ದಾವಣಗೆರೆ ಜನರೇ ಚಿಟ್ ಫಂಡ್ (chit fund) ಸಂಸ್ಥೆಗಳೊಂದಿಗೆ ವ್ಯವಹಾರ ಮಾಡುತ್ತಿದ್ದೀರಾ? ಹಾಗಿದ್ದರೆ ಎಚ್ಚರ ಎಚ್ಚರ!
ಇತ್ತೀಚಿಗೆ ಜನರು ತಮ್ಮ ಮನೆಗಳನ್ನು ನಿಭಾಯಿಸಲು ಆರ್ಥಿಕ ನೆರವಿಗಾಗಿ (economic purpose) ಚಿಟ್ ಫಂಡ್ ಗಳ (chit fund) ಬಳಕೆ ಮತ್ತು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಹಳ್ಳಿಗಳಲ್ಲದೆ ನಗರ ಪ್ರದೇಶಗಳಲ್ಲಿಯೂ ಚಿಟ್ ಫಂಡ್ ಸಂಸ್ಥೆಗಳು ತಮ್ಮ ವಿಸ್ತಾರವನ್ನು ಪಸರಿಸಿಕೊಂಡಿವೆ. ಅದೇ ರೀತಿ ದಾವಣಗೆರೆಯಲ್ಲಿಯೂ ಕೂಡ ಈ ಚಿಟ್ ಫಂಡ್ ಸಂಸ್ಥೆಗಳು (chit fund organisation) ಹೆಚ್ಚಿನದಾಗಿ ಜನರನ್ನು ಆಕರ್ಷಿಸಿದ್ದಾವೆ. ಆದರೆ ಕೆಲವು ಚಿಟ್ ಫಂಡ್ ಸಂಸ್ಥೆಗಳು ಇಲಾಖೆಯಿಂದ ಪರವಾನಗಿ (license) ಪಡೆದಿರುವುದಿಲ್ಲ. ಆದ್ದರಿಂದ ಅಂತ ಸಂಸ್ಥೆಗಳೊಟ್ಟಿಗೆ ಜನರು ವ್ಯವಹರಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಯಾವ ಯಾವ ಸಂಸ್ಥೆಗಳು ಪರವಾನಗಿ ಪಡೆದಿಲ್ಲ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಚಿಟ್ ಫಂಡ್ ಎಂದರೇನು (what is chit fund) ?
ಭಾರತದಲ್ಲಿ ಚಿಟ್ ಫಂಡ್‌ಗಳು ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಉಳಿತಾಯ ಸಂಸ್ಥೆಗಳಾಗಿವೆ. ಚಿಟ್ ಫಂಡ್ ಅಂದರೆ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಮತ್ತು ಕುಟುಂಬದ ಸದಸ್ಯರ ನಡುವೆ ತಿರುಗುವ ಉಳಿತಾಯ ಮತ್ತು ಒಪ್ಪಂದದ ಹಣಕಾಸು ವ್ಯವಹಾರ. ಚಿಟ್ ಫಂಡ್‌ಗಳು ಸಾಮಾನ್ಯವಾಗಿ ಕಿರುಬಂಡವಾಳ ಸಂಸ್ಥೆಗಳಾಗಿವೆ. ಚಿಟ್ ಫಂಡ್ ಬ್ಯಾಂಕಿಂಗ್ (chit fund banking) ಸೌಲಭ್ಯಗಳಿಗೆ ಸೀಮಿತ ಪ್ರವೇಶ ಹೊಂದಿರುವ ಜನರಿಗೆ ಉಳಿತಾಯ ಮತ್ತು ಸಾಲಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ.
ಚಿಟ್ ಫಂಡ್‌ಗಳು ಸಂಸ್ಥೆಗಳು ಪ್ರಪಂಚದಾದ್ಯಂತ ಕಂಡುಬರುವ ರೊಟೇಟಿಂಗ್ ಸೇವಿಂಗ್ಸ್ ಮತ್ತು ಕ್ರೆಡಿಟ್ ಅಸೋಸಿಯೇಷನ್‌ಗಳಾಗಿವೆ.
ದಾವಣಗೆರೆಯ (Davanagere) 31 ಚೀಟ್ ಫಂಡ್ ಸಂಸ್ಥೆಗಳಿಗಿಲ್ಲ ಪರವಾನಗಿ!
