ಚೀನಾದಲ್ಲಿ ಮತ್ತೊಂದು ಭಾರಿ ಮಾರಕ ವೈರಸ್‌ ಪತ್ತೆ; ಮತ್ತೇ ಶುರುವಾಯ್ತು ಆತಂಕ!

1000350033

ಐದು ವರ್ಷಗಳ ನಂತರ ಚೀನಾದಲ್ಲಿ(China) ಹೊಸ ಮಾರಕ ವೈರಸ್ ಪತ್ತೆ!. ಕೋವಿಡ್ ನಂತರ ಹೊಸ ಆತಂಕಕ್ಕೆ ಕಾರಣವಾಯ್ತ ಈ ವೈರಸ್(Virus).

ಕೊರೋನಾ(Corona) ಮಹಾಮಾರಿಯಿಂದಾಗಿ ಜಗತ್ತಿನಾದ್ಯಂತ ಭಾರೀ ಸಂಕಷ್ಟವನ್ನು ಎದುರಿಸಿದ ನಂತರ, ಐದು ವರ್ಷಗಳ ಬಳಿಕ ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದೆ. ಈ ಹೊಸ ವೈರಸ್‌ ಅನ್ನು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂದು ಕರೆಯಲಾಗುತ್ತಿದ್ದು, ಇದು ಕೋವಿಡ್-19ನಷ್ಟೇ ಸಾಂಕ್ರಾಮಿಕ ಮತ್ತು ಮಾರಕವಾಗಿದೆ ಎಂದು ಹೇಳಲಾಗುತ್ತಿದೆ. ಈ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವೈರಸ್ ನಿಂದ ಸಾವನಪ್ಪುತ್ತಿರುವ ಸಾವಿರಾರು ಜನ:

ಚೀನಾದಲ್ಲಿ ಈ ವೈರಸ್‌ನಿಂದಾಗಿ ನೂರಾರು ಜನರು ಮೃತಪಟ್ಟಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಸ್ಪಟೆಲ್‌ಗಳು(Hospitals) ಮತ್ತು ಸ್ಮಶಾನಗಳಲ್ಲಿ ಜನಸಂದಣಿ ಹೆಚ್ಚಾಗಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಆಸ್ಪತ್ರೆಗಳಲ್ಲಿ ರೋಗಿಗಳು ಕಿಕ್ಕಿರಿದು ತುಂಬಿರುವ ವಿಡಿಯೋಗಳು ಈ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದ್ದು, ಇದರ ಪರಿಣಾಮ ಜನರು ಭಯಭೀತರಾಗಿದ್ದಾರೆ.

ಹೊಸ ವೈರಸ್ ನಲ್ಲೂ ಕೋವಿಡ್-19ನಂತೆಯೇ(covid-19) ರೋಗಲಕ್ಷಣಗಳು ಇರಲಿವೆ :

ಈ ಹೊಸ ವೈರಸ್‌ ಕುರಿತು ಚೀನಾ ಸರ್ಕಾರ ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO)ಯಿಂದ ಯಾವುದೇ ಅಧಿಕೃತ ದೃಢೀಕರಣ ಇಲ್ಲದಿದ್ದರೂ, ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. HMPV ಜ್ವರವು ಕೋವಿಡ್-19ನಂತೆಯೇ ರೋಗಲಕ್ಷಣಗಳನ್ನು ಹೊಂದಿದ್ದು, ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಗಳ ಪ್ರಮಾಣ ಹೆಚ್ಚಾಗುತ್ತದೆ, ಆದರೆ ಈ ಬಾರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಆರು ದಶಕಗಳಿಂದ ಅಸ್ತಿತ್ವದಲ್ಲಿರುವ ಹೊಸ ವೈರಸ್ :

ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಕನಿಷ್ಠ ಆರು ದಶಕಗಳಿಂದ ಅಸ್ತಿತ್ವದಲ್ಲಿದೆ ಎಂದು ಅಧ್ಯಯನಗಳು ತೋರಿಸಿವೆ. ಇದು ಸಾಮಾನ್ಯ ಉಸಿರಾಟದ ಕಾಯಿಲೆಯಾಗಿ ಪ್ರಪಂಚದಾದ್ಯಂತ ಹರಡಿದ್ದು, ಮುಖ್ಯವಾಗಿ ಕೆಮ್ಮು ಮತ್ತು ಸೀನುವಿಕೆಯ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಗಳ(infected persons) ಸಂಪರ್ಕದಿಂದ ಅಥವಾ ಕಲುಷಿತ ಪರಿಸರದಿಂದಲೂ ಒಬ್ಬರು ಸೋಂಕಿಗೆ ಒಳಗಾಗಬಹುದು. ಸೋಂಕಿನ ಪರಿಣಾಮಗಳು ಮೂರರಿಂದ ಐದು ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಚೀನಾದ ಆರೋಗ್ಯ ಅಧಿಕಾರಿಗಳು ಡಿಸೆಂಬರ್ 16 ಮತ್ತು 22ರ ನಡುವೆ ಉಸಿರಾಟದ ಸಮಸ್ಯೆಗಳ ಪ್ರಕರಣಗಳಲ್ಲಿ ದಾಖಲೆಯ ಏರಿಕೆ ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಚಳಿಗಾಲ ಮತ್ತು ವಸಂತ ಋತುಗಳಲ್ಲಿ ಚೀನಾದಲ್ಲಿ ವಿವಿಧ ಉಸಿರಾಟದ ಸಾಂಕ್ರಾಮಿಕ ರೋಗಗಳ(infectious diseases) ಸಾಧ್ಯತೆಯಿದೆ ಎಂದು ಆರೋಗ್ಯ ಅಧಿಕಾರಿ(Health Officer) ಕಾನ್ ಬಿಯಾವೊ(Con Biao) ಹೇಳಿದ್ದಾರೆ. ಆದರೆ, ಕಳೆದ ವರ್ಷಕ್ಕಿಂತ ಈ ವರ್ಷ ಒಟ್ಟು ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತುರ್ತು ಕ್ರಮಗಳನ್ನು ತೆಗೆದುಕೊಂಡ ಚೀನಾ ಸರ್ಕಾರ:

ಈ ಹೊಸ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸಲು ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಮತ್ತು ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲಿಸುವುದು ಮತ್ತು ಕೈ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ, ಇತರ ದೇಶಗಳು ಚೀನಾದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ತಮ್ಮ ದೇಶಗಳಲ್ಲಿ ಈ ವೈರಸ್‌ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಹೊಸ ವೈರಸ್ ಹರಡುವಿಕೆಯನ್ನು ತಡೆಯಲು ಹೆಚ್ಚಿನ ಸಂಶೋಧನೆಗೆ ಆಧ್ಯತೆ:

ಸಾರ್ವಜನಿಕ ಆರೋಗ್ಯ ತಜ್ಞರು(Public health experts) ಮತ್ತು ವಿಜ್ಞಾನಿಗಳು(Scientists) ಈ ಹೊಸ ವೈರಸ್‌ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ವೈರಸ್‌ನ ಮೂಲ, ಅದರ ರೋಗಲಕ್ಷಣಗಳು, ಹರಡುವಿಕೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಇದರೊಂದಿಗೆ, ಲಸಿಕೆಗಳ ಅಭಿವೃದ್ಧಿ ಮತ್ತು ಚಿಕಿತ್ಸೆ ವಿಧಾನಗಳ ಕುರಿತು ಸಂಶೋಧನೆಗಳು(Research) ನಡೆಯುತ್ತಿವೆ.

ಸಾರ್ವಜನಿಕರು ಈ ಪರಿಸ್ಥಿತಿಯಲ್ಲಿ ಆತಂಕಕ್ಕೊಳಗಾಗದೆ, ಆರೋಗ್ಯ ಅಧಿಕಾರಿಗಳ ಸಲಹೆಗಳನ್ನು ಪಾಲಿಸಿ, ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳನ್ನು(Safety measures) ಅನುಸರಿಸುವುದು ಅತ್ಯಂತ ಮುಖ್ಯವಾಗಿದೆ. ಅನಾವಶ್ಯಕ ಪ್ರಯಾಣಗಳನ್ನು ತಪ್ಪಿಸುವುದು, ಜನಸಂದಣಿಯಿಂದ ದೂರವಿರುವುದು ಮತ್ತು ಆರೋಗ್ಯ ಸಮಸ್ಯೆಗಳಿದ್ದಲ್ಲಿ ತಕ್ಷಣ ವೈದ್ಯಕೀಯ ಸಲಹೆ(Medical advice) ಪಡೆಯುವುದು ಸೂಕ್ತವಾಗಿದೆ.

ಜಾಗತಿಕ ಆರೋಗ್ಯ ಸಂಸ್ಥೆ (WHO) ಮತ್ತು ಇತರ ಆರೋಗ್ಯ ಸಂಸ್ಥೆಗಳು ಚೀನಾದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿವೆ. ಜಾಗತಿಕ ಸಮುದಾಯವು ಸಹ ಈ ಸಂದರ್ಭದಲ್ಲಿ ಜಾಗರೂಕತೆಯನ್ನು ತೋರಿಸಿ, ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!