ಇಂದು ಎಲ್ಲರ ಕೈಯಲ್ಲಿ ಸ್ವಂತ ಬೈಕ್ , ಸ್ಕೂಟರ್ ಇದ್ದೆ ಇದೆ. ಮಾರ್ಕೆಟ್ ನಲ್ಲಿ ಹೊಸ ಹೊಸ ಅತ್ಯಾಧುನಿಕ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಹಾಗೂ ದ್ವಿಚಕ್ರ ವಾಹನಗಲ್ಲಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಗಳಂತೂ ( electric Scooter ) ಹೇಳೋದೆ ಬೇಡ. ಹೊಸ ಹೊಸ ಫೀಚರ್ಸ್ ನ ಅತ್ಯಾಧುನಿಕ ಟೆಕ್ನೋಲಾಜಿ ( New Technology ) ಒಳಗೊಂಡ ಸ್ಕೂಟರ್ ಗಳನ್ನು ನಾವು ಕಾಣಬಹುದು. ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ದೇಶದಲ್ಲಿ ಅತ್ಯಂತ ಜನಪ್ರಿಯ ಕಂಪನಿಯಾದ ಬಜಾಜ್, ಹೊಸ ಚೇತಕ್ ಅರ್ಬೇನ್ ಎಲೆಕ್ಟ್ರಿಕ್ ಸ್ಕೂಟರ್ ( Chethak Urbane Electric Scooter ) ಅನ್ನು ಇದೀಗ ಹೆಚ್ಚಿನ ರೇಂಜ್ ಹಾಗೂ ಹೊಸ ಫೀಚರ್ ಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚೇತಕ್ ಅರ್ಬೇನ್ ಎಲೆಕ್ಟ್ರಿಕ್ ಸ್ಕೂಟರ್ ( Chethak Urbane Electric Scooter ) 2023:
ಬಜಾಜ್ ಕಂಪೆನಿಯ ಚೇತಕ್ ಮೊದಲಿಂದಲೂ ಹೆಚ್ಚು ಜನಪ್ರಿಯತೆ ಹೊಂದಿದ್ದು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಹಾಗೆಯೇ ಈ ಸ್ಕೂಟರ್ನೊಂದಿಗೆ ಕೇವಲ ಜನರಿಗೆ ಮಾತ್ರವಲ್ಲ, ಕಂಪನಿಯು ಕೂಡ ಬಹಳ ನಂಬಿದೆ. ಮತ್ತೆ ಆ ಒಂದು ಸ್ಕೂಟರ್ ಅನ್ನು ಹೊರತರಲು ಇದೀಗ ಮಾರುಕಟ್ಟೆಗೆ ಹೊಸ ಫೀಚರ್ಗಳೊಂದಿಗೆ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.
ಚೇತಕ್ ಅರ್ಬೇನ್ ಸ್ಕೂಟರ್ ನಲ್ಲಿ ಹೊಸ ಬದಲಾವಣೆ :
ಹೊಸ ಚೇತಕ್ ಅರ್ಬೇನ್ನಲ್ಲಿ ಇದರ ಹಿಂದಿನ ಮಾಡೆಲ್ ಆದ ಪ್ರೀಮಿಯಂ ( Premium ) ಮಾಡೆಲ್ ನ LCD ಡಿಸ್ಪ್ಲೇಯನ್ನು ನೀಡಲಾಗಿದೆ. ಹಾಗೆಯೇ ಸ್ಟ್ಯಾಂಡರ್ಡ್ ಮಾಡೆಲ್ ನ ಅರ್ಬೇನ್ 63kph ಗರಿಷ್ಠ ವೇಗವನ್ನು ಈ ಸ್ಕೂಟರ್ ನಲ್ಲಿ ನೀಡಲಾಗಿತ್ತು. ಹಾಗೆಯೇ ಅದರಲ್ಲಿ ಕೇವಲ ಒಂದು ರೈಡಿಂಗ್ ಮೋಡ್ (ಇಕೋ)ಅನ್ನು ನೀಡಲಾಗಿತ್ತು. ಆದರೆ ಇದೀಗ ಚೇತಕ್ ಅರ್ಬೇನ್ Tecpac ಮಾಡೆಲ್ ಅನ್ನು ಬಿಡುಗಡೆ ಮಾಡಿ ಈ ಸ್ಕೂಟರ್ ನಲ್ಲಿ ಗರಿಷ್ಠ ವೇಗವು 73kph ಗೆ ನೀಡಲಾಗಿದೆ. ಇದರ ಜೊತೆಗೆ ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಸಹ ನೀಡಲಾಗಿದೆ.