ಸಾಮಾನ್ಯವಾಗಿ ಚೀಟ್ ಫಂಡ್ ನಡೆಸಲು ಇಲಾಖೆಯಿಂದ ಪರವಾನಗಿ (permission) ಪಡೆದಿರಬೇಕು. ಒಂದು ವೇಳೆ ಪರವಾನಗಿ ಪಡೆದಿಲ್ಲವೆಂದರೆ ಆ ಸಂಸ್ಥೆಗಳು ಸಾರ್ವಜನಿಕರೊಂದಿಗೆ ವ್ಯವಹಾರ ನಡೆಸುವಂತಿಲ್ಲ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಬರೋಬ್ಬರಿ 31 ಚೀಟ್ ಫಂಡ್ ಸಂಸ್ಥೆಗಳು ಇಲಾಖೆಯಿಂದ ಪರವಾನಗಿ ಪಡೆದಿರುವುದಿಲ್ಲ.
ಇನ್ನು ಈ ಕುರಿತು ಸಹಕಾರ ಸಂಘಗಳ ಉಪನಿಬಂಧಕಿ ಹೆಚ್ ಅನ್ನಪೂರ್ಣ ಸಾರ್ವಜನಿಕರಿಗೆ ಎಚ್ಚರಿಕೆ (warning) ನೀಡಿದ್ದಾರೆ. ಯಾವ ಯಾವ ಸಂಸ್ಥೆಗಳು ಪರವಾನಗಿ ಪಡೆದುಕೊಂಡಿಲ್ಲ ಆ ಸಂಸ್ಥೆಗಳೊಟ್ಟಿಗೆ ಯಾವ ಸಾರ್ವಜನಿಕರು ಕೂಡ ವ್ಯವಹರಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ.
ಪರವಾನಗಿ ಪಡೆದುಕೊಳ್ಳದ 31 ಚೀಟ್ ಫಂಡ್ ಸಂಸ್ಥೆಗಳ ಪಟ್ಟಿ ಹೀಗಿದೆ.
ಶ್ರೀರಾಮ ಚಿಟ್ಸ್ ಪ್ರೈ ಲಿ., ಕಪಿಲ್ ಚಿಟ್ಸ್ ಪ್ರೈ ಲಿ, ದಾವಣಗೆರೆ, ಶ್ರೀ ಕರಾಯಿಲ್ ಚಿಟ್ಸ್ (ಇಂಡಿಯಾ) ಲಿ. ತಿರುಪುರ ತಮಿಳುನಾಡು ಶಾಖೆ ದಾವಣಗೆರೆ, ಸ್ಥರ ಚಿಟ್ ಫಂಡ್ಸ್ ಪ್ರೈ ಲಿ., ಚೇತನಾ ಚಿಟ್ಸ್ ಹಾವೇರಿ ಪ್ರೈ ಲಿ, ದಾವಣಗೆರೆ., ಹೊಯ್ಸಳ ಚಿಟ್ ಫಂಡ್ಸ್ (ರಿ), ಸಿದ್ದೇಶ್ವರ ಚಿಟ್ಸ್ (ರಿ) ಈರುಳ್ಳಿ ಮಾರ್ಕೆಟ್ ಹತ್ತಿರ ದಾವಣಗೆರೆ., ನಯನ ಚಿಟ್ಸ್ ಫಂಡ್ ದಾವಣಗೆರೆ. ಶಶಿಕಿರಣ್ ಚಿಟ್ ಫಂಡ್ಸ್ ಪ್ರೈ ಲಿ., ಚಿಲುಕೂರಿ ಚಿಟ್ಸ್ (ಇಂಡಿಯಾ)ಪ್ರೈ.ಲಿ., ಚನ್ನಪ್ಪ ಚಿಟ್ ಫಂಡ್ಸ್(ರಿ)., ಅಭಿವೃದ್ಧಿ ಚಿಟ್ ಫಂಡ್ಸ್ (ರಿ)., ಶ್ರೀಮಂಜುನಾಥ ಚಿಟ್ ಫಂಡ್ಸ್(ರಿ)., ಎಸ್.ಆರ್.ಕೆ ಚಿಟ್ ಫಂಡ್ಸ್(ರಿ).,ಸಮೃದ್ದಿ ಚಿಟ್ ಫಂಡ್ಸ್.,ಸೇವಾಲಾಲ್ ಚಿಟ್ ಫಂಡ್ಸ್(ರಿ)., ಎಸ್.ಎಸ್.ವಿ ಚಿಟ್ ಫಂಡ್ಸ್(ರಿ)., ಜಿ-1 ಚಿಟ್ಸ್ ಕರ್ನಾಟಕ(ರಿ)., ಶ್ರೀದುರ್ಗಾ ಚಿಟ್ ಫಂಡ್ಸ್., ಎಸ್.