ಜೂನ್ 2024 ರಲ್ಲಿ ಹೊಸ ಹಣಕಾಸು ನಿಯಮಗಳು(New financial rules in June 2024): ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಹೊಸ ತಿಂಗಳು, ಹೊಸ ನಿಯಮಗಳು! ಜೂನ್ 1 ರಿಂದ ಜಾರಿಗೆ ಬರುವ ಹಲವಾರು ಹಣಕಾಸು ನಿಯಮಗಳ ಬದಲಾವಣೆಗಳು ನಿಮ್ಮ ಖರ್ಚಿನ ಮೇಲೆ ನೇರ ಪರಿಣಾಮ ಬೀರಬಹುದು. ಇಲ್ಲಿದೆ ಹೆಚ್ಚಿನ ಮಾಹಿತಿ.
ಜೂನ್ 2024 ರಲ್ಲಿ ಹೊಸ ಹಣಕಾಸು ನಿಯಮಗಳು:
ಪ್ರತಿ ತಿಂಗಳ ಮೊದಲ ದಿನಾಂಕದಂದು ಹಲವಾರು ಹಣಕಾಸು ನಿಯಮಗಳು ಜಾರಿಗೆ ಬರುತ್ತವೆ, ಮತ್ತು ಜೂನ್ 2024 ಕೂಡ ಹೊರತಾಗಿಲ್ಲ. ಜೂನ್(June) 2024 ರಲ್ಲಿಯೂ ಸಹ ಕೆಲವು ಹಣಕಾಸು ನಿಯಮಗಳಲ್ಲಿ ಬದಲಾವಣೆ ಆಗಿವೆ. ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ, ಹಾಗಾಗಿ ಈ ನಿಯಮಗಳ ಕುರಿತು ತಿಳಿದುಕೊಳ್ಳುವುದು ಮುಖ್ಯ.
ಈ ನಿಯಮಗಳ ಬದಲಾವಣೆಗಳು ನಿಮ್ಮ ಖರ್ಚು, ಉಳಿತಾಯ(saving) ಮತ್ತು ಹೂಡಿಕೆ(invest) ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು,ಈ ಬದಲಾವಣೆಗಳನ್ನು ತಿಳಿದುಕೊಂಡು ಅವು ನಿಮ್ಮನ್ನು ಹೇಗೆ ಪ್ರಭಾವಿತಗೊಳಿಸುತ್ತವೆ ಎಂಬುದು ತಿಳಿಯುವುದು ಒಳ್ಳೆಯದು. ಬನ್ನಿ ಹಾಗಿದ್ರೆ ಯಾವ ಯಾವ ನಿಯಮಗಳು ಬದಲಾಗಿವೆ ಎಂದು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
LPG ಸಿಲಿಂಡರ್ ಬೆಲೆ:
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ 1 ರಂದು LPG ಸಿಲಿಂಡರ್ ಬೆಲೆ(LPG cylinder price)ಗಳನ್ನು ಪರಿಷ್ಕರಿಸುತ್ತವೆ. ಜಾಗತಿಕ ಮಾರುಕಟ್ಟೆ ಬೆಲೆಗಳು, ತೆರಿಗೆಗಳು ಮತ್ತು ಇತರ ಅಂಶಗಳನ್ನು ಅವಲಂಬಿಸಿರುವ ಬೆಲೆಗಳು ಏರಿಳಿತಗೊಳ್ಳಬಹುದು. ಮೇ ತಿಂಗಳಿನಲ್ಲಿ, ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಬೆಲೆ ಕಡಿತವು ದೇಶೀಯ ಮತ್ತು ವಾಣಿಜ್ಯ ಸಿಲಿಂಡರ್ಗಳ ಎರಡೂ ವಿಧಗಳಿಗೆ ಅನ್ವಯಿಸುತ್ತದೆ. ಜೂನ್ 1, 2024 ರಂದು ಹೊಸ ಬೆಲೆಗಳು ಜಾರಿಗೆ ಬರುತ್ತವೆ.
ಬ್ಯಾಂಕುಗಳಿಗೆ ರಜಾ ದಿನಗಳು(Bank Holidays):
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯ ಪ್ರಕಾರ, ಜೂನ್ ತಿಂಗಳಿನಲ್ಲಿ ಒಟ್ಟು 10 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ, ರಾಜ ಸಂಕ್ರಾಂತಿ ಮತ್ತು ಈದ್-ಉಲ್-ಅಧಾ ಇವೆ. ಬ್ಯಾಂಕಿಗೆ ಭೇಟಿ ನೀಡುವ ಮೊದಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ. ಆನ್‌ಲೈನ್ ಬ್ಯಾಂಕಿಂಗ್(Online Banking) ಮತ್ತು ಮೊಬೈಲ್ ಬ್ಯಾಂಕಿಂಗ್(Mobile Banking) ಸೇವೆಗಳು ರಜಾದಿನಗಳಲ್ಲಿ ಲಭ್ಯವಿರುತ್ತವೆ.