ಈ ಸ್ಕೂಟರ್ ನ ಚಾರ್ಜಿಂಗ್ ಕ್ಯಾಪ್ಯಾಸಿಟಿ ಮತ್ತು ( Battery Capacity ) ಬ್ಯಾಟರಿ :
ಚಾರ್ಜಿಂಗ್ ಸಮಯವು 3 ಗಂಟೆ 50 ನಿಮಿಷಗಳಿಂದ 4 ಗಂಟೆ 50 ನಿಮಿಷಗಳ ವರೆಗೆ ಇರುತ್ತದೆ.
ಹಾಗೆಯೇ ಅರ್ಬೇನ್ ವೇರಿಯೆಂಟ್ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್ಗಳನ್ನು ನೀಡಲಾಗಿದೆ.
ಡಿಸ್ಕ್ ಬ್ರೇಕ್ ಅನ್ನು ಕೂಡ ನೀಡಲಾಗಿದೆ.
ಹೊಸ ಚೇತಕ್ ಅರ್ಬೇನ್ ಪ್ರಸ್ತುತ ಮಾದರಿಯಲ್ಲಿರುವ ಅದೇ 2.9kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಹೊಸ ಬಜಾಜ್ ಅರ್ಬೇನ್ ಸ್ಕೂಟರ್ ರೇಂಜ್ ( Scooter Range ) ಬಗ್ಗೆ ಹೇಳುದಾದರೆ, ಈ ಸ್ಕೂಟರ್ 113 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದು ಬಜಾಜ್ ಚೇತಕ್ ಅರ್ಬೇನ್ನ IDC-ಪ್ರಮಾಣೀಕೃತ ರೇಂಜ್ ಆಗಿದೆ.
ಬಜಾಜ್ ನ ಚೇತಕ್ ಅರ್ಬೇನ್ ಸ್ಕೂಟರ್ ಬೆಲೆ ( Price ) :
ಈ ಒಂದು ಸ್ಕೂಟರ್ ನಲ್ಲಿ ಎರಡು ವೇರಿಯೆಂಟ್ ಗಳನ್ನು ( Two Varients ) ನಾವು ಕಾಣಬಹುದು. ಅವುಗಳೆಂದರೆ :
ಸ್ಟ್ಯಾಂಡರ್ಡ್ ವೇರಿಯೆಂಟ್ ಅನ್ನು 1.15 ಲಕ್ಷ ರೂ. ನಿಗದಿ ಮಾಡಲಾಗಿದೆ.
ಮತ್ತು ಇನ್ನೊಂದು ವೇರಿಯೆಂಟ್ ಆದ “Tecpac” ಗೆ 1.21 ಲಕ್ಷ ರೂ.ವನ್ನು ನಿಗದಿ ಮಾಡಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರೆಡ್ಮಿಯ ಮತ್ತೊಂದು ಮೊಬೈಲ್ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ, ಏನಿದರ ವಿಶೇಷತೆ?
- ಹೊಸ ಐಟೆಲ್ ಫೋನ್ ಎಂಟ್ರಿ..! ಇಷ್ಟು ಕಮ್ಮಿ ಬೆಲೆಗೆ 5G ಮೊಬೈಲ್ ಯಾರೂ ಕೊಡಲ್ಲ.
- ಬರೀ 10 ಸಾವಿರದೊಳಗೆ ಸಿಗುತ್ತಿದೆ ಹೊಸ ಲಾವಾ 5G ಮೊಬೈಲ್, ಚೈನಾ ಮೊಬೈಲ್ಸ್ ಗೆ ಟಕ್ಕರ್
- ಮತ್ತೊಂದು ಸ್ಯಾಮ್ಸಂಗ್ ಗ್ಯಾಲಕ್ಸಿ 5G ಸ್ಮಾರ್ಟ್ಫೋನ್ ಬಿಡುಗಡೆ..!
- ಕಮ್ಮಿ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೋಟೋ G34 5G ಸ್ಮಾರ್ಟ್ಫೋನ್!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.