ನೀವು ಚಿಕನ್ ಪ್ರಿಯರೇ!. ಚಿಕನ್’ ಬೆಲೆಯಲ್ಲಿ (Chicken Price) aಭಾರೀ ಇಳಿಕೆ.
ಕಾಲದಿಂದ ಕಾಲಕ್ಕೆ ಮಾನವನ ಬದುಕು ಬದಲಾಗತೊಡಗಿದೆ. ಸಸ್ಯಹಾರಿ(Vegetarian), ಮಾಂಸಾಹಾರಿ (Non Vegetarian), ಮಿಶ್ರಹಾರಿ, ಈ ರೀತಿಯಾಗಿ ಮಾನವನ ಆಹಾರ ಪದ್ಧತಿ ವಿಭಜನೆಯಾಗಿದೆ. ಕೆಲವೊಮ್ಮೆ ಸೊಪ್ಪು, ತರಕಾರಿ, ಹಣ್ಣು ಹಂಪಲುಗಳ ಬೆಲೆ ಏರಿಕೆಯಾಗಿ ಇನ್ನು ಕೆಲವೊಮ್ಮೆ ಬೆಲೆ ಕಡಿಮೆಯೂ ಆಗುತ್ತದೆ. ಅದೇ ರೀತಿಯಾಗಿ ಇದೀಗ ಮಾಂಸ ಪ್ರಿಯರಿಗೆ ಅದರಲ್ಲೂ ಚಿಕನ್ ಇಷ್ಟಪಡುವಂತಹ ಜನರಿಗೆ ಈ ಕಾಲ ಸಕಾಲ ಎಂದರೆ ತಪ್ಪಾಗಲಾರದು. ಕೋಳಿ (Hen) ಮಾಂಸದ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗಲು ಕಾರಣವೇನು ಎಷ್ಟು ಬೆಲೆ ಇಳಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಹೌದು, ಕೋಳಿಮಾಂಸ ಇಷ್ಟಪಡುವಂತಹ ಜನರಿಗೆ ಇದು ಖುಷಿಯ ವಿಚಾರವೇ ಆಗಿದೆ. ಇತ್ತೀಚಿಗೆ ಕೋಳಿಮಾಂಸದ ಬೆಲೆ ಬರೋಬ್ಬರಿ ಶೇಕಡ 30 ರಿಂದ 40ರಷ್ಟು ಕುಸಿದಿದೆ. ಇತ್ತೀಚಿಗೆ ತರಕಾರಿಗಳು ಮತ್ತು ಬೇಳೆ ಕಾಳುಗಳ ಬೆಲೆ ಏರಿಕೆಯಾಗಿದೆ. ಕೋಳಿ ಮಾಂಸದ ದರ ಇಳಿಕೆಯಾಗಿರುವುದು ಮಾಂಸ ಪ್ರಿಯರಲ್ಲಿ ಹರ್ಷದಾಯಕ ವಾತಾವರಣವನ್ನು ಸೃಷ್ಟಿ ಮಾಡಿದೆ.
ಚಿಕನ್ ಬೆಲೆ ಎಷ್ಟಕ್ಕೆ ಇಳಿಕೆಯಾಗಿದೆ?:
ಒಟ್ಟಾರೆಯಾಗಿ ಪ್ರಸ್ತುತ ದಿನಮಾನದಲ್ಲಿ ಚಿಕನ್ ಬೆಲೆ (Chicken Price) ಭಾರಿ ಇಡಿಕೆಯಾಗಿದ್ದು, ಕೆಲವು ಕಡೆ ಸೋಮವಾರದಿಂದಲೇ ಕೋಳಿ ಮಾಂಸದ ಬೆಲೆ 180 ರೂ ಗೆ ಇಳಿದಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಮಾತ್ರ ಒಂದು ಕೆಜಿ ಚಿಕನ್ ಬೆಲೆ ರೂ. 150 ಕ್ಕೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು (Bangalore) ಹಾಗೂ ಹಲವು ಕಡೆ ಹಲವು ಕಡೆ ಚಿಕನ್ 180-200 ರೂಗೆ ಚಿಕನ್ ಮಾರಾಟವಾಗುತ್ತಿದೆ. ಆದರೆ ಈ ಬೆಲೆ ಕೇವಲ ಸ್ವಲ್ಪ ದಿನಗಳು ಮಾತ್ರ ಅಂದರೆ ಇನ್ನ ಎರಡು ಮೂರು ದಿನಗಳಲ್ಲಿ ಚಿಕನ್ ಬೆಲೆ 180 ಕ್ಕೆ ಇಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಚಿಕನ್ ಬೆಲೆ ಕುಸಿಯಲು ಕಾರಣವೇನು?:
ಚಿಕನ್ ಬೆಲೆ ದಿಡೀರ್ ಕುಸಿಯಲು ಕಾರಣ ಆಷಾಢ ಮಾಸ ಮುಗಿದಿರುವುದು. ಹೌದು ಭಾನುವಾರದೊಂದು ಆಷಾಢ ಮಾಸ ಕೊನೆಗೊಂಡಿದ್ದು, ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ಮಾಸದಲ್ಲಿ ದೇವರ ಪೂಜೆಗಳು ಹಾಗೂ ವ್ರತಗಳು ಹೆಚ್ಚಾಗಿ ಜರುಗುವುದರಿಂದ ಎಲ್ಲರ ಮನೆಯಲ್ಲಿ ಮಾಂಸವನ್ನು ಸೇವಿಸುವುದು ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಸಂದರ್ಭದಲ್ಲಿ ಕೋಳಿ ಮಾಂಸ ಸೇವನೆಯು ಪ್ರತಿವರ್ಷ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಶ್ರಾವಣದಲ್ಲೂ ಕೋಳಿ ಮಾಂಸ ದರ ಹೆಚ್ಚೇನು ಬದಲಾವಣೆ ಆಗಿರಲಿಲ್ಲ. ಇದೀಗ ಕೊನೆಗೂ ದರ ಇಳಿದಿರುವುದರಿಂದ ಕೋಳಿ ಮಾಂಸ ಹಾಗೂ ಮೊಟ್ಟೆ (egg) ಪ್ರಿಯರು ಹೆಚ್ಚು ಸಂತಸ ಪಡುತ್ತಿದ್ದಾರೆ. ಅದರಲ್ಲೂ ಈ ವರ್ಷ ಚಿಕನ್ ಬೆಲೆ ಇಳಿಕೆಯ ಪರಿಣಾಮವು ಹೆಚ್ಚು ತೀವ್ರವಾಗಿದೆ. ಹಾಗೂ ಚಿಕನ್ ಬೆಲೆಯ ಈ ದರ ಸ್ವಲ್ಪ ದಿನಗಳವರೆಗೂ ಹೀಗೆ ಮುಂದುವರಿಯುವ ಸಾಧ್ಯತೆ ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.