ಡ್ರೈವಿಂಗ್ ನಿಯಮಗಳಲ್ಲಿ ಬದಲಾವಣೆಗಳು(Changes in Driving Rules):
ನೂತನ ಚಾಲನಾ ಪರವಾನಗಿ ನಿಯಮಗಳು 2024, ಜೂನ್ ತಿಂಗಳಿನಿಂದ ಜಾರಿಗೆ ಬರಲಿವೆ. ಈ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಠಿಣ ದಂಡ ವಿಧಿಸಲಾಗುತ್ತದೆ. ಹೊಸ ನಿಯಮದ ಪ್ರಕಾರ, ಅತಿವೇಗದಲ್ಲಿ ವಾಹನ ಓಡಿಸಿದರೆ 1000 ರಿಂದ 2000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಪರವಾನಗಿ ಇಲ್ಲದೆ ವಾಹನ ಓಡಿಸಿದರೆ 500 ರೂ. ದಂಡ ವಿಧಿಸಲಾಗುವುದು. ಜೊತೆಗೆ, ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್
(Seat belt) ಹಾಕದೆ ವಾಹನ ಚಾಲನೆ ಮಾಡಿದರೆ 100 ರೂ. ದಂಡ ವಿಧಿಸಲಾಗುತ್ತದೆ.
ಆಧಾರ್ ಕಾರ್ಡ್ ನವೀಕರಣ(Aadhaar Card Update):
ಯುಐಡಿಎಐ ಆಧಾರ್ ಕಾರ್ಡ್‌ಗಳನ್ನು ಉಚಿತವಾಗಿ ನವೀಕರಿಸುವ ಕೊನೆಯ ದಿನಾಂಕವನ್ನು ಜೂನ್ 14, 2024 ರವರೆಗೆ ವಿಸ್ತರಿಸಿದೆ. ಈ ಅವಧಿಯೊಳಗೆ, ನೀವು ಆನ್‌ಲೈನ್‌ನಲ್ಲಿ ಯಾವುದೇ ಶುಲ್ಕವಿಲ್ಲದೆ ನಿಮ್ಮ ಆಧಾರ್‌ನಲ್ಲಿನ ವಿವರಗಳನ್ನು ನವೀಕರಿಸಬಹುದು. ನಿಮ್ಮ ವಿಳಾಸ, ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸದಲ್ಲಿ ಯಾವುದೇ ಬದಲಾವಣೆಗಳಿದ್ದರೆ ನೀವು ಜೂನ್ 14 ರ ಒಳಗಾಗಿ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕು.
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ದಂಡ(Penalty for minor driving):
ಭಾರತದಲ್ಲಿ, ವಾಹನ ಚಲಾಯಿಸಲು ಕಾನೂನುಬದ್ಧ ವಯಸ್ಸು 18 ವರ್ಷ.18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು (ಅಪ್ರಾಪ್ತರು) ವಾಹನ ಚಲಾಯಿಸಿದರೆ ಅವರಿಗೆ ಭಾರಿ ದಂಡ ವಿಧಿಸಲಾಗುತ್ತದೆ.
ದಂಡ(Penalty):
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಕಂಡುಬಂದರೆ ₹25,000 ವರೆಗೆ ದಂಡ ವಿಧಿಸಬಹುದು.
ಅಪ್ರಾಪ್ತ ವಯಸ್ಕರಿಗೆ ಲೈಸೆನ್ಸ್ ಪಡೆಯಲು 25 ವರ್ಷ ವಯಸ್ಸಿನವರೆಗೆ ಕಾಯಬೇಕಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಗದಗ ನಗರದಲ್ಲಿ ಹೆಲ್ಮೆಟ್ ಧಾರಣೆ ಮಾಡಿದ ಸವಾರರಿಗೆ
ರೂ 500/ ದಂಡ ವಿಧಿಸಲಾಗುತ್ತಿದೆ.ಈ ಮಾಹಿತಿಯಲ್ಲಿ
ರೂ 100/ ಇದೆ ಯಾವುದು ನ್ಯಾಯಯುತ ಅಧಿಕೃತ?