂಲಭೂತ ಹಕ್ಕುಗಳ ಕುರಿತು ಅರಿವು ಮೂಡಿಸುವುದು.
ಯೋಜನೆಯ ಘೋಷಣೆ:
ದಿನಾಂಕ: 2025 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಮುನ್ನ.
ಸ್ಥಳ: ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಸಮಾವೇಶ.
“ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್” ಯೋಜನೆ ಕೇವಲ ಮಹಿಳೆಯರ ಅಭಿವೃದ್ಧಿಗೆ ಮಾತ್ರವಲ್ಲ, ಗ್ರಾಮೀಣ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಪೂರಕ. ಈ ಯೋಜನೆಯು ನಮ್ಮ ದೇಶದ ಗ್ರಾಮೀಣ ಭಾಗದ ಮಹಿಳೆಯರ ಭವಿಷ್ಯವನ್ನು ಉತ್ತಮಗೊಳಿಸುವತ್ತ ಮಹತ್ವದ ಹೆಜ್ಜೆಯಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.