Job Alert : CISF ನಿಂದ  ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಈಗಲೇ ಅಪ್ಲೈ ಮಾಡಿ

IMG 20240825 WA0004

ಈ ವರದಿಯಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) 1,130 ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳ ನೇಮಕಾತಿ (CISF Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ – CISF Recruitment 2024ರ ಅವಲೋಕನ:

ಇಂಡಿಯನ್ ಆರ್ಮಿ – Indian Army  ಪ್ರತಿ ವರ್ಷದಂತೆ ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆ ಹೊರಡಿಸಿದೆ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ – CISF ಈ ಬಾರಿ 1130  ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ – CISF 2024  ಮೂಲಕ ಅಗ್ನಿಶಾಮಕ ಕಾನ್ಸ್ಟೇಬಲ್  ನೇಮಕಾತಿಗಾಗಿ ಆನ್‌ಲೈನ್ ನೋಂದಣಿ (Online registration) 30 ಆಗಸ್ಟ್  2024 ರಂದು ಪ್ರಾರಂಭವಾಗುತ್ತದೆ ಮತ್ತು 30 ಸೆಪ್ಟೆಂಬರ್ 2024 ರಂದು ಕೊನೆಗೊಳ್ಳುತ್ತದೆ. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಇಲಾಖೆ ಹೆಸರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)Recruitment
ಹುದ್ದೆಗಳ ಹೆಸರು ಕಾನ್ಸ್ಟೇಬಲ್ / ಅಗ್ನಿಶಾಮಕ
ಒಟ್ಟು ಹುದ್ದೆಗಳು 1130
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ –ಭಾರತ

CISF ನೇಮಕಾತಿ ಡ್ರೈವ್ ಒಟ್ಟು 1,130 ಪೋಸ್ಟ್‌ಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ; ಸಾಮಾನ್ಯ ವರ್ಗಕ್ಕೆ 466, ಇತರೆ ಹಿಂದುಳಿದ ವರ್ಗಗಳಿಗೆ (OBC) 236, ಪರಿಶಿಷ್ಟ ಪಂಗಡಗಳಿಗೆ (ST) 161, ಪರಿಶಿಷ್ಟ ಜಾತಿಗೆ (SC) 153 ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (Ews) 114 ಹುದ್ದೆಗಳನ್ನು ಮೀಸಲಿಡಲಾಗಿದೆ. ಗೌರವಾನ್ವಿತ CISF ಗೆ ಸೇರಲು ವಿವಿಧ ಹಿನ್ನೆಲೆಯ ಜನರಿಗೆ ಇದೊಂದು ಅದ್ಭುತ ಅವಕಾಶ.

ವಿದ್ಯಾರ್ಹತೆ :

CISF ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ದೇಶದ ಮಾನ್ಯತೆ ಪಡೆದ ಬೋರ್ಡ್‌ನಿಂದ 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ :

ಕನಿಷ್ಠ ವಯಸ್ಸು 18 ವರ್ಷಗಳು
ಗರಿಷ್ಠ ವಯಸ್ಸು 23 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಸಂಬಳದ ಪ್ಯಾಕೆಜ್ ಎಷ್ಟು?

CISF ಕಾನ್ಸ್ಟೇಬಲ್ ಅಗ್ನಿಶಾಮಕ ಸಿಬ್ಬಂದಿಗೆ ಲೆವೆಲ್ -3 (21,700-69,100 ರೂ.) ವೇತನ ಶ್ರೇಣಿಯ ಪ್ರಕಾರ ವೇತನ ನೀಡಲಾಗುವುದು.

ಅರ್ಜಿ ಶುಲ್ಕ  :

ಸಾಮಾನ್ಯ / OBC / EWS – ರೂ. 100/-
SC/ST/ಮಹಿಳೆ – ರೂ. 0/-
ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು

CISF ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಸಿಲಬಸ್, ಪರೀಕ್ಷೆಯ ಮಾದರಿ :
CISF ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಪರೀಕ್ಷೆಯಲ್ಲಿ ಭಾಗ-ಎ (Part A) ಜನರಲ್ ಇಂಟೆಲಿಜೆನ್ಸ್(General intelligence) ಮತ್ತು ರೀಸನಿಂಗ್(Reasoning).
ಪಾರ್ಟ್-ಬಿ (Part B) ಜನರಲ್ ಇಂಟೆಲಿಜೆನ್ಸ್ (General intelligence) ಮತ್ತು ರೀಸನಿಂಗ್(Reasoning).ಪಾರ್ಟ್-ಸಿ (Part C) ಎಲಿಮೆಂಟರಿ ಮ್ಯಾಥಮ್ಯಾಟಿಕ್ಸ್(Elementary Mathematics) ಮತ್ತು ಪಾರ್ಟ್-ಡಿ(Part D) ಇಂಗ್ಲಿಷ್/ಹಿಂದಿ ಭಾಷೆ (English/Hindi) ಎಂಬ ನಾಲ್ಕು ವಿಭಾಗಗಳಿರುತ್ತವೆ. ಪರೀಕ್ಷೆಯ ಅವಧಿಯು 120 ಅಂಕಗಳಾಗಿರುತ್ತದೆ ಮತ್ತು ಪ್ರತಿ ಪ್ರಶ್ನೆಯು ತಲಾ ಒಂದು ಅಂಕವನ್ನು ಹೊಂದಿರುವ 25 ಅಂಕಗಳನ್ನು ಒಳಗೊಂಡಿರುತ್ತದೆ.

ಆಯ್ಕೆ ಪ್ರಕ್ರಿಯೆ :

CISF ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಗುಣಮಟ್ಟ ಪರೀಕ್ಷೆ (PST), ದಾಖಲೆ ಪರಿಶೀಲನೆ, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಂತೆ ಹಲವಾರು ಹಂತಗಳನ್ನು ಹೊಂದಿರಬೇಕು.

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://cisfrectt.cisf.gov.in/

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 30.08.2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.09.2024

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!