ಎಂ.ಜೆ ಚಿಟ್ ಫಂಡ್ಸ್(ರಿ)., ಶ್ರೀಕೃಷ್ಣ ಚಿಟ್ ಫಂಡ್ಸ್(ರಿ)., ಶ್ರೀವಿನಯ ಚಿಟ್ಸ್ ಫಂಡ್ಸ್(ರಿ)., ಕೆ.ಬಿ.ಎಸ್ ಶ್ರೀಅದೃಷ್ಠ ಚಿಟ್ ಫಂಡ್ಸ್(ರಿ)., ಶ್ರೀನಿಮಿಷಾಂಬಾ ಚಿಟ್ ಫಂಡ್ಸ್ (ರಿ).,ಶ್ರೀಕುಬೇರ ಚಿಟ್ಸ್ ಫಂಡ್ಸ್(ರಿ).,ಶ್ರೀಕಲ್ಲೇಶ್ವರ ಚಿಟ್ಸ್ (ಕ) ಪ್ರೈ ಲಿ. ಪಾಪರೆಡ್ಡಿ ಪಾಳ್ಯ ನಾಗರಭಾವಿ ಬೆಂಗಳೂರು., ಸಿದ್ದಿ ವಿನಾಯಕ ಚಿಟ್ ಫಂಡ್ಸ್(ರಿ)., ಅಪೂರ್ವ ಚಿಟ್ ಫಂಡ್ಸ್(ರಿ)., ಭಾಗ್ಯೋದಯ ಚಿಟ್ ಫಂಡ್ಸ್(ರಿ)
ಈ ಮೇಲಿನ ಎಲ್ಲಾ ಸಂಸ್ಥೆಗಳು ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸಬೇಕು. ಏಕೆಂದರೆ ಪರವಾನಗಿ ಪಡೆದಿಲ್ಲದ ಸಂಸ್ಥೆಗಳು ವಿಶ್ವಾಸಕ್ಕೆ ಅರ್ಹರಾಗಿರುವುದಿಲ್ಲ. ಆದ್ದರಿಂದ ದಾವಣಗೆರೆಯ ಎಲ್ಲಾ ಸಾರ್ವಜನಿಕರು ಈ ಸಂಸ್ಥೆಗಳನ್ನು ನಂಬುವ ಮುನ್ನ ಎಚ್ಚರ ವಹಿಸಬೇಕು.
ಹಾಗೆ ಈ 31 ಸಂಸ್ಥೆಗಳು ಚಿಟ್ಸ್ ಫಂಡ್ ಮುಂದುವರಿಸಬೇಕಾದರೆ ಅಗತ್ಯ ದಾಖಲೆಗಳೊಂದಿಗೆ (important documents) 15 ದಿನಗಳೊಳಗಾಗಿ ಮನವಿಯನ್ನು ಸಲ್ಲಿಸಬೇಕು. ಒಂದು ವೇಳೆ 15 ದಿನಗಳೊಳಗಾಗಿ ಮನವಿಯನ್ನು ಸಲ್ಲಿಸದಿದ್ದರೆ ಚೀಟಿ ನಿಧಿಗಳ ಕಾಯ್ದೆಯಡಿ ಚೀಟಿ ವ್ಯವಹಾರ ಮಾಡಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಕೇಂದ್ರ ಕಚೇರಿಗೆ (central office) ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸೂಚನೆ (notice) :
ಅಗತ್ಯ ದಾಖಲೆಗಳೊಂದಿಗೆ 15 ದಿನಗಳೊಳಗಾಗಿ ಮನವಿಯನ್ನು ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಜಿಲ್ಲಾಡಳಿತ ಭವನ, ದಾವಣಗೆರೆ ಇವರಿಗೆ ಸಲ್ಲಿಸಬೇಕು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಈ ಮಾಹಿತಿಗಳನ್ನು ಓದಿ